ಕಾಂಗ್ರೆಸ್​​ನಲ್ಲಿ ಡಿಕೆ ಶಿವಕುಮಾರ್ ಟೆಸ್ಟ್ ಡ್ರೈವ್​​​​ ಕಾರ್ ಇದ್ದಂತೆ; ಸಚಿವ ಆರ್​.ಅಶೋಕ್ ವ್ಯಂಗ್ಯ

ಕಾಂಗ್ರೆಸ್​ನಲ್ಲಿ ಡಿಕೆ ಶಿವಕುಮಾರ್ ಟೆಸ್ಟ್ ಡ್ರೈವ್​​ ಕಾರ್ ಇದ್ದಂತೆ. ಬೇಕಾದಾಗ ಪಕ್ಷ ಅವರನ್ನು ಬಳಸಿಕೊಳ್ಳುತ್ತೆ ಅಷ್ಟೇ. ಅವರು ಸ್ವಯಂಘೋಷಿತ ಬಂಡೆ, ಶಿಲೆ, ವಿಗ್ರಹ ಅಷ್ಟೇ ಎಂದು  ಡಿಕೆ ಶಿವಕುಮಾರ್ ಬಗ್ಗೆ  ಆರ್ ಅಶೋಕ್ ವ್ಯಂಗ್ಯ ಮಾಡಿದರು.

news18-kannada
Updated:October 21, 2020, 1:45 PM IST
ಕಾಂಗ್ರೆಸ್​​ನಲ್ಲಿ ಡಿಕೆ ಶಿವಕುಮಾರ್ ಟೆಸ್ಟ್ ಡ್ರೈವ್​​​​ ಕಾರ್ ಇದ್ದಂತೆ; ಸಚಿವ ಆರ್​.ಅಶೋಕ್ ವ್ಯಂಗ್ಯ
ಸಚಿವ ಆರ್. ಅಶೋಕ್
  • Share this:
ಬೆಂಗಳೂರು(ಅ.21): ಕಾಂಗ್ರೆಸ್​​​ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ನಡುವೆ ಒಳಜಗಳಗಳು ನಡೆಯುತ್ತಿವೆ. ಶಿರಾದಲ್ಲಿ ಡಿಕೆ ಶಿವಕುಮಾರ್​​ಗೆ ಜಯಚಂದ್ರ ಸೋಲಬೇಕು. ಆರ್​ ಆರ್​ ನಗರದಲ್ಲಿ ಸಿದ್ದರಾಮಯ್ಯನವರಿಗೆ ಕುಸುಮಾ ಸೋಲಬೇಕು. ಇದು ಅವರಿಬ್ಬರ ಒಳಜಗಳ. ಶಿರಾದಲ್ಲಿ ಯಾಕೆ ಜಯಚಂದ್ರಗೆ ಟಿಕೆಟ್ ನೀಡಿದ್ರಿ ಅಂತ ಸುರ್ಜೆವಾಲ ಗದರಿದರು ಎಂದು ಡಿಕೆ ಶಿವಕುಮಾರ್ ಸಿದ್ದರಾಮಯ್ಯನವರಿಗೆ ಮಾಧ್ಯಮದ ಮುಂದೆ ಕಿವಿಯಲ್ಲಿ ಕೇಳುವ ತರ ನಾಟಕ ಮಾಡಿದ್ದಾರೆ. ಈ ವಿಷಯ ಮಾಧ್ಯಮಕ್ಕೆ ವಿಷಯ ಗೊತ್ತು ಮಾಡುವುದೇ ಶಿವಕುಮಾರ್ ಉದ್ದೇಶ ಆಗಿತ್ತು. ಇದು ಡಿಕೆ ಶಿವಕುಮಾರ್ ನಾಟಕ ಎಂದು ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಮುಂದುವರೆದ ಅವರು, ಕಾಂಗ್ರೆಸ್​ನಲ್ಲಿ ಡಿಕೆ ಶಿವಕುಮಾರ್ ಟೆಸ್ಟ್ ಡ್ರೈವ್​​ ಕಾರ್ ಇದ್ದಂತೆ. ಬೇಕಾದಾಗ ಪಕ್ಷ ಅವರನ್ನು ಬಳಸಿಕೊಳ್ಳುತ್ತೆ ಅಷ್ಟೇ. ಅವರು ಸ್ವಯಂಘೋಷಿತ ಬಂಡೆ, ಶಿಲೆ, ವಿಗ್ರಹ ಅಷ್ಟೇ ಎಂದು  ಡಿಕೆ ಶಿವಕುಮಾರ್ ಬಗ್ಗೆ  ಆರ್ ಅಶೋಕ್ ವ್ಯಂಗ್ಯ ಮಾಡಿದರು.

ಚುನಾವಣೆ ಮುಗಿದ್ಮೇಲೆ ಬಂಡೆ ಛಿದ್ರವಾಗುತ್ತೆ, ಹುಲಿಯಾ ಕಾಡಿಗೆ ಹೋಗುತ್ತೆ; ಡಿಕೆಶಿ-ಸಿದ್ದರಾಮಯ್ಯ ಬಗ್ಗೆ ಕಟೀಲ್ ವ್ಯಂಗ್ಯ

ಇದೇ ವೇಳೆ, ಕಾಂಗ್ರೆಸ್ ನಲ್ಲಿ ಇಬ್ಬರು ಲೀಡರ್. ಶಿರಾದಲ್ಲಿ ಒಬ್ಬರು, ಆರ್ ಆರ್ ನಗರದಲ್ಲಿ ಇನ್ನೊಬ್ಬರು. ಶಿರಾದಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಬೇಕು ಅಂತ ಒಬ್ಬರು. ಆರ್ ಆರ್ ನಗರದಲ್ಲಿ ತನ್ನ ಅಭ್ಯರ್ಥಿ ಗೆಲ್ಲಬೇಕು ಎಂದು ಇನ್ನೊಬ್ಬರು. ಈ ಉಪ ಚುನಾವಣೆ ಮುಗಿದ ಮೇಲೆ ಬಂಡೆ ಛಿದ್ರವಾಗತ್ತೆ. ಹುಲಿಯಾ ಕಾಡಿಗೆ ಹೋಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯ ಮಾಡಿದ್ದರು.

ಇಂದು ಆರ್​​ ಆರ್​ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಕಾರ್ಪೋರೇಟ್​​​ಗಳು​​ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ್ ಸ್ವಾಮಿ ಬಿಜೆಪಿ ಸೇರಿಕೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಆರ್​.ಅಶೋಕ್, ಅರವಿಂದ ಲಿಂಬಾವಳಿ, ತೇಜಸ್ವಿ ಸೂರ್ಯ, ಪಿಸಿ ಮೋಹನ್, ಮುನಿರತ್ನ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಬಿಜೆಪಿ ಸೇರ್ಪಡೆಯಾದ ಮಂಜುಳಾ ನಾರಾಯಣ ಸ್ವಾಮಿ, ಈ ಹಿಂದೆ ಮುನಿರತ್ನ ವಿರುದ್ಧ ಪಾಲಿಕೆಯ ಒಳಗೆ ಹಾಗೂ ಹೊರಗೆ ವೈಯಕ್ತಿಕ ಮಟ್ಟದಲ್ಲಿ ಜಗಳ ಮಾಡಿ ಸುದ್ದಿಯಾಗಿದ್ದರು. ಇಂದು ಬಿಜೆಪಿ ಸೇರಿಕೊಂಡರು.
Published by: Latha CG
First published: October 21, 2020, 1:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading