ಕಾಂಗ್ರೆಸ್-ಜೆಡಿಎಸ್​ ಮುಳುಗುತ್ತಿರುವ ಹಡಗು, ಇಬ್ಬರೂ ಅಪ್ಪಿಕೊಂಡೇ ಸಾಯ್ತಾರೆ; ಸಚಿವ ಈಶ್ವರಪ್ಪ ಲೇವಡಿ

ಮುಳುಗುತ್ತಿರುವ ಹಡಗಿನಲ್ಲಿ ಯಾರಿರುತ್ತಾರೆ ಎಂಬ ಕಾರಣಕ್ಕೆ ಜೆಡಿಎಸ್​- ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟು ಬಂದರು. ನಾವು ಸರ್ಕಾರ ರಚಿಸಿದ್ದೇ ಅನರ್ಹ ಶಾಸಕರಿಂದ. ಈಗ ಅವರ ಋಣ ತೀರಿಸಬೇಕಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

news18-kannada
Updated:December 3, 2019, 1:04 PM IST
ಕಾಂಗ್ರೆಸ್-ಜೆಡಿಎಸ್​ ಮುಳುಗುತ್ತಿರುವ ಹಡಗು, ಇಬ್ಬರೂ ಅಪ್ಪಿಕೊಂಡೇ ಸಾಯ್ತಾರೆ; ಸಚಿವ ಈಶ್ವರಪ್ಪ ಲೇವಡಿ
ಸಚಿವ ಕೆ.ಎಸ್​. ಈಶ್ವರಪ್ಪ
  • Share this:
ವಿಜಯಪುರ (ಡಿ. 3):  ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೆರಡೂ ಮುಳುಗುತ್ತಿರುವ ಹಡಗು. ಎರಡೂ ಪಕ್ಷದವರು ಒಬ್ಬರಿಗೊಬ್ಬರು ಅಪ್ಪಿಕೊಂಡು ಮುಳುಗುತ್ತಾರೆ. ಯಾವುದೇ ಕಾರಣಕ್ಕೂ ಇಬ್ಬರೂ ಬದುಕುವುದಿಲ್ಲ ಎಂದು ವಿಜಯಪುರದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಮುಳುಗುತ್ತಿರುವ ಹಡಗಿನಲ್ಲಿ ಯಾರಿರುತ್ತಾರೆ? ಎಂಬ ಕಾರಣಕ್ಕೆ ಜೆಡಿಎಸ್​- ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟು ಬಂದರು. ನಾವು ಸರ್ಕಾರ ರಚಿಸಿದ್ದೇ ಅನರ್ಹ ಶಾಸಕರಿಂದ. ಈಗ ಅವರ ಋಣ ತೀರಿಸಬೇಕಾಗಿದೆ. ಹಾಗಾಗಿ, ಅನರ್ಹ ಶಾಸಕರನ್ನು ಗೆಲ್ಲಿಸಿ ಎಂದು ವಿಜಯಪುರದಲ್ಲಿ ಸಚಿವ ಈಶ್ವರಪ್ಪ ಮನವಿ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಎಲ್ಲರನ್ನೂ ಬೈಯುವ ಚಾಳಿಯಿದೆ. ಅವರು ಸದಾ ಪ್ರಧಾನಿ ಮೋದಿಯನ್ನು ಬೈಯುತ್ತಾರೆ. ಬೈದವರಿಗೆ ಜನಗಳು ಮತ ಕೊಡಲ್ಲ,ಕೆಲಸ ಮಾಡಿದವರಿಗೆ ಮತ ಕೊಡುತ್ತಾರೆ ಎಂಬುದನ್ನು ಇಲ್ಲಿನ ಜನರು ಸಾಬೀತುಪಡಿಸುವ ಸಮಯ ಬಂದಿದೆ ಎಂದು ಈಶ್ವರಪ್ಪ ಮತಯಾಚನೆ ಮಾಡಿದ್ದಾರೆ.

Namma Metro: ಬೆಂಗಳೂರು ಮೆಟ್ರೋದಲ್ಲಿ ಕೊಂಡೊಯ್ಯಬಹುದು ಪೆಪ್ಪರ್​ ಸ್ಪ್ರೇ; ಮಹಿಳೆಯರ ಸುರಕ್ಷತೆಗೆ ಹೊಸ ಕ್ರಮ

ಉಪ ಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ನಾವು ಮಂತ್ರಿ ಮಾಡುತ್ತೇವೆ. ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮ ಪಕ್ಷ ಸಂಘಟನೆ ಉತ್ತಮವಾಗಿದೆ. ಬಿಜೆಪಿಯ 15 ಅಭ್ಯರ್ಥಿಗಳು ಉಪ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್​ನಲ್ಲಿ ಎಲ್ಲ ನಾಯಕರೂ ಛಿದ್ರವಾಗಿ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಅವರಲ್ಲಿ ಸಂಘಟನೆಯ ಪ್ರಶ್ನೆಯೇ ಇಲ್ಲ. ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂಬುದು ವದಂತಿ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

Bangalore Rains: ಬೆಂಗಳೂರಿನಲ್ಲಿ ಇಂದು ಎಷ್ಟು ಗಂಟೆಗೆ ಮಳೆಯಾಗಲಿದೆ ಗೊತ್ತಾ?

ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಶಾಸಕರ ಹೆಸರೂ ಬಹಿರಂಗವಾಗಿಲ್ಲ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ. ಪೂಟೇಜ್ ಡಿಲೀಟ್ ಮಾಡುವ ಕುರಿತು ಒತ್ತಡ ಹಾಕುತ್ತಿದ್ದಾರೆ ಎಂಬುದೆಲ್ಲ ಅಂತೆ ಕಂತೆಯಷ್ಟೇ. ಯಾವುದೇ ಒತ್ತಡ ಇಲ್ಲ, ಒತ್ತಡಕ್ಕೂ ಮಣಿಯಲ್ಲ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳಿದ್ದಾರೆ. ಅಧಿಕಾರಿಗಳು ಶಾಮೀಲಾಗಿದ್ದರೂ ಶಿಕ್ಷೆಯಾಗುತ್ತದೆ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
First published: December 3, 2019, 12:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading