ಮುಂಬೈನಲ್ಲಿ ಎಂಟಿಬಿಯೊಂದಿಗಿನ ರಾಗಿಮುದ್ದೆ, ನಾಟಿಕೋಳಿ ಪ್ರಸಂಗ ಸ್ಮರಿಸಿಕೊಂಡ ಆರ್. ಅಶೋಕ್

ಎಂಟಿಬಿ ನಾಗರಾಜ್ ಅವರು ಹೊಸಕೋಟೆ ಬಿಟ್ಟು ಹೊರಗೆ ಬರೋಲ್ಲ ಅಂತಿದ್ರು, ನಾನೇ ಮನೆಗೆ ಹೋಗಿ ಹೇಳಿ ಕರೆದುಕೊಂಡು ಹೋದೆ. ಅವರ ಋಣ ನಮ್ಮ ಮೇಲಿದೆ , ಎಂಟಿಬಿ ನಾಗರಾಜ್ ಅವರನ್ನು ಗೆಲ್ಲಿಸಿ ಮಂತ್ರಿ ಮಾಡುತ್ತೇವೆ ಎಂದರು.

G Hareeshkumar | news18-kannada
Updated:November 26, 2019, 8:29 PM IST
ಮುಂಬೈನಲ್ಲಿ ಎಂಟಿಬಿಯೊಂದಿಗಿನ ರಾಗಿಮುದ್ದೆ, ನಾಟಿಕೋಳಿ ಪ್ರಸಂಗ ಸ್ಮರಿಸಿಕೊಂಡ ಆರ್. ಅಶೋಕ್
ಸಚಿವ ಆರ್​ ಅಶೋಕ್​​ ಹಾಗೂ ಎಂಟಿಬಿ ನಾಗರಾಜ್​​
  • Share this:
ಹೊಸಕೋಟೆ(ನ.26) : ಎರಡೇ ದಿನ ಎಂದು ಎಂಟಿಬಿ ನಾಗರಾಜ್​​​  ಅವರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದು ನಾನೇ. ರಾಗಿಮುದ್ದೆಗಾಗಿ ಇಬ್ಬರು ಹುಡುಕಾಡಿದ್ವಿ, ಅವರ ಸ್ನೇಹಿತರ ಕೈಯಲ್ಲಿ ಮುದ್ದೆ ತರಿಸಿಕೊಂಡು ಇಬ್ಬರು ತಿಂತಿದ್ವಿ, ನನಗೆ ಬಾಯಿ ಚಪಲ ನಾಟಿಕೋಳಿ ಬೇಕು ಅಂತಿದ್ದೆ ಎಂದು  ಸಚಿವ ಆರ್​ ಅಶೋಕ್​​​ ಹೇಳಿದರು. 

ಪ್ರಚಾರದಲ್ಲಿ ಬಾಂಬೆ ನಾಟಿಕೋಳಿ ರಾಗಿಮುದ್ದೆ ಕಥೆ ಹೇಳಿದ  ಅವರು, ಎಂಟಿಬಿ ನಾಗರಾಜ್ ಅವರು ಹೊಸಕೋಟೆ ಬಿಟ್ಟು ಹೊರಗೆ ಬರೋಲ್ಲ ಅಂತಿದ್ರು, ನಾನೇ ಮನೆಗೆ ಹೋಗಿ ಹೇಳಿ ಕರೆದುಕೊಂಡು ಹೋದೆ. ಅವರ ಋಣ ನಮ್ಮ ಮೇಲಿದೆ , ಎಂಟಿಬಿ ನಾಗರಾಜ್ ಅವರನ್ನು ಗೆಲ್ಲಿಸಿ ಮಂತ್ರಿ ಮಾಡುತ್ತೇವೆ ಎಂದರು.

ಹೊಸಕೋಟೆಯಲ್ಲಿ ಸ್ವಾಭಿಮಾನಕ್ಕಾಗಿ ಹೋರಾಟ ನಡೆಯುತ್ತಿದೆ : ಶರತ್ ಬಚ್ಚೇಗೌಡ

ಹೊಸಕೋಟೆಯ ಸಿದ್ದನಹಳ್ಳಿ ಗ್ರಾಮದ ಪ್ರಚಾರದಲ್ಲಿ  ಮಾತನಾಡಿದ  ಪಕ್ಷೇತರ ಅಭ್ಯರ್ಥಿ  ಶರತ್​ ಬಚ್ಚೇಗೌಡ, 18 ತಿಂಗಳಲ್ಲಿ 185 ಕೋಟಿ ಆಸ್ತಿ ಜಾಸ್ತಿ ಹೇಗಾಯ್ತು. ಹೊಸಕೋಟೆಯಲ್ಲಿರೊ ಕಮೀಷನ್, ರಿಯಲ್ ಎಸ್ಟೇಟ್ ಮಾಫಿಯಾ, ಇವೆಲ್ಲಾದ್ರಿಂದ ಆಸ್ತಿ ಜಾಸ್ತಿಯಾಗಿದೆ, ಇವತ್ತು ಅಕ್ರಮವಾಗಿ ಸಂಪಾದನೆ ಮಾಡಿದ ದುಡ್ಡಿಂದಲೇ ಎಲೆಕ್ಷನ್ ಮಾಡಲು ಬಂದಿದ್ದಾರೆ ಎಂದು ಎಂಟಿಬಿ ನಾಗರಾಜ್ ವಿರುದ್ದ ಶರತ್ ಬಚ್ಚೇಗೌಡ ನೇರ ವಾಗ್ದಾಳಿ ನಡೆಸಿದರು.

ಮಂಡ್ಯದಂತೆ ಹೊಸಕೋಟೆ ಸಹ ಸ್ವಾಭಿಮಾನಿ ಮತಕ್ಷೇತ್ರ. ಹೊಸಕೋಟೆಯಲ್ಲಿ ಸ್ವಾಭಿಮಾನಕ್ಕಾಗಿ ಹೋರಾಟ ನಡೆಯುತ್ತಿದೆ., ಗೆಲುವು ನಮ್ಮದೆ. ಸಾಕಷ್ಟು ಆಮಿಷವೊಡ್ಡಿ ನನ್ನ ಸ್ಪರ್ಧೆ ಮಾಡದಂತೆ ಒತ್ತಡ ಬಂದಿತ್ತು, ನಾನು ಯಾವುದೇ ಆಮಿಷಕ್ಕೆ ಒಳಗಾಗದೆ ಸ್ವತಂತ್ರವಾಗಿ ಚುನಾವಣೆ ಎದುರಿಸ್ತಾ ಇದ್ದೇನೆ. ನೆನ್ನೆಯಷ್ಟೆ ನಂಗೆ ಯಾವುದೇ ಆಮಿಷ ಬರಲಿಲ್ಲ ಎಂದು ಹೇಳಿಕೆ ನೀಡಿದ್ದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಯೂಟರ್ನ್ ಹೊಡೆದರು.

ಎಂಟಿಬಿ ವಿರುದ್ದ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಮಹಿಳೆಯರ ಬಗ್ಗೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​​ ಅವರು ಹಗುರ ಹೇಳಿಕೆ ಖಂಡಿಸಿ  ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಡಾ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಹೊಸಕೋಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.ಇದನ್ನೂ ಓದಿ : ದುಷ್ಟ ಶಕ್ತಿಯನ್ನು ಕಿತ್ತೆಸೆಯಲು ನನ್ನನ್ನು ಬೆಂಬಲಿಸಿ ; ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ

ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​​​ ಅವರಿಗೆ ಮತ ಹಾಕದಂತೆ ಮನವಿ ಮಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಗೆದ್ದಂತಹ ಮಹಿಳೆಯರು ಗಂಡಸರಾ. ಹಾಗಾದ್ರೆ ಅವರಿಂದ ನೀವು ರಾಜೀನಾಮೆ ಪಡೆದುಕೊಳ್ಳುತ್ತೀರಾ. ಮಹಿಳೆಯರ ಬಗ್ಗೆ ಯಾಕೀ ತಾತ್ಸಾರ ಮನೋಭಾವ. ಈ ಕ್ಷೇತ್ರದ ಮಹಿಳೆಯರು ಸ್ವಾಭಿಮಾನಿಗಳಾಗಿದ್ದು, ಎಂಟಿಬಿ ನಾಗರಾಜ್​​ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
First published: November 26, 2019, 8:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading