Panchamasali: ರಾಜ್ಯದಲ್ಲಿ ಪಂಚಮಸಾಲಿ 3ನೇ ಪೀಠ ಸ್ಥಾಪನೆಯನ್ನು ಮತ್ತೆ ಸಮರ್ಥಿಸಿಕೊಂಡ ಸಚಿವ ಮುರುಗೇಶ್ ನಿರಾಣಿ

ಪಂಚಮಸಾಲಿ ಸಮಾಜದ 3ನೇ ಗುರುಪೀಠ ಸ್ಥಾಪನೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಇದೇ ಫೆಬ್ರವರಿ 14ರಂದು ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆಯಾಗಲಿದೆ.

ಸಚಿವ ಮುರುಗೇಶ್ ನಿರಾಣಿ

ಸಚಿವ ಮುರುಗೇಶ್ ನಿರಾಣಿ

  • Share this:
ಮೈಸೂರು(ಫೆ.04): ರಾಜ್ಯದಲ್ಲಿ ಪಂಚಮಸಾಲಿ (Panchamasali Lingayat) ಮೂರನೇ ಪೀಠ (Third Peetha) ಸ್ಥಾಪನೆಯನ್ನು ಸಚಿವ ಮುರುಗೇಶ್ ನಿರಾಣಿ (Minister Murugesh Nirani) ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಎರಡು ಪೀಠಗಳ ಸ್ವಾಮೀಜಿಗಳ ಒತ್ತಡ ಕಡಿಮೆ ಮಾಡಲು ಈ ಪೀಠದ ಅಗತ್ಯ ಇದೆ. ಆದರೆ ಈ ಪೀಠದ ಸ್ಥಾಪನೆ ಹಿಂದೆ ನಾನಿಲ್ಲ. ಆದರೆ ನನ್ನ ಸಂಪೂರ್ಣ ಬೆಂಬಲ ಇದಕ್ಕೆ ಇದೆ. ವಚನಾನಂದ ಸ್ವಾಮೀಜಿ ಸೇರಿ ಹಲವರು ಇದರ ಬೆಂಬಲಕ್ಕೆ ಇದ್ದಾರೆ. ಪೀಠ ಸ್ಥಾಪನೆಯ ಹಿಂದೆ ದುರುದ್ದೇಶದ ಪ್ರಶ್ನೆಯೇ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ಮುಂದುವರೆದ ಅವರು, ಸಮುದಾಯದ ಜನಸಂಖ್ಯೆ ಹೆಚ್ಚಿರುವ ಕಾರಣ ಮೂರನೇ ಪೀಠ ಅವಶ್ಯಕತೆ ಇದೆ. ಧಾರ್ಮಿಕ ಕಾರ್ಯಕ್ರಮ, ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಮೂರನೇ ಪೀಠ ಬೇಕು. ಪೀಠ ಸ್ಥಾಪನೆಯ ಯಾವುದೇ ಸಭೆ-ಸಮಾರಂಭಕ್ಕೆ‌ ನಾನು ಹೋಗಿಲ್ಲ. ಈ ಬಗ್ಗೆ ನಾನೇ ಖುದ್ದಾಗಿ ಸ್ವಾಮೀಜಿಯನ್ನು ಭೇಟಿ ಮಾಡುವುದಿಲ್ಲ. ಅವರು ಕರೆದರೆ ನಾನು ಹೋಗಿ ಮಾತನಾಡುತ್ತೇನೆ ಎಂದರು.

ಸ್ವಾಮೀಜಿಗೆ ತಪ್ಪು ಮಾಹಿತಿ ನೀಡಿದ್ದಾರೆ

ಮಠಕ್ಕೆ ಕೊಟ್ಟಿರುವ ಕಾಣಿಕೆಯನ್ನು ವಾಪಸ್ಸು ಪಡೆಯುತ್ತಾರೆಂಬ ವಿಚಾರವಾಗಿ, ನಾನು ಕಾಣಿಕೆಯನ್ನು ಸ್ವಾಮೀಜಿಗೆ ಕೊಟ್ಟಿಲ್ಲ. ನಾನು ಕೊಟ್ಟಿರುವುದು ಪೀಠಕ್ಕೆ. ಕೊಟ್ಟಿರುವುದನ್ನು ವಾಪಸ್ಸು ಕೇಳುವಷ್ಟು ಸಣ್ಣವನು ನಾನಲ್ಲ. ಇಂತಹ ಮನಸ್ಥಿತಿ ನನಗೆ ಇಲ್ಲ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಅದೇ ರೀತಿ ನಾನು ಪೀಠಕ್ಕೆ ನನ್ನ ಕೈಲಾದದ್ದನ್ನು ನೀಡಿದ್ದೇನೆ. ನಾನು ವಾಪಸ್ಸು ಕೇಳಿದ್ದೇನೆ ಎಂಬುದು ಸುಳ್ಳು. ಸ್ವಾಮೀಜಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ದೂರವಾಣಿ ಮೂಲಕ ಮಾತನಾಡಿದರೂ ನಾನು ಸ್ಪಷ್ಟನೆ ನೀಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:Ramesh Jarkiholi: ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್; ಕ್ಲೀನ್ ಚಿಟ್ ನೀಡಿದ ಎಸ್ಐಟಿ

ನಮ್ಮದು ಗಾಂಧಿ ತತ್ವ ಅಳವಡಿಸಿಕೊಂಡಿರುವ ಕುಟುಂಬ

ನಿರಾಣಿ ಸಹೋದರ ಧಮ್ಕಿ ಹಾಕಿದ್ದಾರೆ ಎಂಬ ವಿಚಾರ ಕುರಿತು, ಇದು ಸತ್ಯಕ್ಕೆ ದೂರವಾದ ಆರೋಪ ಎಂದು ತಳ್ಳಿಹಾಕಿದರು. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸುವ ಗಾಂಧಿ ತತ್ವ ನಮ್ಮ ಮನೆಯ ಸಂಸ್ಕಾರ. ಹೀಗಿರುವಾಗ ಧಮ್ಕಿ ಹಾಕುವ ಪ್ರಸಂಗ ಎಲ್ಲಿಂದ ಬರುತ್ತೆ ಎಂದಿದ್ದಾರೆ.

ನಾಯಕತ್ವ ಬದಲಾವಣೆ ಇಲ್ಲ

ಇನ್ನು, ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು,  ಅದು ಸಿಎಂ ಪರಮಾಧಿಕಾರ ಅದರಲ್ಲಿ. ನಮ್ಮ ಪಾತ್ರ ಇಲ್ಲ ಎಂದರು. ಇದೇ ವೇಳೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ. ಬೊಮ್ಮಾಯಿ ಅವರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ನಾಯಕರು ಇದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ವಿಚಾರ ಕೇವಲ ಊಹಾಪೋಹ. ಮುಂದಿನ ಚುನಾವಣೆಯಲ್ಲಿ 130 ಸ್ಥಾನ ಪಡೆದು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಫೆ.14ಕ್ಕೆ 3ನೇ ಪೀಠ ಸ್ಥಾಪನೆ

ಪಂಚಮಸಾಲಿ ಸಮಾಜದ 3ನೇ ಗುರುಪೀಠ ಸ್ಥಾಪನೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಇದೇ ಫೆಬ್ರವರಿ 14ರಂದು ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆಯಾಗಲಿದೆ. ವಚನಾನಂದಶ್ರೀಗಳ ಸಾನ್ನಿಧ್ಯದಲ್ಲಿ ಅಲಗೂರು ಗ್ರಾಮದಲ್ಲಿ 3ನೇ ಗುರುಪೀಠಾರೋಹಣ ಕಾರ್ಯಕ್ರಮಗಳು ನಡೆಯಲಿವೆ. ಪೀಠಾಧಿಪತಿಗಳಾಗಿ ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಪಟ್ಟಾಭಿಷೇಕ ನಡೆಯಲಿದೆ.

ಇದನ್ನೂ ಓದಿ: Fake Document: ಅಯ್ಯೋ ಶಿವನೇ, ಆಸ್ತಿ ಆಸೆಗೆ ಬದುಕಿರುವ ಅಜ್ಜಿಯನ್ನೇ ಸಾಯಿಸಿಬಿಟ್ರಲ್ಲಾ!

ಮಹಾದೇವ ಶಿವಾಚಾರ್ಯ ಸ್ವಾಮೀಜಿ ಪೀಠಾಧಿಪತಿ

ರಾಜ್ಯದ ಪಂಚಮಸಾಲಿ ಸಮುದಾಯದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಜಮಖಂಡಿ (ಆಲಗೂರ) ಪೀಠಾಧಿಪತಿಯಾಗಿ ಷ. ಭ್ರ. ಡಾ ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಗದ್ದುಗೆ ಏರಲಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯವರಾದ ಡಾ. ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಪ್ರಸ್ತುತ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಭ್ರಹನ್ಮಠದ ಪೀಠಾಧಿಪತಿಯಾಗಿದ್ದಾರೆ. ಈ ಮಠದ ಉಸ್ತುವಾರಿ ಜೊತೆಗೆ ಡಾ. ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಪಂಚಮಸಾಲಿ ಮೂರನೇ ಪೀಠದ ಪೀಠಾಧಿಪತಿಗಳಾಗಿದ್ದಾರೆ.
Published by:Latha CG
First published: