• Home
 • »
 • News
 • »
 • state
 • »
 • Karnataka Politics: ಸಿದ್ದರಾಮಯ್ಯ ಸ್ವಾಮೀಜಿಗಳನ್ನು ಹಿರಿಯ-ಕಿರಿಯ ಎಂದು ಒಡೆಯುತ್ತಿದ್ದಾರೆ: ಸಚಿವ ಈಶ್ವರಪ್ಪ ಕಿಡಿ

Karnataka Politics: ಸಿದ್ದರಾಮಯ್ಯ ಸ್ವಾಮೀಜಿಗಳನ್ನು ಹಿರಿಯ-ಕಿರಿಯ ಎಂದು ಒಡೆಯುತ್ತಿದ್ದಾರೆ: ಸಚಿವ ಈಶ್ವರಪ್ಪ ಕಿಡಿ

K.S ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ

K.S ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ

ಹಿಂದೂಗಳೆಲ್ಲ ಒಟ್ಟಾಗಿದ್ದಾರೆ, ಹಿಂದೆ ಅದರ ಪರಿಣಾಮ ಎದುರಿಸಿ ಕ್ಷೇತ್ರದಲ್ಲಿ ಸೋತಿದ್ದೀರಿ. ಸಿದ್ದರಾಮಯ್ಯನವರಿಗೆ ಇನ್ನೂ ಬುದ್ದಿ ಬಂದಿಲ್ಲ ಎಂದು ಸಚಿವ ಈಶ್ವರಪ್ಪ ಹರಿಹಾಯ್ದಿದ್ದಾರೆ.

 • Share this:

  ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಈಮುನ್ನ ವೀರಶೈವ ಲಿಂಗಾಯತರಲ್ಲಿ ಒಡಕು ತಂದರು. ಈಗ ನಾಡಿನ ವಿವಿಧ ಸ್ವಾಮಿಗಳನ್ನು ಹಿರಿಯ ಸ್ವಾಮಿಗಳು, ಕಿರಿಯ ಸ್ವಾಮಿಗಳು (Karnataka Seer) ಎಂದು ಎರಡು ಭಾಗವಾಗಿ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸ್ವಾಮಿಗಳಲ್ಲಿ ವ್ಯತ್ಯಾಸ ಮಾಡಿ ಹಿರಿಯ, ಕಿರಿಯ ಎಂದು ವಿಭಾಗಿಸಿದರೆ ಏನರ್ಥ? (Karnataka Politics)  ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಬಾಗಲಕೋಟೆಯಲ್ಲಿ  (Bagalakote) ಕಿಡಿಕಾರಿದ್ದಾರೆ. ಈಮೂಲಕ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತಿಗೆ ಸಚಿವ ಈಶ್ವರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.


  ಸರ್ವವನ್ನೂ ತ್ಯಾಗ ಮಾಡಿ ಬಂದವರಿಗೆ ಸ್ವಾಮಿಗಳು ಎನ್ನುತ್ತೇವೆ. ಸಾಧು ಸಂತರನ್ನು ಒಡೆಯುವ ಪ್ರಯತ್ನ ಸಿದ್ದರಾಮಯ್ಯ ಮಾಡ್ತಿದ್ದಾರೆ. ರಾಜ್ಯದಲ್ಲಿ ಯಾರಾದ್ರು ಸಿದ್ದರಾಮಯ್ಯನವರ ಹೇಳಿಕೆ ಸ್ವಾಗತ ಮಾಡಿದ್ದಾರಾ? ಸಿದ್ದರಾಮಯ್ಯ ಮಾತನಾಡಿದ್ದು ಕಾಂಗ್ರೆಸ್ ನವರೇ ಸ್ವಾಗತಿಸಿಲ್ಲ. ರಾಜ್ಯದ ಸ್ವಾಮಿಗಳನ್ನು ಹಿರಿಯ-ಕಿರಿಯ ಸ್ವಾಮಿಜಿಗಳು ಅಂತಾ ಒಡೆಯುವ ಕೆಲಸ ಮಾಡಬೇಡಿ ಎಂದು ಸಚಿವ ಕೆ ಎಸ್ ಈಶ್ವರಪ್ಪ ತೀಕ್ಷ್ಣ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದಾರೆ.


  ಹಿಂದೂಗಳನ್ನು ಒಡೆಯುವ ಕೆಲಸ ಮಾಡಬೇಡಿ
  ಹಿಂದೂಗಳೆಲ್ಲ ಒಟ್ಟಾಗಿದ್ದಾರೆ, ಹಿಂದೆ ಅದರ ಪರಿಣಾಮ ಎದುರಿಸಿ ಕ್ಷೇತ್ರದಲ್ಲಿ ಸೋತಿದ್ದೀರಿ. ಸಿದ್ದರಾಮಯ್ಯನವರಿಗೆ ಇನ್ನೂ ಬುದ್ದಿ ಬಂದಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.


  ಇದನ್ನೂ ಓದಿ: Controversial Statement: ಮಾಧ್ಯಮಗಳ ಮೇಲೆ ಸಿದ್ದರಾಮಯ್ಯ ಫುಲ್ ಗರಂ, ಸಿದ್ದು ಹೇಳಿಕೆ ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಹಿಂದೇಟು


  ಹಿಂದೂಗಳನ್ನು ಒಡೆಯುವ ಕೆಲಸ ಮಾಡಬೇಡಿ, ನಿಮಗೆ ಜಮೀರ ಅಹ್ಮದ್ ಕ್ಷೇತ್ರದಲ್ಲಿ ನಿಂತು ಗೆಲ್ಲಬೇಕು ಅಂತಿದ್ರೆ ಚಾಮರಾಜಪೇಟೆಯಿಂದ ಸ್ಪರ್ಧಿಸುವೆ ಅಂತಾ ಹೇಳಿಬಿಡಿ ಎಂದು ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ.


  ನನಗೆ ಸ್ವಾಮೀಜಿ ಮೇಲೆ ಗೌರವವಿದೆ
  ನನಗೆ ಹಿಂದಿನಿಂದಲೂ ಸ್ವಾಮೀಜಿಗಳ ಮೇಲೆ ಅಪಾರ ಗೌರವವಿದೆ. ನಾನು ಮಠಗಳ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ದುಪ್ಪಟ ಹಾಕಿಕೊಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕೊಡಿ ಅಂತ ಕೇಳಿದ್ದೇನೆ. ನಾನು ಸಮವಸ್ತ್ರದ ವಿರೋಧಿ ಅಲ್ಲ. ಸಮವಸ್ತ್ರದ ಜೊತೆ ಅದೇ ಬಣ್ಣದ ದುಪ್ಪಟಕ್ಕೆ ಅವಕಾಶ ನೀಡಿ ಅಂತ ಕೇಳಿದ್ದೇನೆ, ಇದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ. ನಾನು ಸಲಹೆ ಕೊಟ್ಟಿದ್ದೇನೆ. ಸ್ವೀಕರಿಸುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಸಿದ್ದರಾಮಯ್ಯ ಮಾಧ್ಯಮಗಳ ಮೇಲೆ ಫುಲ್​ ಗರಂ ಆಗಿದ್ದಾರೆ,


  ಇದನ್ನೂ ಓದಿ: Salam Mangalarathi: ಸಲಾಂ ಮಂಗಳಾರತಿ ಹೆಸರಲ್ಲಿ ಪೂಜೆ ನಡೆಯಲ್ಲ: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಅರ್ಚಕರಿಂದ ಮಾಹಿತಿ


  ಸಿದ್ದು ಹೇಳಿಕೆ ಸಮರ್ಥಿಸಿಕೊಳ್ಳಲು ಕಾಂಗ್ರೆಸ್​ ನಾಯಕರ ಹಿಂದೇಟು
  ಮಠಾಧೀಶರ ವಸ್ತ್ರದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಕುರಿತು ಕಾಂಗ್ರೆಸ್​ ನಾಯಕರು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕ್ತಿದ್ದಾರೆ. ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲಲು ಕಾಂಗ್ರೆಸ್​ ಶಾಸಕರು ಹಿಂದೇಟು ಹಾಕ್ತಿದ್ದಾರೆ. ಈ ಬಗ್ಗೆ ಪ್ರಿಯಾಂಕ್​ ಖರ್ಗೆ ಅವರನ್ನ ಕೇಳಿದ್ರೆ ಅವ್ರ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಅವರನ್ನೇ ಕೇಳಿ ಎಂದಿದ್ದಾರೆ.


  ಟ್ವೀಟ್​ ಮೂಲಕ ಸಿದ್ದರಾಮಯ್ಯ ಸ್ಪಷ್ಟನೆ
  ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ರಾಜಕೀಯ ವಿರೋಧಿಗಳು ದುರುದ್ದೇಶದಿಂದ ಹೀಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲ ಶ್ರೀಗಳಿಗೆ ಇದು ಅರ್ಥವಾಗಿರುವ ಕಾರಣ ಮೌನವಾಗಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕ ನಮನಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: