ಬೆಂಗಳೂರು: ಪಶು ಸಂಗೋಪನಾ ಸಚಿವ (Animal Husbandry Minister) ಪ್ರಭು ಚವ್ಹಾಣ್ (Prabhu Chauhan) ಅವರು ಮಾಜಿ ಸಿಎಂ, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಖಡಕ್ ಎಚ್ಚರಿಕೆ (Warning) ನೀಡಿದ್ದಾರೆ. ಗೋಮಾಂಸದ (Beef) ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿಂದು (Vidhana Soudha) ಸಿದ್ದರಾಮಯ್ಯ ಅವರಿಗೆ ಪ್ರಭು ಚವ್ಹಾಣ್ ಸವಾಲು ಹಾಕಿದ್ದಾರೆ. “ನನ್ನ ಮುಂದೆ ಹಂದಿ ಮಾಂಸ (Pork Meet) ತಿಂತೀನಿ, ಹಸು ಮಾಂಸ (Beef) ತಿನ್ನುತ್ತೇನೆ ಅಂತೀರಲ್ಲಾ? ನಿಮಗೆ ತಾಕತ್ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಿ, ನಿಮ್ಮನ್ನು ಜೈಲು (Jail) ಒಳಗಡೆ ಹಾಕಿಸ್ತೀನಿ” ಅಂತ ಸಚಿವರು ಎಚ್ಚರಿಸಿದ್ದಾರೆ. ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (AICC President Mallikarjun Kharge) ಅವರಿಗೂ ಕೂಡ ಗೋಮಾಂಸದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಭು ಚವ್ಹಾಣ್ ಎಚ್ಚರಿಕೆ ನೀಡಿದ್ದಾರೆ.
ಗೋ ಹತ್ಯೆ ಬಗ್ಗೆ ಸಿದ್ದರಾಮಯ್ಯ ಏನು ಹೇಳಿದ್ದರು?
ಪ್ರಾರಂಭದಿಂದಲೂ ಗೋಹತ್ಯೆ ನಿಷೇಧದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ಎತ್ತುತ್ತಿದ್ದಾರೆ. ಮುಸ್ಲಿಮರಷ್ಟೇ ಅಲ್ಲ ಕ್ರಿಶ್ಚಿಯನ್ ಹಾಗೂ ಹಿಂದೂಗಳೂ ಗೋಮಾಂಸ ತಿನ್ನುತ್ತಾರೆ ಅಂತ ಹೇಳಿದ್ದರು. ಅಲ್ಲದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೋ ಹತ್ಯೆ ನಿಷೇಧವನ್ನು ವಾಪಸ್ ಪಡೆಯುವುದಾಗಿ ಸಿದ್ದರಾಮಯ್ಯ ಹೇಳಿದ್ದರು.
ಸಿದ್ದರಾಮಯ್ಯ ವಿರುದ್ಧ ಪಶುಸಂಗೋಪನಾ ಸಚಿವರು ಗರಂ
ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಸಿದ್ದರಾಮಯ್ಯ ವಿರುದ್ಧ ಗುಡುಗಿದರು. ತಮ್ಮ ಸರ್ಕಾರ ಬಂದರೆ ಗೋ ಹತ್ಯೆ ನಿಷೇಧ ಕಾಯ್ದೆ ತೆಗೆದು ಹಾಕುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನೀನು ಯಾರಪ್ಪಾ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಪಡಿಸುತ್ತೇನೆ ಅನ್ನೋಕೆ ? ಅಂತ ಏಕ ವಚನದಲ್ಲೇ ಪ್ರಶ್ನಿಸಿದ್ರು.
“ನನ್ನ ಎದುರು ಗೋಮಾಂಸ ತಿಂದರೆ ಒಳಗೆ ಹಾಕಿಸುತ್ತೇನೆ”
ಇನ್ನು ನನ್ನ ಮುಂದೆ ಹಂದಿ ತಿಂತೀನಿ, ಹಸು ಮಾಂಸ ತಿನ್ನುತ್ತೇನೆ ಅಂತೀರಲ್ಲಾ? ನಿಮಗೆ ತಾಕತ್ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಿ ನೋಡೋಣ, ನಿಮ್ಮನ್ನು ಜೈಲಿನ ಒಳಗಡೆ ಹಾಕಿಸ್ತೀನಿ ಅಂತ ಸಿದ್ದರಾಮಯ್ಯಗೆ ಸಚಿವ ಪ್ರಭು ಚವ್ಹಾಣ್ ಎಚ್ಚರಿಕೆ ನೀಡಿದ್ರು.
“ಜೆಡಿಎಸ್ ಮಾತಿನಿಂದ ಕಾಂಗ್ರೆಸ್ ವಿಚಲಿತ"
ಇನ್ನು ಜೆಡಿಎಸ್ ಅಧಿಕಾರಕ್ಕೆ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಆ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರು ವಿಚಲಿತರಾಗಿದ್ದಾರೆ ಅಂತ ಪ್ರಭು ಚವ್ಹಾಣ್ ಹೇಳಿದ್ರು. ಇದೇ ಕಾರಣದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆಯ ತಿದ್ದುಪಡಿ ವಾಪಸ್ ಪಡೆಯುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ತಿದ್ದುಪಡಿ ವಾಪಸ್ ಪಡೆಯಲು ಇವರು ಯಾರು' ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು.
ಇದನ್ನೂ ಓದಿ: Siddaramaiah: ನಾನು ಅಧಿಕಾರಕ್ಕೆ ಬಂದ್ರೆ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಕೊಡ್ತೇನೆ; ಸಿದ್ದರಾಮಯ್ಯ ಭರವಸೆ
ಗೋ ಹತ್ಯೆ ನಿಷೇಧದ ಬಗ್ಗೆ ವ್ಯಂಗ್ಯವಾಡಿದ್ದ ಪ್ರಿಯಾಂಕ್ ಖರ್ಗೆ
ಇನ್ನು ಗೋ ಹತ್ಯೆ ನಿಷೇಧದ ಕಾಂಗ್ರೆಸ್ನ ಮತ್ತೋರ್ವ ನಾಯಕ ಪ್ರಿಯಾಂಕ್ ಖರ್ಗೆ ಕಳೆದ ಕೆಲದಿನಗಳ ಹಿಂದಷ್ಟೇ ವ್ಯಂಗ್ಯವಾಡಿದ್ದರು. ಈ ಕಾಯ್ದೆಯಿಂದ ರಾಜ್ಯಕ್ಕೆ, ರೈತರಿಗೆ, ಕಾರ್ಮಿಕರಿಗೆ, ಕೈಗಾರಿಕೆಗಳಿಗೆ ಎಷ್ಟು ಲಾಭವಾಯಿತು ಎಂದು ಯಾರಾದರೂ ಪರಿಶೀಲನೆ ಮಾಡಿದ್ದಾರಾ? ಸಿಎಂ ಹಾಗೂ ಪಶು ಸಂಗೋಪನಾ ಸಚಿವರು ಇದನ್ನು ಕ್ರಾಂತಿಕಾರಿ ಕಾಯ್ದೆ, ಗುಜರಾತ್ ಮಾಡೆಲ್ ಎಂದರು. ಆದರೆ ಈ ಕಾನೂನು ಯಾವ ದುಸ್ಥಿತಿಯಲ್ಲಿ ಇದೆ ಎಂಬ ಕನಿಷ್ಠ ಪ್ರಜ್ಞೆ ಇವರಿಗೆ ಇದೆಯೇ? ಈ ಕಾನೂನು ರೈತರು, ಚರ್ಮ ಉದ್ಯಮ ಕಾರ್ಮಿಕರು, ರಾಜ್ಯದ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಆರೋಪಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ