ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಮೂವರು ಸಹೋದರರ ಕುಟುಂಬಸ್ಥರ ಭೇಟಿ ಮಾಡಿ ಸಾಂತ್ವನ ಹೇಳಿದ ಸಚಿವ ಪ್ರಭು ಚವ್ಹಾಣ್

ಭೇಟಿ ಮಾಡಿದ ವೇಳೆಯಲ್ಲಿ ಸಚಿವರು ತಮ್ಮ ಕಡೆಯಿಂದ ಕುಟುಂಬದವರಿಗೆ ವೈಯಕ್ತಿಕವಾಗಿ 51,000 ರೂ.ಗಳನ್ನು ನೀಡಿದರು. ಬಡ ರೈತ ಕುಟುಂಬಕ್ಕೆ ಆಸರೆಯಾಗಲೆಂದು, ಕುಟುಂಬದವರು ವ್ಯವಸಾಯ ಮಾಡಲು ಸಹಕಾರಿಯಾಗಲೆಂದು ತಮ್ಮ ಕಡೆಯಿಂದ ಎರಡು ಆಕಳುಗಳನ್ನು ಶೀಘ್ರ ಕೊಡುವುದಾಗಿ ಸಹ ಸಚಿವ ಚವ್ಹಾಣ್ ಭರವಸೆ ನೀಡಿದರು‌.

news18-kannada
Updated:August 14, 2020, 12:11 PM IST
ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಮೂವರು ಸಹೋದರರ ಕುಟುಂಬಸ್ಥರ ಭೇಟಿ ಮಾಡಿ ಸಾಂತ್ವನ ಹೇಳಿದ ಸಚಿವ ಪ್ರಭು ಚವ್ಹಾಣ್
ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿರುವ ಪ್ರಭು ಚವ್ಹಾಣ್​
  • Share this:
ಬೀದರ್​(ಆ.14): ಪಶು ಸಂಗೋಪನೆ, ಹಜ್ ಮತ್ತು ವಕ್ಫ್​ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಭಾಲ್ಕಿ ತಾಲೂಕಿನ ಚಳಕಾಪುರವಾಡಿಗೆ ಭೇಟಿ ನೀಡಿದರು. ಆಗಸ್ಟ್ 5ರಂದು ಹೊಲದಲ್ಲಿ ಕೆಲಸ ಮಾಡುವಾಗ ಅಚಾನಕ್ಕಾಗಿ ಮೂವರು ಗಂಡು ಮಕ್ಕಳು ಏಕಕಾಲಕ್ಕೆ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಆಘಾತದಲ್ಲಿದ್ದ ಧೂಳಪ್ಪ ಬನ್ನಾಳೆ ಎಂಬ ರೈತನ ಕುಟುಂಬದ ಸದಸ್ಯರಿಗೆ ಸಚಿವ ಚವ್ಹಾಣ್ ಇದೇ ವೇಳೆ ಸಾಂತ್ವನ ಹೇಳಿದರು.

ಘಟನೆಯ ಕುರಿತು ಕುಟುಂಬದವರಿಂದ ಮಾಹಿತಿ ಪಡೆದುಕೊಂಡ ಸಚಿವರು, ಇಡೀ ಕುಟುಂಬಕ್ಕೆ ಆಧಾರ ಸ್ಥಂಭದಂತಿದ್ದ, ಎದೆಯೆತ್ತರ ಬೆಳೆದಿದ್ದ ಹೆತ್ತ ಮಕ್ಕಳನ್ನು ಕಳೆದುಕೊಂಡು ತಾವು ದುಃಖದಲ್ಲಿದ್ದೀರಿ. ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದು  ರೈತ ಧೂಳಪ್ಪ ಬನ್ನಾಳೆ ಮತ್ತು ಪರಿವಾರದವರಿಗೆ ಧೈರ್ಯ ತುಂಬಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಚವ್ಹಾಣ್, ಮೂವರು ಮಕ್ಕಳು ನೀರಿನಲ್ಲಿ ಸಮಾಧಿಯಾಗಿ, ಅವರನ್ನು ಕಳೆದುಕೊಂಡದ್ದಕ್ಕಾಗಿ ಕುಟುಂಬದ ಎಲ್ಲ ಸದಸ್ಯರು ದುಃಖದಲ್ಲಿದ್ದಾರೆ. ಅವರಿಗೆ ಸಾಕಷ್ಟು ಆಘಾತವಾಗಿದೆ. ಈ ಸುದ್ದಿ ಕೇಳಿ ನನ್ನ ಮನಸ್ಸಿಗೂ ಕೂಡ ಬಹಳಷ್ಟು ನೋವಾಯಿತು. ಈ ಘಟನೆಯಿಂದ ಈ ಗ್ರಾಮಸ್ಥರಷ್ಟೇ ಅಲ್ಲ, ಇಡೀ ಜಿಲ್ಲೆಯ ಜನರು ದುಃಖದಲ್ಲಿದ್ದಾರೆ. ಕುಟುಂಬದ ಪರಿವಾರಕ್ಕೆ ಧೈರ್ಯ ತುಂಬಲಿ ಎಂದು ತಾವು ಭಗವಂತನಲ್ಲಿ ಪ್ರಾರ್ಥಿಸಿದ್ದಾಗಿ ಹೇಳಿದರು. ಮಕ್ಕಳನ್ನು ಕಳೆದುಕೊಂಡ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ತಾವು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುವುದಾಗಿ ಇದೆ ವೇಳೆ ಸಚಿವರು ಹೇಳಿದರು.

DJ Halli Violence: ‘ಫೇಸ್​​ಬುಕ್​​ ಪೋಸ್ಟ್​ ಹಾಕಿದ್ದು ನಾನೇ‘ - ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡ ನವೀನ್​

ವ್ಯವಸಾಯಕ್ಕಾಗಿ ಆಕಳು

ಭೇಟಿ ಮಾಡಿದ ವೇಳೆಯಲ್ಲಿ ಸಚಿವರು ತಮ್ಮ ಕಡೆಯಿಂದ ಕುಟುಂಬದವರಿಗೆ ವೈಯಕ್ತಿಕವಾಗಿ 51,000 ರೂ.ಗಳನ್ನು ನೀಡಿದರು. ಬಡ ರೈತ ಕುಟುಂಬಕ್ಕೆ ಆಸರೆಯಾಗಲೆಂದು, ಕುಟುಂಬದವರು ವ್ಯವಸಾಯ ಮಾಡಲು ಸಹಕಾರಿಯಾಗಲೆಂದು ತಮ್ಮ ಕಡೆಯಿಂದ ಎರಡು ಆಕಳುಗಳನ್ನು ಶೀಘ್ರ ಕೊಡುವುದಾಗಿ ಸಹ ಸಚಿವ ಚವ್ಹಾಣ್ ಭರವಸೆ ನೀಡಿದರು‌. ಅಲ್ಲದೆ  ನಿಮ್ಮ ಮಗಳ ಮದುವೆಗೆ ಕೂಡ ಸಹಾಯ ಮಾಡುತ್ತೇನೆ ಎಂದು ಧೂಳಪ್ಪ ಬನ್ನಾಳೆ ಕುಟುಂಬಕ್ಕೆ ಸಚಿವ ಚವ್ಹಾಣ್ ತಿಳಿಸಿದರು‌.
ಆಗಸ್ಟ್ 5ರಂದು ನಡೆದಿದ್ದ ದುರಂತದಲ್ಲಿ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪೂರ ವಾಡಿಯ ಮೂವರು ಸಹೋದರರು ಕೈ ಕಾಲು ತೊಳೆಯುವಾಗ ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದು ದಾರುಣ ಸಾವಿಗೀಡಾಗಿದ್ದರು‌. ಹೀಗಾಗಿ ದುಃಖದಲ್ಲಿದ್ದ ಕುಟುಂಬಸ್ಥರಿಗೆ ಸಚಿವ ಚವ್ಹಾಣ್ ಭೇಟಿ ಮಾಡಿ ಸಾಂತ್ವನ ಹೇಳಿದರು‌. ಈ ವೇಳೆ ಭಾಲ್ಕಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಹಾಗೂ ಇತರರು ಇದ್ದರು.
Published by: Latha CG
First published: August 14, 2020, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading