ಬಿಜೆಪಿ ಶಾಸಕರು ಹುಲಿಗಳಿದ್ದ ಹಾಗೆ; ಅವರನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ: ಸಚಿವ ಈಶ್ವರಪ್ಪ

ನಮ್ಮದು ಈಗಾಗಲೇ ಓವರ್ ಲೋಡ್ ಆಗಿದೆ. ನಮಗೆ ಕಾಂಗ್ರೆಸ್, ಜೆಡಿಎಸ್‌ನಿಂದ ಬರುತ್ತಿರುವ ಲೋಡನ್ನು ತಡೆದುಕೊಳ್ಳದೇ ಕಷ್ಟ ಆಗಿದೆ. ಇನ್ನು ನಿಮ್ಮ ಪಕ್ಷದವರು ಮತ್ತೆ ಬಂದ್ರೆ ನಮ್ಮ ಪಕ್ಷದವರ ಕಥೆ ಏನು ಎಂದಿದ್ದಾರೆ. ನಿಮ್ಮ ಶಾಸಕರನ್ನು ನೀವು‌ ಮೊದಲು ಹಿಡಿದಿಟ್ಟುಕೊಳ್ಳಿ ಎಂದು ಹೆಚ್ ಡಿಕೆಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

news18-kannada
Updated:January 8, 2020, 4:03 PM IST
ಬಿಜೆಪಿ ಶಾಸಕರು ಹುಲಿಗಳಿದ್ದ ಹಾಗೆ; ಅವರನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ: ಸಚಿವ ಈಶ್ವರಪ್ಪ
ಸಚಿವ ಕೆ.ಎಸ್​. ಈಶ್ವರಪ್ಪ
  • Share this:
ಶಿವಮೊಗ್ಗ(ಜ.08) : ಜೆಡಿಎಸ್ ಶಾಸಕರನ್ನೇ ಮೊದಲು ಉಳಿಸಿಕೊಳ್ಳಲಿ. ಬಿಜೆಪಿ ಅತೃಪ್ತ ಶಾಸಕರ ಬಗ್ಗೆ ಆ ಮೇಲೆ ಮಾತನಾಡಲಿ. ಬಿಜೆಪಿ ಶಾಸಕರು ಹುಲಿಗಳಿದ್ದ ಹಾಗೆ, ಹುಲಿಗಳನ್ನು‌ ಮುಟ್ಟುವ ಧೈರ್ಯ ಯಾರಿಗೂ ಇಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿಯವರು ಜೆಡಿಎಸ್ ಗೆ ಬರುತ್ತಾರೆ ಎಂಬ ಹೆಚ್ ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ಈಗಾಗಲೇ ಓವರ್ ಲೋಡ್ ಆಗಿದೆ. ನಮಗೆ ಕಾಂಗ್ರೆಸ್, ಜೆಡಿಎಸ್‌ನಿಂದ ಬರುತ್ತಿರುವ ಲೋಡನ್ನು ತಡೆದುಕೊಳ್ಳದೇ ಕಷ್ಟ ಆಗಿದೆ. ಇನ್ನು ನಿಮ್ಮ ಪಕ್ಷದವರು ಮತ್ತೆ ಬಂದ್ರೆ ನಮ್ಮ ಪಕ್ಷದವರ ಕಥೆ ಏನು ಎಂದಿದ್ದಾರೆ. ನಿಮ್ಮ ಶಾಸಕರನ್ನು ನೀವು‌ ಮೊದಲು ಹಿಡಿದಿಟ್ಟುಕೊಳ್ಳಿ ಎಂದು ಹೆಚ್ ಡಿಕೆಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ನಾನು ಡಿಸಿಎಂ ಆಗಲ್ಲ - ಆಗೋ ಅಪೇಕ್ಷೆಯೂ ಇಲ್ಲ 

ಯಾವ ಕಾರಣಕ್ಕೂ ನಾನು ಡಿಸಿಎಂ ಆಗಲ್ಲ, ಈಗಾಗಲೇ ಮೂವರು ಡಿಸಿಎಂ ಆಗಿದ್ದಾರೆ. ಇನ್ನು ಕೆಲವರು ಡಿಸಿಎಂ ಆಗಬೇಕು ಎನ್ನುವ ಆಕಾಂಕ್ಷಿಗಳಿದ್ದಾರೆ. ಹೀಗಿರುವಾಗ ನಾನು ಡಿಸಿಎಂ ಆಕಾಂಕ್ಷಿಯಲ್ಲ, ಅಪೇಕ್ಷೆಯನ್ನು ಪಟ್ಟಿಲ್ಲ. ಈಗ ಇರುವ ಎಲ್ಲ ಡಿಸಿಎಂ ಹುದ್ದೆಗಳನ್ನು ತೆಗೆಯುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ವರಿಷ್ಠರು ನಿರ್ಧಾರ‌ ಕೈಗೊಳ್ಳುತ್ತಾರೆ ಅದಕ್ಕೆ ನಾನು ಬದ್ಧವಾಗಿರುತ್ತೇನೆ ಎಂದರು.

ವೈಯಕ್ತಿಕ ಹೇಳಿಕೆ, ಟೀಕೆ ಅಗತ್ಯವಿಲ್ಲ

ಸಿಎಎ ಕಾಯ್ದೆ ಬಗ್ಗೆ ಚರ್ಚೆ ನಡೆಯಲಿ, ಇದು  ಪ್ರಜಾಪ್ರಭುತ್ವದಲ್ಲಿ ಬಹಳ ಒಳ್ಳೆ ಬೆಳವಣಿಗೆ ಚರ್ಚೆ ಬಿಟ್ಟು ವೈಯಕ್ತಿಕ ಹೇಳಿಕೆ, ಟೀಕೆ ಅಗತ್ಯವಿಲ್ಲ ಎಂದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ  ಸಚಿವ ಈಶ್ವರಪ್ಪ ಹೇಳಿದ್ದಾರೆ.

ಅಂಬೇಡ್ಕರ್ ಆ ಕಾಲದಲ್ಲೇ ಹೇಳಿದ್ದರು ಹಿಂದೂಸ್ಥಾನದಲ್ಲಿ ಹಿಂದುಗಳಿರಲಿ, ಪಾಕಿಸ್ತಾನದಲ್ಲಿ‌ ಮುಸಲ್ಮಾನರಿರಲಿ  ಸಮಸ್ಯೆಗಳು ಬರೋಲ್ಲ ಎಂದಿದ್ದರು. ಆಗಿನ ಕಾಂಗ್ರೆಸ್ ನಾಯಕರು ಇದು ಪ್ರಜಾಪ್ರಭುತ್ವ,ಜಾತ್ಯಾತೀತ ರಾಷ್ಟ್ರ ಯಾರು ಬೇಕಾದರೂ ಇರಬಹುದು ಎಂದು ಹೇಳಿದ್ದರು. ಅದನ್ನು ಈಗ ಜನರು ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ :  ಕಪ್ಪು ಬಾವುಟ ಪ್ರದರ್ಶಿಸಿ, ಬಸ್ ಸಂಚಾರ​ ತಡೆಗೆ ಮುಂದಾದ ವಾಟಾಳ್​ ನಾಗರಾಜ್​ ಪೊಲೀಸರ ವಶಕ್ಕೆ

ವೈಯಕ್ತಿಕವಾಗಿ ಜವಾಬ್ದಾರಿ ಇರುವ ವ್ಯಕ್ತಿಗಳು ಖಾದರ್ ಇರಲಿ, ಜಮೀರ್ ಇರಲಿ, ಸೋಮಶೇಖರ್ ರೆಡ್ಡಿ ಇರಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕೆಡಿಸುವಂತಹ ಹೇಳಿಕೆಗಳು ನೀಡಬಾರದು ಎಂದು ಸಲಹೆ ನೀಡಿದ್ದಾರೆ.

ಭಾರತ್ ಬಂದ್ ಕೂಡಾ ಒಂದು ರಾಜಕೀಯ ಕುತಂತ್ರ. ಒಂದು ಕಡೆ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಅಂತಾರೆ. ಮತ್ತೊಂದು ಕಡೆ ಸಿಎಎ ಬೇರೆ ಬೇರೆ ಬಿಲ್ಲು ವಿರೋಧ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕುತಂತ್ರ ಇದು. ಈ ದೇಶದ ಜನ ಇದನ್ನು ಒಪ್ಪಲ್ಲ. ಹೀಗಾಗಿ ಭಾರತ್ ಬಂದ್ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ್ದಾರೆ.

 
Published by: G Hareeshkumar
First published: January 8, 2020, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading