ಬ್ರಹ್ಮಗಿರಿ ದುರಂತ: ಎರಡೇ ದಿನದಲ್ಲಿ ಕಾರ್ಯಾಚರಣೆ ಮುಗಿಸುವಂತೆ ಅಧಿಕಾರಿಗಳಿಗೆ ಸಚಿವ ಆರ್.​​​ ​ಅಶೋಕ್​​ ಸೂಚನೆ

ಎನ್​​ಡಿಆರ್​​ಎಫ್ ತಂಡದ ಜೊತೆಗೆ ಎಸ್​​​ಡಿಆರ್​​ಎಫ್ ತಂಡಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯಚರಣೆ ತೀವ್ರಗೊಳಿಸಬೇಕು. ಪ್ರತಿ ದಿನ ಮೂರು ಪಾಳಿಯಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಿ. ಇಂದು ಅಥವಾ ನಾಳೆಯೊಳಗೆ ಎರಡೇ ದಿನದಲ್ಲಿ ಕಾರ್ಯಚರಣೆ ಮುಗಿಸಬೇಕು ಎಂದು ಸಂಬಂಧಪಟ್ಟವರಿಗೆ ಆರ್​​. ಅಶೋಕ್​ ಆದೇಶಿಸಿದ್ದಾರೆ.

news18-kannada
Updated:August 9, 2020, 4:02 PM IST
ಬ್ರಹ್ಮಗಿರಿ ದುರಂತ: ಎರಡೇ ದಿನದಲ್ಲಿ ಕಾರ್ಯಾಚರಣೆ ಮುಗಿಸುವಂತೆ ಅಧಿಕಾರಿಗಳಿಗೆ ಸಚಿವ ಆರ್.​​​ ​ಅಶೋಕ್​​ ಸೂಚನೆ
ಆರ್. ಅಶೋಕ್
  • Share this:
ಕೊಡಗು(ಆ.09): ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತವಾಗಿ ಕಣ್ಮರೆಯಾಗಿರುವ ನಾಲ್ವರನ್ನು ಹುಡುಕುವ ಕೆಲಸ ಎರಡೇ ದಿನಗಳಲ್ಲಿ ಮುಗಿಯಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಎನ್​​ಡಿಆರ್​​ಎಫ್ ತಂಡದ ಜೊತೆಗೆ ಎಸ್​​​ಡಿಆರ್​​ಎಫ್ ತಂಡಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯಚರಣೆ ತೀವ್ರಗೊಳಿಸಬೇಕು. ಪ್ರತಿ ದಿನ ಮೂರು ಪಾಳಿಯಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಿ. ಇಂದು ಅಥವಾ ನಾಳೆಯೊಳಗೆ ಎರಡೇ ದಿನದಲ್ಲಿ ಕಾರ್ಯಚರಣೆ ಮುಗಿಸಬೇಕು ಎಂದು ಸಂಬಂಧಪಟ್ಟವರಿಗೆ ಆರ್​​. ಅಶೋಕ್​ ಆದೇಶಿಸಿದ್ದಾರೆ.

ಸ್ಥಳದಲ್ಲಿ ಈಗಾಗಲೇ 20 ಜನರ ಎನ್​​ಡಿಆರ್​​ಎಫ್ ತಂಡ ಮತ್ತು 20 ಜನರ ಎಸ್​​ಡಿಆರ್​ಎಫ್​ ಸಿಬ್ಬಂದಿ ಕಾರ್ಯಚರಣೆ ನಡೆಸುತ್ತಿರುವುದು ತಡವಾಗಬಹುದು. ಇದರಿಂದ ಬೇರೆಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಇರುವ ಎಲ್ಲಾ ಫೋರ್ಸ್​ಗಳನ್ನು ಬಳಸಿಕೊಂಡು ಕಾರ್ಯಾಚರಣೆಯನ್ನು ಆದಷ್ಟು ಬೇಗ ಮುಗಿಸುವಂತೆ ಸೂಚಿಸಿದ್ದರು.

ಇನ್ನು, ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಚರಣೆ ತೀವ್ರಗೊಳಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲು ಸಿದ್ದ. ಆದಷ್ಟು ಬೇಗ ಕಾರ್ಯಾಚರಣೆಯನ್ನು ಮುಗಿಸಿ ಎಂದರು. ಈ ವೇಳೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಸಂಸದ ಪ್ರತಾಪ್ ಸಿಂಹ ಇದ್ದರು.

ಕರ್ನಾಟಕದಲ್ಲಿ ಐದು ದಿನ ಸುರಿದ ಮಳೆಗೆ 8 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಮಣ್ಣಿನಡಿ ಹೂತುಹೋಗಿದ್ದ ತಲಕಾವೇರಿ ಅರ್ಚಕರ ಕುಟುಂಬದ ಶೋಧ ಕಾರ್ಯಾಚರಣೆ ನಿನ್ನೆ ನಡೆಸಲಾಗಿದೆ.

ಐದು ದಿನಗಳು ಸುರಿದ ರಣಭೀಕರ ಮಳೆಗೆ ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾಗಿದ್ದ ನಾರಾಯಣ ಆಚಾರ್ಯರ ಸಹೋದರ ಆನಂದತೀರ್ಥ ಅವರ ಮೃತದೇಹ ಕೊನೆಗೂ ಮೂರು ದಿನಗಳ ಬಳಿಕ ಪತ್ತೆಯಾಗಿದೆ. ಬ್ರಹ್ಮಗಿರಿ ಬೆಟ್ಟ ಕುಸಿದ ಪರಿಣಾಮ ಆಚಾರ್ಯರ ಕುಟುಂಬದ ಐವರು ಮಣ್ಣಿನಡಿ ಸಿಲುಕಿದ್ದರು. ಉಳಿದವರ ಶವ ಇನ್ನೂ ಪತ್ತೆಯಾಗಿಲ್ಲ.

ಮೂರು ದಿನಗಳ ಹಿಂದೆ ಬೆಟ್ಟದಡಿಯಲ್ಲಿ ಹೂತುಹೋದ ನಾರಾಯಣ ಆಚಾರ್ಯ ಅವರ ಕುಟುಂಬದವರನ್ನು ತೀವ್ರ ಮಳೆಯಿಂದಾಗಿ ಹುಡುಕಲು ಸಾಧ್ಯವೇ ಆಗಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ಮಾಡಿದ ಸಚಿವ ವಿ ಸೋಮಣ್ಣ ಇಂದು ಹೇಗಾದರೂ ಸರಿ ರಕ್ಷಣಾ ಕಾರ್ಯಾಚರಣೆ ಮಾಡಲೇಬೇಕು ಅಂತಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದನ್ನೂ ಓದಿ: ‘ಕೊಡಗನ್ನು ಕಾಪಾಡುವಲ್ಲಿ ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​​​ ಎಲ್ಲಾ ಪಕ್ಷಗಳು ಸೋತಿವೆ‘ - ಡಿಕೆ ಶಿವಕುಮಾರ್​​

ಅಷ್ಟರಲ್ಲೇ ಭೂ ಕುಸಿತದ ಸ್ಥಳದಲ್ಲಿ ಬೀಡುಬಿಟ್ಟಿದ್ದ ಎನ್ ಡಿಆರ್ ಎಫ್ ತಂಡ ಮಳೆ ಕಡಿಮೆ ಆಗಿದ್ದೇ ತಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಮತ್ತೊಂದೆಡೆ ತಮ್ಮನ ಕುಟುಂಬ ಭೂ ಕುಸಿತದಲ್ಲಿ ಕಣ್ಮರೆಯಾಗಿರುವ ಸುದ್ದಿ ತಿಳಿದು ಮಂಗಳೂರಿನಿಂದ ಬಂದಿದ್ದ ನಾರಾಯಣ ಆಚಾರ್ಯ ಅವರ ಸಹೋದರಿ ಸುಶೀಲಾ ತಮ್ಮನ ಕುಟುಂಬ ಬದುಕಿರುವ ಬಗ್ಗೆ ಯಾವುದೇ ನಂಬಿಕೆ ಇಲ್ಲ. ಕೊನೆ ಪಕ್ಷ ಅವರ ದೇಹಗಳನ್ನಾದರೂ ಹುಡುಕಿ ಕೊಡಿ ಅಂತ ಕಣ್ಣೀರು ಸುರಿಸಿದರು.
Published by: Ganesh Nachikethu
First published: August 9, 2020, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading