Online Gambling Game: ರಾಜ್ಯದಲ್ಲಿ ಆನ್​ಲೈನ್​ ಜೂಜಾಟ ನಿಷೇಧಕ್ಕೆ ನಿರ್ಧಾರ: ಸಚಿವ ಮಾಧುಸ್ವಾಮಿ

ಆನ್​ ಲೈನ್​ ಜೂಜು ನಿಯಂತ್ರಣಕ್ಕೆ ಪೂರಕವಾಗಿ ಕರ್ನಾಟಕ ಪೊಲೀಸ್​ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ

ಸಚಿವ ಮಾಧುಸ್ವಾಮಿ

ಸಚಿವ ಮಾಧುಸ್ವಾಮಿ

  • Share this:
    ಬೆಂಗಳೂರು (ಸೆ. 4): ರಾಜ್ಯದಲ್ಲಿ ಆನ್​​ಲೈನ್​ ಜೂಜಾಟವನ್ನು(Online Gambling Game) ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಆನ್​ಲೈನ್​ ಜೂಜಾಟ ನಿಷೇಧಿಸುವ ಸಂಬಂಧ ಈಗಾಗಲೇ ಹೈ ಕೋರ್ಟ್​​ ಸೂಚನೆ ನೀಡಿದೆ. ಈ ಹಿನ್ನಲೆ ಆನ್​ ಲೈನ್​ ಜೂಜು ನಿಯಂತ್ರಣಕ್ಕೆ ಪೂರಕವಾಗಿ ಕರ್ನಾಟಕ ಪೊಲೀಸ್​ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

    ಈ ತಿದ್ದುಪಡಿಯಲ್ಲಿ ಹಣ ಹೂಡಿಕೆ ಆನ್​ಲೈನ್​ ಆಟಗಳ ವಿರುದ್ಧ ಪೊಲೀಸ್​ ಕಾಯ್ದೆಯ ಅಡಿಯಲ್ಲಿ ಕ್ರಮ ಜರಿಸಲು ಅವಕಾಶ ನೀಡುವಂತೆ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

    ವೀಕೆಂಡ್ ಕರ್ಫ್ಯೂ ತೆಗೆಯಲು ಚಿಂತನೆ

    ಕೋವಿಡ್​ ವಿಚಾರದಲ್ಲಿ ತಜ್ಞರ ವರದಿಯನ್ನ ಅಳವಡಿಸಿಕೊಳ್ಳಲಾಗುವುದು. ರಾಜ್ಯದಲ್ಲಿ ಸೋಂಕು ಕಡಿಮೆಯಾಗುತ್ತಿರುವ ಹಿನ್ನಲೆ ವೀಕೆಂಡ್ ಕರ್ಫ್ಯೂ ತೆಗೆಯಲು ಚಿಂತನೆ ನಡೆಸಲಾಗುತ್ತಿದೆ. ಈ ನಡುವೆ ಗಣೇಶ ಹಬ್ಬ ಯಾವ ರೀತಿ ಆಚರಿಸಬೇಕು ಎಂದು ಚರ್ಚೆ ನಡೆಸಲಾಗುವುದು. ಕೋವಿಡ್​ ನಿಯಮಾವಳಿ, ಸಾಮಾಜಿಕ ಅಂತರ ಪಾಲಿಸಿ ಮದುವೆ, ಸಮಾರಂಭ ಮಾಡಬಹುದು. ಆದರೆ, ಯಾರೂ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ನಿರ್ಬಂಧ ಹೇರಲಾಗಿದೆ ಎಂದರು

    ಇದನ್ನು ಓದಿ: ಭವಾನಿಪುರ ಉಪ ಚುನಾವಣೆ ಘೋಷಣೆ; ಸಿಎಂ ಸ್ಥಾನ ಉಳಿಸಿಕೊಳ್ಳಲು ಸಜ್ಜಾದ ಮಮತಾ ಬ್ಯಾನರ್ಜಿ

    ಸಿದ್ದಗಂಗಾ ಶ್ರೀಗಳ ಹುಟ್ಟೂರು ಅಭಿವೃದ್ಧಿಗೆ 25 ಕೋಟಿ

    ಶಿಕ್ಷಕರ ವರ್ಗಾವಣೆಗೆ ವಿಧೇಯಕ ತಂದಿದ್ದೆವು. ಈ ವಿಧೇಯಕ ತಿದ್ದುಪಡಿಗೆ ಸಮ್ಮತಿ ನೀಡಲಾಗಿದೆ. ಸರಕು ಸೇವೆ ತಿದ್ದುಪಡಿ ವಿಧೇಯಕಕ್ಕೆ ಅನುಮತಿ ನೀಡಲಾಗಿದ್ದು, ಕರ್ನಾಟಕ ಗೃಹ ಮಂಡಳಿ ಭೂ ವಿವಾದಕ್ಕೆ ತಡೆ ನೀಡಲಾಗಿದೆ. ಲಿಂಗಾಪುರ ಗ್ರಾಮದಲ್ಲಿ ಭೂ ಸ್ವಾಧೀನಕ್ಕೆ ಅಡಚಣೆ ಇತ್ತು. ಈಗ 50:50 ಅನುಪಾತದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸಿದ್ದಗಂಗಾ ಶ್ರೀಗಳ ಹುಟ್ಟೂರು ಅಭಿವೃದ್ಧಿಗೆ 25 ಕೋಟಿ ರೂ ಹಣ ಬಿಡುಗಡೆಗೆ ಸಂಪುಟದಲ್ಲಿ ಸಮ್ಮತಿ ನೀಡಲಾಗಿದೆ

    ಭದ್ರಾಮೇಲ್ದಂಡೆ ಯೋಜನೆ ಪ್ರಕರಣಗಳಿದ್ದವು. ಭೂ ‌ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿದ್ದವು. ಇದೀಗ ಪ್ರಕರಣ ಇತ್ಯರ್ಥಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಐಟಿಐ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಣೆಗೆ 13.061 ಜನರಿಗೆ 17.18 ಕೋಟಿ ಹಣ ನೀಡಲಾಗುವುದು. ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ನೀಡಲಾಗುತ್ತದೆ ಎಂದರು

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:Seema R
    First published: