ಬೆಂಗಳೂರು (ಫೆ.08): ಸಂಪುಟ ವಿಸ್ತರಣೆ ಮುಗಿಯುತ್ತಿದ್ದಂತೆ ಖಾತೆ ಹಂಚಿಕೆ ಗೊಂದಲದಲ್ಲಿ ಸಿಎಂ ಮುಳುಗಿದ್ದು, ಯಾರಿಗೆ ಯಾವ ಖಾತೆ ನೀಡಬೇಕು ಎಂಬ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರ ಜೊತೆಗೆ ನೂತನ ಸಚಿವರುಗಳು ಪ್ರಬಲ ಖಾತೆಗಳಿಗಾಗಿ ಬೇಡಿಕೆ ಇಟ್ಟಿರುವುದು ಇನ್ನಷ್ಟು ಬಿಕ್ಕಟ್ಟು ಮೂಡಿದೆ.
ಸರ್ಕಾರದಲ್ಲಿ ಈಗಾಗಲೇ ಸಿಎಂ ಸೇರಿದಂತೆ ಅನೇಕ ಸಚಿವರು ಎರಡು ಮೂರು ಖಾತೆಗಳನ್ನು ಹೊಂದಿದ್ದಾರೆ. ಈ ಖಾತೆಗಳನ್ನು ನೂತನ ಸಚಿವರಿಗೆ ನೀಡಲು ಸಿಎಂ ಮುಂದಾಗಿದ್ದಾರೆ. ಇದೇ ಹಿನ್ನೆಲೆ ಖಾತೆ ಅದಲು ಬದಲಾಗುವ ಸಾಧ್ಯತೆ ಇದೆ.
ಇನ್ನು ಖಾತೆ ಬದಲಾವಣೆಯಾಗುವ ಹಿನ್ನೆಲೆ ಸಿಎಂ ಬಿಎಸ್ವೈರನ್ನ ಸಚಿವ ಆರ್ ಅಶೋಕ್ ಭೇಟಿ ಮಾಡಿ ಚರ್ಚಿಸಿದ್ದಾರೆ. ಅಶೋಕ್ ಬಳಿ ಕಂದಾಯ, ಪೌರಾಡಳಿತ ಖಾತೆ ಇವೆ. ಇವುಗಳಲ್ಲಿ ಒಂದು ಖಾತೆ ಪಡೆದು ನೂತನ ಸಚಿವರಿಗೆ ನೀಡಲಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಇಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಪ್ರಬಲ ಖಾತೆಗೆ ನೂತನ ಸಚಿವರ ಲಾಬಿ
ಕಾಂಗ್ರೆಸ್-ಜೆಡಿಎಸ್ಗೆ ರಾಜೀನಾಮೆ ನೀಡಿ ಸರ್ಕಾರ ರಚನೆಗೆ ಸಹಾಯ ಮಾಡಿದ ಹಿನ್ನೆಲೆ ತಮಗೆ ಸರ್ಕಾರದಲ್ಲಿ ಪ್ರಬಲ ಖಾತೆಗಾಗಿ ನೂತನ ಸಚಿವರು ಪಟ್ಟು ಹಿಡಿದಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೆ.ಗೋಪಾಲಯ್ಯ, ಹಾಗೂ ನಾರಾಯಣಗೌಡ ಅವರು ಸಿಎಂ ಭೇಟಿಯಾಗಿ ಪ್ರಬಲ ಖಾತೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಇದನ್ನು ಓದಿ: ಯಡಿಯೂರಪ್ಪ ಸ್ವತಂತ್ರವಾಗಿ ಖಾತೆ ಹಂಚಿಕೆ ಮಾಡಲಾರದಷ್ಟು ಅಸಮರ್ಥ ಸಿಎಂ: ಸಿದ್ಧರಾಮಯ್ಯ ಲೇವಡಿ
ಖಾತೆ ಬಗ್ಗೆ ಮಾತನಾಡಿರುವ ಭೈರತಿ ಬಸವರಾಜ್, ಎಸ್ಟಿ ಸೋಮಶೇಖರ್, ನಾವು ಕಾಂಗ್ರೆಸ್ ಬಿಟ್ಟು ಬಂದಿರುವವರು. ಈಗ ಸರ್ಕಾರದಲ್ಲಿ ಪ್ರಬಲ ಖಾತೆ ನೀಡಬೇಕು ಇದು ನಮಗೆ ಮಾರ್ಯದೆ ಪ್ರಶ್ನೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ