• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ಕಾಂಗ್ರೆಸ್​​ನವರೇ ಭಿಕ್ಷುಕರು, ತಾಕತ್ ಧಮ್ ಇದ್ರೆ ಮೀಸಲಾತಿ ರದ್ದು ಮಾಡಲಿ: ಆರ್ ಅಶೋಕ್ ಸವಾಲು

Karnataka Politics: ಕಾಂಗ್ರೆಸ್​​ನವರೇ ಭಿಕ್ಷುಕರು, ತಾಕತ್ ಧಮ್ ಇದ್ರೆ ಮೀಸಲಾತಿ ರದ್ದು ಮಾಡಲಿ: ಆರ್ ಅಶೋಕ್ ಸವಾಲು

ಸಚಿವ ಆರ್ ಅಶೋಕ್

ಸಚಿವ ಆರ್ ಅಶೋಕ್

ಕಾಂಗ್ರೆಸ್​​​ನವರಿಗೆ ಮುಸ್ಲಿಮರ ಬಗ್ಗೆ ಅತಿ ಪ್ರೀತಿ ಇದೆ. ಇದು ಮುಖ್ಯಮಂತ್ರಿ ಪದವಿಗೆ ಹಾಗೂ ನಾಡಿನ ಜನತೆಗೆ ಮಾಡಿದ ಅಪಮಾನ. ಕೂಡಲೇ ಅವರು ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.

  • Share this:

ಬೆಂಗಳೂರು: ಕಾಂಗ್ರೆಸ್​ನವರೇ (Congress) ಭಿಕ್ಷುಕರು, ಅವರಿಗೆ ತಾಕತ್ ಧಮ್ ಇದ್ರೆ ಮೀಸಲಾತಿ ರದ್ದು ಮಾಡಲಿ ಎಂದು ಸಚಿವ ಆರ್.ಅಶೋಕ್ (Minister R Ashok) ಸವಾಲು ಹಾಕಿದ್ದಾರೆ. ಮೀಸಲಾತಿ ವಿಚಾರವಾಗಿ ಸ್ವಾಮೀಜಿಗಳಿಗೆ ಕರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC DK Shivakumar) ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರಿಗೆ ಜ್ಞಾನ ಕಡಿಮೆ ಅನ್ನಿಸುತ್ತದೆ. ವ್ಯವಹಾರಿಕ ಜ್ಞಾನ ಇಲ್ಲ ಇನ್ನಿಸುತ್ತದೆ. ಸ್ವಾಮೀಜಿಗಳಿಗೆ ಯಾರಾದ್ರೂ ಒತ್ತಡ ಹಾಕೋದಕ್ಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದರು. ಇದು ಸ್ವಾಮೀಜಿಗಳಿಗೆ ಅವಮಾನ ಮಾಡಿದಂತೆ. ಅವರಿಗೆ ಮುಸ್ಲಿಂ (Muslims) ಬಗ್ಗೆ ಅತೀ ಪ್ರೀತಿ ಇದೆ. ಸಂವಿಧಾನ ತಿದ್ದುಪಡಿ (Constitution amendment) ಮಾಡುವವರು ಇವರು ಎಂದು ಆರೋಪಿಸಿದರು.


ಯಾರದ್ದೋ ಕಿತ್ತು ಯಾರಿಗೋ ಕೊಟ್ರು ಅಂತ ಹೇಳಲು ಯಾರಿವರು? ನಿಮ್ಮ ಸರ್ಕಾರ ಇದ್ದಾಗ ನೀವ್ಯಾಕೆ ಮಾಡಲಿಲ್ಲ. ನಮ್ಮ ಸರ್ಕಾರ ಮಾಡಿದಕ್ಕೆ ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಒಳಮೀಸಲಾತಿ ಸಹ ನಾವೇ ಕೊಟ್ಟಿದ್ದೇವೆ. ಎಲ್ಲಾ ಕಡೆ ಶಾಂತಿಯುತವಾಗಿ ಒಪ್ಪಿಕೊಂಡಿದ್ದಾರೆ. ಥಕ ಥಕ ಅಂತ ಕುಣಿತಾ ಇರೋದು ಕಾಂಗ್ರೆಸ್ ಅವರು ಮಾತ್ರ ಎಂದು ವಾಗ್ದಾಳಿ ನಡೆಸಿದರು.


ಧಮ್ ಇದ್ರೆ ಮೀಸಲಾತಿ ರದ್ದು ಮಾಡಲಿ


ಕಾಂಗ್ರೆಸ್ ನಾಯಕರಿಗೆ ಹಸಿ ಮೆಣಸಿನಕಾಯಿ ಹೊಟ್ಟೆಯಲ್ಲಿ ಹಾಕಿದ ಆಗಿದೆ. ತಾಕತ್ ಧಮ್ ಇದ್ರೆ ಒಳ ಮೀಸಲಾತಿ ನಿರ್ಣಯವನ್ನು ವಾಪಸ್ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು.




ಸುರ್ಜೇವಾಲಾ ಹೇಳಿಕೆಗೆ ಅಶೋಕ್ ಕಿಡಿ


ಕಾಂಗ್ರೆಸ್ ನವರು ಈ ರಾಜ್ಯದಲ್ಲಿ ಭಿಕ್ಷುಕರು. ಎಲ್ಲೂ ಕಾಂಗ್ರೆಸ್ ಇಲ್ಲ, ಭಿಕ್ಷುಕರು ಇದ್ದಂಗ ಅಷ್ಟೆ ಅವರು. ಸುರ್ಜೇವಾಲಾ ಅವರು ಕರ್ನಾಟಕ ಜನರಿಗೆ, ಸಿಎಂ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಅವರು ಕ್ಷಮೆ ಯಾಚಿಸಬೇಕು ಎಂದು ಬೊಮ್ಮಾಯಿ ಒಬ್ಬ ಶಕುನಿ ಎಂಬ ಹೇಳಿಕೆಗೆ ಕಿಡಿಕಾರಿದರು.


ದನ್ನೂ ಓದಿ: Davanagere : ಮೋದಿ ಕಾರ್ಯಕ್ರಮದಲ್ಲಿ ಭದ್ರತಾಲೋಪ; ಪ್ರಧಾನಿ ಬಳಿ ಓಡಿ ಬಂದ ಯುವಕನ್ಯಾರು?

top videos


    ಕಾಂಗ್ರೆಸ್​​​ನವರಿಗೆ ಮುಸ್ಲಿಮರ ಬಗ್ಗೆ ಅತಿ ಪ್ರೀತಿ ಇದೆ. ಇದು ಮುಖ್ಯಮಂತ್ರಿ ಪದವಿಗೆ ಹಾಗೂ ನಾಡಿನ ಜನತೆಗೆ ಮಾಡಿದ ಅಪಮಾನ. ಕೂಡಲೇ ಅವರು ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.

    First published: