Kolar News: ಸಿದ್ದರಾಮೋತ್ಸವ ನಂತರ, ಡಿಕೆಶಿ ಉತ್ಸವ ನಡೆಯಲಿದೆ; ಸಚಿವ ಆರ್‌‌. ಅಶೋಕ್ ವ್ಯಂಗ್ಯ

ಕಾಂಗ್ರೆಸ್  ಸಿಎಂ ರೇಸ್ ನಲ್ಲಿ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್ ಇನ್ನೂ ಇಬ್ಬರು ಇದ್ದಾರೆ.  ಹಾಗಾಗಿ  ಲಾಟರಿ ಮೂಲಕ ಮುಂದಿನ ಕಾಂಗ್ರೆಸ್ ಸಿಎಂ ಆಯ್ಕೆ ಮಾಡಲಾಗುತ್ತೆ ಎಂದು ತಿಳಿದುಬಂದಿದೆ. ರಾಜ್ಯಕ್ಕೆ ಲಾಟರಿಯಂತಹ ಕಾಂಗ್ರೆಸ್ ಪಾರ್ಟಿ ಬೇಡ, ಬಿಜೆಪಿ ಬೇಕಿದೆ ಎಂದರು.

ಬಿಜೆಪಿ ಕಾರ್ಯಕ್ರಮ

ಬಿಜೆಪಿ ಕಾರ್ಯಕ್ರಮ

  • Share this:
ಕೋಲಾರ : ಕಾಂಗ್ರೆಸ್ (Cngress) ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆಶಿ (DK Shivakumar) ತಿರುಕನ ಕನಸು ಕಾಣ್ತಿದ್ದಾರೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ರಾಜ್ಯ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ದೇಶದಲ್ಲಿ, ರಾಜ್ಯದಲ್ಲಿ   ಕಾಂಗ್ರೆಸ್ ಉಳಿಸಿಕೊಳ್ಳೋಕೆ ಆಗಿಲ್ಲ. ಗೋವಾದಲ್ಲಿರೊ 12 ಮಂದಿ ಶಾಸಕರು ಗಂಟು ಮೂಟೆ ಕಟ್ಟಲು ರೆಡಿಯಾಗಿದ್ದಾರೆ. ರಾಜ್ಯದಲ್ಲೂ ಹಲವರು ಬಿಜೆಪಿಗೆ ಸೇರಲಿದ್ದಾರೆ.  ಸಿದ್ದರಾಮಯ್ಯ, ಡಿಕೆಶಿ ಗೂಟಾ ಹೊಡೆದುಕೊಂಡು ಬಡಿದಾಡಿದರು ಏನೂ ಆಗಲ್ಲ. ಅಂಬೇಡ್ಕರ್ ಅವರು ನಿಧನರಾದಾಗ ರಾಜ್ ಘಾಟ್ ಬಳಿ ಸಂಸ್ಕಾರಕ್ಕೆ ಸ್ಥಳ ನೀಡಲಿಲ್ಲ ಕಾಂಗ್ರೆಸ್. ಅಂಬೇಡ್ಕರ್ ಅವರ ಅಭಿವೃದ್ಧಿ ಗೆ ಮೋದಿ ಸರ್ಕಾರಿ ಒತ್ತು ನೀಡಿದೆ,  ತಿಂದ ಮನೆಗೆ ಎರಡು ಬಗೆಯುವರ ವಿರುದ್ದ ಬಿಜೆಪಿ ಇರುತ್ತದೆ. ಅಂಬೇಡ್ಕರ್ ಅವರನ್ನ ಗೌರವಿಸಿದ್ದು ಬಿಜೆಪಿ ಮಾತ್ರ, ಇದನ್ನ ದಲಿತರು ಯೋಚಿಸಬೇಕು ಎಂದರು, ಇನ್ನು  ದಲಿತರನ್ನ ಸಿಎಂ ಮಾಡೊದಾಗಿ ಹೇಳಿ, ಅವರನ್ನೆ  ಸೋಲಿಸಿದ್ದಾರೆ,  ಉತ್ತರ ಪ್ರದೇಶ,  ಪಂಜಾಬ್, ಉತ್ತರಾಖಂಡ್ , ಗೋವಾ ದಲ್ಲಿ ಕಾಂಗ್ರೆಸ್ ಬೇಳೆಕಾಳು ಬೇಯಲಿಲ್ಲ,  ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಕೋಲಾರದಲ್ಲಿ 6 ಕ್ಕೆ 6 ವಿಧಾನಸಭೆ  ಬಿಜೆಪಿ ಗೆದ್ದರೆ 2 ಮಂತ್ರಿ ಸ್ಥಾನ ಕೊಡುವುದಾಗಿ ಘೋಷಿಸಿದರು.

ಬಿಜೆಪಿಗೆ ಸೇರ್ಪಡೆ

ಮಾಲೂರು ಪಟ್ಟಣದ ಪಿ.ಆರ್.ಎ ಕಲ್ಯಾಣ ಮಂಟಪದಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ ಆಯೋಜಿಸಿದ್ದ ಪಕ್ಷ ಸೇರ್ಪಡೆ  ಕಾರ್ಯಕ್ರಮದಲ್ಲಿ,  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಸಚಿವರುಗಳಾದ ಆರ್ ಅಶೋಕ್, ಮುನಿರತ್ನ, ಡಾ ಸುಧಾಕರ್, ಸಂಸದ ಮುನಿಸ್ವಾಮಿ, ಎಮ್.ಎಲ್.ಸಿ ಛಲವಾದಿ ನಾರಾಯಣಸ್ವಾಮಿ, ವರ್ತೂರು ಪ್ರಕಾಶ್, ಸಂಪಂಗಿ ಹಾಗು ತಾಲೂಕು ಅಧ್ಯಕ್ಷ್ಯ ಪುರ ನಾರಾಯಣಸ್ವಾಮಿ ಹಾಗು 5 ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಮಂಜುನಾಥ್ ಗೌಡರ ನೇತೃತ್ವದಲ್ಲಿ ನೂರಾರು ಬೆಂಬಲಿಗ ಮುಖಂಡರು, ಸಾವಿರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು,.

ಸಿದ್ದರಾಮೋತ್ಸವ ನಂತರ, ಡಿಕೆಶಿ ಉತ್ಸವ ನಡೆಯುತ್ತೆ

ಇನ್ನು ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್ , ಇಂದು-ನಾಳೆ ಮುಂದೆಯೂ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ.  ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಮೋದಿ ಸೋಲಿಸಲು ಆಗಲ್ಲ.  ಸಿದ್ದರಾಮಯ್ಯ, ಡಿಕೆಶಿ ತಿಪ್ಪರಲಾಗ ಹಾಕಿದರು ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ,  ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲಿ 70 ಸೀಟ್ ಗೆಲ್ಲಬಹುದು ಎಂಬ ಮಾಹಿತಿ ಹೊರಬಿದ್ದಿದೆ.  ದೇಶದಲ್ಲಿ ಮೋದಿ, ಬಿಜೆಪಿ ಇದ್ದರೆ ಮಾತ್ರ ಒಳ್ಳೆಯದಾಗುತ್ತೆ. ಕಾಂಗ್ರೆಸ್, ಜೆಡಿಎಸ್ ಸುಮ್ಮನೆ ಪ್ರಚಾರಕ್ಕೆ ಮಾತಾಡ್ತಾರೆ.   ಕಾಂಗ್ರೆಸ್  ಸಿಎಂ ರೇಸ್ ನಲ್ಲಿ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್ ಇನ್ನೂ ಇಬ್ಬರು ಇದ್ದಾರೆ.  ಹಾಗಾಗಿ  ಲಾಟರಿ ಮೂಲಕ ಮುಂದಿನ ಕಾಂಗ್ರೆಸ್ ಸಿಎಂ ಆಯ್ಕೆ ಮಾಡಲಾಗುತ್ತೆ ಎಂದು ತಿಳಿದುಬಂದಿದೆ. ರಾಜ್ಯಕ್ಕೆ ಲಾಟರಿಯಂತಹ ಕಾಂಗ್ರೆಸ್ ಪಾರ್ಟಿ ಬೇಡ, ಬಿಜೆಪಿ ಬೇಕಿದೆ ಎಂದರು.

ಇದನ್ನೂ ಓದಿ: Karnataka Rains: ಮಳೆ ಹಾನಿ ಪ್ರದೇಶಕ್ಕೆ ಸ್ವತಃ ನಾನೇ ಬರುತ್ತೇನೆ; ಸಿಎಂ ಬೊಮ್ಮಾಯಿ ಘೋಷಣೆ

ಸಂಸದ ಮುನಿಸ್ವಾಮಿ ಆಕ್ರೋಶದ  

ಕಾರ್ಯಕ್ರಮದಲ್ಲಿ ಮಾತನಾಡಿದ  ಸಂಸದ ಮುನಿಸ್ವಾಮಿ,  ಕೋಲಾರ ಜಿಲ್ಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅತಿ ಹೆಚ್ಚು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು, ಇನ್ನು ಕಳೆದ ಎಂಪಿ ಚುನಾವಣೆಯಲ್ಲಿ ಪಕ್ಷದಲ್ಲಿದ್ದು ಕೊಂಡೆ ಕೆಲವರು ಕಾಂಗ್ರೆಸ್ ಶಾಸಕರನ್ನ ಸಂಪರ್ಕಿಸಿದ್ರು, ಮಾಲೂರಿನಲ್ಲಿ ಶಾಸಕರಾಗಿ ಆಯ್ಕೆಯಾಗಿ ಮತ್ತೊಮ್ಮೆ ಬೆಂಗಳೂರಿನಲ್ಲಿ ಶಾಸಕರಾಗಲು ಹೊರಟಿದ್ದಾರೆ, ಮಾಲೂರಿನಲ್ಲಿ ಬಿಜೆಪಿಯ ಶಕ್ತಿ ಕುಗ್ಗಲು ಯಾರು ಕಾರಣರೆಂದು ಗೊತ್ತಿದೆ ಎಂದು ಆಕ್ರೋಶದ ನುಡಿಗಳನ್ನಾಡಿದರು, ಮಾಲೂರಿನ ಮುಂದಿನ ಶಾಸಕರು ಮಂಜುನಾಥ್ ಗೌಡರು ಆಗುವುದು ಖಚಿತ, ಹೈ ಕಮಾಂಡ್ ಮಟ್ಟದಲ್ಲಿ ಎಲ್ಲವು ಒಪ್ಪಿಗೆಯಾಗಿಯೇ ಮಂಜುನಾಥ್ ಗೌಡರು ಪಕ್ಷಕ್ಕೆ ಸೇರ್ಪಡೆಯಾಗಿರುವುದು ನಿಮಗೆಲ್ಲರಿಗು ತಿಳಿದಿರುವ ವಿಚಾರ, ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸದೃಡ ಭಾರತ ಕಟ್ಟಲು ಎಲ್ಲರು  ಬಿಜೆಪಿ ಬೆಂಬಲಿಸಿ ಎಂದು ಕರೆ ನೀಡಿದರು.

ಮಾಜಿ ಶಾಸಕ ಮಂಜುನಾಥ್ ಗೌಡ ಅವರೇ  ಮಾಲೂರು ಬಿಜೆಪಿ ಅಭ್ಯರ್ಥಿ 

ಮಾಲೂರಿನಲ್ಲಿ ಬಿಜೆಪಿ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿರುವ ವೇಳೆಯಲ್ಲಿ, ಮುಂದಿನ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಮಂಜುನಾಥ್ ಗೌಡ ಎಂದು ಸ್ವತಃ ಸಚಿವರಾದ ಡಾ ಕೆ ಸುಧಾಕರ್, ಮುನಿರತ್ನ, ಸಂಸದ ಮುನಿಸ್ವಾಮಿ  ಘೋಷಿಸಿದ್ದಾರೆ, ಮಾಲೂರಿನ ಪಿ.ಆರ್.ಎ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ,  ನೆರೆದಿದ್ದ ಸಾವಿರಾರು ಮಂಜುನಾಥ್ ಗೌಡ ಬೆಂಬಲಿಗರ ಎದುರು ಉತ್ಸಾಹವಾಗಿ ಮಾತನಾಡಿದ ಸಚಿವರು, ಸಂಸದರು ಮಾಲೂರು ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಅವರೇ ಎಂದು ಘೋಷಿಸಿದ್ದು, ಮಾಲೂರಿನಲ್ಲಿ ಬಿಜೆಪಿ ಗೆಲುವು‌ ನಿಶ್ಚಿತ ಹೈ ಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಸಿಯೇ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದಾಗಿ ನಾಯಕರು ಹೇಳಿದರು, ವಿಧಾನಸಭೆ  ಚುನಾವಣೆ ಘೋಷಣೆಗೆ ಮೊದಲೆ ಬಿಜೆಪಿ ಅಭ್ಯರ್ಥಿ ಘೋಷಣೆ ಕುರಿತು ಮಾಲೂರು ಬಿಜೆಪಿಯಲ್ಲಿ ಭಿನ್ನಮತ ಉಂಟಾಗುವ ಸಾಧ್ಯತೆಯಿದೆ.
Published by:Kavya V
First published: