ಮಂಡ್ಯ: ಸಚಿವ ನಾರಾಯಣಗೌಡರು (Minister Narayanagowda) ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ನಾಯಕ. ಜೆಡಿಎಸ್ನಿಂದ (JDS) ಹೊರ ಬಂದಿದ್ದ ನಾರಾಯಣಗೌಡರು ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ (KR Pete By Election) ಬಿಜೆಪಿಯಿಂದ (BJP) ಸ್ಪರ್ಧಿಸಿ ಗೆದ್ದಿದ್ದರು. ಸದ್ಯ ಸಿಎಂ ಬೊಮ್ಮಾಯಿ ಸಂಪುಟದಲ್ಲಿ (CM Bommai Cabinet) ಸಚಿವರು ಆಗಿದ್ದಾರೆ. ಈ ಬಾರಿ ಬಿಜೆಪಿ ಮಂಡ್ಯ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲದ ಬಾವುಟ ಹಾರಿಸಲು ರಣತಂತ್ರ ರಚನೆ ಮಾಡುತ್ತಿದೆ. ಇತ್ತ ಮಾರ್ಚ್ 11ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಡ್ಯ ಹಿಡಿತಕ್ಕಾಗಿ ಬಿಡದಿಯಿಂದ ಮದ್ದೂರುವರೆಗೆ ರೋಡ್ ಶೋ ಮಾಡಲಿದ್ದಾರೆ. ಈ ವೇಳೆ ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿರುವ ಸಚಿವ ನಾರಾಯಣಗೌಡರು ಕಾಂಗ್ರೆಸ್ (Congress) ಸೇರುವ ಸುಳಿವು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ನಾರಾಯಣಗೌಡರು ಕಾಂಗ್ರೆಸ್ ನೀಡಿರುವ ಆಫರ್ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಇದೆ. ಆದ್ರೆ ಇನ್ನು ಯಾವುದೇ ತೀರ್ಮಾನ ಮಾಡಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮನೆ ಖಾಲಿ ಇದೆ. ಅಲ್ಲಿ ಯಾವುದೇ ಲೀಡರ್ ಇಲ್ಲ. ಅದಕ್ಕಾಗಿ ಕಾಂಗ್ರೆಸ್ ನನಗೆ ಆಹ್ವಾನ ನೀಡಿದೆ. ಕಾಂಗ್ರೆಸ್ ಪಕ್ಷಕ್ಕೆ ನಾಯಕ ಬೇಕು ಅನ್ನೋ ಆಸೆ ಅವರಿಗಿದೆ. ಇದರ ಬಗ್ಗೆ ಚೆರ್ಚೆ ನಡೆಯುತ್ತಿರೋದು ನಿಜ ಎಂದು ಸ್ಫೋಟಕ ಹೇಳಿಕೆ ನೀಡಿದರು.
ಸದ್ಯ ಯಾವುದೇ ತೀರ್ಮಾನ ಮಾಡಿಲ್ಲ
ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಾವಿನ್ನೂ ತೀರ್ಮಾನಿಸಿಲ್ಲ. ಈ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಅವರ ಜೊತೆ ಚರ್ಚೆ ಮಾಡದೇ ಯಾವುದೇ ನಿರ್ಧಾರ ತೆಗೆದುಕೊಳ್ಳಲ್ಲ. ಎಲ್ಲವನ್ನೂ ಕ್ಷೇತ್ರದ ಜನತೆ ಜೊತೆ ಚರ್ಚಿಸಿ ತೀರ್ಮಾನಿಸುತ್ತೇನೆ.
ಕಾಂಗ್ರೆಸ್ ಸೇರುವ ಸುಳಿವು ನೀಡಿದ ಸಚಿವರು
ನಮ್ಮ ಕಾರ್ಯಕರ್ತರು, ಹಿರಿಯರ ಜೊತೆ ಮಾತನಾಡಿದ ನಂತರವೇ ನನ್ನ ಮುಂದಿನ ಹೆಜ್ಜೆ. ಕಾಂಗ್ರೆಸ್ ಸೇರ್ಪಡೆಯಾಗುವ ಕುರಿತು ಈಗಾಗಲೇ ಎರಡು ಸಭೆ ಕರೆದಿದ್ದೇನೆ. ನಮ್ಮ ಮುಖಂಡರು ಏನ್ ಹೇಳ್ತಾರೆ ನೋಡೋಣ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಸೇರುವ ಸುಳಿವು ನೀಡಿದರು.
ಮಂಡ್ಯ ಉಸ್ತುವಾರಿ ಕೇಳಿದ್ರು!
ಸಚಿವ ಸಂಪುಟ ಸೇರಿದಾಗಿನಿಂದ ನಾರಾಯಣಗೌಡರು ಮಂಡ್ಯ ಜಿಲ್ಲೆಯ ಉಸ್ತುವಾರಿ ನೀಡುವಂತೆ ಕೇಳುತ್ತಿದ್ದಾರೆ. ಆದ್ರೆ ಮುಖ್ಯಮಂತ್ರಿಗಳು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರ ಪ್ರಾಬಲ್ಯ ಇರೋ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿಯನ್ನಾಗಿ ನೀಡಲಾಗಿದೆ. ಈ ಬಗ್ಗೆ ನಾರಾಯಣಗೌಡರೇ ಹಲವು ಬಾರಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಈ ಹಿಂದೆ ನಿವೃತ್ತಿ ಹೇಳಿಕೆ ನೀಡಿದ್ರು!
ಕೆ.ಆರ್. ಪೇಟೆ ತಾಲೂಕಿನ ಸಂತೆಬಾಚಳ್ಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರಾ ಎಂಬ ಪ್ರಶ್ನೆಗೆ ಮಾಧ್ಯಮಗಳಿಗೆ ಉತ್ತರಿಸಿದ್ದ ಸಚಿವ ನಾರಾಯಣ ಗೌಡ ಅವರು, ಬಿಜೆಪಿಯಿಂದ ಸ್ಪರ್ಧೆ ಮಾಡಬೇಕಾ ಇಲ್ಲವೇ ನಿವೃತ್ತಿ ಆಗಬೇಕಾ ತೀರ್ಮಾನ ಮಾಡಿ ಸಂದರ್ಭ ಬಂದಾಗ ಹೇಳುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: V Somanna: ಬಿಜೆಪಿ ಮೇಲೆ ಮುನಿಸಿಕೊಂಡ್ರಾ ಸಚಿವರು? ಕಾಂಗ್ರೆಸ್ ಬಿಗ್ ಆಫರ್ ಒಪ್ಪಿಕೊಳ್ತಾರಾ?
ಗೆದ್ದ, ಸೋತ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸ್ಮಾರ್ಟ್ ಟಿವಿ
ನಾರಾಯಣಗೌಡರು, ಕೆ.ಆರ್.ಪೇಟೆ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸ್ಮಾರ್ಟ್ ಟಿವಿ (Smart TV) ವಿತರಣೆ ಮಾಡಿದ್ದರು. ಗಿಫ್ಟ್ ಸ್ವೀಕರಿಸಿರುವ ಗ್ರಾಮ ಪಂಚಾಯ್ತಿ ಸದಸ್ಯರು ಮತ್ತೊಮ್ಮೆ ನಾರಾಯಣಗೌಡರು ಎಂದು ಜೈ ಕಾರ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ