ಸರ್ಕಾರ ಉಳಿಸಲು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ; ಮಾಧುಸ್ವಾಮಿ

ಪಕ್ಷ ಸಚಿವ ಸ್ಥಾನವನ್ನು ಕೇಳಿದರೆ ಖುಷಿಯಿಂದ ಬಿಟ್ಟುಕೊಡುತ್ತೇನೆ. ರಾಜ್ಯಕ್ಕೆ ಒಳ್ಳೆಯ ಸರ್ಕಾರ ಇರಲಿ ಎನ್ನುವ ಅಪೇಕ್ಷೆಯಿದೆ. ಈ ಕಾರಣಕ್ಕೆ ಈ ತ್ಯಾಗಕ್ಕೆ ಸಿದ್ಧ

news18-kannada
Updated:January 26, 2020, 12:47 PM IST
ಸರ್ಕಾರ ಉಳಿಸಲು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ; ಮಾಧುಸ್ವಾಮಿ
ಸಚಿವ ಮಾಧುಸ್ವಾಮಿ
  • Share this:
ತುಮಕೂರು (ಜ.26): ಸಂಪುಟ ವಿಸ್ತರಣೆ ಕಗ್ಗಂಟ್ಟಾಗಿರುವ ಹಿನ್ನೆಲೆ ಹೊಸಬರಿಗೆ ಸ್ಥಾನ ನೀಡಬೇಕು ಎಂದರೇ, ಹಿರಿಯ ನಾಯಕರು ಪದತ್ಯಾಗ ಮಾಡಬೇಕಾಗಿರುವುದು ಅನಿವಾರ್ಯ ಎಂಬ ಮಾತು ಪಕ್ಷದಲ್ಲಿ ಕೇಳಿ ಬಂದಿದೆ. ಸರ್ಕಾರ ರಚನೆಗೆ ಸಹಾಯ ಮಾಡಿದ ಶಾಸಕರಿಗೆ ಮಣೆ ಹಾಕಬೇಕು ಎಂದರೇ ಈ ಸೂತ್ರ ಅಳವಡಿಕೆ ಸೂಕ್ತ ಎಂಬುದು ಕೆಲ ನಾಯಕರ ಮಾತಾಗಿದೆ. ಇದೇ ಮಾತು ಹಲವು ಹಿರಿಯ ನಾಯಕರ ನಡುವಿನ ಗುದ್ದಾಟಕ್ಕೂ ಕಾರಣವಾಗಿದೆ. 

ಇನ್ನು ಈ ಕುರಿತು ಮಾತನಾಡಿರುವ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ, ಸರ್ಕಾರ ಉಳಿಸಲು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧವಾಗಿರುವುದಾಗಿ ಬಹಿರಂಗ ಪಡಿಸಿದ್ದಾರೆ.

ಪಕ್ಷ ಸಚಿವ ಸ್ಥಾನವನ್ನು ಕೇಳಿದರೆ ಖುಷಿಯಿಂದ ಬಿಟ್ಟುಕೊಡುತ್ತೇನೆ. ರಾಜ್ಯಕ್ಕೆ ಒಳ್ಳೆಯ ಸರ್ಕಾರ ಇರಲಿ ಎನ್ನುವ ಅಪೇಕ್ಷೆಯಿದೆ. ಈ ಕಾರಣಕ್ಕೆ ಈ ತ್ಯಾಗಕ್ಕೆ ಸಿದ್ಧ ಎಂದಿದ್ದಾರೆ.

ಇದನ್ನು ಓದಿ: ಹೊಸಬರಿಗೆ ಸಚಿವ ಸ್ಥಾನ ನೀಡಲು, ಹಿರಿಯರು ತ್ಯಾಗಕ್ಕೆ ಮುಂದಾಗಬೇಕು; ಬಸನಗೌಡ ಪಾಟೀಲ ಯತ್ನಾಳ್

ಸಚಿವ ಸ್ಥಾನ ತ್ಯಾಗದ ಕುರಿತು ಇಂದು ವಿಜಯಪುರದಲ್ಲಿ ಮಾತನಾಡಿರುವ ಬಸನಗೌಡ ಪಾಟೀಲ ಯತ್ನಾಳ್​, ಹೊಸ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿದೆ. ಸಿಎಂ ಈ ಮಾತು ಉಳಿಸಿಕೊಳ್ಳುವ ವಿಶ್ವಾಸವಿದೆ. ಇದಕ್ಕಾಗಿ ಪಕ್ಷದಲ್ಲಿ ಈಗಾಗಲೇ ಹುದ್ದೆಯ ಲಾಭಾ ಅನುಭವಿಸಿದವರು ಪದತ್ಯಾಗಕ್ಕೆ ಮುಂದಾಬೇಕು ಎಂದು ಆಗ್ರಹಿಸಿದ್ದಾರೆ.
First published:January 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ