ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವ ಆರ್.ಅಶೋಕ್ (Minister R Ashok) ಮಳೆಯಿಂದಾದ ಹಾನಿಯ (Rain Loss) ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಸರ್ಕಾರ (Government) ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ರಾಜ್ಯದಲ್ಲಿ ಮತ್ತೆ ಮಳೆ ಅವಾಂತರ ಆಗಿದೆ. ಕಳೆದ 24 ಗಂಟೆಗಳಲ್ಲಿ 820 ಮಿಲಿ ಮೀಟರ್ ಮಳೆಯಾಗಿದೆ. 27 ಜಿಲ್ಲೆಗಳಲ್ಲಿ ಮಳೆ (Rainfall) ಸುರಿದಿದ್ದು, ರಾಮನಗರ, ಚಾಮರಾಜಗರ, ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ 9 ಮಿಲಿ ಮೀಟರ್ ಮಳೆಯಾಗಿದೆ. 20 ಹಳ್ಳಿಗಳಲ್ಲಿ ಡ್ಯಾಮೇಜ್ ಆಗಿದೆ. 187 ಹಳ್ಳಿಗಳಿಗೆ ಎಫೆಕ್ಟ್ ಆಗಿದೆ. ಇದುವರೆಗೂ 96 ಜನರು ಸಾವನ್ನಪ್ಪಿದ್ದು, ಮೂರು ದಿನದಲ್ಲಿ ಮೂವರು ಮೃತರಾಗಿದ್ದಾರೆ (Rain Death) ಎಂದು ಹೇಳಿದರು.
ಇದುವರೆಗೂ 993 ಮನೆಗಳು ಹಾನಿಗೆ ಒಳಗಾಗಿದ್ದು, ನಿನ್ನೆ ಒಂದೇ ದಿನ 70 ಜಾನುವಾರುಗಳು ಸಾವನ್ನಪ್ಪಿದ್ದಾರೆ. ಇದುವರೆಗೂ 9555 ಜನರನ್ನು ಸ್ಥಳಾಂತರ ಮಾಡಿದ್ದಾರೆ. ಜೂನ್ನಲ್ಲಿ 5 ಲಕ್ಷದ 80 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. 2,221 ವಿದ್ಯುತ್ ಕಂಬಗಳು ಉರುಳಿದ್ರೆ, 2,273 ಕಿ.ಮೀ. ಉದ್ದದಷ್ಟು ರಸ್ತೆ ಹಾಳಾಗಿದೆ. 1,471 ಸೇತುವೆಗಳಿಗೆ ಹಾನಿಯುಂಟಾಗಿದೆ. NDRFನಿಂದ 1,012 ಕೋಟಿ ಹಣ ರಾಜ್ಯಕ್ಕೆ ಬರಬೇಕಿದೆ ಎಂದು ಮಾಹಿತಿ ನೀಡಿದರು.
ಸಂತ್ರಸ್ತರ ಪರವಾಗಿ ಸರ್ಕಾರ
ನಿನ್ನೆ ನಾನು ಸಿಎಂ, ಸೇರಿ ರಾಮನಗರಕ್ಕೆ ಭೇಟಿ ನೀಡಿದ್ದೇವೆ. ನಾನು ಈಗಾಗಲೇ 14 ಜಿಲ್ಲೆಗಳಲ್ಲಿ ಭೇಟಿ ಮಾಡಿ ಬಂದಿದ್ದೇನೆ. ಇನ್ನೂ ಹಲವು ಜಿಲ್ಲೆಗಳಲ್ಲಿ ಹೋಗ್ತೀನಿ. ಯಾವ ಸರ್ಕಾರ ಕೊಡದ ಪರಿಹಾರದ ಹಣವನ್ನು ನಮ್ಮ ಸರ್ಕಾರ ಕೊಡುತ್ತಿದೆ. ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರ ಪರವಾಗಿ ಸರ್ಕಾರವಿದೆ ಎಂದು ಹೇಳಿದರು.
ಇದನ್ನೂ ಓದಿ: HD Kumaraswamy: ಆಲದ ಮರ ಬಿದ್ದು ಮೃತ ವ್ಯಕ್ತಿಯ ನಿವಾಸಕ್ಕೆ HDK ಭೇಟಿ; 5 ಲಕ್ಷ ಚೆಕ್ ಹಸ್ತಾಂತರ
ಏಳು ಹೊಸ ಕ್ಯಾಂಪ್ ಆರಂಭ
ಜೂನ್‌ನಿಂದ ಇಲ್ಲಿಯವರೆಗೂ 187 ಗ್ರಾಮಗಳಿಗೆ ಮಳೆಯಿಂದ ಪ್ರಭಾವವಾಗಿದೆ. ಜೂನ್ 1ರಿಂದ ಇಲ್ಲಿಯವರೆಗೂ ಮಳೆಯಿಂದ 96 ಜನ ಮರಣ ಹೊಂದಿದ್ದಾರೆ. ಕಳೆದ 24 ಗಂಟೆಯಲ್ಲಿ ಮಳೆಯಿಂದ ಐವರು ಸಾವನ್ನಪ್ಪಿದ್ದಾರೆ. ಸೋಮವಾರ ಏಳು ಹೊಸ ಕ್ಯಾಂಪ್ ಆರಂಭಿಸಲಾಗಿದ್ದು, 825 ಜನರನ್ನು ಸ್ಥಳಾಂತರ ಮಾಡಲಾಗಿದೆ.
5,80,000 ಎಕ್ಟೇರ್ ಬೆಳೆ ಹಾನಿಯಾಗಿದೆ. 22,734 ಕಿ.ಮೀ ರಸ್ತೆ ದುರಸ್ತಿಯಾಗಿದೆ. 1,411 ಮೇಲುಸೇತುವೆ ಹಾನಿಯಾಗಿದೆ. 5 NDRF ತಂಡ ನಿಯೋಜನೆ ಮಾಡಲಾಗಿದೆ. ಈಗಾಗಲೇ ಹಿಂದೆ ಬಿದ್ದ ಮಳೆಗೆ ವರದಿಯನ್ನು ಕೂಡ ಸಿದ್ದಪಡಿಸಿದ್ದೇವೆ. NDRF 1012.05 ಕೋಟಿ ಹಣ ಬರಬೇಕೇದು ಕೇಂದ್ರವನ್ನು ಕೋರಿದ್ದೇವೆ. ಕೃಷಿಗೆ ಪರಿಹಾರ ನೀಡುವುದಾಗಿ ಪ್ರಧಾನಿ ತಿಳಿಸಿದ್ದಾರೆ. ಸಿಎಂ ಸಹ ಹಾನಿಗೊಳಗಾದವರಿಗೆ ಅನುದಾನ ಹೆಚ್ಚು ಮಾಡಿದ್ದಾರೆ. ರಾಜ್ಯದಲ್ಲಿ ಜುಲೈನಿಂದ ಮಳೆಯಿಂದಾಗಿ 7647 ಕೋಟಿ ನಷ್ಟ ಆಗಿದೆ
Inspected rain hit areas in Ramanagara and Channapatna with Chief Minister Sri Basavaraj Bommai and instructed officials to take immediate measures to tackle the issues on priority basis.@CMofKarnataka @BJP4Karnataka pic.twitter.com/JqxLjRcc76
— R. Ashoka (ಆರ್. ಅಶೋಕ) (@RAshokaBJP) August 29, 2022
ಕೃಷಿ ಬೆಳೆ 3,100.83 ಹೆಕ್ಟೇರ್
ತೋಟಗಾರಿಕಾ ಬೆಳೆ 201.95 ಹೆಕ್ಟೇರ್
ಬಹುವಾರ್ಷಿಕ ಬೆಳೆ 265.51 ಹೆಕ್ಟೇರ್
ಮೆಕ್ಕಲು ಮತ್ತು ಕೃಷಿ ಭೂಮಿ 0.84 ಹೆಕ್ಟೇರ್
ರೇಷ್ಮೆ ಬೆಳೆ 0.13 ಹೆಕ್ಟೇರ್
ಜಾನುವಾರು ನಷ್ಟ 467
ಮನೆ ಹಾನಿ 24,408
ರಸ್ತೆ ಹಾನಿ 22,734 ಕಿ.ಮೀ
ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳು 4159 ಕಿ.ಮೀ
ಗ್ರಾಮೀಣ ರಸ್ತೆ 16,503 ಕಿ.ಮೀ
ನಗರ ವ್ಯಾಪ್ತಿ ರಸ್ತೆ 2072 ಕಿ.ಮೀ
ಸೇತುವೆ/ಕಾಲುವೆ ಹಾನಿ 1471
ಸಣ್ಣ ನೀರಾವರಿ ಕೆರೆಗಳು 624
ಸಣ್ಣ ಕೆರೆ ಕಟ್ಟೆ 499
ಹಾನಿಗೊಂಡ ಸರ್ಕಾರಿ ಕಟ್ಟಡಗಳು 11,244
ಪ್ರವಾಹ ಸ್ಥಳಕ್ಕೆ ಸಿಎಂ ಭೇಟಿ
ರಾಮನಗರ, ಚನ್ನಪಟ್ಟಣ ತಾಲೂಕುಗಳು ಅಕ್ಷರ ಸಹ ನೀರಿನಲ್ಲಿ ಮುಳುಗುವ ಹಂತ ತಲುಪಿವೆ. ಮಳೆಹಾನಿ ಪ್ರದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai), ಮಾಜಿ ಸಿಎಂ ಕುಮಾರಸ್ವಾಮಿ, ಸಚಿವರಾದ ಆರ್.ಅಶೋಕ್, ಅಶ್ವಥ್ ನಾರಾಯಣ್ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಪ್ರವಾಹ ಪೀಡಿತ ರಾಮನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ