ಖಾತೆ ಬಗ್ಗೆ ಅಸಮಾಧಾನವಿದೆ ಎಂದು ಜೆಡಿಎಸ್​ ಸುಳ್ಳುಸುದ್ದಿ ಹಬ್ಬಿಸಿದೆ; ಸಚಿವ ನಾರಾಯಣ ಗೌಡ ಆರೋಪ

ಸಿಎಂ ನನಗೆ 3 ಒಳ್ಳೆಯ ಖಾತೆಗಳನ್ನೇ ಕೊಟ್ಟಿದ್ದಾರೆ. ನನಗೆ ಅಸಮಾಧಾನ ಎಂದು ಜೆಡಿಎಸ್ ಹಬ್ಬಿಸಿದೆ ಎಂದು ಜೆಡಿಎಸ್ ವಿರುದ್ಧ ಸಚಿವ ನಾರಾಯಣ ಗೌಡ ಆರೋಪ ಮಾಡಿದ್ದಾರೆ.

ಸಚಿವ ನಾರಾಯಣ ಗೌಡ.

ಸಚಿವ ನಾರಾಯಣ ಗೌಡ.

  • Share this:
ಬೆಂಗಳೂರು (ಫೆ. 15): ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವ ಬಿ.ಸಿ. ಪಾಟೀಲ್, ನಾರಾಯಣ ಗೌಡ ಸೇರಿದಂತೆ ಕೆಲವು ಸಚಿವರಿಗೆ ತಮಗೆ ಸಿಕ್ಕ ಖಾತೆಯ ಬಗ್ಗೆ ಅಸಮಾಧಾನವಿದೆ ಎನ್ನಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ನಾರಾಯಣ ಗೌಡ, ನನಗೆ ಸಿಕ್ಕ ಖಾತೆಯ ಬಗ್ಗೆ ತೃಪ್ತಿಯಿದೆ, ಈ ಬಗ್ಗೆ ಜೆಡಿಎಸ್ ವಿನಾಕಾರಣ ಸುಳ್ಳುಸುದ್ದಿ ಹಬ್ಬಿಸುತ್ತಿದೆ ಎಂದಿದ್ದಾರೆ.

ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡ 10 ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಸಮಾಧಾನ ಶಮನಕ್ಕೆ ಪ್ರಯತ್ನಿಸಿದ್ದರು. ಆದರೆ, ಖಾತೆ ಹಂಚಿಕೆಯ ಬಗ್ಗೆಯೂ ಕೆಲವು ಸಚಿವರಿಗೆ ಅಸಮಾಧಾನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಖಾತೆಯನ್ನು ಬದಲಾವಣೆ ಮಾಡಿದ್ದ ಸಿಎಂ ವಲಸಿಗರ ಓಲೈಕೆಗೆ ಮುಂದಾಗಿದ್ದರು. ಬಿ.ಸಿ. ಪಾಟೀಲ್​ ತಮಗೆ ನೀಡಿದ್ದ ಅರಣ್ಯ ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಕೃಷಿ ಖಾತೆ ನೀಡಲಾಗಿತ್ತು.

ಇದನ್ನೂ ಓದಿ: ಮುಗಿಯದ ಬಿಎಸ್​ವೈ ಸಂಪುಟ ಗೊಂದಲ; ಐವರು ಸಚಿವರಿಗೆ ಮತ್ತೆ ಖಾತೆ ಬದಲಾವಣೆ

ಖಾತೆ ಹಂಚಿಕೆ ಬಗ್ಗೆ ಅಸಮಾಧಾನಗೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿರುವ ನಾರಾಯಣ ಗೌಡ, ನನಗೆ ಖಾತೆಯಲ್ಲಿ ಅಸಮಾಧಾನವಿದೆ ಎಂದಿದ್ದು ಯಾರು? ಕೊಟ್ಟ ಖಾತೆಯನ್ನು ಸಂತೋಷದಿಂದ ಪಡೆದಿದ್ದೇನೆ. ಸಿಎಂ ನನಗೆ 3 ಖಾತೆ ಕೊಟ್ಟಿದ್ದಾರೆ. ಒಳ್ಳೆ ಖಾತೆಗಳನ್ನೇ ಕೊಟ್ಟಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದಿಸುತ್ತೇನೆ. ನನಗೆ ಅಸಮಾಧಾನ ಎಂದು ಜೆಡಿಎಸ್ ಹಬ್ಬಿಸಿದೆ ಎಂದು ಜೆಡಿಎಸ್ ವಿರುದ್ಧ ಸಚಿವ ನಾರಾಯಣ ಗೌಡ ಆರೋಪ ಮಾಡಿದ್ದಾರೆ.
First published: