Murugesh Nirani: ಕನ್ನಡ ಪ್ರಾದೇಶಿಕ ಭಾಷೆಯಾದ್ರೆ, ಹಿಂದಿ ರಾಷ್ಟ್ರೀಯ ಭಾಷೆ: ಸಚಿವ ಮುರುಗೇಶ್ ನಿರಾಣಿ

ಹಿಂದಿ ಭಾಷೆಯೂ ನಮಗೆ ಬೇಕು, ಬೇರೆ ಭಾಷೆಯನ್ನು ಕಲಿಯೋದು ತಪ್ಪೇನಿಲ್ಲ. ಹೆಚ್ಚು ಭಾಷೆ ಕಲಿಯುವುದರಿಂದ ನಾವು ಶ್ರೀಮಂತರಾಗುತ್ತೇವೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಸಚಿವ ಮುರುಗೇಶ್ ನಿರಾಣಿ

ಸಚಿವ ಮುರುಗೇಶ್ ನಿರಾಣಿ

 • Share this:
  ಮೈಸೂರು (ಏ.28): ಹಿಂದಿ ರಾಷ್ಟ್ರಭಾಷೆ ಎನ್ನುವ ಕುರಿತು ನಟ ಅಜಯ್​ ದೇವಗನ್ (Ajay Devagan)​ ಮತ್ತು ಸುದೀಪ್​ (Sudeep) ನಡುವೆ ನಡೆಯುತ್ತಿರುವ ಟ್ವಿಟರ್​ ವಾರ್​ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇದೀಗ ಬೃಹತ್​ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ (Minister Murugesh Nirani) ನೀಡಿರೋ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಿದೆ.  ಕನ್ನಡ (Kannada) ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ ಎಂದು ಬೃಮುರುಗೇಶ್‌ ನಿರಾಣಿ ಹೇಳಿದ್ದಾರೆ. ಮೈಸೂರಿನಲ್ಲಿ (Mysore) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿ ಭಾಷೆಯೂ ನಮಗೆ ಬೇಕು, ಬೇರೆ ಭಾಷೆಯನ್ನು ಕಲಿಯೋದು ತಪ್ಪೇನಿಲ್ಲ. ಹೆಚ್ಚು ಭಾಷೆ ಕಲಿಯುವುದರಿಂದ ನಾವು ಶ್ರೀಮಂತರಾಗುತ್ತೇವೆ ಎಂದಿದ್ದಾರೆ.

  ನಾವು ಕನ್ನಡಿಗರು, ಕನ್ನಡಕ್ಕೆ ಮೊದಲ ಆದ್ಯತೆ.

  ನಾವು ಕನ್ನಡಿಗರು, ಕನ್ನಡಕ್ಕೆ ಮೊದಲ ಆದ್ಯತೆ. ಆ ಬಳಿಕ ಬೇರೆ ಬೇರೆ ಭಾಷೆಗಳನ್ನು ಕಲಿಯಬೇಕು. ನಾನು ಗ್ರಾಮೀಣ ಪ್ರದೇಶದವನು ಆಗಿರುವುದರಿಂದ ಕನ್ನಡವನ್ನು ಪ್ರೀತಿಸುತ್ತೇನೆ ಎಂದು ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ. ಹಿಂದಿ ರಾಷ್ಟ್ರೀಯ ಭಾಷೆ ಎಂಬ ವಿಚಾರಕ್ಕೆ ಭಾರಿ ಚರ್ಚೆಯಾಗುತ್ತಿದ್ದು, ನಟ ಕಿಚ್ಚ ಸುದೀಪ್ ಮತ್ತು ನಟ ಅಜಯ್ ದೇವಗನ್ ನಡುವೆ ಟ್ವೀಟ್ ಸಮರವೇ ನಡೆದಿದೆ.

  ಕಿಚ್ಚ ಸುದೀಪ್ ಹೇಳಿಕೆಗೆ ಹಲವರ ಬೆಂಬಲ

  ಅದರ ಬೆನ್ನಲ್ಲೆ ಹಲವು ರಾಜಕೀಯ ನಾಯಕರು, ಕಲಾವಿದರು ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂಬ ಕಿಚ್ಚ ಸುದೀಪ್ ಹೇಳಿಕೆಗೆ ಬೆಂಬಲಿಸಿದ್ದಾರೆ. ಇದರ ನಡುವೆ ಮುರುಗೇಶ್‌ ನಿರಾಣಿ ಅವರು ಹಿಂದಿ ರಾಷ್ಟ್ರೀಯ ಭಾಷೆ, ಕನ್ನಡ ಪ್ರಾದೇಶಿಕ ಭಾಷೆ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

  ಇದನ್ನೂ ಓದಿ: Sumalatha Decision: ಸುಮಲತಾ ಅಂಬರೀಶ್​ಗೆ ಬಿಜೆಪಿ ಆಹ್ವಾನ; ಪಕ್ಷ ಸೇರ್ಪಡೆ ಬಗ್ಗೆ ಸಂಸದೆ ನಿರ್ಧಾರವೇನು ಗೊತ್ತಾ?

  ಕ್ಯಾಬಿನೆಟ್‌ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ!

  ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಅದು ಸಿಎಂ ಬಸವರಾಜ ಬೊಮ್ಮಾಯಿಯವರ ಪರಮಾಧಿಕಾರ. ರಾಜ್ಯ ಬಿಜೆಪಿ ಅಧ್ಯಕ್ಷರು, ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ. ಈಗಾಗಲೇ ನಮಗೆ ಜವಾಬ್ದಾರಿ ನೀಡಿದ್ದಾರೆ. ಅದರಲ್ಲಿ ಉತ್ತಮ ಫರ್ಫಾಮೆನ್ಸ್ ನೀಡೊದು ನಮ್ಮ ಕೆಲಸ ಎಂದರು.

  ಹೆಚ್ಚಿನ ಜನಕ್ಕೆ ಮಂತ್ರಿಯಾಗುವ ಸಾಮರ್ಥ್ಯ ಇದೆ

  ಸಂಪುಟ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಹೊಸಬರಿಗೆ ಸ್ಥಾನ ಕೊಡುವುದರ ಬಗ್ಗೆ ಎಲ್ಲೂ ಚರ್ಚೆ ಆಗ್ತಿಲ್ಲ. ಆಕಾಂಕ್ಷಿಗಳು ಹೆಚ್ಚಾಗಿರೋದ್ರಲ್ಲಿ ತಪ್ಪೇನಿಲ್ಲ. ನಮ್ಮಲ್ಲಿ 121 ಜನ ಶಾಸಕರಿದ್ದಾರೆ, ಅದರಲ್ಲಿ ಹೆಚ್ಚಿನ ಜನಕ್ಕೆ ಮಂತ್ರಿಯಾಗುವ ಸಾಮರ್ಥ್ಯ ಇದೆ. ಜಿಲ್ಲಾವಾರು ಜಾಗೂ ಜಾತಿವಾರು ಅಳೆದು ತೂಗಿ ಸ್ಥಾನ ನೀಡ್ತಾರೆ. ಅದನ್ನ ನಡೆಸಿಕೊಂಡು ಹೋಗೋದು ನಮ್ಮ ಜವಾಬ್ದಾರಿ ಎಂದು ಹೇಳಿದರು.

  ಚುನಾವಣೆಯಲ್ಲಿ ಜನರೇ ಉತ್ತರ ಕೊಡಲಿದ್ದಾರೆ

  ಜನರಿಗೆ ಒಳ್ಳೆ ಆಡಳಿತ ನೀಡಬೇಕು. ಬಿಜೆಪಿ ಸರ್ಕಾರದ ಮೇಲೆ ಜನಸಾಮಾನ್ಯರಿಗೆ ಹೆಚ್ಚು ವಿಶ್ವಾಸ ಇದೆ. ಸರ್ಕಾರದ ವಿರುದ್ಧ ಹೆಚ್ಚು ಅಪಪ್ರಚಾರ ಮಾಡಲಾಗುತ್ತಿದೆ. ಜನರಿಗೆ ಎಲ್ಲಾ ವಿಚಾರ ಅರಿವಾಗುತ್ತಿದ್ದು, ಎಲ್ಲದಕ್ಕೂ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ಕೊಡಲಿದ್ದಾರೆ ಎಂದು ಮುರುಗೇಶ್‌ ನಿರಾಣಿ ತಿಳಿಸಿದರು.

  ಇದನ್ನೂ ಓದಿ: Bengaluru: ಲ್ಯಾಂಡಿಂಗ್ ವೇಳೆ ವಿಮಾನದ ಟೈರ್ ಸ್ಫೋಟ: ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

  ನಮ್ಮ ಭಾಷೆಗೆ ಧಕ್ಕೆಯಾದ್ರೆ ಸುಮ್ಮನಿರಲ್ಲ- ಸುಮಲತಾ

  ಅಜಯ್ ದೇವಗನ್, ಸುದೀಪ್ ನಡುವಿನ ಹಿಂದಿ ಭಾಷೆ ಕುರಿತ ಟ್ವೀಟ್​ ವಾರ್​ ವಿಚಾರಕ್ಕೆ ಸಂಬಂಧಿಸಿದ ಸುಮಲತಾ ಅವರು, ವಿವಾದಕ್ಕೆ ಅವರೇ ಅಂತ್ಯ ಹಾಡಿದ್ದಾರೆ. ಕನ್ನಡ ಭಾಷೆ ಬಗ್ಗೆ ನನ್ನ ನಿಲುವು ಏನು ಎಂದು ಸಂಸತ್ ಭಾಷಣದಲ್ಲೆ ಗೊತ್ತಾಗುತ್ತೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಬೇಕಿಲ್ಲ. ರಾಜ್ಯದಲ್ಲಿ ಎದ್ದಿರುವ ಗಲಭೆ, ಗೊಂದಲ ನಡುವೆ ಈ ಹೊಸ ವಿವಾದ ಬೇಡ, ಒಂದು ರಾಷ್ಟ್ರ ಭಾಷೆ ಅನ್ನೊ ಪ್ರಶ್ನೆಯೆ ಬರಲ್ಲ. ಉತ್ತರ ಭಾರತದಲ್ಲಿ ಹಿಂದಿ ಪ್ರಾಮುಖ್ಯತೆ ಇದೆ.
  Published by:Pavana HS
  First published: