ಬೆಂಗಳೂರು (ಫೆ. 18): ಕುರುಬ ಸಮುದಾಯದ ಹೋರಾಟ ಸಮ್ಮೇಳನದಲ್ಲಿ ಜನರು ಸುನಾಮಿ ರೀತಿಯಲ್ಲಿ ಆಗಮಿಸಿದ್ದು, ಸಿದ್ದರಾಮಯ್ಯಗೆ ಕಿರಿಕಿರಿಯಾಗಿದೆ. ಈ ಹೋರಾಟದಲ್ಲಿ ಬೇರೆ ನಾಯಕರು ಇದ್ದಾರೆ. ಆದರೆ, ಸಿದ್ದರಾಮಯ್ಯ ನನ್ನ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕರ ವಿರುದ್ಧ ಹರಿಹಾಯ್ದರು. ಈ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಸುಳ್ಳಿನ ಸರದಾರ. ಜಗದ್ಗುರುಗಳಿಗೆ ಅಪಮಾನ ಮಾಡುತ್ತಾರೆ. ಸ್ವಾಮೀಜಿಗಳೇ ಬಹಳ ನೋವಿನಿಂದ ಈ ಕುರಿತು ಹೇಳಿದ್ದಾರೆ. ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸುವ ಹೋರಾಟಕ್ಕೆ ಯಾವ ಆರ್ ಎಸ್ ಎಸ್ ಬೆಂಬಲ ಇಲ್ಲ. ಯಾರು ಹಣ ಪಡೆದಿಲ್ಲ. ಆದರೂ ಸ್ವಾಮೀಜಿ ಬಗ್ಗೆಯೂ ಅವರು ಟೀಕಿಸುತ್ತಾರೆ ಎಂದು ಹರಿಹಾಯ್ದರು.
ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಬೇಡಿಕೆ ಈಡೇರೆಕೆಗೆ ನಾಳೆ ಮೌರ್ಯ ಹೋಟೇಲ್ ವೃತ್ತದ ಎದುರಿನ ಗಾಂಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆ ನಾಳಿನ ಹೋರಾಟ ವಿಚಾರ ಕುರಿತು ಸಭೆ ನಡೆಸಿದ ಅವರು, ಕುಮಾರಸ್ವಾಮಿ ಸರ್ಕಾರದಲ್ಲಿ ಯಾವಾಗ ಜಾತಿಗಣತಿ ಬಿಡುಗಡೆ ಮಾಡುತ್ತೀರಾ ಎಂದು ಆಗಿನ ಸಿಎಂ ಆಗಿದ್ದ ಎಚ್ಡಿಕೆ ಅವರನ್ನು ಕೇಳಿದ್ದೆ. ಅವರು, ಸಿದ್ದರಾಮಯ್ಯ ಹೇಳಿದ ಮೇಲೆ ಮಾಡುತ್ತೇನೆ ಎಂದರು. ಬಳಿಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರಿಗೆ ಮಾತನಾಡಿದೆ. ಅವರು ಕೂಡ ವರದಿ ರೆಡಿ ಇದೆ ಅಂತಾ ಹೇಳಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಅವರ ಮೈತ್ರಿ ಸರ್ಕಾರ ಇತ್ತು. ಆದರೂ ಯಾಕೆ ಜಾತಿಗಣತಿ ಬಹಿರಂಗ ಪಡಿಸಿಲ್ಲ ಎಂದು ಇದೇ ವೇಳೆ ಟೀಕಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿ70 ವರ್ಷ ಸರ್ಕಾರ ಇತ್ತು. ಆಗ ಏಕೆ ಮೀಸಲಾತಿ ಬಗ್ಗೆ ಮಾಡಲಿಲ್ಲ. ಸಿದ್ದರಾಮಯ್ಯ, ದೇವೇಗೌಡರು ಸರ್ಕಾರದಲ್ಲಿ ಮಂತ್ರಿ ಇದ್ದರು. ಏಕೆ ಮೀಸಲಾತಿ ಬಗ್ಗೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ