Santosh Patil Suicide Case: ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ; KS Eshwarappa

ಪ್ರಕರಣ ಸಂಬಂಧ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ನನ್ನ ವಿರುದ್ಧದ ಆರೋಪ ನಿರಾಧಾರ. ನಾನು ರಾಜೀನಾಮೆ ಕೊಡಲು ಕಾರಣಗಳೇ ಇಲ್ಲ

ಕೆ ಎಸ್ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

 • Share this:
  ಶಿವಮೊಗ್ಗ (ಏ. 13):  ಗುತ್ತಿಗೆದಾರ ಸಂತೋಷ್​ ಪಾಟೀಲ್ (Santosh Patil) ಆತ್ಮಹತ್ಯೆ ಪ್ರಕರಣ ಸಚಿವ ಈಶ್ವರಪ್ಪ ತಲೆದಂಡಕ್ಕೆ ಕಾರಣವಾಗಿದೆ. ಕಮಿಷನ್​ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್​ ಪಾಟೀಲ್​ ಈಶ್ವರಪ್ಪ ಅವರೇ ತಮ್ಮ ಸಾವಿಗೆ ನೇರ ಕಾರಣ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆ ಈಗಾಗಲೇ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ, ಕಾಂಗ್ರೆಸ್​, ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇತ್ತ ತಮಗೆ ಸಂತೋಷ್​ ಯಾರೆಂಬುದೇ ಗೊತ್ತಿಲ್ಲ ಎಂದಿದ್ದ ಸಚಿವ ಕೆ ಎಸ್​ ಈಶ್ವರಪ್ಪ ಇದೀಗ ಮುಖ್ಯಮಂತ್ರಿಗಳು ರಾಜೀನಾಮೆ ಕೇಳಿದರೆ ಕೊಡಬೇಕಾಗುತ್ತದೆ ಎಂದಿದ್ದ ಅವರು, ಇದೀಗ ರಾಜೀನಾಮೆ ನೀಡುವ ಪ್ರಶ್ನೇಯೇ ಇಲ್ಲ ಎಂದಿದ್ದಾರೆ

  ಡೆತ್​ನೋಟ್​ ಅವರೇ ಬರೆದಿದ್ದಾರಾ? 

  ಇದಕ್ಕೂ ಮುನ್ನ ಅವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದರು.
  ಮೃತ ಸಂತೋಷ್​ ಡೆತ್​ನೋಟೇ ಬರೆದಿಲ್ಲ. ಡೆತ್​ನೋಟೇ ಬರೆಯದೆ ರಾಜೀನಾಮೆ ಕೇಳ್ತಿದ್ದಾರೆ. ಇಲಾಖೆ ಕಾಮಗಾರಿಗೆ ಹಲವು ಪ್ರಕ್ರಿಯೆಗಳಿವೆ. ಇಲ್ಲಿ ಯಾವ ಪ್ರಕ್ರಿಯೆಯೂ ಪಾಲನೆಯಾಗಿಲ್ಲ. ಕೆಲಸ ಮುಗಿದ ಮೇಲೆ ಬಿಲ್​ ಪಾವತಿಸ್ತಾರೆ. ಇಲ್ಲಿ ಎಲ್ಲ ನಿಯಮ ಮೀರಿ ಬಿಲ್​ ಕೇಳಿದ್ದಾರೆ. ವರ್ಕ್​ ಆರ್ಡರ್​ ಇಲ್ಲದೇ ಕೆಲಸ ಹೇಗೆ ಆಗುತ್ತದೆ. ಇದೆಲ್ಲವೂ ಕಾಂಗ್ರೆಸ್​​ಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು

  ಗಣಪತಿ ಕೇಸಲ್ಲಿ ಶವದ ಪಕ್ಕವೇ ಡೆತ್​ನೋಟ್ ಇತ್ತು. ಗಣಪತಿ ಡೆತ್​ನೋಟ್​ ಇದ್ದಿದ್ದಕ್ಕೆ ಜಾರ್ಜ್ ರಾಜೀನಾಮೆ ಪಡೆದರು. ಆದರೆ ಇಲ್ಲಿ ಮೊಬೈಲ್​ನಲ್ಲಿ ಯಾರೋ ಟೈಪ್​ ಮಾಡಿದ್ದಾರೆ. ವಾಟ್ಸಪ್​ನಲ್ಲಿರುವ ಡೆತ್​ನೋಟ್​ ಅವರೇ ಬರೆದಿದ್ದಾರಾ. ನಿಯಮಬಾಹಿರ ಕಾಮಗಾರಿಗೆ ಬಿಲ್​ ಕೊಡಬೇಕಾ? ಡೆತ್​ನೋಟೇ ಅಲ್ಲದ ವಿಚಾರಕ್ಕೆ ರಾಜೀನಾಮೆಯೇ ಎಂದು ಪ್ರಶ್ನಿಸಿದರು.

  ನನ್ನ ವಿರುದ್ಧ ಮಾಡಿರುವ ಸಂಚು ಇದು
  ಗುತ್ತಿಗೆದಾರ ಸಂತೋಷ್​ ದೆಹಲಿಗೆ ಎಲ್ಲಾ ಹೋಗಿ ಬಂದಿದ್ದಾರೆ. ದೆಹಲಿಗೆ ಹೋಗಲು ಯಾರು ದುಡ್ಡು ಕೊಟ್ಟಿದ್ರು? ದೆಹಲಿಗೆ ಹೋಗಲು ಟಿಕೆಟ್​ ಕೊಡಿಸಿದ್ದು ಯಾರು ಎಂದ ಅವರು ನನ್ನ ವಿರುದ್ಧದ ಆರೋಪ ನಿರಾಧಾರ. ಇದು ಯಾರೋ ಮಾಡಿದ ಸಂಚು ಎಂದು ಆರೋಪಿಸಿದರು.

  ಇದನ್ನು ಓದಿ: KS Eshwarappa ಅವರನ್ನ ಸಚಿವ ಸ್ಥಾನದಿಂದ ವಜಾಗೊಳಿಸಿ: ರಾಜ್ಯಪಾಲರಿಗೆ ಕಾಂಗ್ರೆಸ್ ನಿಯೋಗ ಮನವಿ

  ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ
  ಸಂತೋಷ್​​​ಗೆ ಯಾರೋ ಕುಮ್ಮಕ್ಕು ನೀಡಿದ್ದಾರೆ. ಪ್ರಕರಣ ಸಂಬಂಧ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ನನ್ನ ವಿರುದ್ಧದ ಆರೋಪ ನಿರಾಧಾರ. ನಾನು ರಾಜೀನಾಮೆ ಕೊಡಲು ಕಾರಣಗಳೇ ಇಲ್ಲ ಎನ್ನುವ ಮೂಲಕ ತಾವು ಪ್ರಕರಣ ಸಂಬಂಧ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು

  ಈ ಷಡ್ಯಂತ್ರದ ವಿರುದ್ಧ ತನಿಖೆ ಆಗಬೇಕು
  ಇಂಥ ನೂರು ಕೇಸ್ ನೋಡಿದ್ದೇನೆ. ಈ ಷಡ್ಯಂತ್ರದ ವಿರುದ್ಧ ಸಮಗ್ರ ತನಿಖೆ ಆಗಬೇಕು. ಸಂತೋಷ್​ ಹಿಂದೆ ಯಾರಿದ್ದಾರೆ ತನಿಖೆ ಆಗಬೇಕು. ಸಂತೋಷ್​ನನ್ನು ದೆಹಲಿಗೆ ಕಳುಹಿಸಿದ್ದು ಯಾರು? ಸಂತೋಷ್ ಮೊಬೈಲಲ್ಲಿ ಡೆತ್​ನೋಟ್ ಬರೆದಿದ್ಯಾರು? ಇವೆಲ್ಲದರ ಬಗ್ಗೆ ಆಮೂಲಾಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

  ಇದನ್ನು ಓದಿ: KS Eshwarappa ಬಂಧನಕ್ಕೆ ಆಗ್ರಹಿಸಿ ಸಿಎಂ ಕಚೇರಿಗೆ ಮುತ್ತಿಗೆ; AAP ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

  ಇದೇ ವೇಳೆ ಮತ್ತೊಮ್ಮೆ ತನಗೆ ಸಂತೋಷ್​ ಯಾರೆಂಬುದೇ ತಿಳಿದಿಲ್ಲ. ಸಂತೋಷ್​ನನ್ನು ಒಮ್ಮೆಯೂ ನಾನು ನೋಡಿಲ್ಲ. 80 ಸಾರಿ ನನ್ನ ಭೇಟಿಗೆ ಬಂದಿದ್ದ ಎಂದು ಹೇಳ್ತಾರೆ. ಆದರೆ ಸಂತೋಷ್​ನನ್ನು ನಾನು ನೋಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

  ಸಚಿವರ ಕಾರಿಗೆ ಮುತ್ತಿಗೆ ಯತ್ನ
  ಸಚಿವ ಈಶ್ವರಪ್ಪ ಅವರು ಸುದ್ದಿಗೋಷ್ಟಿ ನಡೆಸಿ ಬಿಜೆಪಿ ಕಚೇರಿಯಿಂದ ಹೊರಡುವ ಮುನ್ನ ಅವರ ಕಾರಿಗೆ ಕಾಂಗ್ರೆಸ್​ ಕಾರ್ಯಕರ್ತರು ಮುತ್ತಿಗೆ ಹಾಕುವ ಯತ್ನ ನಡೆಸಿದರು. ಈ ವೇಳೆ ಕೆಲ ಬಿಜೆಪಿ ಕಾರ್ಯಕರ್ತರು ಈಶ್ವರಪ್ಪ ಪರ ಘೋಷಣೆ ಕೂಗಿದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿ ಕಾಂಗ್ರೆಸ್​- ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಏರ್ಪಟ್ಟಿತು. ತಕ್ಷಣಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾದ ಪೊಲೀಸರು ಕಾಂಗ್ರೆಸ್​​ ಕಾರ್ಯಕರ್ತರನ್ನು ವಶಕ್ಕೆ ಪಡೆದರು
  Published by:Seema R
  First published: