• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಿದ್ದರಾಮಯ್ಯಗೆ ಸಮುದಾಯದಿಂದ ಒಬ್ಬಂಟಿಯಾಗಿರುವ ಭಯ ಕಾಡುತ್ತಿದೆ; ಸಚಿವ ಈಶ್ವರಪ್ಪ

ಸಿದ್ದರಾಮಯ್ಯಗೆ ಸಮುದಾಯದಿಂದ ಒಬ್ಬಂಟಿಯಾಗಿರುವ ಭಯ ಕಾಡುತ್ತಿದೆ; ಸಚಿವ ಈಶ್ವರಪ್ಪ

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

ತಾವೇ ಮುಂದಿನ ಸಿಎಂ ಎಂಬ ಮಾತನ್ನು ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಬಾಯಲ್ಲಿ ಹೇಳಿಸಲಿ ನೋಡೋಣ. ಆಗ ಕಾಂಗ್ರೆಸ್​ನಲ್ಲಿ ರಕ್ತಪಾತವಾಗುತ್ತದೆ, ಒಬ್ಬರಿಗೊಬ್ಬರು ಬಡಿದಾಡಿ ಸತ್ತು ಹೋಗುತ್ತಾರೆ

  • Share this:

ಚಿತ್ರದುರ್ಗ (ಫೆ. 10): ಮೀಸಲಾತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಇಷ್ಟು ದಿನ ಏನು ಮಾಡುತ್ತಿದ್ದರು. ಅವರು ಸಿಎಂ ಆದಾಗ ಏನು ಕಡೆದು ಹಾಕಿದರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್​ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಹೊಸದುರ್ಗದ ಮಧುರೆಯ ಬ್ರಹ್ಮ ವಿದ್ಯಾನಗರದಲ್ಲಿ ಆಯೋಜಿಸಿದ್ದ ಡಾ. ಪುರಶೋತ್ತಮಾನಂದಪುರಿ ಸ್ವಾಮೀಜಿಯ 21ನೇ ವರ್ಷದ ಪಟ್ಟಾಭಿಷೇಕ ಮಾಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ವಿರುದ್ಧ ಹರಿಹಾಯ್ದರು. ಮೊನ್ನೆ ನಡೆದ ಕುರುಬ ಸಮಾವೇಶದಲ್ಲಿ ಸಮದಾಯದ ಶ್ರೀಗಳಿಗೆ, ಜನರಿಗೆ ಸಮಾಧಾನ ಮಾಡುವ ಮಾತು ಕೂಡಾ ಅವರು ಆಡಲಿಲ್ಲ.  ಆದರೆ, ಕುರುಬ ಬೃಹತ್​​ ಸಮಾವೇಶದಲ್ಲಿ ಸಮುದಾಯದ ಒಗ್ಗಟ್ಟು ನೋಡಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಕಿರಿಕಿರಿ ಆಗಿದೆ. ಸಮುದಾಯದಿಂದ ಒಬ್ಬಂಟಿ ಆಗಿರುವ ಭಯದಿಂದ ಸಿದ್ದರಾಮಯ್ಯ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. 

ಹಿಂದುಳಿದವರನ್ನ, ದಲಿತರನ್ನ ಬಳಸಿಕೊಂಡು ಸಿದ್ದರಾಮಯ್ಯ ಸಿಎಂ ಆದರು. ಆದರೆ ಆ ಸಮುದಾಯಗಳಿಗೆ ಏನೂ ಮಾಡಲಿಲ್ಲ. ಸಿಎಂ ಆದಾಗ ಒಂದು ಉತ್ತಮ ಕೆಲಸ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಲಿ ಎಂದು ಇದೇ ವೇಳೆ ಸವಾಲ್ ಹಾಕಿದ್ದಾರೆ


ಇನ್ನೂ ಸಮಾವೇಶದಲ್ಲಿ ನಿರಂಜನಾನಂದಪುರಿ ಶ್ರೀಗಳು ಎಸ್ ಟಿ ಮೀಸಲಾತಿ ನೀಡಿದರೆ ಸಮುದಾಯ ಮುಂದೆ ಬಿಜೆಪಿ ಪರ ನಿಲ್ಲುತ್ತದೆ ಎಂದಿರುವುದು ಸಿದ್ದರಾಮಯ್ಯ ಅವರಿಗೆ ತಡೆಯಲು ಆಗಲಿಲ್ಲ ಎಂದರು.


ಇದನ್ನು ಓದಿ: ಕೆರೆಬಿಯನ್​ ದ್ವೀಪ ತಲುಪಿದ ಕೋವಿಡ್​ ಲಸಿಕೆ; ಡೊಮಿನಿಕನ್​ ಪ್ರಧಾನಿಯಿಂದ ಮೋದಿಗೆ ಧನ್ಯವಾದ


ರಾಜ್ಯದಲ್ಲಿ ಕಾಂಗ್ರೆಸ್   ಅನ್ನು ಜನರು ಮೂಲೆಗೆ ತಳ್ಳಿದ್ದಾರೆ. ಸಿದ್ದರಾಮಯ್ಯ ಅವರು ತೆರೆಮರೆಗೆ ಸರಿದಿದ್ದಾರೆ.  ರಾಜ್ಯದಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನ ಮೂಲೆಗೆ ತಳ್ಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಒಳ್ಳೆಯ ಕೆಲಸ ಆಗುತ್ತಿಲ್ಲ ಎಂದು 17 ಜನರು ಬಿಜೆಪಿಗೆ ಬಂದರು. ಇನ್ನು ಸಿದ್ದರಾಮಯ್ಯ ಮತ್ತೆ ರಾಜ್ಯದ ಸಿಎಂ ಆಗುವುದು ಹಗಲು ಗನಸು. ಅವರ ಸಮಾಧಾನಕ್ಕೆ ಮತ್ತೆ ನಾನೇ ಸಿಎಂ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ತಾವೇ ಮುಂದಿನ ಸಿಎಂ ಎಂಬ ಮಾತನ್ನು ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಬಾಯಲ್ಲಿ ಹೇಳಿಸಲಿ ನೋಡೋಣ. ಆಗ ಕಾಂಗ್ರೆಸ್​ನಲ್ಲಿ ರಕ್ತಪಾತವಾಗುತ್ತದೆ, ಒಬ್ಬರಿಗೊಬ್ಬರು ಬಡಿದಾಡಿ ಸತ್ತು ಹೋಗುತ್ತಾರೆ ಎಂದರು.


ಮಾಜಿ ಸಿಎಂ ಸಿದ್ದರಾಮಯ್ಯರ ಸರ್ವಾಧಿಕಾರಿ ಧೋರಣೆಯನ್ನು ರಾಜ್ಯದ ಜನರು ಒಪ್ಪಲ್ಲ. ಈಗ ಅಹಿಂದ ಬಿಟ್ಟು ಹಿಂದ ಎಂದು ಶುರು ಮಾಡಿದ್ದಾರೆ. ಈಗಲಾದರೂ ಹಿಂದ ಎನ್ನುವುದನ್ನ ಸಿದ್ದರಾಮಯ್ಯ ಮುಂದುವರೆಸಲಿ ಎಂದರು.

top videos
    First published: