• Home
  • »
  • News
  • »
  • state
  • »
  • ಗೋಶಾಲೆ ತೆರೆಯಲು ಮುಂದೆ ಬಂದರೆ ಸರ್ಕಾರದಿಂದ ಅನುದಾನ: ಸಚಿವ ಪ್ರಭು ಚೌವ್ಹಾಣ್

ಗೋಶಾಲೆ ತೆರೆಯಲು ಮುಂದೆ ಬಂದರೆ ಸರ್ಕಾರದಿಂದ ಅನುದಾನ: ಸಚಿವ ಪ್ರಭು ಚೌವ್ಹಾಣ್

ಸಚಿವ ಪ್ರಭು ಚವ್ಹಾಣ್.

ಸಚಿವ ಪ್ರಭು ಚವ್ಹಾಣ್.

ಸಿದ್ದರಾಮಯ್ಯ  ಗೋ ಮಾಂಸ ತಿನ್ನುತೇನೆ ಎಂದು ಪದೇಪದೇ ಹೇಳ್ತುತ್ತಿದ್ದರು. ಅವರು ರಾಜ್ಯದ ಮಾಜಿ ಮುಖ್ಯ ಮಂತ್ರಿ, ವಿರೋಧಪಕ್ಷ ನಾಯಕರು ಹಾಗಾಗಿ ಅವರ ಹೇಳಿಕೆ ಸರಿಯಿಲ್ಲ ಎಂದು ಹೇಳಿದ್ದೇನೆಯೇ ಹೊರತು ಚಾಲೆಂಜ್ ಹಾಕಿಲ್ಲ

  • Share this:

ಚಾಮರಾಜನಗರ (ಫೆ. 17) ಗೋಶಾಲೆಗಳನ್ನು ತೆರೆಯಲು ಯಾರೇ ಮುಂದೆ ಬಂದರೂ ಅವರಿಗೆ ಸರ್ಕಾರದಿಂದ ಅನುದಾನ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಕುರಿತು ಇಲ್ಲಿ  ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ಗೋವುಗಳ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. ಉತ್ತರ ಪ್ರದೇಶದ ಮಾದರಿಯಲ್ಲಿ ಗೋವುಗಳನ್ನು ಸಂರಕ್ಷಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ, ಈಗಾಗಲೇ ಉತ್ತರ ಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಲಾಗಿದ್ದು, ಅಲ್ಲಿ, ಮುಜರಾಯಿ, ಜಿಲ್ಲಾ ಪಂಚಾಯ್ತಿ, ಕಂದಾಯ ಇಲಾಖೆ, ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು ಗೋವುಗಳನ್ನು ರಕ್ಷಣೆ ಮಾಡಲಾಗುತ್ತಿದ್ದು, ಅದೇ ರೀತಿ ಕರ್ನಾಟಕದಲ್ಲೂ ಎಲ್ಲರ ಸಹಕಾರ ಪಡೆದು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.


ರಾಜ್ಯದಲ್ಲಿ 188 ಖಾಸಗಿ ಗೋ ಶಾಲೆ ಗಳಿದ್ದು ಸರ್ಕಾರದಿಂದ ನೆರವು ನೀಡಲಾಗುತ್ತಿದೆ.  ರೈತರು ವಯಸ್ಸಾದ ಹಾಗೂ ಅನಾರೋಗ್ಯಪೀಡಿತ  ಹಸುಗಳನ್ನು ಇಲ್ಲಿಗೆ ತಂದರೆ, ಅವುಗಳನ್ನು ಸಾಕಲು ಅಗತ್ಯ ನೆರವು ನೀಡಲಾಗುವುದು. ರಾಜ್ಯದಲ್ಲಿ ಗೋ ಸೇವಾ ಆಯೋಗ ರಚಿಸಲು ಚಿಂತನೆ ನಡೆಸಲಾಗಿದ್ದು ಪ್ರಸ್ತಾವನೆ ತಯಾರಿಸಲಾಗಿದೆ. ಇದಲ್ಲದೆ ಗೋಸಂರಕ್ಷಣೆಗೆ ಹೆಲ್ಪ್ ಲೈನ್ ತೆರೆಯಲು ಸಹ ಕ್ರಮವಹಿಸಲಾಗುತ್ತಿದ್ದು ಈಗಾಗಲೇ ಪ್ರಾಣಿ ದಯಾ ಕಲ್ಯಾಣ ಮಂಡಳಿಯನ್ನು ಸಹ ರಚಿಸಲಾಗಿದೆ ಎಂದು  ತಿಳಿಸಿದರು


ಕಂದಾಯ ಇಲಾಖೆ ವ್ಯಾಪ್ತಿಯಲ್ಲಿರುವ ಗೋ ಮಾಳಗಳ ಜಮೀನುಗಳನ್ನು  ನಮ್ಮ ಇಲಾಖೆಗೆ  ನೀಡಿದರೆ ಅಲ್ಲಿ  ಜಾನುವಾರುಗಳಿಗೆ ಬೇಕಾಗುವ  ಮೇವು ಬೆಳೆಸಬಹುದು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು ರಾಜ್ಯದಲ್ಲಿ ಮೂರು ಕೋಟಿ ಜಾನುವಾರುಗಳು, ಆರು ಕೋಟಿ ಕೋಳಿಗಳಿದ್ದು, 4212 ಪಶು ಆಸ್ಪತ್ರೆಗಳಿವೆ ಎಂದ ಅವರು , ತುಮಕೂರು ಜಿಲ್ಲೆ ಶಿರಾ ಬಳಿ 20 ಎಕರೆ ಪ್ರದೇಶದಲ್ಲಿ 44 ಕೋಟಿ ರೂಪಾಯಿ ವೆಚ್ಚದಲ್ಲಿ  ಕುರಿ ಮೇಕೆ ಸ್ಲಾಟರ್ ಹೌಸ್ ನಿರ್ಮಿಸಲಾಗುತ್ತಿದೆ ಎಂದರು


ಸಿದ್ದರಾಮಯ್ಯಗೆ ಚಾಲೆಂಜ್ ಹಾಕಿಲ್ಲ


ಸಿದ್ದರಾಮಯ್ಯ ನನ್ನೆದುರೇ ಗೋ ಮಾಂಸ ತಿನ್ನಲಿ ನೋಡೋಣ ಎಂದು ಮಡಿಕೇರಿಯಲ್ಲಿ ಸವಾಲು ಹಾಕಿದ್ದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಈಗ ಉಲ್ಟಾ ಹೊಡೆದಿದ್ದಾರೆ.  ಗೋ ಮಾಂಸ ತಿನ್ನುವಂತೆ ನಾನು ಸಿದ್ದರಾಮಯ್ಯಗೆ ಸವಾಲು ಹಾಕಿಲ್ಲ  ಸಿದ್ದರಾಮಯ್ಯ  ಗೋ ಮಾಂಸ ತಿನ್ನುತೇನೆ ಎಂದು ಪದೇಪದೇ ಹೇಳ್ತುತ್ತಿದ್ದರು. ಅವರು ರಾಜ್ಯದ ಮಾಜಿ ಮುಖ್ಯ ಮಂತ್ರಿ, ವಿರೋಧಪಕ್ಷ ನಾಯಕ ಹಾಗಾಗಿ ಅವರ ಹೇಳಿಕೆ ಸರಿಯಿಲ್ಲ ಎಂದು ಹೇಳಿದ್ದೇನೆಯೇ ಹೊರತು ಚಾಲೆಂಜ್ ಹಾಕಿಲ್ಲ  ಎಂದು ಸ್ಪಷ್ಟಿಪಡಿಸಿದರು.


ಇದನ್ನು ಓದಿ: ಗದಗ- ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಾದ ಬಿಡಾಡಿ ದನಗಳ ಹಾವಳಿ; ನಗರಸಭೆ ವಿರುದ್ಧ ಜನರ ಆಕ್ರೋಶ


ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕೊಡಲ್ಲ ಅಂತಾರೆ ಆದರೆ ಅವರ ಮಗ  ಎಂಎಲ್ಎ ದೇಣಿಗೆ ಕೊಟ್ಟಿದ್ದಾರೆ ಎಂದರು.


ದೇಣಿಗೆ ಕೊಡದ ಮನೆಗಳ ಮಾರ್ಕ್ ಮಾಡಲಾಗುತ್ತಿದೆ ಎಂಬ ಹೆಚ್. ಡಿ. ಕುಮಾರಸ್ವಾಮಿ ಆರೋಪಕ್ಕೆ, ಕುಮಾರಸ್ವಾಮಿ ದೊಡ್ಡಮನುಷ್ಯ, ನಾನು ಅವರ ಮುಂದೆ ಚಿಕ್ಕವನು, ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ವಿರೋಧ ಮಾಡಬೇಕು ಎಂಬ ಕಾರಣಕ್ಕೆ ಹೀಗೆ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ರಾಮಮಂದಿರ ದೇಣಿಗೆ ಬಗ್ಗೆ ಲೆಕ್ಕ ಕೊಟ್ಟೇ ಕೊಡುತ್ತೇವೆ,ಹಣ ನೀಡಿದವರಿಗೆ ಅಧಿಕೃತ ರಶೀತಿ ನೀಡಲಾಗುತ್ತಿದೆ, ಎಲ್ಲವೂ ಪಾರದರ್ಶಕವಾಗಿದೆ ಎಂದು ಸಮರ್ಥಿಸಿಕೊಂಡರು


(ವರದಿ: ಎಸ್.ಎಂ.ನಂದೀಶ್ )

Published by:Seema R
First published: