• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • KR Pete: ‘ಉಸಿರು ಇರೋವರೆಗೂ ಕೆಆರ್​ಪೇಟೆ ಬಿಡಲ್ಲ’- ಪಕ್ಷದ ಬ್ಯಾನರ್ ಇಲ್ಲದೆಯೇ ಸಚಿವ ನಾರಾಯಣ ಗೌಡ ಸಭೆ

KR Pete: ‘ಉಸಿರು ಇರೋವರೆಗೂ ಕೆಆರ್​ಪೇಟೆ ಬಿಡಲ್ಲ’- ಪಕ್ಷದ ಬ್ಯಾನರ್ ಇಲ್ಲದೆಯೇ ಸಚಿವ ನಾರಾಯಣ ಗೌಡ ಸಭೆ

ಸಚಿವ ನಾರಾಯಣ ಗೌಡ ಭಾವನಾತ್ಮಕ ಭಾಷಣ

ಸಚಿವ ನಾರಾಯಣ ಗೌಡ ಭಾವನಾತ್ಮಕ ಭಾಷಣ

ನನ್ನ ಕುಟುಂಬದಿಂದ ಯಾರು ರಾಜಕಾರಣಕ್ಕೆ ಬರೋದಿಲ್ಲ. ನೀವು ಮಾತ್ರ ನನ್ನ ಕುಟುಂಬದವರು. ನನ್ನ ಉಸಿರು ನಿಂತರೆ ಕೆ.ಆರ್.ಪೇಟೆಯಲ್ಲೇ ನಾನು ತೆಗೆದುಕೊಂಡಿರುವ ಸ್ವಂತ ಜಮೀನಿನಲ್ಲಿ ಮಣ್ಣು ಮಾಡಿಸಿಕೊಳ್ಳಬೇಕು ಅಂತ ತೀರ್ಮಾನ ಮಾಡಿದ್ದೀನಿ ಎಂದು ಸಚಿವ ನಾರಾಯಣ ಗೌಡ ಹೇಳಿದ್ದಾರೆ.

  • News18 Kannada
  • 3-MIN READ
  • Last Updated :
  • Mandya, India
  • Share this:

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದ (KR Pete) ಮತದಾರರ ಮೇಲೆ ಸಚಿವ ನಾರಾಯಣ ಗೌಡ ಅವರು ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ (Emotional Speech). ತನ್ನ ಸಾವಿನ ಬಗ್ಗೆ ಮಾತನಾಡಿ ಮತದಾರರ ಮನ ಸೆಳೆಯಲು‌ ಸಚಿವ ನಾರಾಯಣ ಗೌಡ (Minister Narayana Gowda ) ಮುಂದಾಗಿದ್ದಾರೆ. ನನ್ನ ಶರೀರದಲ್ಲಿ ಉಸಿರಿರುವವರೆಗೂ ನಾನು ಈ ತಾಲೂಕನ್ನು ಬಿಟ್ಟು ಎಲ್ಲೂ ಹೋಗಲ್ಲ. ನನ್ನ ಮಣ್ಣನ್ನು ಇಲ್ಲೆ ಮಾಡಬೇಕು ಎಂದು ನಾನು ಈಗಾಗಲೇ ತೀರ್ಮಾನ ಮಾಡಿಕೊಂಡಿದ್ದೀನಿ ಎಂದು ಭಾವನಾತ್ಮಕವಾಗಿ ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇಂದು ಮಂಡ್ಯದ (Mandya) ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿಯಲ್ಲಿ ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ನಾರಾಯಣ ಗೌಡ ಅವರು ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವ ಆಶ್ವಾಸನೆಯನ್ನು ನೀಡಿದರು.


ಗುಂಡಾಗಳು ಬಂದರೂ ಟಚ್​ ಮಾಡಲು ಬಿಡೋದಿಲ್ಲ


ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾರಾಯಣ ಗೌಡ ಅವರು, ನನ್ನ ಶರೀರದಲ್ಲಿ ಉಸಿರಿರೋವರೆಗೂ ನಾನು ಈ ತಾಲೂಕನ್ನು ಬಿಟ್ಟು ಎಲ್ಲೂ ಹೋಗಲ್ಲ. ನೀವು ನನ್ನನ್ನು ಶಾಸಕರನನ್ನಾಗಿ ಮಾಡಿದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾವುದೇ ಗುಂಡಾಗಳು ಬಂದರೂ ನಿಮ್ಮನ್ನು ಟಚ್​ ಮಾಡಲು ಬಿಡೋದಿಲ್ಲ. ನಾನು ಹತ್ತಾರು ದೇಶ ನೋಡಿಕೊಂಡು ಬಂದಿದ್ದೀನಿ, ಇಂತಹ ಗುಂಡಾಗಳನ್ನು ತುಂಬಾ ನೋಡಿದ್ದೀನಿ. ಆದ್ದರಿಂದ ನೀವು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.




ಇದನ್ನೂ ಓದಿ: Women's Day: ಅಮೆರಿಕಾ ಬ್ಯಾಂಕ್​ vs ಮಹಿಳೆಯರ ಜೀರಿಗೆ ಡಬ್ಬಿ; ಯಾರಿಗೆ ಗೆಲುವು ಅಂತ ವಿವರಿಸಿದ ಸಿಎಂ ಬೊಮ್ಮಾಯಿ!


ಕಳೆದ ಎರಡು ವರ್ಷ ಕೋವಿಡ್​​ನಿಂದ ಬದುಕಿದ್ದೆ ಹೆಚ್ಚು. ಸರ್ಕಾರದಲ್ಲಿ ಹಣದ ಸಮಸ್ಯೆ ಇತ್ತು, ಆದರೆ ಈಗ ಅಭಿವೃದ್ಧಿಯ ಯೋಜನೆಗಳು ಆರಂಭವಾಗಿದೆ. ಮುಂದಿನ ಆರು ತಿಂಗಳಿನಲ್ಲಿ ಎಲ್ಲಾ ರಸ್ತೆಗಳು ಅಭಿವೃದ್ಧಿಯಾಗುತ್ತದೆ. ಮುಂದಿನ ಎರಡು ಮೂರು ವಾರದಲ್ಲಿ ಎಲ್ಲಾ ಕೆರೆಗಳು, ನಾಲೆಗಳು ಭರ್ತಿ ಆಗುತ್ತದೆ.


ನನ್ನ ಕುಟುಂಬದಿಂದ ಯಾರು ರಾಜಕಾರಣಕ್ಕೆ ಬರೋದಿಲ್ಲ. ನೀವು ಮಾತ್ರ ನನ್ನ ಕುಟುಂಬದವರು. ನನ್ನ ಉಸಿರು ನಿಂತರೆ ಕೆ.ಆರ್.ಪೇಟೆಯಲ್ಲೇ ನಾನು ತೆಗೆದುಕೊಂಡಿರುವ ಸ್ವಂತ ಜಮೀನಿನಲ್ಲಿ ಮಣ್ಣು ಮಾಡಿಸಿಕೊಳ್ಳಬೇಕು ಅಂತ ತೀರ್ಮಾನ ಮಾಡಿದ್ದೀನಿ. ನಾನು ಮುಂದೇ ಬಾಂಬೆಗೂ ಹೋಗೋದಿಲ್ಲ, ದೆಹಲಿಗೂ ಹೋಗೋದಿಲ್ಲ. ನಿಮ್ಮೆಲ್ಲರ ಆಶೀರ್ವಾದ ಇದ್ದರೆ ನಾನು ಮತ್ತೆ ಚುನಾವಣೆಗೆ ನಿಲ್ಲುತ್ತೇನೆ. ಬೇಡ ಎಂದರೆ ನಿಮ್ಮ ಸೇವಕನಾಗಿ ಇಲ್ಲೆ ಇದ್ದು, ಕ್ಷೇತ್ರದ ಜನರ ಋಣ ತೀರಿಸಿ ಮಣ್ಣಲ್ಲಿ ಮಣ್ಣಾಗ್ತೀನಿ ಎಂದರು.


ಇದನ್ನೂ ಓದಿ: Kantara Hero: ಕಾಡು ಸುತ್ತಿ ಬಂದು ಸಿಎಂ ಭೇಟಿಯಾದ ರಿಷಬ್ ಶೆಟ್ಟಿ! ಕಾರಣವೇನು?




ಪ್ರಧಾನಿ ಕಾರ್ಯಕ್ರಮಕ್ಕೆ ಸಿದ್ಧತೆ; ಎಸ್​​ಪಿಜಿ ತಂಡದಿಂದ ಪರಿಶೀಲನೆ


ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ (PM Modi Program) ಸಕ್ಕರೆನಾಡು ಮಂಡ್ಯ (Mandya) ಜಿಲ್ಲೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮದ್ದೂರು (Muddur) ತಾಲೂಕಿನ ಗೆಜ್ಜಲಗೆರೆಯ 16 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಸಮಾವೇಶ ನಡೆಸಲಿದೆ. ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar), ಸಮಾವೇಶ ನಡೆಯುವ ಸ್ಥಳ ಪರಿಶೀಲನೆ ನಡೆಸಿದರು. ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ವೇದಿಕೆಯ ವಿನ್ಯಾಸ ಹಾಗೂ ಪ್ರಧಾನಿ ಸಂಚರಿಸುವ ಮಾರ್ಗದ ರೂಟ್ ಮ್ಯಾಪ್ ಪರಿಶೀಲನೆ ಮಾಡಿದರು. ಇನ್ನು, ಮಂಡ್ಯದಲ್ಲಿ ನಡೆಯಲಿರುವ ಸಮಾವೇಶದ ಸ್ಥಳಕ್ಕೆ ಎಸ್.ಪಿ.ಜಿ ತಂಡ (SPG Team) ಭೇಟಿ ನೀಡಿದರು. ಪಾರ್ಕಿಂಗ್ ಸ್ಥಳ, ಪ್ರಧಾನಿ ಮೋದಿ ಬರುವ ಮಾರ್ಗಗಳ ಬಗ್ಗೆ ಪರಿಶೀಲನೆ ನಡೆಸಿದರು.

Published by:Sumanth SN
First published: