ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ (Minister V Somanna) ಕಾಂಗ್ರೆಸ್ ಪಕ್ಷಕ್ಕೆ (Congress) ಸೇರ್ಪಡೆಯಾಗುತ್ತಾರೆ ಅನ್ನುವ ವದಂತಿ ಬೆನ್ನಲ್ಲೇ ಸಂಸದ ಡಿ.ಕೆ.ಸುರೇಶ್ (DK Suresh) ಹಾಗೂ ಸಚಿವ ವಿ. ಸೋಮಣ್ಣ ಭೇಟಿಯಾಗಿದ್ದಾರೆ. ಇಬ್ಬರು ನಾಯಕರು ತಮ್ಮ ತಮ್ಮ ಆಪ್ತರನ್ನು ದೂರವಿಟ್ಟು ಗುಪ್ತ್ ಗುಪ್ತ್ ಮಾತುಕತೆ ನಡೆಸಿದ್ದಾರೆ. ಯಾರು ಹತ್ತಿರ ಬಾರದಂತೆ ಹೇಳಿ ಇಬ್ಬರು ನಾಯಕರು ಗುಪ್ತ್ ಮಾತುಕತೆ ನಡೆಸಿದ್ದು, ಸ್ಥಳದಲ್ಲಿದ್ದವರ ಗಮನ ಸೆಳೆಯಿತು. ಇಂದು ಕನಕಪುರದಲ್ಲಿ (Kanakapura) ಕುವೆಂಪು ಸಂಯುಕ್ತ ವಸತಿ ಬಡಾವಣೆ ಮುಖ್ಯದ್ವಾರ ಉದ್ಘಾಟನೆಯಿತ್ತು. ಶಂಕುಸ್ಥಾಪನೆಯೂ ಇತ್ತು. ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್ರನ್ನ ಬಿಟ್ಟು ಸೋಮಣ್ಣ ಗುದ್ದಲಿ ಪೂಜೆ ಮಾಡಿದರು. ಆಮೇಲೆ ಬಂದ ಡಿ.ಕೆ.ಸುರೇಶ್ ಜೊತೆ ಸೋಮಣ್ಣ ರಹಸ್ಯವಾಗಿ ಚರ್ಚೆ ಮಾಡಿದರು. ಇದು ಕಾಂಗ್ರೆಸ್ ಕಡೆ ವಾಲಿದ್ದಾರೆ ಅನ್ನೋದಕ್ಕೆ ಪುಷ್ಟಿ ಕೊಡುವಂತಿತ್ತು.
ನಾನು ಸ್ವತಂತ್ರ್ಯವಾಗಿ ಗೆದ್ದವನು ಎಂದ ಸೋಮಣ್ಣ
ನನ್ನ ಕ್ಷೇತ್ರದಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ. ಬಿಜೆಪಿ ವಿಜಯಸಂಕಲ್ಪದಲ್ಲಿದ್ದೆ. ನನ್ನ ಕ್ಷೇತ್ರದಲ್ಲಿ ನಾನು ಇಂಡಿಪೆಂಡೆಂಟ್ ಆಗಿ ಗೆದ್ದಿದ್ದೇನೆ ಅಂತ ಹೇಳೋ ಮೂಲಕ ಪರೋಕ್ಷವಾಗಿ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇತ್ತ ಕಾರ್ಯಕ್ರಮದಲ್ಲಿ ಮಾತನಾಡಿ ಡಿ.ಕೆ.ಬ್ರದರ್ಸ್ ಹೊಗಳಿದ ಸೋಮಣ್ಣ ಅವರು, ಡಿ.ಕೆ.ಶಿವಕುಮಾರ್ - ಸುರೇಶ್ ಕನಕಪುರವನ್ನ ಅಭಿವೃದ್ಧಿ ಮಾಡಿದ್ದಾರೆ. ಕೆಲವರು ಕೇಳುತ್ತಾರೆ ನೀವು, ಅವರು ಬೇರೆ ಪಾರ್ಟಿ ಅಂತ. ಆದರೆ ನನಗೆ ಪಾರ್ಟಿ ಪಕ್ಷ ಇಲ್ಲ, ಅಭಿವೃದ್ಧಿ ಅಷ್ಟೇ ಮುಖ್ಯ ಎಂದು ಹೇಳಿದ್ದರು.
ಆ ಬಳಿಕ ಮಾಧ್ಯಮಗಳ ಮೇಲೂ ಕಿಡಿಕಾರಿದ ಸೋಮಣ್ಣ ಅವರು, ವೈಯಕ್ತಿಕವಾಗಿ ನನ್ನ ಅನುಭವದಲ್ಲಿ ಕೆಲವೊಂದು ಕಡೆ ನೋವು ಇರುತ್ತೆ. ಅದೆಲ್ಲವನ್ನೂ ಹೇಳಿಕೊಳ್ಳಲು ಆಗುತ್ತಾ? ನಾನು ಓಪನ್ ಆಗಿ ಮಾತಾಡುವ ವ್ಯಕ್ತಿ. ನಾನು ಆತರ ಯಾವ ತೀರ್ಮಾನ ಮಾಡಿಲ್ಲ. ನನ್ನ ಮನಸು ಮತ್ತು ಆರೋಗ್ಯ ಎರಡು ಸರಿ ಇಲ್ಲ. ಕಾಂಗ್ರೆಸ್ಗೆ ಹೋಗುವುದಾಗಿ ನಾನು ಹೇಳಿದ್ದೀನಾ ಅಂತ ಕಿಡಿಕಾರಿದರು.
ಸೋಮಣ್ಣ ಅಷ್ಟೇ ಅಲ್ಲ ಮಂಡ್ಯದಲ್ಲಿ ಸಚಿವ ಕೆ.ಎನ್ ನಾರಾಯಣಗೌಡರೂ ಕಾಂಗ್ರೆಸ್ ಸೇರ್ತಾರೆ ಅನ್ನೋ ಮಾತು ಬಲವಾಗುತ್ತಿದೆ. ಆದರೆ ಯಾರು ಪಕ್ಷ ಬಿಡಲ್ಲ ಅನ್ನೋದು ಬಿಜೆಪಿಯವರ ವಾದವಾಗಿದೆ. ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣಗೌಡ ಅವರು, ಸಚಿವ ಬಿಸಿ ಪಾಟೀಲ್ ಅವರಿಗೆ ತಿರುಗೇಟು ನೀಡಿದರು.
ಕೆ.ಸಿ ನಾರಾಯಣಗೌಡ ಅವರು ಕಾಂಗ್ರೆಸ್ ಸೇರಬಹುದು ನಾವು ಯಾರು ಹೋಗಲ್ಲ ಎಂದಿದ್ದ ಬಿ.ಸಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಾರಾಯಣಗೌಡ ಅವರು, ಬಿಸಿ ಪಾಟೀಲ್ ಅವರದ್ದನ್ನ ಅವರು ನೋಡಿ ಕೊಳ್ಳಬೇಕು. ನನ್ನ ಬಗ್ಗೆ ಮಾತನಾಡುವ ರೈಟ್ಸ್ ಬಿಸಿ ಪಾಟೀಲ್ಗೆ ಇಲ್ಲ. ನನ್ನ ಬಗ್ಗೆ ಯಾಕೆ ಮಾತನಾಬೇಕು. ನಾನೇನು ಕಾಂಗ್ರೆಸ್ ಸೇರುವ ಬಗ್ಗೆ ಅವರಿಗೆ ಅಪ್ಲಿಕೇಶನ್ ಹಾಕಿದ್ದೇನಾ? ಅವರ ಬಗ್ಗೆ ನನಗೆ ಗೌರವ ಇದೆ. ಈ ರೀತಿ ಅವರು ಮಾತನಾಡಬಾರದು ಎಂದು ಮನವಿ ಎಂದು ಹೇಳಿದರು.
ಇದನ್ನೂ ಓದಿ: Madalu Virupakshappa: ಬಿಜೆಪಿಯಿಂದ ಮಾಡಾಳು ವಿರೂಪಾಕ್ಷಪ್ಪ ಉಚ್ಚಾಟನೆ; ಪಕ್ಷದ ನಿರ್ಣಯದ ಕುರಿತಂತೆ ಶಾಸಕರ ಶಾಕಿಂಗ್ ಹೇಳಿಕೆ!
ಇನ್ನೊಂದು ವಾರದಲ್ಲಿ ಹೆಚ್ಚುಕಮ್ಮಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಘೋಷಣೆ ಮಾಡಲಿದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಜಾಜಿನಗರ, ಗೋವಿಂದರಾಜನಗರ, ವಿಜಯನಗರ ಮೂರು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನಾದರೂ ಕಾಂಗ್ರೆಸ್ ಹೋಲ್ಡ್ ಮಾಡಿದರೆ ಅಲ್ಲಿಗೆ ವಿ ಸೋಮಣ್ಣ ಬರ್ತಾರೆ ಅನ್ನೋದಕ್ಕೆ ಮುನ್ಸೂಚನೆ ಸಿಕ್ಕಿದೆಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ