ಫಲಿತಾಂಶದ ಬಳಿಕ ರಾಜ್ಯದಲ್ಲಿ ಜೆಡಿಎಸ್​​ ಇರಲ್ಲ; ಸಿದ್ದರಾಮಯ್ಯ ವಿಪಕ್ಷ ಸ್ಥಾನ ಕಳೆದುಕೊಳ್ಳಲಿದ್ದಾರೆ; ಆರ್​​. ಅಶೋಕ್​ ಭವಿಷ್ಯ

ಇನ್ನು ಕಾಂಗ್ರೆಸ್​-ಜೆಡಿಎಸ್​ ಮತ್ತೊಮ್ಮೆ ಮೈತ್ರಿ ಸರ್ಕಾರ ರಚನೆ ಮಾಡುವ ಭ್ರಮೆಯಲ್ಲಿವೆ. ಇದು ಅಸಾಧ್ಯವಾದ ಮಾತು. ಫಲಿತಾಂಶದ ಬಳಿಕ ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನ ಕಳೆದುಕೊಳ್ಳಲಿದ್ದಾರೆ- ಆರ್​​. ಅಶೋಕ್​​

news18-kannada
Updated:December 8, 2019, 8:55 PM IST
ಫಲಿತಾಂಶದ ಬಳಿಕ ರಾಜ್ಯದಲ್ಲಿ ಜೆಡಿಎಸ್​​ ಇರಲ್ಲ; ಸಿದ್ದರಾಮಯ್ಯ ವಿಪಕ್ಷ ಸ್ಥಾನ ಕಳೆದುಕೊಳ್ಳಲಿದ್ದಾರೆ; ಆರ್​​. ಅಶೋಕ್​ ಭವಿಷ್ಯ
ಆರ್​ ಅಶೋಕ್​​
  • Share this:
ಬೆಂಗಳೂರು(ಡಿ.08): ಕರ್ನಾಟಕ ಉಪಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್​ ನಡಿಗೆ ಶೂನ್ಯದ ಕಡೆಗೆ ಎಂಬ ಸ್ಥಿತಿ ಬಂದೊದಗಲಿದೆ ಎಂದು ರಾಜ್ಯ ಕಂದಾಯ ಸಚಿವ ಆರ್​​. ಅಶೋಕ್​​​ ವ್ಯಂಗ್ಯವಾಡಿದ್ದಾರೆ. ಭಾನುವಾರ(ಇಂದು) ಉಡುಪಿ ಕಾರ್ಕಳದ ಅಜುಕರೆ ಎಂಬಲ್ಲಿ ಮಾತಾಡಿದ ಆರ್​​. ಅಶೋಕ್​​​, ರಾಜ್ಯದ 14 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಲಿದೆ. ಕಾಂಗ್ರೆಸ್​ ಹೀನಾಯ ಸೋಲು ಕಾಣಲಿದೆ ಎಂದು ಭವಿಷ್ಯ ನುಡಿದರು.

"ಜನ ಸುಭದ್ರ ಸರ್ಕಾರಕ್ಕಾಗಿ ಬಿಜೆಪಿಗೆ ಮತ ನೀಡಿದ್ದಾರೆ. ಹಾಗಾಗಿ ಬಿಜೆಪಿ 15 ಕ್ಷೇತ್ರಗಳಲ್ಲಿ 14 ಸೀಟು ಗೆಲ್ಲಲಿದೆ. ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಿಂದ ಬೇಸತ್ತ ಜನ ಬಿಜೆಪಿಗೆ ವೋಟ್​ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಚ್​.ಡಿ ಕುಮಾರಸ್ವಾಮಿ ಸರ್ಕಾರದಂತಲ್ಲದೆ ಬಿಜೆಪಿ ಸರ್ಕಾರ ಜನಪರ ಆಡಳಿತ ನಡೆಸಲಿದೆ" ಎಂದು ಆರ್​​. ಅಶೋಕ್​​ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಕಾಂಗ್ರೆಸ್​-ಜೆಡಿಎಸ್​ ಮತ್ತೊಮ್ಮೆ ಮೈತ್ರಿ ಸರ್ಕಾರ ರಚನೆ ಮಾಡುವ ಭ್ರಮೆಯಲ್ಲಿವೆ. ಇದು ಅಸಾಧ್ಯವಾದ ಮಾತು. ಫಲಿತಾಂಶದ ಬಳಿಕ ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನ ಕಳೆದುಕೊಳ್ಳಲಿದ್ದಾರೆ. ಹಾಗೆಯೇ ಜೆಡಿಎಸ್​​ ರಾಜ್ಯದಲ್ಲೇ ಇಲ್ಲದಂತಾಗಲಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​​ ಎರಡು ಪಕ್ಷದಲ್ಲೂ ಎರಡು ಬಣಗಳಿವೆ. ಹಾಗಾಗಿ ಮತ್ತೆ ಮೈತ್ರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಮಾನ ಮರ್ಯಾದೆ ಇರೋರು ಬಿಜೆಪಿಗೆ ಹೋಗೋದಿಲ್ಲ: ಎಸ್​​.ಟಿ ಸೋಮಶೇಖರ್​​ಗೆ ಸಿದ್ದರಾಮಯ್ಯ ಟಾಂಗ್​​

ಈಗಾಗಲೇ ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ. ಇದರ ಫಲಿತಾಂಶ ನಾಳೆ ಸೋಮವಾರ ಹೊರ ಬೀಳಲಿದೆ. ಆಡಳಿತರೂಢ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೂರೂ ಪಕ್ಷಗಳ ಪಾಲಿಗೆ ಇದು ಅತ್ಯಂತ ಮಹತ್ವದ ಚುನಾವಣೆಯಾಗಿದೆ. ಹೀಗಾಗಿ ಫಲಿತಾಂಶ ನಮಗೆ ಸಾಧಕವಾಗಿ ಬರಲಿ ಎಂಬ ಕಾರಣಕ್ಕೆ ಮೂರೂ ಪಕ್ಷದ ನಾಯಕರು ದೇವರ ಮೊರೆ ಹೋಗುತ್ತಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಕೊನೆಯ ಕಸರತ್ತಿಗೆ ಮುಂದಾದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಈ ಬೆನ್ನಲೇ ಜೆಡಿಎಸ್​​ನ ಮಾಜಿ ಪ್ರಧಾನಿ ದೇವೇಗೌಡರು ದೇವಾಲಯಕ್ಕೆ ಹೋಗಿದ್ದಾರೆ.
First published:December 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ