Nitin Gadkari: ಒಂದು ಕಪ್ ಚಹಾಕ್ಕೆ ಕಾದು ಕುಳಿತ ಕೇಂದ್ರ ಸಚಿವ ಗಡ್ಕರಿ: ಏನಿದು ಬೇಜವಾಬ್ದಾರಿತನ, ಏನಾಯ್ತು?

ನಿತಿನ್ ಗಡ್ಕರಿ ಎರಡು ಬಾರಿ ಚಹಾ ಕೇಳಿದರೂ ಸಹ, ಆಹಾರ ಸುರಕ್ಷತಾ ಅಧಿಕಾರಿಗಳ ಕೊರತೆ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳ ಬೇಜವಾಬ್ದಾರಿತನದಿಂದ 15 ನಿಮಿಷಗಳ ಕಾಲ ಒಂದು ಕಪ್ ಚಹಾಕ್ಕೆ ಕೇಂದ್ರ ಸಚಿವರು ಕಾಯುಬೇಕಾಯಿತು.

ನಿತಿನ್ ಗಡ್ಕರಿ

ನಿತಿನ್ ಗಡ್ಕರಿ

 • Share this:
  ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ (Union minister Nitin Gadkari )ಅವರು ಒಂದು ಕಪ್ ಚಹಾಗಾಗಿ (Tea) ಕಲಬುರಗಿ ವಿಮಾನ ನಿಲ್ದಾಣದಲ್ಲಿ (Kalaburagi Airport)  15 ನಿಮಿಷಗಳ ಕಾಲ ಕಾದ ಘಟನೆ ನಡೆದಿದೆ. ನಿತಿನ್ ಗಡ್ಕರಿ ಎರಡು ಬಾರಿ ಚಹಾ ಕೇಳಿದರೂ ಸಹ, ಆಹಾರ ಸುರಕ್ಷತಾ ಅಧಿಕಾರಿಗಳ ಕೊರತೆ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳ ಬೇಜವಾಬ್ದಾರಿತನದಿಂದ 15 ನಿಮಿಷಗಳ ಕಾಲ ಒಂದು ಕಪ್ ಚಹಾಕ್ಕೆ ಕೇಂದ್ರ ಸಚಿವರು ಕಾಯುಬೇಕಾಯಿತು. ನಿನ್ನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಭೀಮಾ-ಅಮರ್ಜಾ ಸಂಗಮದಲ್ಲಿರುವ ಗಾಣಗಾಪುರದ ದತ್ತ ಮಂದಿರ ತೀರ್ಥ ಕ್ಷೇತ್ರಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಮರಳಿ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲು ಕಲಬುರಗಿ ಏರ್‌ಪೋರ್ಟ್‌ಗೆ ಆಗಮಿಸಿದ್ದರು. ಈ ವೇಳೆ ಒಂದು ಕಪ್ ಚಹಾಕ್ಕಾಗಿ ಕೇಂದ್ರ ಸಚಿವರು ಕೆಲ ಹೊತ್ತು ಕಾಯಬೇಕಾದ ಘಟನೆ ಸಂಭವಿಸಿತು.

  ಹೊರಗಿನ ಕ್ಯಾಂಟೀನ್‌ನಿಂದ ಟೀ ತಂದ ಸಿಬ್ಬಂದಿ

  ಕಲಬುರಗಿ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದ ಗಡ್ಕರಿ, ವಿಐಪಿ ಲಾಂಜ್‌ನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಾ ಅಲ್ಲಿನ ಸಿಬ್ಬಂದಿಗೆ ಒಂದು ಕಪ್ ಚಹಾ ಕೇಳಿದರು. ಶಿಷ್ಟಾಚಾರದ ಪ್ರಕಾರ, ವಿಮಾನ ನಿಲ್ದಾಣದ ಅಧಿಕಾರಿಗಳೇ ಚಹಾ, ಉಪಚಾರದ ವ್ಯವಸ್ಥೆ ಮಾಡಬೇಕಿತ್ತು. ಅಲ್ಲದೆ ಕೇಂದ್ರ ಸಚಿವರು ಸೇವಿಸೋ ಚಹಾ, ಉಪಾಹಾರವನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಮೊದಲೇ ತಪಾಸಣೆ ಕೂಡ ಮಾಡಬೇಕಿತ್ತು. ಆದರೆ ಕಲಬುರಗಿ ವಿಮಾನ ನಿಲ್ದಾಣದ ಭದ್ರತಾ ಹೊಣೆ ಹೊತ್ತ ಇನ್ಸ್‌ಪೆಕ್ಟರ್ ನೂರ್ ಮರಡಿ ಅವರು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಹೀಗಾಗಿ ಹೊರಗಡೆಯ ಕ್ಯಾಂಟೀನ್‌ಗೆ ತೆರಳಿ, ಕಪ್ ಚಹಾ ತಂದು ಕೇಂದ್ರ ಸಚಿವರಿಗೆ ನೀಡಬೇಕಾಗಿತ್ತು.

  ಇದನ್ನೂ ಓದಿ: Milk Price Hike: ರಾಜ್ಯದ ಜನರಿಗೆ ಮತ್ತೊಂದು ಶಾಕ್​; ಪ್ರತಿ ಲೀಟರ್ ನಂದಿನಿ ಹಾಲಿಗೆ 3 ರೂಪಾಯಿ ಹೆಚ್ಚಳ?

  ಚಹಾ ಬರುವುದು ತಡವಾಗುತ್ತದೆಯೇ ಎಂದು ಸಚಿವರನ್ನು ಸ್ವಾಗತಿಸಲು ಬಂದಿದ್ದ ಎಂಎಲ್‌ಸಿ ಬಿ.ಜಿ ಪಾಟೀಲ್ ಅವರನ್ನು ಸಚಿವರು ಎರಡು ಬಾರಿ ಕೇಳಿದರು. ನಂತರ ಪಾಟೀಲ್ ಅವರು ಅಧಿಕಾರಿಗಳಿಗೆ ಚಹಾ ಸಿಗುತ್ತದೆಯೇ ಎಂದು ಕೇಳಿದರು. ಬಳಿಕ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ್ ರಾವ್ ಏರ್‌ಪೋರ್ಟ್ ಸಿಬ್ಬಂದಿಗೆ ಚಹಾ ವ್ಯವಸ್ಥೆ ಮಾಡಲು ಆದೇಶಿಸಿದರು. ಈ ಎಲ್ಲಾ ಬೆಳವಣಿಗೆ ನಂತರ ವಿಮಾನ ನಿಲ್ದಾಣದ ಹೊರಗಿನ ಕ್ಯಾಂಟೀನ್‌ನಿಂದ ಟೀ ತಂದು ಸಚಿವರಿಗೆ ನೀಡಲಾಯಿತು.

  ಏಕೆ ತಡವಾಯ್ತು? 

  ವಿಮಾನ ನಿಲ್ದಾಣಕ್ಕೆ ಚಹಾ ಆಗಮಿಸುತ್ತಿದ್ದಂತೆಯೇ, ಹೊರಗೆ ಕಾಯುತ್ತಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು, ಏರ್‌ಪೋರ್ಟ್‌ಗೆ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ತಡೆದ ಕಾರಣ ಪ್ರೋಟೋಕಾಲ್ ಪ್ರಕಾರ ಚಹಾವನ್ನು ಪರೀಕ್ಷಿಸಲು ಸಹ ಸಾಧ್ಯವಾಗಲಿಲ್ಲ. ಒಂದು ಕಪ್ ಚಹಾಕ್ಕಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವರು ಒಂದಷ್ಟು ಹೊತ್ತು ಕುಳಿತಿರಬೇಕಾಯಿತು. ಟೀ ಕುಡಿದ ಬಳಿಕ, ಕಲಬುರಗಿ ವಿಮಾನ ನಿಲ್ದಾಣದಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿದರು.

  ಕೇಂದ್ರ ಸಚಿವರಂತಹ ವಿಐಪಿಗಳು ಬಂದಾಗ ಆಹಾರ ಪದಾರ್ಥಗಳ ಪರಿಶೀಲನೆ ನಂತರವೇ ಆಹಾರ, ಟೀ ನೀಡಬೇಕು, ಆದರೆ ನಮಗೆ ಒಳಗೆ ಪ್ರವೇಶಿಸಲು ಅನುಮತಿ ನೀಡಿಲ್ಲ ಎಂದು ಆಹಾರ ಸುರಕ್ಷತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆಹಾರ ಸುರಕ್ಷತಾ ಅಧಿಕಾರಿಗಳ ಬಗ್ಗೆ ಮಾಹಿತಿ ಇಲ್ಲ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ್ ರಾವ್ ಹೇಳಿದ್ದಾರೆ.

  ಅಧಿಕಾರಿಗಳಿಗೆ ಸಂಸದ ಉಮೇಶ್ ಜಾಧವ್ ತರಾಟೆ
  ವಿಮಾನ ನಿಲ್ದಾಣಕ್ಕೆ ಬಂದ ಸಂಸದ ಉಮೇಶ್ ಜಾಧವ್, ಸಚಿವರು ಬಂದಾಗ ಶಿಷ್ಟಾಚಾರ ಉಲ್ಲಂಘನೆಯಾದ ಬಗ್ಗೆ ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರ ರಾವ್ ಹಾಗೂ ಭದ್ರತಾ ಅಧಿಕಾರಿ ನೂರ್ ಮರಡಿ ಅವರನ್ನು ತರಾಟೆಗೆ ತೆಗೆದುಕೊಂಡರು. “ಕೇಂದ್ರ ಸಚಿವರಿಗೆ ಅವರು ಬೇಡಿಕೆಯ ನಂತರವೂ ಒಂದು ಕಪ್ ಚಹಾವನ್ನು ನೀಡದಿರುವಾಗ ಕರ್ನಾಟಕದ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ..? ದಯವಿಟ್ಟು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ ಎಂದು ಡಾ. ಜಾಧವ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸಿದರು.
  Published by:Kavya V
  First published: