• Home
  • »
  • News
  • »
  • state
  • »
  • Pralhad Joshi: ಸರ್ಕಾರಿ ಶಾಲಾ-ಕಾಲೇಜುಗಳಿಗೆ ಪ್ರಹ್ಲಾದ್ ಜೋಶಿ ಬಂಪರ್ ಗಿಫ್ಟ್; ಇನ್ಮುಂದೆ ಹೈಟೆಕ್‌ ಟಚ್, ಕ್ಲಾಸ್‌ ರೂಂ ಸ್ಮಾರ್ಟ್!

Pralhad Joshi: ಸರ್ಕಾರಿ ಶಾಲಾ-ಕಾಲೇಜುಗಳಿಗೆ ಪ್ರಹ್ಲಾದ್ ಜೋಶಿ ಬಂಪರ್ ಗಿಫ್ಟ್; ಇನ್ಮುಂದೆ ಹೈಟೆಕ್‌ ಟಚ್, ಕ್ಲಾಸ್‌ ರೂಂ ಸ್ಮಾರ್ಟ್!

ಸಚಿವ ಪ್ರಹ್ಲಾದ್​ ಜೋಶಿ

ಸಚಿವ ಪ್ರಹ್ಲಾದ್​ ಜೋಶಿ

ಶಾಲೆಗೊಂದು ಸ್ಮಾರ್ಟ್ ಕ್ಲಾಸ್ ರೂಮ್, 50 ಸಾವಿರ ಡೆಸ್ಕ್, 100 ಹೈಟೆಕ್ ಅಂಗನವಾಡಿಗಳ ನಿರ್ಮಾಣದ ಗುರಿಯನ್ನ ಮುಂಬರುವ ಎರಡು ವರ್ಷದಲ್ಲಿ ಪೂರ್ಣಗೊಳಿಸಲು ನಿಶ್ಚಯಿಸಲಾಗಿದೆ.

  • News18 Kannada
  • Last Updated :
  • Karnataka, India
  • Share this:

ಧಾರವಾಡ, ಅ.‌28 : ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ (School-Collage) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೀಪಾವಳಿ ಬಂಪರ್ ಗಿಫ್ಟ್ ನೀಡಿದ್ದಾರೆ. 1177 ಶಾಲಾ ಕಾಲೇಜುಗಳಿಗೆ ಹೊಸದಾಗಿ ಬಣ್ಣ ಹಚ್ವುವ ಬಣ್ಣದರ್ಪಣೆ ಕಾರ್ಯಕ್ರಮದ ಜೊತೆಗೆ, 320 ಹೊಸ ಕ್ಲಾಸ್ ರೂಮ್ (New Class Room) ಗಳನ್ನ ಕಟ್ಟಿಸಿಕೊಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಘೋಷಿಸಿದ್ದಾರೆ. ಧಾರವಾಡದಲ್ಲಿಂದು (Dharwada) ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡುತ್ತಿದ್ದರು.


100 ಹೈಟೆಕ್ ಅಂಗನವಾಡಿ ನಿರ್ಮಾಣದ ಗುರಿ


ಶಾಲೆಗೊಂದು ಸ್ಮಾರ್ಟ್ ಕ್ಲಾಸ್ ರೂಮ್, 50 ಸಾವಿರ ಡೆಸ್ಕ್, 100 ಹೈಟೆಕ್ ಅಂಗನವಾಡಿಗಳ ನಿರ್ಮಾಣದ ಗುರಿಯನ್ನ ಮುಂಬರುವ ಎರಡು ವರ್ಷದಲ್ಲಿ ಪೂರ್ಣಗೊಳಿಸಲು ನಿಶ್ಚಯಿಸಲಾಗಿದೆ. ಸಿ.ಎಸ್.ಆರ್ ಫಂಡ್ ಮುಖೇನ ತಮ್ಮ ಕ್ಷಮತಾ ಸೇವಾ ಸಂಸ್ಥೆ ಮೂಲಕ ಪಂಚ ಯೋಜನೆಗಳನ್ನ ಜಾರಿಗೊಳಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.


Government order to purchase school van in rural area mrq


100 ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ ಕಾರ್ಯ


ಧಾರವಾಡದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆಯಿಂದ ಆರಂಭವಾಗುವ ಬಣ್ಣದರ್ಪಣೆ ಕಾರ್ಯಕ್ರಮ ಮುಂದಿನ ವರ್ಷದ ದೀಪಾವಳಿ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರತಿ ತಿಂಗಳು 100 ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ ಕಾರ್ಯ ನಡೆಯಲಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1177 ಶಾಲಾ ಕಾಲೇಜುಗಳಿಗೆ ಹೊಸದಾಗಿ ಬಣ್ಣ ಹಚ್ಚಲು ನಿರ್ಧರಿಸಲಾಗಿದೆ.


ಇದನ್ನೂ ಓದಿ: H D Kumaraswamy: ಇನ್ಸ್​ಪೆಕ್ಟರ್ ನಂದೀಶ್ ಸಾವು ಹೃದಯಾಘಾತವಲ್ಲ ಕೊಲೆ! ಉನ್ನತ ಮಟ್ಟದ ತನಿಖೆಗೆ ಎಚ್​ಡಿಕೆ ಆಗ್ರಹ


ಕ್ಲಾಸ್ ರೂಮ್ ಗಳಿಗೆ ಬಣ್ಣ ಹಚ್ಚಲು 20 ಲೀಟರ್ ಪೇಂಟ್


ಪ್ರಲ್ಹಾದ್ ಜೋಶಿ ಅವರ ಕ್ಷಮತಾ ಸೇವಾ ಸಂಸ್ಥೆಯಿಂದ ಉಚಿತವಾಗಿ ಬಣ್ಣವನ್ನ ನೀಡಲಾಗುವುದು. ಕ್ಲಾಸ್ ರೂಮ್ ಗಳಿಗೆ ಬಣ್ಣ ಹಚ್ಚಲು 20 ಲೀಟರ್ ಪೇಂಟ್ ಅನ್ನ ಉಚಿತವಾಗಿ ನೀಡಲಾಗುವುದು ಎಂದು ಜೋಶಿ ಹೇಳಿದರು. ಶಾಲೆಯ ಹೊರ ಗೋಡೆಗಳಿಗೂ ಪ್ರತ್ಯೇಕವಾಗಿ ಬಣ್ಣ ವಿತರಿಸಲಾಗುವುದು. ಶಾಲೆಗಳಿಗೆ ಬಣ್ಣ ಹಚ್ಚಲು ಶ್ರಮದಾನದ ಕಾರ್ಯಕ್ಕೆ ವಿದ್ಯಾರ್ಥಿ ಸಂಘಟನೆಗಳು, ಸೇವಾ ಸಂಘಸಂಸ್ಥೆಗಳು, ಶಿಕ್ಷಕರು ಮುಂದೆ ಬರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು. 20 ರೂಪಾಯಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿ ಶಾಲೆಗೆ ಬಣ್ಣ ಹಚ್ಚುವ ಒಪ್ಪಂದದೊಂದಿಗೆ ಸಂಘ ಸಂಸ್ಥೆಗಳು ಉಚಿತವಾಗಿ ಬಣ್ಣ ಪಡೆಯಬಹುದಾಗಿದೆ.


ಧಾರವಾಡ ಲೋಕಸಭಾ ಕ್ಷೇತ್ರದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಕ್ಲಾಸ್ ರೂಮ್


ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ 480 ಹೊಸ ಕ್ಲಾಸ್ ರೂಮ್ ಗಳ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ವರದಿ ಪಡೆದಿರುವ ಪ್ರಲ್ಜಾದ್ ಜೋಶಿಯವರು, ಮುಂದಿನ ಎರಡು ವರ್ಷದ ಒಳಗೆ ಹೊಸ ಕ್ಲಾಸ್ ರೂಮ್ ಗಳನ್ನ ಕಟ್ಟಿಸಿಕೊಡಲು ತೀರ್ಮಾನಿಸಿದ್ದಾರೆ. 480 ಕ್ಲಾಸ್ ರೂಂಗಳ ಪೈಕಿ ರಾಜ್ಯ ಸರ್ಕಾರವೇ ತನ್ನ ಯೋಜನೆ ಅನ್ವಯ 160 ಕ್ಲಾಸ್ ರೂಮ್ ಗಳನ್ನ ಕಟ್ಟಿಸಿಕೊಡಲಿದೆ.


ಉಳಿದ 320 ಹೊಸ ಕ್ಲಾಸ್ ರೂಮ್ ಗಳನ್ನ ಸಿ.ಎಸ್.ಆರ್ ಫಂಡ್ ನ ಸಹಾಯದೊಂದಿಗೆ ಕಟ್ಟಿಸಿಕೊಡುವುದಾಗಿ ಸಚಿವ ಪ್ರಹ್ಲಾದ್ ಜೋಶಿ ಅವರು ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರತಿ ಶಾಲೆಗೊಂದು ಸ್ಮಾರ್ಟ್ ಕ್ಲಾಸ್, ಹಾಗೂ 100 ಹೈಟೆಕ್ ಅಂಗನವಾಡಿ ನಿರ್ಮಿಸಿಕೊಡುವುದಾಗಿಯೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಈಗಾಗಲೇ 10 ಸಾವಿರ ಡೆಸ್ಕ್ ಗಳನ್ನ ಸರ್ಕಾರಿ ಶಾಲಾ ಕಾಲೇಜುಗಳಿಗೆ ಪೂರೈಸಲಾಗಿದ್ದು, ಇನ್ನೂ 50 ಸಾವಿರ ಡೆಸ್ಕ್ ಗಳು ಅಗತ್ಯವಿದೆ. ಹಂತ ಹಂತವಾಗಿ 50 ಸಾವಿರ ಡೆಸ್ಕ್ ಗಳನ್ನು  ಪೂರೈಸುವುದಾಗಿಯೂ ಇದೇ ವೇಳೆ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.


ಇದನ್ನೂ ಓದಿ:  HD Kumaraswamy: ನಾವು ಸಹಕಾರ ನೀಡದಿದ್ರೆ ಹೆಣ್ಣೆದೆ ಸಿಎಂ ಆಗ್ತಿದ್ರು; ಅಶೋಕ್ ಗಂಡೆದೆ ಹೇಳಿಕೆಗೆ HDK ತಿರುಗೇಟು


ಶಿಗ್ಗಾವಿ - ಸವಣೂರು ಕ್ಷೇತ್ರಗಳು ಸೇರಿದಂತೆ ಸಂಪೂರ್ಣ ಧಾರವಾಡ ಲೋಕಸಭಾ ಕ್ಷೇತ್ರದ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ದಿಗೆ 100 ಕೋಟಿ ವೆಚ್ಚದ ಮಹತ್ವದ 5 ಯೋಜನೆಗಳನ್ನ ಪ್ರಹ್ಲಾದ್ ಜೋಶಿ ಘೋಷಿಸುವ ಮೂಲಕ ಕ್ಷೇತ್ರದ ಜನರಿಗೆ ಹಬ್ಬದ ಕೊಡುಗೆ ನೀಡಿದ್ದಾರೆ.

Published by:ಪಾವನ ಎಚ್ ಎಸ್
First published: