ಸಚಿವ ಸ್ಥಾನ ತ್ಯಾಗದ ಬಗ್ಗೆ ತೀರ್ಮಾನಿಸಿಲ್ಲ: ಉಲ್ಟಾ ಹೊಡೆದ ಸಚಿವ ಮಾಧುಸ್ವಾಮಿ

ನಿನ್ನೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ್ದ ಅವರು, ರಾಜ್ಯಕ್ಕೆ ಒಳ್ಳೆಯ ಸರ್ಕಾರ ಇರಲಿ ಎನ್ನುವ ಅಪೇಕ್ಷೆಯಿದೆ. ಈ ಕಾರಣಕ್ಕೆ ಈ ತ್ಯಾಗಕ್ಕೆ ಸಿದ್ಧ ಎಂದಿದ್ದರು.

news18-kannada
Updated:January 27, 2020, 2:22 PM IST
ಸಚಿವ ಸ್ಥಾನ ತ್ಯಾಗದ ಬಗ್ಗೆ ತೀರ್ಮಾನಿಸಿಲ್ಲ: ಉಲ್ಟಾ ಹೊಡೆದ ಸಚಿವ ಮಾಧುಸ್ವಾಮಿ
ಮಾಧುಸ್ವಾಮಿ
  • Share this:
ತುಮಕೂರು (ಜ. 27): ಸರ್ಕಾರ ಉಳಿಯಬೇಕಾದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ದ. ಪಕ್ಷ ಕೇಳಿದರೆ ಖುಷಿಯಿಂದಲೇ ಪದತ್ಯಾಗ ಮಾಡುವುದಾಗಿ ಹೇಳಿದ್ದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಇಂದು ತಮ್ಮ ಮಾತಿಗೆ ಉಲ್ಟಾ ಹೊಡೆದಿದ್ದಾರೆ. 

ಈ ಕುರಿತು ಇಂದು ಮಾತನಾಡಿರುವ ಅವರು, ಸಚಿವ ಸ್ಥಾನ ತ್ಯಾಗ ಮಾಡುತ್ತೇನೆ  ಎಂದಿದ್ದೆ. ಆದರೆ ಸ್ಥಾನ ತ್ಯಾಗ ಬಗ್ಗೆ ತೀರ್ಮಾನಿಸಿಲ್ಲ. ಸಂಪುಟ ಪುನಾರಚನೆ ಬಗ್ಗೆ ಸಿಎಂ ಚರ್ಚಿಸಿಲ್ಲ. ಈ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನ ಬಿಟ್ಟುಕೊಡುವ ಬಗ್ಗೆ ಚಿಂತಿಸಿಲ್ಲ ಎಂದರು.

ನಿನ್ನೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ್ದ ಅವರು, ರಾಜ್ಯಕ್ಕೆ ಒಳ್ಳೆಯ ಸರ್ಕಾರ ಇರಲಿ ಎನ್ನುವ ಅಪೇಕ್ಷೆಯಿದೆ. ಈ ಕಾರಣಕ್ಕೆ ಈ ತ್ಯಾಗಕ್ಕೆ ಸಿದ್ಧ ಎಂದಿದ್ದರು.

ಪಕ್ಷದಲ್ಲಿ ಪದತ್ಯಾಗದ ಕುರಿತು ಸಾಕಷ್ಟು ಗೊಂದಲಗಳು ಮೂಡುತ್ತಿದ್ದು, ಕೆಲ ನಾಯಕರು ಸರ್ಕಾರ ರಚನೆ ಮಾಡಲು ಸಹಾಯ ಮಾಡಿದ ನೂತನ ಶಾಸಕರಿಗೆ ಮಣೆ ಹಾಕಬೇಕು. ಈ ಹಿನ್ನೆಲೆಯಲ್ಲಿ ಈಗಾಗಲೇ ಹುದ್ದೆ ಲಾಭ ಪಡೆದಿರುವವರು ತಮ್ಮ ಮಂತ್ರಿಗಿರಿಯನ್ನು ತೊರೆಯಬೇಕಾಗಿರುವುದು ಅನಿವಾರ್ಯ ಎಂಬ ಮಾತು ಕೇಳಿ ಬಂದಿತ್ತು. ಅಲ್ಲದೇ ಈ ಸೂತ್ರ ಅಳವಡಿಕೆಯಿಂದ ಮಾತ್ರ ಸರ್ಕಾರ ಭದ್ರವಾಗಿರಲಿದೆ. ಇಲ್ಲವಾದಲ್ಲಿ ಮತ್ತೊಮ್ಮೆ ಭಿನ್ನಾಭಿಪ್ರಾಯ ಸ್ಪೋಟಗೊಳ್ಳಲಿದೆ ಎಂಬ ಮಾತನ್ನು ಆಡಿದ್ದರು.

ಇದೇ ಮಾತನ್ನು ನಿನ್ನೆ ಬಸವರಾಜ್​ ಪಾಟೀಲ್​ ಯತ್ನಾಳ್​ ಕೂಡ ಆಡಿದ್ದರು. ನೂತನ ಶಾಸಕರಿಗೆ ಹುದ್ದೆ ನೀಡಬೇಕು ಎಂದರೇ ತ್ಯಾಗ ಅನಿವಾರ್ಯ. ಕೆಲವರು ಪಕ್ಷದಲ್ಲಿ ಸಾಕಷ್ಟು ಹುದ್ದೆ ಅನುಭವಿಸಿದ್ದಾರೆ. ಕೇವಲ ಭಾಷಣ ಮಾಡುವ ಬದಲು ಇಂತಹ ತ್ಯಾಗಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದರು.

ಇದನ್ನು ಓದಿ: ಸರ್ಕಾರ ಉಳಿಸಲು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ; ಮಾಧುಸ್ವಾಮಿ

ಆದರೆ, ಇದಕ್ಕೆ ಪಕ್ಷದಲ್ಲಿ ಕೆಲವರು ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಪಕ್ಷಕ್ಕಾಗಿ ಇಷ್ಟು ವರ್ಷ ದುಡಿದಿದ್ದು, ಹುದ್ದೆ ತ್ಯಾಗ ಮಾಡುವುದಿಲ್ಲ ಎಂದಿದ್ದರು. ಇದು ಪಕ್ಷದ ಹಿರಿ-ಕಿರಿ ನಾಯಕರ ಸಂಘರ್ಷಕ್ಕೆ ಕಾರಣವಾಗಿತ್ತು.ಇದನ್ನು ಓದಿ: ಹೊಸಬರಿಗೆ ಸಚಿವ ಸ್ಥಾನ ನೀಡಲು, ಹಿರಿಯರು ತ್ಯಾಗಕ್ಕೆ ಮುಂದಾಗಬೇಕು; ಬಸನಗೌಡ ಪಾಟೀಲ ಯತ್ನಾಳ್

ಇದರ ಬೆನ್ನಲ್ಲೇ ಇಂದು ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಪಕ್ಷ ಬಯಸಿದರೆ ರಾಜೀನಾಮೆಗೆ ಸಿದ್ದ ಎಂದಿದ್ದಾರೆ. ನಾಯಕರುಗಳ ಈ ಮಾತಿಗೆಲ್ಲಾ ತೆರೆ ಎಳೆದ ಸಚಿವ ಆರ್. ಅಶೋಕ್,​ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪವಿದೆಯೇ ಹೊರತು. ಪುನಾರಚನೆಗೆ ಅಲ್ಲ. ಮಾಧುಸ್ವಾಮಿಯದ್ದು ವೈಯಕ್ತಿಕ ಹೇಳಿಕೆ. ಸಚಿವರು ಸ್ಥಾನ ತ್ಯಾಗ ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ಅಂಥ ಯಾವುದೇ ಚರ್ಚೆಗಳೂ ಸರ್ಕಾದ ಮಟ್ಟದಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ: ಗೆದ್ದವರಿಗೆ ಮಂತ್ರಿಸ್ಥಾನ ಸಾಧ್ಯತೆ; ಸಂಪುಟದಲ್ಲಿರುವವರನ್ನು ಕೈಬಿಡುವ ಪ್ರಸ್ತಾವ ಇಲ್ಲ: ಆರ್ ಅಶೋಕ್

ಇದರ ಬೆನ್ನಲ್ಲೇ ಮಾಧುಸ್ವಾಮಿ ತಮ್ಮ ಹೇಳಿಕೆಗೆ ಉಲ್ಟಾ ಹೊಡದಿದ್ದಾರೆ. ಒಂದು ವೇಳೆ ಸರ್ಕಾರಕ್ಕೆ ಸಮಸ್ಯೆಯಾದರೆ ಏನು ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಹಾರಿಕೆ ಉತ್ತರ ನೀಡಿದ್ದಾರೆ.
First published:January 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ