ಮಾಧ್ಯಮಗಳು ಉಗ್ರಗಾಮಿಗಳಿಗಿಂತ ಅಪಾಯಕಾರಿ; ಪ್ರಿಯಾಂಕ್ ​ಖರ್ಗೆ

ಮಾಧ್ಯಮಗಳು ಉಗ್ರಗಾಮಿಗಳಿಗಿಂತ ಅಪಾಯಕಾರಿ. ಉಗ್ರಗಾಮಿಗಳು ಒಂದೇ ಗುಂಡಿಗೆ ಸಾಯಿಸಿದರೆ,  ಮಾಧ್ಯಮಗಳು ನಿತ್ಯ ಕಾಟಕೊಟ್ಟು ಸಾಯಿಸುತ್ತಾರೆ. ಟಿಆರ್​ಪಿಗಾಗಿ ಸತ್ಯವಲ್ಲದ ಸುದ್ದಿ ಹಾಕುತ್ತಾರೆ. ಇತ್ತೀಚೆಗೆ ನನಗೆ ಈ ಅನುಭವ ಆಗಿದೆ.

Seema.R | news18
Updated:January 24, 2019, 4:09 PM IST
ಮಾಧ್ಯಮಗಳು ಉಗ್ರಗಾಮಿಗಳಿಗಿಂತ ಅಪಾಯಕಾರಿ; ಪ್ರಿಯಾಂಕ್ ​ಖರ್ಗೆ
ಪ್ರಿಯಾಂಕ್​ ಖರ್ಗೆ
Seema.R | news18
Updated: January 24, 2019, 4:09 PM IST
ಬೆಂಗಳೂರು (ಜ.24): ಸಂವಿಧಾನದ ನಾಲ್ಕನೇ ಅಂಗ ಎಂದೆ ಪರಿಗಣಿಸಲ್ಪಡುವ ಮಾಧ್ಯಮಗಳನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿ ಸಮಾಜ ಕಲ್ಯಾಣ ಸಚಿವರು ಹರಿಹಾಯ್ದಿದ್ದಾರೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಅನನ್ಯ ಕ್ರಿಯೇಷನ್ ಸಹಯೋಗದೊಂದಿಗೆ ವಿಕಾಸಸೌಧದಲ್ಲಿ ಆಯೋಜಿಸಿದ್ದ "ನಮ್ಮ ನಡೆ ಮಾಧ್ಯಮದ ಕಡೆ" ಹೆಸರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಧ್ಯಮಗಳು ಉಗ್ರಗಾಮಿಗಳಿಗಿಂತ ಅಪಾಯಕಾರಿ. ಉಗ್ರಗಾಮಿಗಳು ಒಂದೇ ಗುಂಡಿಗೆ ಸಾಯಿಸಿದರೆ,  ಮಾಧ್ಯಮಗಳು ನಿತ್ಯ ಕಾಟಕೊಟ್ಟು ಸಾಯಿಸುತ್ತಾರೆ. ಟಿಆರ್​ಪಿಗಾಗಿ ಸತ್ಯವಲ್ಲದ ಸುದ್ದಿ ಹಾಕುತ್ತಾರೆ. ಇತ್ತೀಚೆಗೆ ನನಗೆ ಈ ಅನುಭವ ಆಗಿದೆ. ಎಲ್ಲೋ ಜರ್ನಲಿಸಂ ಇವತ್ತು ಹೆಚ್ಚಾಗುತ್ತಿದೆ. ಇದು ಸಮಾಜಕ್ಕೆ ತಪ್ಪು ಸಂದೇಶ ತಲುಪಿಸುತ್ತದೆ ಎಂದು ಕಿಡಿಕಾರಿದರು

ಶಿವಕುಮಾರ್​ ಶ್ರೀಗಳ ನಿಧನದ  ಹಿನ್ನಲೆ ರಾಜ್ಯದಲ್ಲಿ ಶೋಕಾಚರಣೆ ಇರುವಾಗ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದ ಸಚಿವ ಪ್ರಿಯಾಂಕ ಖರ್ಗೆ ಅವರ ನಡೆಗೆ ಖಂಡನೆ ವ್ಯಕ್ತವಾಗಿತು. ಬಿಜೆಪಿ ಕೂಡ ಸಚಿವರ ಈ ನಡೆಯನ್ನು ಖಂಡಿಸಿದ್ದರು. ರಾಜ್ಯದೆಲ್ಲೆಡೆ ದುಃಖದ ವಾತಾವರಣ ಇರುವಾಗ ಕಾರ್ಯಕ್ರಮ ರದ್ದು ಮಾಡದ ಸಚಿವರ ನಡೆಗೆ ಕಿಡಿಕಾರಿದರು.

ಟೆಲಿವಿಷನ್ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ಮಾಧ್ಯಮದ ವಿರುದ್ಧ  ದಿನೇಶ್​ ಗುಂಡೂರಾವ್​ ವಾಗ್ದಾಳಿ

ಪ್ರಿಯಾಂಕ್​ ಖರ್ಗೆ ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಕೂಡ ಮಾಧ್ಯಮಗಳ ವಿರುದ್ಧ ಬುಸುಗುಟ್ಟಿದ್ದಾರೆ. ರೆಸಾರ್ಟ್​ನಲ್ಲಿ ನಡೆದ ಶಾಸಕರ ಹಲ್ಲೆ ಪ್ರಕರಣಗಳ ಕುರಿತು ವರದಿ ಮಾಡಿದರ ಬಗ್ಗೆ ಅವರು ಕೋಪ ಹೊರಹಾಕಿದ್ದಾರೆ.

ಲೋಕಸಭಾ ಚುನಾವಣೆ ಸೀಟು ಹಂಚಿಕೆ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲಾವಾರು ಸಭೆ ನಡೆಸುವ ವೇಳೆ ಕಂಪ್ಲಿ ಗಣೇಶ್​ ಅವರನ್ನು ಕ್ಷಮಿಸುವಂತೆ ಅವರ ಬೆಂಬಲಿಗರು ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಇದನ್ನು ಚಿತ್ರೀಕರಣ ಮಾಡಲು ಹೋದ ಮಾಧ್ಯಮದ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ಇವರೆಲ್ಲರು ಬಂದಿರುವುದು ನಮ್ಮ ಕಚೇರಿಗೆ. ಇಲ್ಲಿ ಪಕ್ಷದ ಒಳಗಿನ ವಿಚಾರ ಮಾತನಾಡುತ್ತೇವೆ. ಇವನ್ನೆಲ್ಲಾ ಚಿತ್ರೀಕರಣ ಮಾಡುತ್ತಿದ್ದೀರಲ್ಲಾ ನಿಮಗೆ ಸಾಮಾನ್ಯ ಜ್ಞಾನ ಇಲ್ಲವಾ ಎಂದು ಸಿಟ್ಟಾದರು.

ಇದನ್ನು ಓದಿ: ಆನಂದ್​​ ಸಿಂಗ್​​ ನನ್ನ ಮೇಲೆ ಕೈ ಎತ್ತಿದ್ದಕ್ಕೆ, ನಾನು ಕೈ ಎತ್ತಿದೆ: ಹೀಗಿವೆ ಶಾಸಕ ಗಣೇಶ್​​ ಮಾತುಗಳು!

ಕಳೆದೆರಡು ವಾರದಿಂದ ಕಾಂಗ್ರೆಸ್​ ನಾಯಕರು ಇಡುತ್ತೀರುವ ಹೆಜ್ಜೆಗಳು ಸಾರ್ವಜನಿಕವಲಯದಲ್ಲಿ ಖಂಡನೆ ವ್ಯಕ್ತವಾಗುವುದರ ಜೊತೆಗೆ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದೆ. ಈ ಬಗ್ಗೆ ಮಾಧ್ಯಮಗಳು ಸುದ್ದಿ ಬಿತ್ತಿರಿಸುತ್ತಿರುವುದರಿಂದ ಇನ್ನಷ್ಟು ಇರಿಸುಮುರಿಸು ಉಂಟಾಗಿದೆ. ಈ ಬಗ್ಗೆ ತಾಳ್ಮೆ ಕಳೆದುಕೊಂಡ ನಾಯಕರು ಮಾಧ್ಯಮದವರನ್ನೇ ಬೊಟ್ಟು ಮಾಡಿ ತೋರಿಸುವುದು ಎಷ್ಟರ ಮಟ್ಟಿಗೆ ಸರಿ. ನಾಯಕರು ತಪ್ಪು ಮಾಡಿದಾಗ ಅದನ್ನು ತೋರಿಸಿ ಎಚ್ಚರಿಸುವ ಕೆಲಸ ಮಾಧ್ಯಮಗಳಾಗಿದ್ದು. ಆ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ.

ಮಾಧ್ಯಮಗಳ ಕ್ಷಮೆಯಾಚಿಸಿದ ದಿನೇಶ್​:

ಮಾಧ್ಯಮಗಳಿಗೆ ಮಾನ ಮರ್ಯಾದೆ ಇಲ್ಲವಾ ಎಂದು ಬೈಯ್ದಿದ್ದ ದಿನೇಶ್​ ಗುಂಡೂರಾವ್​ ನಡೆಗೆ ಅನೇಕ ಟೀಕೆಗಳು ವ್ಯಕ್ತವಾದ ಹಿನ್ನೆಲೆ ಅವರು ಕ್ಷಮೆಯಾಚಿಸಿದರು.

ನನ್ನ ಮಾತಿನಿಂದ ಮಾಧ್ಯಮದವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಕೆಲವೊಮ್ಮೆ ಬಾಯಿ ತಪ್ಪಿ ಮಾಡು ಆಡುತ್ತೇವೆ. ಮಾಧ್ಯಮದವರಿಗೆ ಪ್ರಶ್ನೆ ಕೇಳುವ ಹಕ್ಕಿದೆ..
ಸಾರ್ವಜನಿಕ ವಲಯದಲ್ಲಿರುವ ನಾವು ಉತ್ತರಿಸಬೇಕು. ಮಾಧ್ಯಮದವರ ಸ್ವಾತಂತ್ರ್ಯವನ್ನ ಒಪ್ಪಿಕೊಳ್ಳುತ್ತೇನೆ. ನಾನು ಬಾಯಿ ತಪ್ಪಿ ಮಾತಾಡಿದ್ದೇನೆ. ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

First published:January 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...