B.C Nagesh: ಆಧಾರವಿಲ್ಲದ ಟಿಪ್ಪು ಸಂಗತಿಗಳಿಗೆ ಕೊಕ್; ಶಾಲಾ ಪಠ್ಯದಲ್ಲಿ ಭಗವದ್ಗೀತೆ, ಮಹಾಭಾರತ, ನೀತಿಪಾಠ ಅಳವಡಿಕೆ

ಇದು ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಯಾವ ಧರ್ಮದಲ್ಲಿ ಉತ್ತಮ ಅಂಶಗಳಿರುತ್ತೊ ಅದನ್ನು ಪಠ್ಯದಲ್ಲಿ ಸೇರಿಸುತ್ತೇವೆ. ಯಾವ ಧರ್ಮದ ಮಕ್ಕಳು ಶೇಕಡ 90 ರಷ್ಟು ಮಕ್ಕಳಿರುತ್ರಾರೊ ಆ ಧರ್ಮದ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸಲಾಗುವುದು ಎಂದು ನಾಗೇಶ್ ಸ್ಪಷ್ಟಪಡಿಸಿದರು.

ಸಚಿವ ನಾಗೇಶ್​

ಸಚಿವ ನಾಗೇಶ್​

  • Share this:
ಬೆಂಗಳೂರು (ಏ19):  ಪಠ್ಯದಲ್ಲಿ ಟಿಪ್ಪು ಇತಿಹಾಸವನ್ನು (Tippu History) ಕೈಬಿಡುವುದಾಗಿ ಒಂದಡೆ ವಿವಾದಕ್ಕೆಡೆಯಾಗಿರುವ ಸರ್ಕಾರ, (Government) ಮತ್ತೊಂದೆಡೆ ಭಗವದ್ಗೀತೆ ಹಾಗೂ ಮಹಾಭಾರತದ ವಿಚಾರಗಳನ್ನು ಪಠ್ಯದಲ್ಲಿ ಸೇರಿಸುವುದಾಗಿ‌ ಹೇಳಿದೆ. ಈ ಕುರಿತಂತೆ ವಿವರ ನೀಡಿರುವ ಪ್ರಾಥಮಿಕ ಶಿಕ್ಷಣ ಸಚಿವ ನಾಗೇಶ್ (Minister Nagesh) ಅವರು, ಮುಂದಿನ ವರ್ಷದಿಂದ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಸಲಾಗುವುದು. ಯಾವ ಧರ್ಮದ ಮಕ್ಕಳು ಶೇಕಡ 90 ರಷ್ಟು ಮಕ್ಕಳಿರುತ್ರಾರೊ ಆ ಧರ್ಮದ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸಲಾಗುವುದು.  ಭಗವದ್ಗೀತೆ, ಮಹಾಭಾರತ ಹಾಗೂ ಪಂಚತಂತ್ರದ ಕಥೆಗಳನ್ನು ಪಠ್ಯದಲ್ಲಿ ಸೇರಿಸುತ್ತೇವೆ ಎಂದರು. ಟಿಪ್ಪು ಪಾಠವನ್ನು ನಾವು ತೆಗೆದಿಲ್ಲ ಆಧಾರವಿಲ್ಲ ಅಂಶಗಳನ್ನು ತೆಗೆದು ಹಾಕಿರೋದಾಗಿ ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.

ಯಾವುದೇ ಧರ್ಮಕ್ಕೆ ಸೀಮಿತವಲ್ಲ

ಇದು ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಯಾವ ಧರ್ಮದಲ್ಲಿ ಉತ್ತಮ ಅಂಶಗಳಿರುತ್ತೊ ಅದನ್ನು ಪಠ್ಯದಲ್ಲಿ ಸೇರಿಸುತ್ತೇವೆ. ಯಾವ ಧರ್ಮದ ಮಕ್ಕಳು ಶೇಕಡ 90 ರಷ್ಟು ಮಕ್ಕಳಿರುತ್ರಾರೊ ಆ ಧರ್ಮದ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸಲಾಗುವುದು ಎಂದು ನಾಗೇಶ್ ಸ್ಪಷ್ಟಪಡಿಸಿದರು. ಮದರಸದಲ್ಲಿ ಕಲಿತ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡಲು ಆಗ್ತಿಲ್ಲ ಎಂದು ಮದರಸಕ್ಕೆ ಮಕ್ಕಳನ್ನು ಕಳುಹಿಸುವ ಹಲವು ಪೋಷಕರು ಹೇಳ್ತಿದ್ದಾರೆ. ಹೀಗಾಗಿ ಬೇರೆ ಶಾಲೆಗಳಂತೆ ಮದರಸದಲ್ಲೂ ಬೇರೆ ಶಾಲೆಯಲ್ಲಿನ ಶಿಕ್ಷಣ ನೀಡಿ ಎಂಬ ಕೂಗು ಕೇಳಿ ಬರ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿಯಲ್ಲಿ ಕಾಪಿ ತಡೆಯಲು ಕ್ರಮ 

ಏಪ್ರಿಲ್ 22 ರಿಂದ ಆರಂಭಗೊಳ್ಳಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಮಾಸ್ ಕಾಪಿ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ‌ ಹದ್ದಿನ ಕಣ್ಣು ಇಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ‘ವಿದ್ಯಾರ್ಥಿಗಳೇ ಯಾವುದೇ ಭಯ ಪಡದೆ ಪರೀಕ್ಷೆಯನ್ನು ಬರೆಯಿರಿ. ಪರೀಕ್ಷೆಗಳು ವಿದ್ಯಾರ್ಥಿ ಸ್ನೇಹಿಯಾಗಲಿದೆ. ಪೋಷಕರೂ ಮಕ್ಕಳ ಬೆನ್ನುತಟ್ಟಬೇಕು’ ಎಂದು ಮನವಿ ಮಾಡಿದರು.

ಇದನ್ನೂ ಓದಿ: Siddaramaiah: ’ಮೋದಿಗೆ ಧಮ್ ಇದ್ರೆ ಕೆಂಪಣ್ಣ ಆರೋಪದ ಬಗ್ಗೆ ತನಿಖೆ ನಡೆಸಲಿ’; ಪ್ರಧಾನಿಗೆ ಸಿದ್ದು ಸವಾಲ್

ಹಿಜಾಬ್ ಧರಿಸುವಂತಿಲ್ಲ

ಸಮವಸ್ತ್ರ ಇರುವ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಕೊಂಡು ಬರಬೇಕು ಅದೇ ರೀತಿ ಸಮವಸ್ತ್ರ ಇಲ್ಲದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಅನ್ವಯ ಆಗುವುದಿಲ್ಲ. ಆದರೆ ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು. ‌ಇನ್ನು 14 ಜಿಲ್ಲೆಯಲ್ಲಿ ಪ್ರಥಮ ಪಿಯುಸಿ ಪರೀಕ್ಷೆಗೆ ಮುಸ್ಲಿಂ ವಿದ್ಯಾರ್ಥಿನಿಯರು 98.8 ಪರ್ಸೆಂಟ್ ಹಾಜರಾತಿ ಇತ್ತು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ವ್ಯವಸ್ಥೆ

ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ಪರೀಕ್ಷೆಗೆ ಸಂಬಂದಿಸಿದ ಗೌಪ್ಯ ವಸ್ತುಗಳನ್ನು ಎಲ್ಲಾ ಜಿಲ್ಲಾ ಖಜಾನೆಗಳಲ್ಲಿ ಠೇವಣಿಸುವುದು ಹಾಗೂ ಪರೀಕ್ಷಾ ಕೇಂದ್ರಗಳಿಗೆ ವಿತರಿಸುವ ಚಟುವಟಿಕೆಗಳನ್ನು ಖಜಾನೆಯ ಒಳಗೆ ಮತ್ತು ಹೊರಗೆ 24ಘಿ7 ಸಿಸಿಟಿವಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರಿಗೆ ಕ್ಯಾಮೆರಾ ಹೊಂದಿರದ ಸಾಮಾನ್ಯ ಮೊಬೈಲ್​ ಇರಿಸಿಕೊಳ್ಳಲು ಅನುಮತಿಸಿದ್ದು, ಉಳಿದ ಎಲ್ಲಾ ಪರೀಕ್ಷಾ ಸಿಬ್ಬಂದಿ ವಿದ್ಯಾರ್ಥಿಗಳು ಮೊಬೈಲ್ ತರುವುದು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Hampi Kannada University: CM ಬೊಮ್ಮಾಯಿ ಭಾಷಣಕ್ಕೆ ಅಡ್ಡಿ, ಸಂಶೋಧನಾ ವಿದ್ಯಾರ್ಥಿ ನೋಂದಣಿ ರದ್ದು ಮಾಡೋದಾಗಿ ನೋಟಿಸ್

ಭದ್ರತೆಗೆ ಕ್ರಮ, 200 ಮೀಟರ್‌ ನಿಷೇಧಿತ ಪ್ರದೇಶ

ಪರೀಕ್ಷೆ ಹಿನ್ನೆಲೆಯಲ್ಲಿ ಭದ್ರತೆ ವ್ಯವಸ್ಥೆ ಕೈಗೊಳ್ಳಲಾಗಿದೆ. ವಿಶೇಷ ಜಾಗೃತ ದಳ, 2152, ತಾಲ್ಲೂಕು ಜಾಗೃತ ದಳ 858 ಜಿಲ್ಲಾ ಜಾಗೃತ ದಳ, 64 ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
Published by:Pavana HS
First published: