• Home
  • »
  • News
  • »
  • state
  • »
  • Commission Allegation: 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ 'ಮುನಿ'ಸು, ಇದು ಇಷ್ಟಕ್ಕೆ ನಿಲ್ಲಲ್ಲ ಅಂತ ಕೆಂಪಣ್ಣಗೆ ಸಚಿವರ ವಾರ್ನಿಂಗ್!

Commission Allegation: 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ 'ಮುನಿ'ಸು, ಇದು ಇಷ್ಟಕ್ಕೆ ನಿಲ್ಲಲ್ಲ ಅಂತ ಕೆಂಪಣ್ಣಗೆ ಸಚಿವರ ವಾರ್ನಿಂಗ್!

ಸಚಿವ ಮುನಿರತ್ನ

ಸಚಿವ ಮುನಿರತ್ನ

ಆರೋಪ ಮಾಡಿದ ಮೇಲೆ ದಾಖಲೆ ಒದಗಿಸಬೇಕು. ಆದರೆ ಒದಗಿಸಿಲ್ಲ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ, ಇನ್ನೂ ಮುಂದೆ ಇದೆ. ಖಂಡಿತವಾಗಲೂ ಹೇಳುತ್ತಿರುವೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸಚಿವ ಮುನಿರತ್ನ ಎಚ್ಚರಿಕೆ ಕೊಟ್ಟಿದ್ದಾರೆ.

  • News18 Kannada
  • 3-MIN READ
  • Last Updated :
  • Kolar, India
  • Share this:

ಕೋಲಾರ: ರಾಜ್ಯ ತೋಟಗಾರಿಕಾ ಮತ್ತು ಯೋಜನಾ ಖಾತೆ ಸಚಿವ ಮುನಿರತ್ನ (Minister Munirathna) ಅವರ ವಿರುದ್ಧ ಶೇ.40 ರಷ್ಟು ಕಮಿಷನ್ (40 Percent Commission Allegation)​ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿಂದರೆ ನಾಲ್ವರನ್ನು ಬಂಧನ ಮಾಡಿ, ಸದ್ಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಮುನಿರತ್ನ ಅವರು, ಆರೋಪ ಮಾಡಿದ ಮೇಲೆ ದಾಖಲೆ ಒದಗಿಸಬೇಕು. ಆದರೆ ಒದಗಿಸಿಲ್ಲ. ಹೀಗಾಗಿ ಕೋರ್ಟ್ (Court) ನಿಂದ  ಸಮನ್ಸ್ ಬಂತು, ಸಮನ್ಸ್ ಬಂದು ದಾಖಲೆ ಕೊಡದಿದ್ದರಿಂದ ವಾರೆಂಟ್ ಬಂತು. ಇದು ಇಷ್ಟಕ್ಕೆ ನಿಲ್ಲುವುದಿಲ್ಲ, ಇನ್ನೂ ಮುಂದೆ ಇದೆ. ಖಂಡಿತವಾಗಲೂ ಹೇಳುತ್ತಿರುವೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.


ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ ಅವರು, ಯಾರ ಮೇಲೆ ಆದರೂ ಆರೋಪ ಮಾಡಿದ ಮೇಲೆ ದಾಖಲೆ ಒದಗಿಸಬೇಕು. ಆರೋಪ ಮಾಡಿ ಒಂದು ವರ್ಷ ಆಗಿದೆ, ಅದಕ್ಕೆ ದಾಖಲೆ ನೀಡಬೇಕು. ಆದರೆ ಇದುವರೆಗೂ ಯಾವುದೇ ದಾಖಲೆ ಒದಗಿಸಿಲ್ಲ. ಹೀಗಾಗಿ ಕೋರ್ಟ್ ನಿಂದ ಸಮನ್ಸ್ ಬಂತು, ಸಮನ್ಸ್ ಬಂದು ದಾಖಲೆ ಕೊಡದಿದ್ದರಿಂದ ವಾರೆಂಟ್ ಬಂತು. ಪ್ರಕರಣ ಶೀಘ್ರ ಮುಗಿಸಲು ಹೈಕೋರ್ಟ್ ಮೆಟ್ಟಿಲೇರುವೆ, ಮುಂದೆ ಇನ್ನು ಕಷ್ಟವಾಗುತ್ತೆ. ದಾಖಲೆ ಕೊಡಲಿಲ್ಲವೆಂದರೆ 2 ವರ್ಷ ಶಿಕ್ಷೆ ಆಗುತ್ತದೆ. ಅದನ್ನ ಅರ್ಥ ಮಾಡಿಕೊಳ್ಳಬೇಕು, ಪ್ರಕರಣ ಅಷ್ಟು ಸುಲಭ ಅಲ್ಲ.


ಇದನ್ನೂ ಓದಿ: Commission Allegation: 40 ಪರ್ಸೆಂಟ್ ಕಮಿಷನ್ ಆರೋಪ; ಕೆಂಪಣ್ಣ ಸೇರಿದಂತೆ ನಾಲ್ವರಿಗೆ ಜಾಮೀನು


ಸಿದ್ದರಾಮಯ್ಯ ಅವರ ಮಾತು ಕೇಳಿರುತ್ತಾರೆ


ಯಾರ ವಿರುದ್ಧ ಆದರೂ ಆರೋಪ ಮಾಡದ ಮೇಲೆ ಜೀರ್ಣ ಮಾಡಿಕೊಳ್ಳುವ ಶಕ್ತಿ ಇರಬೇಕು. ರಾಜರಾಜೇಶ್ವರಿ ಕ್ಷೇತ್ರದಲ್ಲಿ 10 ಸಾವಿರ ಕೋಟಿ ರೂಪಾಯಿ ಖರ್ಚು ಹಾಗೂ ಶೇ. 40 ಕಮಿಷನ್​ ಎಲ್ಲಿ ಆಗಿದೆ ತೋರಿಸಬೇಕು. ಅದುವರೆಗೂ ನಾನು ಬಿಡುವುದಿಲ್ಲ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ, ಇನ್ನೂ ಮುಂದೆ ಇದೆ. ಖಂಡಿತವಾಗಲೂ ಹೇಳುತ್ತಿರುವೆ ಯಾರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತು ಕೇಳಿರುತ್ತಾರೆ. ಸದನ ನಡೆಯುತ್ತಿದೆ ಸಿದ್ದರಾಮಯ್ಯ ಅವರಿಗೆ ದಾಖಲೆಗಳ ಕೊಟ್ಟು ಸದನದಲ್ಲೇ ಧ್ವನಿ ಎತ್ತಲಿ. ಕಾನೂನು ಚೌಕಟ್ಟಿನಲ್ಲಿ ಏನೂ ಕ್ರಮ ಕೈಗೊಳ್ಳಬೇಕೋ ಅದೆಲ್ಲ ಮಾಡುವೆ ಎಂದು ತಿಳಿಸಿದರು.


ಇದೇ ವೇಳೆ ಜನಾರ್ಧನ ರೆಡ್ಡಿಯಿಂದ ನೂತನ ಪಕ್ಷ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುನಿರತ್ನ ಅವರು, ಭಾರತ ಪ್ರಜಾಪ್ರಭುತ್ವ ದೇಶ, ಯಾರು ಬೇಕಾದರು ಪಕ್ಷ ಕಟ್ಟಬಹುದು. ಬಿಜೆಪಿ ಸೇರಿ ಯಾವ ಪಕ್ಷಕ್ಕೂ ಡ್ಯಾಮೇಜ್ ಆಗಲ್ಲ. ಬಿಜೆಪಿ ಬಹಳ ಬಲಿಷ್ಠವಾಗಿದೆ, ಇದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.


ಇದನ್ನೂ ಓದಿ: Munirathna: ಹೋಗಿ ನಿಮ್ಮಣ್ಣನ ಬಳಿ ಕೇಳಿ; ಡಿಕೆ ಸುರೇಶ್​ ವಿರುದ್ಧ ಮುನಿರತ್ನ ಗುಡುಗು


ಕೋಲಾರದಲ್ಲಿ ಬಾಡೂಟ ಪಾಲಿಟಿಕ್ಸ್


ವಿಧಾನಸಭೆ ಚುನಾವಣೆ ಹಿನ್ನಲೆ ಕೋಲಾರ ಜಿಲ್ಲೆಯಲ್ಲಿ ಬಾಡೂಟ ಪಾಲಿಟಿಕ್ಸ್ ಶುರುವಾಗಿದೆ. ಮಾಲೂರು ಬಿಜೆಪಿ ಸಂಭವನೀಯ ಅಭ್ಯರ್ಥಿ, ಮಾಜಿ ಶಾಸಕ ಮಂಜುನಾಥ್ ಗೌಡ ನೇತೃತ್ವದಲ್ಲಿ ಚಿಕ್ಕತಿರುಪತಿ ಗ್ರಾಮದ ಬಳಿ ಬಾಡೂಟ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯ ಅತಿಥಿಯಾಗಿ ಉಸ್ತುವಾರಿ ಸಚಿವ ಮುನಿರತ್ನ ಭಾಗಿಯಾಗಿದ್ದಾರೆ. ಬಾಡೂಟಕ್ಕೆ 5 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದಾರೆ. ಬಾಡೂಟಕ್ಕಾಗಿ ನಾಲ್ಕು ಸಾವಿರ ಕೆಜಿ ಚಿಕನ್ ಹಾಗೂ ಮಟನ್ ಬಳಸಲಾಗಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು