ಸಿದ್ದರಾಮಯ್ಯನವರೇ ನಿಮ್ಮನ್ನು ಸೋಲಿಸಲು ಕಾಂಗ್ರೆಸ್​​ನವರೇ ಕಾಯುತ್ತಿದ್ದಾರೆ: KS Eshwarappa ಒಳಗುದ್ದು

ಸಿದ್ದರಾಮಯ್ಯ ಟೋಪಿ ಹಾಕೊಂಡು ಟಿಪ್ಪು ಜಯಂತಿ ಆಚರಿಸಿದ್ದಾರೆ. ಅಲ್ಪಸಂಖ್ಯಾತರನ್ನು ಓಲೈಸಲು ಶಾದಿ ಭಾಗ್ಯ ಕೊಟ್ಟರು. ಸಿದ್ದರಾಮಯ್ಯ ಹಲವು ಭಾಗ್ಯ ಕೊಟ್ಟೆ ಎಂದು ಹೇಳಿದರೂ ಜನ 74 ಸೀಟಿಗೆ ಇಳಿಸಿದರು. ಇದಕ್ಕೆ ಜಾತಿ ರಾಜಕಾರಣವೇ ಕಾರಣ.

ಸಚಿವ ಈಶ್ವರಪ್ಪ

ಸಚಿವ ಈಶ್ವರಪ್ಪ

  • Share this:
ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಬಿಜೆಪಿ ಜನಸ್ವರಾಜ್ ಯಾತ್ರೆ (BJP Jana Swaraj Yatra) ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ಸಚಿವರಾದ ಕೆ.ಎಸ್.ಈಶ್ವರಪ್ಪ (KS Eshwarappa) ಹಾಗೂ ಆರ್​.ಅಶೋಕ್​ (R.Ashoka) ತೀವ್ರ ವಾಗ್ದಾಳಿ ನಡೆಸಿದರು. ಈಶ್ವರಪ್ಪ ಭಾಷಣದುದ್ದಕ್ಕು ಸಿದ್ದರಾಮಯ್ಯ ಟಾರ್ಗೆಟ್ ಮಾಡಿದ ಈಶ್ವರಪ್ಪ, ಕಾಂಗ್ರೆಸ್ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಬೈದಿದ್ದಾರೆ. ಮುಂದಿನ‌ ಚುನಾವಣೆಯಲ್ಲಿ ಎಲ್ಲರೂ ಸೇರಿಕೊಂಡು ನಿಮ್ಮನ್ನ ಸೋಲಿಸುತ್ತಾರೆ ಸಿದ್ದರಾಮಯ್ಯನವರೇ. ಬಾದಾಮಿ ಕ್ಷೇತ್ರದಲ್ಲೂ ಸಿದ್ದರಾಮಯ್ಯನವರನ್ನ ಸೋಲಿಸಲು ಕಾಯುತ್ತಿದ್ದಾರೆ. ಉಪಚುನಾವಣೆಯಲ್ಲಿ ಕುರುಬರ ನಾಯಕ ನಾನೇ ಎಂದು ಸಿದ್ದರಾಮಯ್ಯ ಪ್ರಚಾರ ಮಾಡಿದ್ರು. ಸಿಂದಗಿ ಕ್ಷೇತ್ರದಲ್ಲಿ 35 ಸಾವಿರ ಕುರುಬರ ಓಟ್ ಇದೆ, ಆದ್ರೂ ಸಿಂದಗಿಯಲ್ಲಿ ಬಿಜೆಪಿ ಗೆದ್ದಿತು. ಸುಳ್ಳಿಗೆ ಇನ್ನೊಂದೆ ಹೆಸರೇ ಸಿದ್ದರಾಮಯ್ಯ ಎಂದು ಮಾತಿನಲ್ಲೇ ತಿವಿದರು.

ದುರಹಂಕಾರದ ಕಾಂಗ್ರೆಸ್ ಗೆ  ಬುದ್ಧಿ ಕಲಿಸಿದ್ದಾರೆ

ಕಾಂಗ್ರೆಸ್​​​​ನಲ್ಲಿ  ಎರಡು ಗುಂಪುಗಳಿವೆ, ಅಲ್ಪಸಂಖ್ಯಾತರ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಇದು ಜಗಜ್ಜಾಹೀರಾಗಿದೆ. ಲೋಕಸಭಾ ಚುನಾವಣೆಯಲ್ಲಿ ಈಗಾಗಲೇ ರಾಜ್ಯದ ಜನರು ದುರಹಂಕಾರದ ಕಾಂಗ್ರೆಸ್ ಗೆ  ಬುದ್ಧಿ ಕಲಿಸಿದ್ದಾರೆ. ಕಾಂಗ್ರೆಸ್ ನಿಂದ ಸೋಮಶೇಖರ್ ನೇತೃತ್ವದಲ್ಲಿ 17 ಜನರು ಬಿಜೆಪಿಗೆ ಬರದಿದ್ದರೆ ನಾನು ಮಂತ್ರಿಯಾಗುತ್ತಿರಲಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ವಿಧಾನಪರಿಷತ್ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ 15 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕದ್ದು ಮುಚ್ಚಿ ಕ್ಯೂನಲ್ಲಿ ನಿಂತು ಲಸಿಕೆ ಹಾಕಿಸಿಕೊಂಡ್ರು

ಕಳೆದ ಬಾರಿ ಕಾಂಗ್ರೆಸ್ ನವರು ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ದುಡ್ಡು ಹಂಚಿ ಗೆಲುವು ಸಾಧಿಸಿದರು. ಈ ಬಾರಿ ದುಡ್ಡು ತಗೊತೀರೊ ಬಿಡ್ತಿರೋ ಗೊತ್ತಿಲ್ಲ. ಆದ್ರೆ ಈ ಬಾರಿ ರಘು ಕೌಟಿಲ್ಯ ಗೆ ಮತ ನೀಡಿ ಗೆಲ್ಲಿಸಿ. ರಘು ಕೌಟಿಲ್ಯ ವಿಜಯೋತ್ಸಕ್ಕೆ ನಾನು ಮತ್ತೆ ಚಾಮರಾಜನಗರಕ್ಕೆ ಬರುತ್ತೇನೆ ಎಂದರು. ಇನ್ನು ಲಸಿಕೆ ಹಾಕಿಸಿಕೊಂಡ್ರೆ ಗಂಡಸ್ತನ ಹೋಗುತ್ತೆ ಎಂದು ಕಾಂಗ್ರೆಸ್ ನವರು ಅಪಪ್ರಚಾರ ಮಾಡಿದ್ರು. ನಂತರದ ದಿನಗಳಲ್ಲಿ ಕಾಂಗ್ರೆಸ್ ನವರೇ ಕದ್ದು ಮುಚ್ಚಿ ಕ್ಯೂನಲ್ಲಿ ನಿಂತು ಲಸಿಕೆ ಹಾಕಿಸಿಕೊಂಡ್ರು ಎಂದು ಸಚಿವ ಈಶ್ವರಪ್ಪ ಲೇವಡಿ ಮಾಡಿದವರು.

ಇದನ್ನೂ ಓದಿ: ಕುಮಾರಸ್ವಾಮಿ ರೀತಿ ದಿನಕ್ಕೆ ಎರಡು ಬಾರಿ ಕ್ಯಾಮೆರಾ ಮುಂದೆ ನಿಲ್ಲೋಕೆ ಆಗುತ್ತಾ? Araga Jnanendra ತಿರುಗೇಟು

ಕಾಂಗ್ರೆಸ್ ಗೆಜ್ಜೆ ಕಟ್ಟಿಕೊಂಡು ಸಂಭ್ರಮಾಚರಣೆ ಮಾಡಿದೆ

ಜನಸ್ವರಾಜ್ ಸಮಾವೇಶದಲ್ಲಿ ಸಚಿವ ಆರ್.ಅಶೋಕ್ ಭಾಷಣ ಮಾಡಿ, ಕಾಂಗ್ರೆಸ್-ಜೆಡಿಎಸ್ ಇನ್ನೂ  ಚುನಾವಣಾ ಪ್ರಚಾರ ಆರಂಭ ಮಾಡಿಲ್ಲ. ಜೆಡಿಎಸ್ ಅಂತೂ ಕಾಣೆಯಾಗಿ ಹೋಗಿದೆ. ಜೆಡಿಎಸ್ ಕುಟುಂಬ ರಾಜಕಾರಣ ಮಾಡಿ ಅಸ್ತಿತ್ವ ಕಳೆದುಕೊಂಡಿದೆ. ಇನ್ನೇನಿದ್ದರು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ಫೈಟ್  ಎಂದು ಜೆಡಿಎಸ್ ಪಕ್ಷವನ್ನು ಕುಟುಕಿದರು. ಕೃಷಿ ಕಾಯ್ದೆ ವಾಪಾಸ್ ತೆಗೆದುಕೊಂಡಿರುವುದಕ್ಕೆ ಕಾಂಗ್ರೆಸ್ ಗೆಜ್ಜೆ ಕಟ್ಟಿಕೊಂಡು ಸಂಭ್ರಮಾಚರಣೆ ಮಾಡಿದೆ. ಪ್ರತಿಭಟನೆಗೆ ಕಾಂಗ್ರೆಸ್ ನವರನ್ನು ರೈತರು ಸೇರಿಸಿಕೊಳ್ಳಲಿಲ್ಲ. ಕಾಂಗ್ರೆಸ್ ಸಂಭ್ರಮ ನಡೆಸುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

ಎಲ್ಲಾ ಭಾಗ್ಯ ಕೊಟ್ಟರು 74 ಸೀಟಿಗೆ ಇಳಿಸಿದರು

ಕಾಂಗ್ರೆಸ್ ರಾಜ್ಯದಲ್ಲಿ ಜಾತಿ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಟೋಪಿ ಹಾಕೊಂಡು ಟಿಪ್ಪು ಜಯಂತಿ ಆಚರಿಸಿದ್ದಾರೆ. ಅಲ್ಪಸಂಖ್ಯಾತರನ್ನು ಓಲೈಸಲು ಶಾದಿ ಭಾಗ್ಯ ಕೊಟ್ಟರು. ಸಿದ್ದರಾಮಯ್ಯ ಹಲವು ಭಾಗ್ಯ ಕೊಟ್ಟೆ ಎಂದು ಹೇಳಿದರೂ ಜನ 74 ಸೀಟಿಗೆ ಇಳಿಸಿದರು. ಇದಕ್ಕೆ ಜಾತಿ ರಾಜಕಾರಣವೇ ಕಾರಣ. ಕಾಂಗ್ರೆಸ್ ದೇಶದ ಎಲ್ಲಾ ರಾಜ್ಯದಲ್ಲೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ರಾಜ್ಯದಲ್ಲಿ 29ನೇ ತಾರೀಖಿನವರಗೂ ಮಳೆ ಮುಂದುವರೆಯುತ್ತದೆ. ಹವಾಮಾನ ಇಲಾಖೆ ಈ ಬಗ್ಗೆ ಮುನ್ಸೂಚನೆ ನೀಡಿದೆ. ನೀತಿ ಸಂಹಿತೆ ಕಾರಣ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಸಭೆ ನಡೆಸಲು ಚುನಾವಣಾ ಆಯೋಗದ ಅನುಮತಿ ಕೋರಲಾಗಿದೆ. 130 ಕೋಟಿ ಸಬ್ಸಿಡಿಯನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಬೆಳೆ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
Published by:Kavya V
First published: