• Home
  • »
  • News
  • »
  • state
  • »
  • ನಾನು ಯಡಿಯೂರಪ್ಪ ಒಂದೇ ತಟ್ಟೆಯಲ್ಲಿ ತಿಂದವರು: ಆದರೆ ಈಗ...; ಸಚಿವ ಈಶ್ವರಪ್ಪ

ನಾನು ಯಡಿಯೂರಪ್ಪ ಒಂದೇ ತಟ್ಟೆಯಲ್ಲಿ ತಿಂದವರು: ಆದರೆ ಈಗ...; ಸಚಿವ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

ನಾನು ಯಡಿಯೂರಪ್ಪ ಒಳ್ಳೆ ಸ್ನೇಹಿತರು. ಅಲ್ಲದೆ, ನಾವು ಬಿಸೆನಸ್​ ಪಾರ್ಟರ್ ಆಗಿದ್ದೇವು. ಆದರೆ ಈಗ ಕೆಲವು ವಿಚಾರಗಳಿಗಾಗಿ ನಾನು ಅವರಿಂದ ದೂರ ಇದ್ದೇನೆ

  • Share this:

ಮೈಸೂರು (ಏ. 2): ಸಿಎಂ ಯಡಿಯೂರಪ್ಪ ಅವರು ಹಿಂದೆ ಕೆ.ಜೆ.ಪಿ ಪಕ್ಷವನ್ನು ‌ ಶುರು ಮಾಡಬೇಕು ಎಂದಾಗ ನಾನು ಬೇಡ ಎಂದು ಹೇಳಿದ್ದೆ. ನಿಮಗೆ ಒಳ್ಳೆಯಗುವುದಿಲ್ಲ. ನೀವು ಪಕ್ಷ ಬಿಡಬೇಡಿ ಅಂದೆ. ಆದರೆ ಅಂದು ಅವರು ನನ್ನ ಮಾತು ಕೇಳಲಿಲ್ಲ. ನಾನು ಯಡಿಯೂರಪ್ಪ ಒಳ್ಳೆ ಸ್ನೇಹಿತರು. ಅಲ್ಲದೆ, ನಾವು ಬಿಸೆನಸ್​ ಪಾರ್ಟರ್ ಆಗಿದ್ದೇವು. ಆದರೆ ಈಗ ಕೆಲವು ವಿಚಾರಗಳಿಗಾಗಿ ನಾನು ಅವರಿಂದ ದೂರ ಇದ್ದೇನೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು. ಚಾಮುಂಡೇಶ್ವರಿ ದರ್ಶನ ಪಡೆದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಅಂದು ಕೆಜೆಪಿ ಕಟ್ಟಿದಾಗ ಏನಾಯಿತು ?  ಅವರಿಗೆ 6 ಬಂತು ನಮಗೆ 40 ಬಂತು. ಆ ನಂತರ ಮತ್ತೆ ಅವರ ಮಗನ ಮೂಲಕ ಮತ್ತೆ ಬಿಜೆಪಿಗೆ ಬರುತ್ತೇನೆ ಎಂದರು ಎಂದು ಹಳೆ ಘಟನೆ ಕೆದಕಿದರು.  


ಯಡಿಯೂರಪ್ಪ ಪಕ್ಷ ತೊರೆಯಲು ಮುಂದಾದಗ   ನೋಡಿ ನೀವು ಪಕ್ಷ ಬಿಟ್ಟು ಹೋಗಿ ವಾಪಸ್ ಬರುವುದು ಎಷ್ಟು ಸಮಸ್ಯೆ ಎಂದು ಹೇಳಿದೆ. ಅದಕ್ಕೆ ಕೆಲವರು ನೀವು ಪಕ್ಷ ಕಟ್ಟಿ ನಾವು ಜೊತೆ ಇರುತ್ತೇವೆ  ಎಂದರು. ಆದರೆ. ಪಾರ್ಟಿ ಕಟ್ಟಿದ ಮೇಲೆ ಯಾರು ಬರಲಿಲ್ಲ ಅಂತ. ಹಾಗಾಗಿ ಯಡಿಯೂರಪ್ಪ ಅವರು ಕೆಲವರನ್ನು ತುಂಬಾ ನಂಬಿದ್ದಾರೆ.  ಅದೇ ಅವತ್ತಿನ ಕೆಜೆಪಿ ಕಟ್ಟಲು ಕಾರಣ.  ನೇರ ಅನುದಾನ ಬಿಡುಗಡೆ ಪ್ರಕರಣದಲ್ಲೂ ಇದೇ ರೀತಿ ಆಗಿದೆ ಎನ್ನುವುದು ನನ್ನ ಅಭಿಪ್ರಾಯ ಎಂದು ಬೇಸರ ವ್ಯಕ್ತ ಪಡಿಸಿದರು.


ಇದನ್ನು ಓದಿ: ನಾನು ರೆಬೆಲ್ ಅಲ್ಲ, ಲಾಯಲ್: ಯಾವ ದೂರಿಗೂ ಜಗ್ಗಲ್ಲ, ಬಗ್ಗಲ್ಲ: ಈಶ್ವಪ್ಪ


ನಾನು ಸುದ್ದಿಗೋಷ್ಠಿ ಮಾಡಲು ಸಂಘವೇ ಶಕ್ತಿಯಾಗಿದೆ. ಮೊದಲಿನಿಂದಲೂ ನಾನು ಸಂಘಕ್ಕೆ ಲಾಯಲ್ ಅಂದು ಅವರು ಕೆಜಿಪಿ ಅಧ್ಯಕ್ಷ ನಾನು ಬಿಜೆಪಿ ಅಧ್ಯಕ್ಷ. ನಮ್ಮಿಬ್ಬರ ನಡುವೆ ಅಂದು ವಾದ ವಿವಾದ ಆಗಿದೆ.  ಅವರು ಯಾವ ಭಾಷೆಯಲ್ಲಿ ಮಾತನಾಡಿದರೂ ಹಾಗೇ ನಾನು ಅದೇ ಭಾಷೆಯಲ್ಲಿ ಉತ್ತರಿಸಿದ್ದೇನೆ. ಕೆಲವರು ಯಡಿಯೂರಪ್ಪ ಈಶ್ವರಪ್ಪ ನಡುವೆ ಹಳೆ ದ್ವೇಷ ಇದೆ ಎನ್ನುತ್ತಾರೆ. ಆದರೆ,  ಅದು ದ್ವೇಷ ಅಲ್ಲ ಅಂದಿನಿಂದಲೂ ನಾನು ಪಾರ್ಟಿಗೆ ಲಾಯಲ್‌.  ಅದಕ್ಕಾಗಿ ಅವರನ್ನು ವಿರೋಧಿಸಿದ್ದೆ. ಈಗಲೂ ತಪ್ಪಾಗಿದೆ ಅದಕ್ಕೆ ವಿರೋಧಿಸಿದ್ದೇನೆ. ಇದರಲ್ಲಿ ವೈಯುಕ್ತಿ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದರು.


ನಮ್ಮದು ಶಿಸ್ತಿನ ಪಕ್ಷ, ಅದೇ ಕಾರಣದಿಂದ ಯಾರು ಶಿಸ್ತು ಮೀರಬಾರದು ಅಂತ ಪತ್ರ ಬರೆದಿದ್ದೇನೆ. ಆದರೆ ಇದರಲ್ಲಿ ತಪ್ಪು ಯಾರದು ಅಂತ ತೀರ್ಮಾನ ಮಾಡುವುದಕ್ಕೆ ನಾನ್ಯಾರು. ನಾನೋಬ್ಬ ಪಕ್ಷದ ಕಾರ್ಯಕರ್ತ ಅಷ್ಟೆ, ನಮ್ಮಪ್ಪ ಅಡಿಕೆ ಮಂಡಿ ಗುಮಾಸ್ತ, ನಮ್ಮಮ್ಮ ಅಡಿಕೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಪಕ್ಷ ನನ್ನನ್ನ ಡಿಸಿಎಂ ಹುದ್ದೆವರೆಗೂ ಕರೆದುಕೊಂಡು ಹೋಗಿದೆ. ಹಾಗಾಗಿ ಈ ವಿಚಾರದಲ್ಲಿ ಪಕ್ಷವೇ ತೀರ್ಮಾನ ತೆಗೆದುಕೊಳ್ಳುತ್ತದೆ.  ನಾನು ಮಾಡಿದ್ದು ಸರಿ ಅಂತ ಕೆಲವರು ಹೇಳಿದ್ದಾರೆ. ಕೆಲವರು ತಪ್ಪು ಅಂತಿದ್ದಾರೆ. ಅವರಿಗೆ ನನ್ನ ದೃಷ್ಟಿಕೋನದಿಂದ ಮನವರಿಕೆ ಮಾಡಿಕೊಡುತ್ತೇನೆ ಎಂದು ತಿಳಿಸಿದರು.

Published by:Seema R
First published: