ಮಂಡ್ಯ: ಚುನಾವಣೆ ಹತ್ತಿರ(Karnataka Assembly Election) ಬರುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ನಡೆಯೋದು ಸಾಮಾನ್ಯ ಸಂಗತಿ. ಒಬ್ಬರಿಂದೊಬ್ಬರು ತಮ್ಮ ರಾಜಕೀಯ ಲಾಭಗಳನ್ನು (Political Profit) ನೋಡಿಕೊಂಡು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಾರೆ. ಕೆಲವೊಬ್ಬರ ನಡೆಗಳು ಕೂಡ ತಾವಿರುವ ಪಕ್ಷ ಬಿಟ್ಟು ಇನ್ನೊಂದು ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂಬುದನ್ನು ತೋರಿಸುತ್ತದೆ. ಇದೀಗ ಅಂತಹದ್ದೇ ಸಾಲಿನಲ್ಲಿ ಸಚಿವ ಕೆ.ಸಿ ನಾರಾಯಣ ಗೌಡ (KC Narayana Gowda) ಕೂಡ ಇದ್ದಾರೆ.
ಹೌದು. ಕಳೆದ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು, ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಕೆ.ಸಿ ನಾರಾಯಣ ಗೌಡ ಬಳಿಕ ಬಿಎಸ್‌ವೈ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ನಂತರ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲೂ ಸಚಿವರಾಗಿರುವ ಕೆ.ಸಿ ನಾರಾಯಣ ಗೌಡ ಅವರು ಸದ್ಯ ಬಿಜೆಪಿ ತೊರೆಯುವ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂಬ ಗುಸು ಗುಸು ಹಬ್ಬಿದೆ. ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದು ಹೇಳಲಾಗ್ತಿದ್ದು, ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Amit Sha: ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು; ಮಂಡ್ಯದಲ್ಲಿ ಮೊಳಗಲಿದೆ ಚುನಾವಣಾ ರಣಕಹಳೆ!
ಕುತೂಹಲ ಮೂಡಿಸಿದ ಹೇಳಿಕೆ
ಕೆ.ಆರ್ ಪೇಟೆ ಶಾಸಕ ರೇಷ್ಮೆ ಹಾಗೂ ಕ್ರೀಡಾ ಸಚಿವ ಕೆ.ಸಿ ನಾರಾಯಣಗೌಡ ಕಾಂಗ್ರೆಸ್ ಸೇರ್ತಾರೆ ಎಂಬ ವಿಚಾರ ಹರಿದಾಡ್ತಿದೆ ಇದು ನಿಜನಾ ಎಂದು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಸಂತೆಬಾಚಳ್ಳಿಯಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದ್ದು, ಈ ಪ್ರಶ್ನೆಗೆ ಉತ್ತರಿಸಿರುವ ಅವರು, ಬಿಜೆಪಿಯಿಂದ ಸ್ಪರ್ಧೆ ಮಾಡ್ಬೇಕಾ ಅಥವಾ ರಾಜಕೀಯದಿಂದಲೇ ನಿವೃತ್ತಿ ಆಗ್ಬೇಕಾ ಅಂತಾ ತೀರ್ಮಾನ ಮಾಡಿ ಹೇಳ್ತೀನಿ. ಅಂತಹ ಸಂದರ್ಭ ಬಂದಾಗ ಖಂಡಿತ ಮಾದ್ಯಮಗಳ ಮುಂದೆ ಬಂದು ಹೇಳ್ತೀನಿ ಎಂದು ಹೇಳಿದ್ದಾರೆ. ಸಚಿವ ಕೆಸಿ ನಾರಾಯಣ ಗೌಡರ ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಬಿಜೆಪಿ ಮೇಲೆ ಮುನಿಸು?
ಸಚಿವ ಕೆಸಿ ನಾರಾಯಣ ಗೌಡ ಅವರು ವಿಧಾನ ಸಭಾ ಚುನಾವಣೆಯ ಹೊಸ್ತಿಲಲ್ಲೇ ನೀಡಿರುವ ಈ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ನಾರಾಯಣ ಗೌಡ ಅವರು ನಿಜಕ್ಕೂ ಬಿಜೆಪಿ ಮೇಲೆ ಮುನಿಸಿಕೊಂಡಿದ್ದಾರೆ ಎಂಬ ಅನುಮಾನ ಮೂಡಿದೆ. ಒಂದು ವೇಳೆ ನಿಜಕ್ಕೂ ಬಿಜೆಪಿ ನಾಯಕರ ವರ್ತನೆಯ ಮೇಲೆ ಬೇಸರಗೊಂಡಿದ್ದರೆ ಅವರು ಸದ್ಯದಲ್ಲೇ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದ್ದು, ಆದರೆ ಸ್ವತಃ ನಾರಾಯಣ ಗೌಡ ಅವರು ತಾನು ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: BL Santhosh: ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಪಣ; ಹೈಕಮಾಂಡ್ ಸೂಚನೆಯಂತೆ ಸಕ್ಕರೆ ನಾಡಿಗೆ ಬಂದ ಬಿಎಲ್ ಸಂತೋಷ್!
ಇನ್ನೊಂದೆಡೆ ಜೆಡಿಎಸ್ ನಾಯಕರ ವಿರುದ್ಧವೂ ಕಿಡಿಕಾರಿರುವ ಸಚಿವ ಕೆ.ಸಿ ನಾರಾಯಣ ಗೌಡ, ನಾನು ಎಂದೂ ಕಿತಾಪತಿ ರಾಜಕಾರಣ ಮಾಡಿಲ್ಲ, ಮಾಡೋದು ಇಲ್ಲ. ಜೆಡಿಎಸ್‌ನಲ್ಲಿ ನನಗೆ ತುಂಬಾ ಕಾಟ ಕೊಟ್ಟಿದ್ರು, ಅದನ್ನ ತಡೆದು ಕೊಳ್ಳಲಾರದೆ ಆಚೆ ಬಂದಿದ್ದೆ ಎಂದು ಹೇಳಿದರು.
ಇನ್ನು ಮಂಡ್ಯಕ್ಕೆ ನೂತನ ಉಸ್ತುವಾರಿ ಸಚಿವರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಾರಾಯಣ ಗೌಡ ಅವರು, ಯಾರಾದ್ರು ಬರ್ಲಿ ನಾನಂತೂ ಉಸ್ತುವಾರಿ ವಹಿಸಿ ಕೊಳ್ಳಲ್ಲ. ಮಂಡ್ಯ ಉಸ್ತುವಾರಿ ನನಗೆ ಬೇಡ. ಆರ್. ಅಶೋಕ್ ಅವರೇ ಮತ್ತೆ ಬಂದ್ರೆ ವೆಲ್ ಕಮ್ ಮಾಡ್ತೀನಿ. ಒಂದು ತಿಂಗಳಲ್ಲಿ ಕೋಡ್ ಆಫ್ ಕಂಡಕ್ಟ್ ಬರುತ್ತೆ. ಏನ್ ಮಾಡೋಕೆ ಆಗುತ್ತೆ, ನಾನು ಚುನಾವಣೆ ಮಾಡ್ಲೇ ಬೇಕಲ್ವಾ? ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ