ಬೆಂಗಳೂರು: ಒಳಮೀಸಲಾತಿ ಜಾರಿಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಸಂಪುಟದ ಸಚಿವರಿಂದಲೇ (Minister) ವಿರೋಧ ವ್ಯಕ್ತವಾಗಿದೆ. ಒಳಮೀಸಲಾತಿ ನೀಡಲು ಆಕ್ಷೇಪಿಸಿ ಕಾನೂನು ಸಚಿವ ಜೆ ಮಾಧುಸ್ವಾಮಿ (Minister J Madhuswamy) ಅವರಿಗೆ ಸಚಿವ ಪ್ರಭು ಚವಾಣ್ (Minister Prabhu Chavan) ಈ ಹಿಂದೆ ಬರೆದಿದ್ದ ಪತ್ರ ನ್ಯೂಸ್ 18ಗೆ ಲಭ್ಯವಾಗಿದೆ. ಸಚಿವ ಸಂಪುಟ ಉಪಸಮಿತಿ ಗೆ ಸಚಿವರು ತಮ್ಮ ಅಭಿಪ್ರಾಯವನ್ನು ತಿಳಿಸಿ ಪತ್ರ ಬರೆದಿದ್ದರು. ಪತ್ರದ ಮುಖೇನ ನ್ಯಾ ಸದಾಶಿವ ಆಯೋಗ ವರದಿ ಪರಾಮರ್ಶೆಗೆ ಸಚಿವ ಪ್ರಭು ಚವಾಣ್ ಆಗ್ರಹ ಮಾಡಿದ್ದರು.
2004ರ ಇ.ವಿ.ಚಿನ್ನಯ್ಯ ಪ್ರಕರಣದ ತೀರ್ಪನ್ನು ಉನ್ನತ ಪೀಠವನ್ನು ರಚಿಸಿ ಪರಾಮರ್ಶಿಸಬೇಕು. ಎಚ್ ಎನ್ ನಾಗಮೋಹನ್ ದಾಸ್ ಆಯೋಗವು ಒಳಮೀಸಲಾತಿ ಬಗ್ಗೆ ಇರುವ ಕಾನೂನಿನ ತೊಡಕುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪ್ರಭು ಚವಾಣ್ ಹೇಳಿದ್ದರು.
ಆಳವಾದ ಅಧ್ಯಯನ ಅಗತ್ಯ
ವೈಜ್ಞಾನಿಕವಾಗಿ ಒಳಜಾತಿಗಳ ವರ್ಗೀಕರಣ ಮಾಡಬೇಕು ಮತ್ತು ಆದ್ಯತೆಯ ಮೇಲೆ ಮೀಸಲಾತಿ ನೀಡಬೇಕು. ಇದಕ್ಕೆ ಆಳವಾದ ಅಧ್ಯಯನದ ಅಗತ್ಯವಿದೆ. ಇಂತಹ ಅಧ್ಯಯನದ ವರದಿಯ ಸರ್ಕಾರವು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಬೇಕು.
ವ್ಯತಿರಿಕ್ತ ತೀರ್ಮಾನಕ್ಕೆ ಅಸಮ್ಮತಿ
ಕಾನೂನು ತೊಡಕುಗಳು ನಿವಾರಣೆ ಆದ ನಂತರ ಮತ್ತು ಸಮುದಾಯಗಳ ಹಿಂದುಳಿದಿರುವಿಕೆಯ ವಸ್ತು ನಿಷ್ಠ ಮತ್ತು ವೈಜ್ಞಾನಿಕ ಅಧ್ಯಯನದ ವರದಿ ಪಡೆದ ನಂತರವಷ್ಟೆ ವರ್ಗೀಕರಣದ ಬಗ್ಗೆ ಚರ್ಚಿಸಬಹುದು. ಸಮುದಾಯುಗಳ ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸಿದ ಬಳಿಕ ಜಾರಿ ಮಾಡಬಹುದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಸಚಿವರು ಹೇಳಿದ್ದರು.
ಇದನ್ನೂ ಓದಿ: Basavaraj Bommai: ನಾನು ಜೇನು, ಸಿಹಿ ಹಂಚುವ ಕೆಲಸ ಮಾಡುತ್ತೇನೆ; ಸಿಎಂ
ವ್ಯತಿರಿಕ್ತವಾದ ಯಾವುದೇ ತೀರ್ಮಾನಕ್ಕೆ ನನ್ನ ಅಸಮ್ಮತಿ ಇದೆ ಎಂಬುದನ್ನು ದಾಖಲಿಸಿಕೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಸಚಿವ ಪ್ರಭು ಚವಾಣ್ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ