• Home
  • »
  • News
  • »
  • state
  • »
  • Minister Sudhakar: ಸಿದ್ದರಾಮಯ್ಯ ಪತ್ರಕರ್ತರಿಗೆ ಐಫೋನ್​ ಗಿಫ್ಟ್​ ಕೊಟ್ಟಿದ್ರು! ಯಾಕೆ ಕೊಟ್ರಿ ಈ ಗಿಫ್ಟ್​?- ಸುಧಾಕರ್​ ಪ್ರಶ್ನೆ

Minister Sudhakar: ಸಿದ್ದರಾಮಯ್ಯ ಪತ್ರಕರ್ತರಿಗೆ ಐಫೋನ್​ ಗಿಫ್ಟ್​ ಕೊಟ್ಟಿದ್ರು! ಯಾಕೆ ಕೊಟ್ರಿ ಈ ಗಿಫ್ಟ್​?- ಸುಧಾಕರ್​ ಪ್ರಶ್ನೆ

ಸುಧಾಕರ್​, ಸಿದ್ದರಾಮಯ್ಯ

ಸುಧಾಕರ್​, ಸಿದ್ದರಾಮಯ್ಯ

ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಹಾವು ಮುಂಗಿಸಿ ಎಂದು ಅರ್​ ಅಶೋಕ್​ ಹೇಳಿದ್ದಾರೆ. ಇಬ್ಬರು ಈಗ ಸರ್ಕಾರ ಹಾಗೂ ಸಿಎಂ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಪತ್ರಕರ್ತರ ಮೇಲೂ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಎಂದು ಹೇಳಿದ್ರು.

  • News18 Kannada
  • Last Updated :
  • Karnataka, India
  • Share this:

ಪತ್ರಕರ್ತರಿಗೆ ಗಿಫ್ಟ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ (Press Meet) ನಡೆಸಿ ಮಾತಾಡಿದ ಸಚಿವ ಆರ್​. ಅಶೋಕ್ (R. Ashok)​ ಹಾಗೂ ಸಚಿವ ಸುಧಾಕರ್ (Minister Sudhakar), ಕಾಂಗ್ರೆಸ್​ ನಾಯಕರ ವಿರುದ್ಧ ಕಿಡಿಕಾರಿದ್ರು.  ​ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಇಂದು ಸುದ್ದಿಗೋಷ್ಠಿ ಕರೆದಿದ್ದರು. ಹಾವು ಹಾಗೂ ಮುಂಗಸಿ ಸೇರಿ ಜಂಟಿ ಸುದ್ದಿಗೋಷ್ಠಿ ಕರೆದಿದ್ದಾರೆ ಎಂದು ಆರ್​ ಅಶೋಕ್​ ಹೇಳಿದ್ರು.


ಸರ್ಕಾರ , ಸಿಎಂ ಮೇಲೆ ಇಲ್ಲ ಸಲ್ಲದ ಆರೋಪ


ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಹಾವು ಮುಂಗಿಸಿ ಎಂದು ಅರ್​ ಅಶೋಕ್​ ಹೇಳಿದ್ದಾರೆ. ಇಬ್ಬರು ಈಗ ಸರ್ಕಾರ ಹಾಗೂ ಸಿಎಂ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಪತ್ರಕರ್ತರ ಮೇಲೂ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಕೂಡ ಪತ್ರಕರ್ತರನ್ನು ಕುಗ್ಗಿಸಿದ್ರು. ಇದೆ ರೀತಿಯಲ್ಲಿ ಇಂದು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಪತ್ರಕರ್ತರ ಕುಗ್ಗಿಸುವ ಕೆಲಸ ಮಾಡ್ತಿದ್ದಾರೆ ಎಂದು ಅಶೋಕ್ ಆರೋಪಿಸಿದ್ರು.


health minister sudhakar reaction on death of patients in vims hospital
ಸುಧಾಕರ್​, ಸಿದ್ದರಾಮಯ್ಯ


ಸರ್ಕಾರ ಹಗರಣ ಹೆಚ್ಚಿದೆ


ದಿನನಿತ್ಯ ಮೋದಿ ಕಾರ್ಯಕ್ರಮ ಟಿವಿಯಲ್ಲಿ ಪ್ರಸಾರ ಆಗ್ತಿದೆ ಎಂದು ಕಾಂಗ್ರೆಸ್ ಕೊರಗು ಕಾಣ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಹಗರಣ ಸಾಕಷ್ಟು ಇತ್ತು. ಕೋಲ್, 2ಜಿ ಸೇರಿದಂತೆ ಬೆಂಗಳೂರು ಸ್ಟ್ರೀಲ್ ಬ್ರಿಡ್ಜ್ ಮಾಡುವ ವಿಚಾರದಲ್ಲಿ ಹಗರಣ ಮಾಡಿದ್ದಾರೆ. ಪತ್ರಕರ್ತರಲ್ಲೂ ಹಿಂದೂ ಮುಸ್ಲಿಂ ಭೇದ ಭಾವವನ್ನು ಉಂಟು ಮಾಡಿದ್ದು ಕಾಂಗ್ರೆಸ್, ಧರ್ಮ ಒಡೆದ ರೀತಿಯಲ್ಲಿ ಇಂದು ಸಿದ್ದರಾಮಯ್ಯ ಪತ್ರಕರ್ತರನ್ನು ಧರ್ಮದ ರೀತಿಯಲ್ಲಿ ವಿಂಗಡಿಸುತ್ತಿದ್ದಾರೆ ಎಂದ್ರು.


ಇದನ್ನೂ ಓದಿ: Mann Ki Baat: ಕನ್ನಡಿಗನಿಗೆ ನಮೋ ಎಂದ ಪ್ರಧಾನಿ, ಬೆಂಗಳೂರಿನ ಪರಿಸರ ಪ್ರೇಮಿ ಬಗ್ಗೆ ಮನ್ ಕಿ ಬಾತ್‌ನಲ್ಲಿ ಮೆಚ್ಚುಗೆ!


ಪತ್ರಕರ್ತರಿಗೆ ಐ-ಫೋನ್​ ಕೊಟ್ರು


ಸಿದ್ದರಾಮಯ್ಯ ಸರ್ಕಾರದಲ್ಲಿ ಮುಸ್ಲಿಂ ಪತ್ರಕರ್ತರಿಗೆ ಲ್ಯಾಪ್ ಟಾಪ್ ನೀಡಿದ್ರು.ಅಷ್ಟೇ ಅಲ್ಲದೇ ಉರ್ದು ಪತ್ರಿಕೆಗೆ 61 ಲಕ್ಷದ ಆ್ಯಡ್ ಗಳನ್ನು ಸಿದ್ದರಾಮಯ್ಯ ಸರ್ಕಾರ ಕೊಟ್ಟಿದ್ರು.  ಐ ಪೋನ್ ಕೂಡ ಬೇಕಾದವರಿಗೆ ಗಿಫ್ಟ್ ಕೊಟ್ಟಿದ್ರು. ಹಾಗಾದರೆ ಯಾಕೆ ಕೊಟ್ರಿ ಆ ಗಿಫ್ಟ್..?


ಕಾಂಗ್ರೆಸ್ ನಾಯಕರು ಪತ್ರಕರ್ತರ ಕ್ಷಮೆ ಕೇಳಬೇಕು


ಲೋಕಾಯುಕ್ತಕ್ಕೆ ಕಂಪ್ಲೆಂಟ್ ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ತನಿಖೆ ಹಂತದಲ್ಲಿರುವ ಕೇಸ್ ಗೆ ಜಡ್ಜ್ ಮೆಂಟ್ ಕೊಡೊದ್ಯಾಕೆ? ಇವರು ತಪ್ಪಿತಸ್ಥರೆಂದು ಎಂದು ಹೇಳಲು ಅಧಿಕಾರ ಕೊಟ್ಟಿದ್ದು ಯಾರು..? ಕೂಡಲೇ ಕಾಂಗ್ರೆಸ್ ನಾಯಕರು ಪತ್ರಕರ್ತರನ್ನು ಕ್ಷಮೆ ಕೇಳಬೇಕು ಎಂದು ಆರ್​ ಅಶೋಕ್ ಆಗ್ರಹಿಸಿದ್ದಾರೆ.


ಇದನ್ನೂ ಓದಿ: Siddaramaiah: ನಿಮಗೆ ಧಮ್, ತಾಕತ್ತು ಇದ್ದರೆ ತನಿಖೆ ಮಾಡ್ಸಿ! ಬಿಜೆಪಿ ಸರ್ಕಾರಕ್ಕೆ ಸಿದ್ದು, ಡಿಕೆಶಿ ಸವಾಲ್​


ನಂದೀಶ್ ಸಾವು ಸಾಮಾನ್ಯ ಸಾವು


ನಂದೀಶ್ ಸಾವು ಸಾಮಾನ್ಯ ಸಾವು, ನಿಮ್ಮ ಸರ್ಕಾರದಲ್ಲಿ ಎಷ್ಟು ಸಾವು ಆಗಿಲ್ಲ. ನಂದೀಶ್ ಕುಟುಂಬದವರು ಇಲ್ಲಿಯವರೆಗೂ ಎಲ್ಲೂ ಸಹ ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಮಂತ್ರಿಗಳ ಮೇಲೆ ವಿಡಿಯೋ ಮಾಡಿ ಎಷ್ಟು ಸಾವುಗಳು ಸಂಭವಿಸಿದೆ ಎಂದು ಸುಧಾಕರ್​ ಹೇಳಿದ್ರು.


ಹಬ್ಬದಲ್ಲಿ ಉಡುಗೊರೆ ಕೊಡೋದು ನಮ್ಮ ಸಂಪ್ರದಾಯ


ದೀಪಾವಳಿ ಹಬ್ಬದ ಉಡುಗೊರೆ ಹಾಗೂ ಮಾಧ್ಯಮದ ವೃತ್ತಿ ಬದುಕಿಗೆ ಕಾಂಗ್ರೆಸ್ ಇರುಸು ಮುರಿಸು ಉಂಟುಮಾಡಿದೆ. ಉಡುಗೊರೆ ಹಬ್ಬದ ಸಮಯದಲ್ಲಿ ಕೊಡುವುದು ಹಿಂದೂ ಸಂಪ್ರದಾಯ ಹಾಗೂ ಸಂಸ್ಕೃತಿ, ಉಡುಗೊರೆ ಹಾಗೂ ಸಿಹಿ ಹಂಚಿಕೊಳ್ಳುತ್ತೇವೆ. ಬಣ್ಣನೂ ಹಚ್ಚಿಕೊಳ್ಳುತ್ತೇವೆ ಎಂದ್ರು.


ಹಿಂದೂಗಳ ಹಬ್ಬದ ಮೇಲ್ಯಾಕೆ ದ್ವೇಷ


ನಮ್ಮ ಹಿಂದೂ ಧರ್ಮದ ಹಬ್ಬದ ಮೇಲೆ ನಿಮಗೆ ದ್ವೇಷ ಯಾಕೆ? ಯಾರಾದರೂ ನಮಗೆ ಹಣ ಕೊಟ್ಟಿದ್ದಾರೆ ಅಂತ ನಿಮಗೆ ಹೇಳಿದ್ದಾರಾ?, ಉಡುಗೊರೆ ಕೊಡುವುದು ತಪ್ಪು ಆಗಿದ್ರೆ, ಉಡುಗೊರೆ ತೆಗೆದುಕೊಳ್ಳುವುದು ಕೂಡ ತಪ್ಪಲ್ವಾ? ಹಾಗಾದರೆ ನಿಮ್ಮ ಸರ್ಕಾರದಲ್ಲಿ ಉಡುಗೊರೆ ಕೊಟ್ಟು ಉಡುಗೊರೆ ತೆಗೆದುಕೊಂಡಿಲ್ವಾ? ಎಂದು ಸುಧಾಕರ್​ ಪ್ರಶ್ನೆ ಮಾಡಿದ್ರು.


ಯಶಸ್ವಿ ಕಾರ್ಯಕ್ರಮ ನೋಡಿ ಹೊಟ್ಟೆಕಿಚ್ಚು


ನಮ್ಮ ಸರ್ಕಾರದ ಯಶಸ್ವಿ ಕಾರ್ಯಕ್ರಮ ನೋಡಿ ತಡೆದುಕೊಳ್ಳಲು ಆಗಲ್ಲ, ವಿಶೇಷವಾಗಿ ಮೋದಿ ಕಾರ್ಯಕ್ರಮ ನೋಡಿ ಹೊಟ್ಟೆ ಕಿಚ್ಚು ಎಂದು ಸುಧಾಕರ್​ ಹೇಳಿದ್ದಾರೆ. ಸ್ವತಃ ಪ್ರಿಯಾಂಕ ಖರ್ಗೆ ಕಿಯೋನೆಕ್ಷ್ ಮೂಲಕ 40 ಜನರಿಗೆ ಉಡುಗೊರೆ ಕೊಟ್ಟಿಲ್ವಾ?, ನನ್ನ ಬಳಿ ದಾಖಲೆ ಸಮೇತ ಹೆಸರು ಇದೆ. ಯಾವ ನೈತಿಕತೆ ಇದೆ..? ನಾನು ಕೂಡ ಸಿಎಂ ಹೇಳಿಕೆಯಂತೆ ಪತ್ರಕರ್ತರ ಪರವಾಗಿ ಇದ್ದೇವೆ ಎನ್ನುತ್ತಾ ಸಿಎಂ ಹೇಳಿಕೆ ಸಚಿವ ಸುಧಾಕರ್​ ಸಮರ್ಥಿಸಿಕೊಂಡಿದ್ದಾರೆ.

Published by:ಪಾವನ ಎಚ್ ಎಸ್
First published: