ಸಿದ್ದು ಸಂಧಾನ ವಿಫಲ; ಆರ್​. ಅಶೋಕ್ ಆಪರೇಷನ್ ಕಮಲಕ್ಕೆ ಬಿದ್ದ ಎಂಟಿಬಿ ನಾಗರಾಜ್; ಮುಂಬೈ ಅತೃಪ್ತರ ಬಳಗಕ್ಕೆ ಇಂದು ಸೇರ್ಪಡೆ!

ವಿಶೇಷವೆಂದರೆ ಎಂಟಿಬಿ ನಾಗರಾಜ್ ಬಿಜೆಪಿ ಮುಖಂಡ ಆರ್. ಅಶೋಕ್ ಜೊತೆ ಮುಂಬೈ ವಿಮಾನ ಹತ್ತುವ ಚಿತ್ರವೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ. ತಾವು ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಹೇಳುತ್ತಿರುವ ಬಿಜೆಪಿ ಮುಖಂಡರೇ ಮುಂದೆ ನಿಂತು ಅಸಮಾಧಾನಿತರನ್ನು ಮುಂಬೈ ವಿಮಾನ ಹತ್ತಿಸುತ್ತಿರುವುದು ಇದೀಗ ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

MAshok Kumar | news18
Updated:July 14, 2019, 11:32 AM IST
ಸಿದ್ದು ಸಂಧಾನ ವಿಫಲ; ಆರ್​. ಅಶೋಕ್ ಆಪರೇಷನ್ ಕಮಲಕ್ಕೆ ಬಿದ್ದ ಎಂಟಿಬಿ ನಾಗರಾಜ್; ಮುಂಬೈ ಅತೃಪ್ತರ ಬಳಗಕ್ಕೆ ಇಂದು ಸೇರ್ಪಡೆ!
ಮುಂಬೈಗೆ ಆರ್​. ಅಶೋಕ್ ಜೊತೆ ವಿಮಾನದಲ್ಲಿ ತೆರಳುತ್ತಿರುವ ಸಚಿವ ಎಂಟಿಬಿ ನಾಗರಾಜ್.
  • News18
  • Last Updated: July 14, 2019, 11:32 AM IST
  • Share this:
ಬೆಂಗಳೂರು (ಜುಲೈ.14); ಮೈತ್ರಿ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಡೀ ದಿನ ನಡೆಸಿದ ಸಂಧಾನ ಪ್ರಯತ್ನ ಕೊನೆಗೂ ವಿಫಲಾಗಿದೆ. ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಸಚಿವ ಎಂಟಿಬಿ ನಾಗರಾಜ್ ಇಂದು ಬೆಳಗ್ಗೆ ಬಿಜೆಪಿ ನಾಯಕ ಆರ್. ಅಶೋಕ್ ಜೊತೆಗೆ ಖಾಸಗಿ ವಿಮಾನದಲ್ಲಿ ಮುಂಬೈಗೆ ತೆರಳಿ ಅತೃಪ್ತರ ಪಡೆಗೆ ಸೇರ್ಪಡೆಗೊಳ್ಳುವ ಮೂಲಕ ಸಿಎಂ ಕುಮಾರಸ್ವಾಮಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

ಶುಕ್ರವಾರ ಕುಮಾರಸ್ವಾಮಿ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸಲು ಸ್ಪೀಕರ್ ಅವರ ಬಳಿ ಸಮಯ ನಿಗದಿಪಡಿಸುವಂತೆ ಕೇಳಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಬೆಳವಣಿಗೆಯ ನಂತರ ಬಹುತೇಕ ಮೈತ್ರಿ ಸರ್ಕಾರದ ಎಲ್ಲಾ ಪ್ರಮುಖ ನಾಯಕರು ಭಿನ್ನಮತೀಯರ ಮನವೊಲಿಸಲು ಮುಂದಾಗಿದ್ದರು.

ಇದನ್ನೂ ಓದಿ : ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳೋಕೆ ನಂಗೇನ್ ತಲೆ ಕೆಟ್ಟಿದಿಯಾ; ಬಿ.ಎಸ್. ಯಡಿಯೂರಪ್ಪ

ಡಿ.ಕೆ. ಶಿವಕುಮಾರ್, ಡಿಸಿಎಂ ಡಾ.ಜಿ. ಪರಮೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಡೀ ದಿನ ಸಚಿವ ಎಂಟಿಬಿ ನಾಗರಾಜ್ ಹಾಗೂ ಸುಧಾಕರ್ ಮನವೊಲಿಕೆಗೆ ಮುಂದಾಗಿದ್ದರು. ನಿನ್ನೆ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಎಂಟಿಬಿ ನಾಗರಾಜ್ ತಾನು ರಾಜೀನಾಮೆ ವಾಪಸ್ ಪಡೆದು ಮತ್ತೆ ಕಾಂಗ್ರೆಸ್​ಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದರು. ಇದು ಮುಂಬೈನ ಅತೃಪ್ತರಿಗೆ ಆತಂಕ ಮೂಡಿಸಿದ್ದು ಸುಳ್ಳಲ್ಲ. ಆದರೆ, ರಾತ್ರೋರಾತ್ರಿ ನಡೆದಿರುವ ಕಸರತ್ತಿನಿಂದಾಗಿ ಇದೀಗ ಕಾಂಗ್ರೆಸ್ ಬಳಗ ಸಂಪೂರ್ಣವಾಗಿ ಕಂಗಾಲಾಗಿದೆ.

ಆರ್​. ಅಶೋಕ್ ನೇತೃತ್ವದಲ್ಲಿ ಮುಂಬೈಗೆ ಹಾರಿದ ಸುಧಾಕರ್, ಎಂಟಿಬಿ:

ಎಂಟಿಬಿ ನಾಗರಾಜ್ ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ತಾನು ಕಾಂಗ್ರೆಸ್ಗೆ ಬೆಂಬಲಿಸುವುದಾಗಿ ತಿಳಿಸಿದ್ದರು ಸಿಎಂ ಕುಮಾರಸ್ವಾಮಿಗೆ ಎಂಟಿಬಿ ಮೇಲೆ ಅನುಮಾನ ಇದ್ಧೇ ಇತ್ತು. ಇದೇ ಕಾರಣಕ್ಕೆ ಅವರ ಚಲನವಲನದ ಮೇಲೆ ಕಣ್ಣಿಡಲು ಇಂಟಲಿಜೆನ್ಸ್ ಇಲಾಖೆಗೆ ಸೂಚಿಸಿದ್ದರು. ಆದರೆ, ಇದೀಗ ಎಲ್ಲರ ಕಣ್ಣಿಗೂ ಮಣ್ಣೆರಚಿರುವ ಎಂಟಿಬಿ ಖಾಸಗಿ ವಿಮಾನದಲ್ಲಿ ಇಂದು ಬೆಳಗ್ಗೆ ಮುಂಬೈಗೆ ಹಾರಿದ್ದಾರೆ.

ಇದನ್ನೂ ಓದಿ : ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ; ಏನಿದು ಮೈತ್ರಿ ನಾಯಕರ ಹೊಸ ತಂತ್ರ?ಡಾ. ಸುಧಾಕರ್ ದೆಹಲಿಗೆ ತೆರಳುವುದಾಗಿ ತಿಳಿಸಿ ನಿನ್ನೆ ರಾತ್ರಿಯೇ ಮುಂಬೈಗೆ ಹಾರಿದ್ದಾರೆ. ಇದೀಗ ಕಾಂಗ್ರೆಸ್​ಗೆ ಕೊನೆಗಳಿಗೆಯಲ್ಲಿ ಕೈಕೊಟ್ಟಿರುವ ಎಂಟಿಬಿ ಸಹ ಮುಂಬೈಗೆ ತೆರಳಿದ್ದಾರೆ. ಈ ಬೆಳವಣಿಗೆ ಸಾಮಾನ್ಯವಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ನುಂಗಲಾರದ ತುತ್ತಾಗಿದೆ.

ವಿಶೇಷವೆಂದರೆ ಎಂಟಿಬಿ ನಾಗರಾಜ್ ಬಿಜೆಪಿ ಮುಖಂಡ ಆರ್. ಅಶೋಕ್ ಜೊತೆ ಮುಂಬೈ ವಿಮಾನ ಹತ್ತುವ ಚಿತ್ರವೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ. ತಾವು ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಹೇಳುತ್ತಿರುವ ಬಿಜೆಪಿ ಮುಖಂಡರೇ ಮುಂದೆ ನಿಂತು ಅಸಮಾಧಾನಿತರನ್ನು ಮುಂಬೈ ವಿಮಾನ ಹತ್ತಿಸುತ್ತಿರುವುದು ಇದೀಗ ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

First published:July 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ