ಬೆಂಗಳೂರು: ರಾಜರಾಜೇಶ್ವರಿನಗರ (Rajarajeshwari Nagar) ಕ್ಷೇತ್ರದಲ್ಲಿ ಹೊಡಿಬಡಿ ರಾಜಕೀಯ ಶುರುವಾಗಿದೆ. ಸಚಿವ ಮುನಿರತ್ನ (Munirathna) ಭಾಷಣ ವೇಳೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ (Congress) ಗಂಭೀರ ಆರೋಪ ಮಾಡಿದೆ. ಆರ್ಆರ್ ನಗರ (RR Nagar) ಕ್ಷೇತ್ರದ ಖಾತಾ ನಗರದಲ್ಲಿ ಭಾಷಣದ ವೇಳೆ ಸಚಿವ ಮುನಿರತ್ನ ಹೊಡಿಬಡಿ ಮಾತನಾಡಿದ್ದಾರೆ. ಇಲ್ಲಿಗೆ ಯಾರೇ ಬಂದರೂ ಹೊಡೆದು ಕಳುಹಿಸಿ, ಹೆಂಗೆ ಹೊಡಿಬೇಕು ಅಂದರೆ ಅವರು ತಿರುಗಿ ನೋಡಬಾರದು ಹಂಗೆ ಹೊಡೆದು ಕಳುಹಿಸಿ ಅಂತಾ ಪೊಲೀಸರ (Police) ಮುಂದೆಯೇ ಭಾಷಣ ಮಾಡಿದ್ದಾರೆ. ಈ ಬಗ್ಗೆ ಆರ್.ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ (Kusuma) ಪೊಲೀಸರಿಗೆ ದೂರು ನೀಡಿದ್ದು, ಚುನಾವಣಾ ಆಯೋಗಕ್ಕೂ ದೂರು ನೀಡಲು ಮುಂದಾಗಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸಚಿವ ಮುನಿರತ್ನ ತಮಿಳಿಗರನ್ನ, ಕನ್ನಡಿಗರ ಮೇಲೆ ಎತ್ತಿಕಟ್ಟುತ್ತಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ಅವರನ್ನ ಹೊಡೆದು ಕಳುಹಿಸ ಬೇಕು, ಸಾಯುವವರೆಗೂ ಹೊಡೆದು ಕಳುಹಿಸಬೇಕು ಎಂದು ಹೇಳಿದ್ದಾರೆ ಅಂತ ಕಾಂಗ್ರೆಸ್ ಮಾಡಿದ್ದ ಆರೋಪದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಮುನಿರತ್ನ ವಿರುದ್ಧ ಸಂಸದ ಡಿ.ಕೆ ಸುರೇಶ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: BY Vijayendra: 'ನೀವು ಬನ್ನಿ, ಇಲ್ಲವಾದರೆ ಊಟಕ್ಕೆ ವಿಷ ಹಾಕಿ ಕೊಡಿ'! ವಿಜಯೇಂದ್ರಗೆ ವರುಣಾ ಬಿಜೆಪಿ ಕಾರ್ಯಕರ್ತರ ಒತ್ತಡ
ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಮುನಿರತ್ನ ಅವರು, ಸಂಸದ ಡಿಕೆ ಸುರೇಶ್ ನನಗೆ ಸಂಬಂಧಿಸಿದಂತೆ ಕೆಲವು ಪದ ಬಳಕೆ ಮಾಡಿದ್ದಾರೆ. ಅವರು ಮೇಲೆ ನನಗೆ ಬಹಳ ಗೌರವವಿದೆ. 7 ವರ್ಷ ಅವರ ಜೊತೆ ನಾನು ಕೆಲಸ ಮಾಡಿದ್ದೇನೆ. ಈ ವಿಡಿಯೋ ಏನು ನೋಡಿದ್ದೀರಾ ಇದಕ್ಕಿಂತ ಹೆಚ್ಚು ಮಾತನಾಡಿಸಿದ್ದಾರೆ. ನನ್ನ ಕೈ ಹಿಡಿದುಕೊಂಡು ಐದು ಭಾಷೆಗಳಲ್ಲಿ ಇದಕ್ಕಿಂತ ಜಾಸ್ತಿ ಮಾತನಾಡಿಸಿದ್ದಾರೆ.
ಲೋಕಸಭೆಯಲ್ಲಿ ನನಗೆ ವೋಟ್ ಸಿಗುತ್ತೆ ಅಂತ ನನ್ನ ಬಳಿ ಮಾತನಾಡಿಸಿದ್ದು ಇದೇ ಸುರೇಶ್ ಅವರು. ಈಗ ರಾಜಕೀಯಕ್ಕಾಗಿ ಸಂಸದರು ಇಷ್ಟು ಸಣ್ಣ ಮಟ್ಟಕ್ಕೆ ಇಳಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ, ಮುನಿರತ್ನ ಮೇಲೆ ರಾಜಕಾರಣ ಮಾಡಿ. ಬೆಂಗಳೂರು ಶಾಂತವಾಗಿದೆ. ಬೇರೆ ಭಾಷೆಯಲ್ಲಿ ಮಾತನಾಡಿದ್ದು ತಪ್ಪು ಎಂದರೆ ನನ್ನ ಬಳಿ ಇಷ್ಟು ವರ್ಷ ಮಾತನಾಡಿಸಿದ್ದು ಯಾರು? ಸಣ್ಣ ರಾಜಕೀಯಕ್ಕಾಗಿ ಕೆಳ ಮಟ್ಟದ ರಾಜಕಾರಣ ಮಾಡಬಾರದು ಎಂದರು.
ಡಿಕೆ ಶಿವಕುಮಾರ್ ಗಡ್ಡದ ಹಿಂದಿನ ಸಿಕ್ರೇಟ್ ಬಿಚ್ಚಿಟ್ಟ ಸಚಿವ ಮುನಿರತ್ನ
ಪಾಪ ಸುರೇಶ್ ಅವರ ಅಣ್ಣ ಗಡ್ಡ ತಗಿತ ಇಲ್ಲ. ಮುಖ್ಯಮಂತ್ರಿ ಆಗಬೇಕು ಅಂತ ಗಡ್ಡ ತಗೆಯದೇ ಸುತ್ತುತ್ತಿದ್ದಾರೆ. ಮುಖ್ಯಮಂತ್ರಿ ಮಾಡಿ ಅಂತ ಅವರ ಅಣ್ಣ ಇಡೀ ರಾಜ್ಯದಾದ್ಯಂತ ತಿರುಗುತ್ತಿದ್ದಾರೆ. ಆದರೆ ಇವರು ಮಾತ್ರ ಬೆಳಗ್ಗೆಯಿಂದ ರಾತ್ರಿಯವರೆಗೂ ಆರ್ ಆರ್ ನಗರದಲ್ಲಿ ಇರ್ತಾರೆ. ಅವರ ಅಣ್ಣನ ಜೊತೆ ಹೋಗದೆ ಆರ್ಆರ್ ನಗರದಲ್ಲಿ ಇರ್ತಾರೆ. ತಮ್ಮನಿಗೆ ಆರ್ಆರ್ ನಗರದ್ದೇ ಚಿಂತೆಯಾಗಿದೆ. ಆರ್ಆರ್ ನಗರಕ್ಕೆ ತಮ್ಮದ್ದು ಏನು ಕೊಡಗೆ? ನಿಮ್ಮ ಅಣ್ಣನ ಶೇವಿಂಗ್ ಮಾಡಲು ಕನಸು ನನಸು ಮಾಡಿ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
ಯಾಕೆ ಇದೊಂದೇ ಕ್ಷೇತ್ರಕ್ಕೆ ಬಂದಿದ್ದೀರಾ?
ನಿಮ್ಮ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರವಿದೆ. ಅನೇಕಲ್ ಗೆಲ್ಲಲ್ಲ, ಕುಣಿಗಲ್ ಗೆಲ್ಲಲ್ಲ, ರಾಮನಗರ ಗೆಲ್ಲಲ್ಲ, ಆರ್ ಆರ್ ನಗರ ಗೆಲ್ಲಲ್ಲ, ಬೆಂಗಳೂರು ದಕ್ಷಿಣ ಕಾಂಗ್ರೆಸ್ ಭಾವುಟ ಹಿಡಿಯುವವರು ಇಲ್ಲ. ಮಾಗಡಿಯಲ್ಲೂ ಇಲ್ಲ. ನಿಮಗೆ ಎಲ್ಲಿದೆ ವೋಟು? 8 ಕ್ಷೇತ್ರ ಬಿಟ್ಟು ಯಾಕೆ ಇದೊಂದೇ ಕ್ಷೇತ್ರಕ್ಕೆ ಬಂದಿದ್ದೀರಾ? ಸುಮ್ಮನೆ ಇದೊಂದೆ ಕ್ಷೇತ್ರಕ್ಕೆ ಬಂದು. ಸುಳ್ಳಿನ ಆರೋಪ ಮಾಡುತ್ತಿದ್ದಾರೆ.
ಕೋವಿಡ್ ಸಮಯದಲ್ಲಿ ಎಲ್ಲಿ ಹೋಗಿದ್ರಿ, ಒಂದೇ ಒಂದು ಅವರು ಸಹಾಯ ಮಾಡಿದ್ದು ತೋರಿಸಿ. ನಾನು ಮತನಾಡಿದ ಸ್ಥಳದಲ್ಲಿ ಕ್ರಿಶ್ಚಿಯನ್ ಕನ್ವರ್ಟ್ ನಡೆಯುತ್ತಿದೆ. ಆದ್ದರಿಂದ ಕೋವಿಡ್ ಸಮಯದಲ್ಲಿ ಎಲ್ಲಿ ಹೋಗಿದ್ದರೂ ಈಗ ಬರ್ತಿದ್ದಾರೆ ಎಂದಾಗ ನಾನು ಮಾತನಾಡಿದ್ದೇನೆ.
ಒಕ್ಕಲಿಗ ಹೆಣ್ಣು ಮಗಳ ಬಗ್ಗೆ ನಾನು ಮಾತನಾಡಿಲ್ಲ. ಒಕ್ಕಲಿಗ ಹೆಣ್ಣು ಮಗಳು ಅಂತ ನಾನು ಮಾತನಾಡಿದರೆ ನೇಣು ಗಂಬಕ್ಕೆ ಏರಲು ನಾನು ಸಿದ್ಧ. ಕೋವಿಡ್ ಸಮಯದಲ್ಲಿ ಖಾಲಿ ಪ್ಲೇಟ್ ಅನ್ನ ಹಾಕದವರನ್ನು ಸೇರಿಸಬೇಡಿ, ಕನ್ನಡ ಓದಿ, ಕನ್ನಡ ಭಾಷೆ ಗೌರವಿಸಿ, ನೆಲ, ಜಲ ಭಾಷೆಗೆ ದ್ರೋಹ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಇವರ ರೀತಿಯಲ್ಲಿ ನೀಚತನದ ರಾಜಕಾರಣ ಮಾಡಲ್ಲ.
ನಾನು ಒಕ್ಕಲಿಗರು ಇಲ್ಲವೇ ಹೆಣ್ಣು ಮಗಳು ಅಂತ ಬಳಸಿದರೆ ಈಗಲೇ ರಾಜೀನಾಮೆ ಕೊಡುತ್ತೇನೆ. ಇಲ್ಲ ಎಂದರೆ ಸುರೇಶ್ ರಾಜೀನಾಮೆ ಕೊಡ್ತಾರಾ ಅಂತ ಪ್ರಶ್ನಿಸಿ ಸವಾಲು ಹಾಕಿದ್ದಾರೆ. ಅಲ್ಲದೆ, ಒಕ್ಕಲಿಗರ ಹೆಣ್ಣು ಮಗಳು ಅಂತ ಇದ್ದರೆ ನಾನು ನೇಣು ಹಾಕಿಕೊಳ್ಳುತ್ತೇನೆ. ಅವರು ಹೇಳಿದ ಕಡೆ ಡೆತ್ ನೋಟ್ ಬರೆದುಕೊಡುತ್ತೇನೆ. ಇಲ್ಲ ಎಂದರೆ ಡಿಕೆ ಸುರೇಶ್ ಸಿದ್ದವಾಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ