• Home
  • »
  • News
  • »
  • state
  • »
  • ಡಿಜೆ ಹಳ್ಳಿ ಗಲಭೆಯಲ್ಲಿ ಎಸ್‌ಡಿಪಿಐ ವಿರುದ್ಧ ಸೂಕ್ತ ಸಾಕ್ಷ್ಯ ದೊರೆತರೆ ನಿಷೇಧ ಖಚಿತ; ಸಚಿವ ಮಾಧುಸ್ವಾಮಿ ಹೇಳಿಕೆ

ಡಿಜೆ ಹಳ್ಳಿ ಗಲಭೆಯಲ್ಲಿ ಎಸ್‌ಡಿಪಿಐ ವಿರುದ್ಧ ಸೂಕ್ತ ಸಾಕ್ಷ್ಯ ದೊರೆತರೆ ನಿಷೇಧ ಖಚಿತ; ಸಚಿವ ಮಾಧುಸ್ವಾಮಿ ಹೇಳಿಕೆ

ಜೆಸಿ ಮಾಧುಸ್ವಾಮಿ.

ಜೆಸಿ ಮಾಧುಸ್ವಾಮಿ.

SDPI: ಡಿಜೆ ಹಳ್ಳಿ ಗಲಭೆಗೆ ಹಿಂದೆ ಎಸ್‌ಡಿಪಿಐ ಕೈವಾಡ ಇರುವ ಕುರಿತು ನಮ್ಮಲ್ಲಿ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಆದರೆ, ಈ ಸಂಘಟನೆ ಅಪರಾಧ ಚಟುವಟಿಕೆಗಳಲ್ಲಿ ಶಾಮೀಲಾಗಿರುವುದು ಸಾಬೀತಾರೆ ನಿಷೇಧ ಮಾಡಲು ರಾಜ್ಯ ಸರ್ಕಾರ ಹಿಂಜರಿಯುವ ಮಾತೇ ಇಲ್ಲ. ಹೀಗಾಗಿ ಸೂಕ್ತ ಸಾಕ್ಷ್ಯಗಳ ಸಲ್ಲಿಕೆಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಆಗಸ್ಟ್‌ 20); ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಹಿಂದೆ ಎಸ್‌ಡಿಪಿಐ ಸಂಘಟನೆಯ ಕೈವಾಡ ಇದೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ನಮ್ಮಲ್ಲಿ ಸೂಕ್ತ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಸೂಕ್ತ ಸಾಕ್ಷ್ಯ ದೊರೆತರೆ ಎಸ್‌ಡಿಪಿಐ ನಿಷೇಧಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ. ಮಾಧುಸ್ವಾಮಿ ತಿಳಿಸಿದ್ದಾರೆ. ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಡಿಜೆ ಹಳ್ಳಿ ಗಲಭೆ ಸಂಬಂಧ ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಮಾಧುಸ್ವಾಮಿ, "ಎಸ್‌ಡಿಪಿಐ ಕೇವಲ ಒಂದು ಸಂಘಟನೆ ಅಲ್ಲ. ಅದು ಒಂದು ರಾಜಕೀಯ ಪಕ್ಷವೂ ಹೌದು. ಹೀಗಾಗಿ ನಿಷೇಧ ಬಗ್ಗೆ ಕಾನೂನಿನಲ್ಲಿ ತಿದ್ದುಪಡಿಗೆ ಅವಕಾಶ ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ.


ಇಂದಿನ ಸಂಪುಟ ಸಭೆಯಲ್ಲೂ ಈ ಕುರಿತು ನಿರ್ದಿಷ್ಟ ನಿರ್ಧಾರ ಕೈಗೊಂಡಿಲ್ಲ. ಅಲ್ಲದೆ, ಡಿಜೆ ಹಳ್ಳಿ ಗಲಭೆಗೆ ಹಿಂದೆ ಎಸ್‌ಡಿಪಿಐ ಕೈವಾಡ ಇರುವ ಕುರಿತು ನಮ್ಮಲ್ಲಿ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಆದರೆ, ಈ ಸಂಘಟನೆ ಅಪರಾಧ ಚಟುವಟಿಕೆಗಳಲ್ಲಿ ಶಾಮೀಲಾಗಿರುವುದು ಸಾಬೀತಾರೆ ನಿಷೇಧ ಮಾಡಲು ರಾಜ್ಯ ಸರ್ಕಾರ ಹಿಂಜರಿಯುವ ಮಾತೇ ಇಲ್ಲ. ಹೀಗಾಗಿ ಸೂಕ್ತ ಸಾಕ್ಷ್ಯಗಳ ಸಲ್ಲಿಕೆಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.


ಇದೇ ಸಂದರ್ಭದಲ್ಲಿ ಡಿಜೆ ಹಳ್ಳಿ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಮಾತನಾಡಿರುವ ಅವರು, " ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯ ಘಟನೆ ಬಗ್ಗೆ ಸಂಪುಟದಲ್ಲಿ ಬಿಸಿಬಿಸಿ ಚರ್ಚೆಯಾಗಿದೆ. ಈ ವೇಳೆ ಗಲಭೆ ದಿನದಿಂದ ಇಂದಿನವರೆಗೂ ಏನಾಗಿದೆ ಎಂದು ಗೃಹಸಚಿವರಿಂದ ಸಿಎಂಗೆ ಮಾಹಿತಿ ನೀಡಲಾಗಿದೆ.


ಇದನ್ನೂ ಓದಿ : ರಾಜ್ಯ ಮುಂಗಾರು ಅಧಿವೇಶನ ಫಿಕ್ಸ್‌; ಸೆಪ್ಟೆಂಬರ್‌ 21 ರಿಂದ 30ರ ವರೆಗೆ ನಡೆಯಲಿದೆ ಕಲಾಪ


ಅಲ್ಲದೆ, ಸಂಪನ್ಮೂಲ‌ ಕ್ರೋಢೀಕರಣದ ಕುರಿತು ಚರ್ಚೆಯಾಗಿದ್ದು, ಗಲಭೆಕೋರರು ಅಸ್ತಿಮುಟ್ಟುಗೋಳು ಮಾಡಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಕ್ಯಾಬಿನೆಟ್ ನಲ್ಲಿ‌ ಅಂಗೀಕಾರ ದೊರೆತಿದೆ. ಗೃಹ ಇಲಾಖೆ, ಪೊಲೀಸ್ ಮತ್ತು ಸಮಯೋಚಿತ ಕ್ರಮಗಳನ್ನು ಕ್ಯಾಬಿನೆಟ್ ನಲ್ಲಿ ಶ್ಲಾಘಿಸಲಾಗಿದೆ" ಎಂದು ತಿಳಿಸಿದ್ದಾರೆ.


ಬೆಳೆ ಪರಿಹಾರದ ಕುರಿತು ಮಾಹಿತಿ ನೀಡಿರುವ ಮಾಧುಸ್ವಾಮಿ, "ಬೆಳೆ ಸಮೀಕ್ಷೆಯಿಂದ ರೈತರಿಗೆ ಬೆಳೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ರೈತರೇ ಫೊಟೋ ಕಳಿಸೋ ಕಾರ್ಯಕ್ರಮ ಜಾರಿಗೆ ತಂದಿದ್ದು, ಬೆಳೆ ಸಮೀಕ್ಷೆಗೆ ಒಂದು ತಿಂಗಳು ಅವಧಿ ವಿಸ್ತರಣೆ ಮಾಡಲಾಗಿದೆ. ಶೀಘ್ರದಲ್ಲಿ ರೈತರಿಗೆ ಪರಿಹಾರದ ಹಣವನ್ನು ತಲುಪಿಸಲಾಗುವುದು" ಎಂದು ತಿಳಿಸಿದ್ದಾರೆ.

Published by:MAshok Kumar
First published: