ಬಾಗಲಕೋಟೆ: ಪಂಚಮಸಾಲಿ ಮೀಸಲಾತಿ (Panchamasali Lingayats Protest) ಕುರಿತಂತೆ ನಡೆಯುತ್ತಿರುವ ಹೋರಾಟದಲ್ಲಿ ಬಿಜೆಪಿ (BJP) ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ವಾಗ್ದಾಳಿ ಮುಂದುವರಿದಿದೆ. ಮೀಸಲಾತಿ ಘೋಷಣೆ ಕುರಿತಂತೆ ಸಿಎಂ ಕಾಲಾವಕಾಶ ಪಡೆದುಕೊಂಡ ಬಳಿಕ ಮೀಸಲಾತಿ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಆದರೆ ಬಿಜೆಪಿ ನಾಯಕರ ನಡುವಿನ ಮಾತಿನ ಸಮರ ಮಾತ್ರ ಮುಂದುವರಿದೆ. ಬೆಳಗಾವಿಯಲ್ಲಿ ನಡೆದಿದ್ದ ಪಂಚಸಾಲಿ ವಿರಾಟ್ ಪ್ರತಿಭಟನೆಯಲ್ಲಿ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patiln Yatnal) ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಮುರುಗೇಶ್ ನಿರಾಣಿ (Murugesh Nirani) ಟಾಂಗ್ ನೀಡಿದ್ದಾರೆ. ತಮ್ಮ ವಿರುದ್ಧ ಟೀಕೆ ಮಾಡಿದ್ದ ಯತ್ನಾಳ್ ಅವರು, ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರ ಕಾಲಿಗೆ ಬಿದ್ದು ಬಂದಿದ್ದಾರೆ ಅಂತ ಹೇಳುವ ಮೂಲಕ ಆತ್ಮಾವಲೋಕನ ಮಾಡಿಕೊಳ್ಳಲಿ ಅಂತ ಸಲಹೆ ನೀಡಿದ್ದಾರೆ.
ಮಾಜಿ ಶಾಸಕ ಕಾಶಪ್ಪನವರ್ಗೆ ನಿರಾನಿ ಸವಾಲು
ನನ್ನ ಸೋಲಿಸ್ತೀನಿ ಎನ್ನುವ ಮಾಜಿ ಶಾಸಕ ಕಾಶಪ್ಪನವರ್ಗೆ ಸವಾಲು ಹಾಕಿದ ಮುರುಗೇಶ್ ನಿರಾಣಿ ಅವರು, ನಾವು ಮನಸ್ಸು ಮಾಡಿದರೆ ಸರ್ಕಾರ ತರುತ್ತೇವೆಮ ಸರ್ಕಾರ ಕೆಡವುತ್ತೇವೆ ಅಂತ ಹೇಳ್ತೀರಾ. ಈ ರೀತಿ ಉದ್ಧಟತನದ ಮಾತುಗಳು ಯಾರಿಗೂ ಬರಬಾರದು. ನನಗೆ ಗೊತ್ತಿದೆ ನಾಳೆ ನೀವು ಬಾಯಿ ಚಪಲಕ್ಕೆ ಏನೇನೋ ಮಾತಾಡ್ತಿರ್ತಿರಿ. ಅದನ್ನ ನೋಡಿಯೇ ನಾ ಇವತ್ತು ಮಾತನಾಡುತ್ತಿದ್ದೇನೆ. ಮಾತಾಡಿ ಜನ ಗಮನಿಸುತ್ತಿದ್ದಾರೆ. ನೀವು ಏನೇನು ಮಾತಾಡ್ತಿರಲ್ಲ, ಜನ ನೋಡ್ತಿರ್ತಾರೆ.
ಹೊತ್ತು ಬಂದಾಗ ಛತ್ರಿ ಹಿಡಿಯೋದು ಮುರುಗೇಶ ನಿರಾಣಿ ಜಾಯಮಾನ ಅಲ್ಲ
ನಾನು ಬಿಜೆಪಿಯಲ್ಲೇ ಹುಟ್ಟಿದ್ದು, ಬಿಜೆಪಿಯಲ್ಲೇ ಸಾಯೋದು. ಆ ಕಡೆ ಈ ಕಡೆ ಹೋಗುವಂತದ್ದಿಲ್ಲ. ನಿಮ್ಮ ಹಾಗೆ ಬಿಜೆಪಿಯಲ್ಲಿದ್ದಾಗ ಹಿಂದೂತ್ವದ ಬಣ್ಣ ಹಚ್ಚಿಕೊಳ್ಳೋದು. ಜೆಡಿಎಸ್ನಲ್ಲಿದ್ದಾಗ ಟೋಪಿ ಹಾಕೊಂಡು, ಟಿಪ್ಪು ಸುಲ್ತಾನ್ ಬಗ್ಗೆ ಹಾಡಿಹೊಗಳುವುದು. ಇನ್ನೊಂದೆಡೆ ಇದ್ದಾಗ ಎರಡೂ ಪಕ್ಷಗಳನ್ನ ಬೈಯೋದು. ಹೊತ್ತು ಬಂದಾಗ ಛತ್ರಿ ಹಿಡಿಯೋದು ಮುರುಗೇಶ ನಿರಾಣಿ ಜಾಯಮಾನ ಅಲ್ಲ.
ನಾನ ಬಹಳ ಬಿಜೆಪಿನೇ, ಹಿಂದೂತ್ವನೇ, ನಾನು ಹಿಂದೂತ್ವಕ್ಕೆ ನಿಷ್ಠನಾಗಿರುತ್ತೇನೆ. ಈ ಪಕ್ಷಕ್ಕೆ ನಿಷ್ಠನಾಗಿರ್ತೇನೆ, ಈ ಸಮಾಜಕ್ಕೆ ನಿಷ್ಠನಾಗಿರ್ತೇನೆ. ನನಗೆ ಸಮಾಜ ಮತ್ತು ಪಕ್ಷ ತಾಯಿ ಇದ್ದಂತೆ. ತಾಯಿಗೆ ಎಂದೂ ದ್ರೋಹ ಮಾಡೋದಿಲ್ಲ. ಈ ರೀತಿ ನೀಚ ಹೇಳಿಕೆಗಳನ್ನ ಬಿಡಬೇಕು ಎಂದರು.
ಕಳೆದ ವಾರ ಶೋಭಾ ಮೇಂಡ ಕಾಲಿಗೆ ಬಿದ್ದಿದ್ದರು
ಇದೇ ವೇಳೆ ಕಾಲಿಗೆ ಬಿಳ್ತಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿ, ಅವರನ್ನು ವೇದಿಕೆ ಮೇಲೆ ನೋಡಿ ಯಾರ ಯಾರ ಕಾಲಿಗೆ ಬಿಳ್ತಾರೆ (ನಮಸ್ಕಾರ) ಅಂತ. ಹೋದ ವಾರ ದೆಹಲಿಗೆ ಹೋದಾಗ ಶೋಭಾ ಕರಂದ್ಲಾಜೆ ಮೇಡಂ ಕಾಲಿಗೆ ಬಿದ್ದು ಬಂದಿದ್ದಾರೆ. ಹೇಗಾದರೂ ಮಾಡಿ ಯಡಿಯೂರಪ್ಪ ನನಗೆ ಒಂದು ಮಾಡಿ ಅಂತ ಶೋಭಾ ಮೇಡಂ ಕಾಲಿಗೆ ಬಿದ್ದಿದ್ದಾರೆ.
ನಾನು ಯತ್ನಾಳ್ ಅವರ ಬಗ್ಗೆ ಮಾತನಾಡಲ್ಲ. ನೀವ್ಯಾಕೆ ಅವರ ಹೆಸರೇಳ್ತೀರಾ ಎಂದು ಯತ್ನಾಳ್ ಅವರ ಹೆಸರು ಹೇಳ್ದೆ ವಾಗ್ದಾಳಿ ನಡೆಸಿದರು. ಅಲ್ಲದೇ ನನ್ನ ಮೇಲೆ ಈಗ ಮಾಡುತ್ತಿರೋದು ಘೋರ ಆಪಾದನೆ, ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತೆ. ಆ ಸಂಬಂಧ ನಾನಾಗಿಯೇ ಇವತ್ತು ಬಂದು ಮಾತನಾಡಿದ್ದೀನಿ. ಅವರುಗಳ ಬಗ್ಗೆ ನನ್ನ ಬಳಿ ಯಾವುದೇ ತಪ್ಪು ಅಭಿಪ್ರಾಯ ಇಲ್ಲ ಎಂದರು.
ಇದನ್ನೂ ಓದಿ: Karnataka Politics: ನಿರಾಣಿ ನನ್ನ ಮುಂದೆ ಬಚ್ಚಾ, ಟಿಕೆಟ್ ಕೇಳೋಕೆ ನಮ್ಮ ಮನೆಗೆ ಬರ್ತಿದ್ದ; ಶಾಸಕ ಯತ್ನಾಳ್
ನನಗೆ ಟಿಕೆಟ್ ಸಿಗುವ ಬಗ್ಗೆ ನಾನು ಸಾಕಷ್ಟು ನಾಯಕರ ಮನೆಗೆ ಹೋಗಿದ್ದೀನಿ. ಅವರ ಮನೆಗೂ ನಾನು ಹೋಗಿದ್ದೀನಿ. ಏಕೆಂದರೆ ಅವರು ದೊಡ್ಡವರು. ನಾನು ಸಚಿನಾಗಬೇಕಾದರು ಪಕ್ಷದ ಹಲವು ನಾಯಕರ ಮನೆಗೆ ಹೋಗಿದ್ದೀನಿ. ಅದನ್ನೇ ಅವರು ಹೇಳಿದ್ದಾರೆ.
ನನಗೆ ಯಾರು ಅನ್ಯಾಯ ಮಾಡಿದರೂ ನಾನು ಅವರ ಬಗ್ಗೆ ಮಾತನಾಡಿಲ್ಲ. ಆದರೆ ಇಂದು ಸಮುದಾಯಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ನಾನು ಗೆದ್ದಿರೋದು ಕ್ಷೇತ್ರದ ಜನರಿಂದ, ಇವರಿಂದ ಅಲ್ಲ. ಪಕ್ಷ ಎಂದಾಗ ನನ್ನನ್ನು ಬೆಳೆಸುತ್ತಿದೆ. ಆದ್ದರಿಂದ ನಾನು ಯಾರ ಬಗ್ಗೆಯೂ ಮಾತನಾಡೋದಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ