ಜೆಡಿಎಸ್​ ಕಾರ್ಯಕರ್ತರು ಎಲ್ಲಿದ್ದಾರೆಂದು ಮುಟ್ಟಬೇಕು?: ದೇವೇಗೌಡರಿಗೆ ಈಶ್ವರಪ್ಪ ವ್ಯಂಗ್ಯ

ನಾವ್ಯಾಕ್ರಿ ಜೆಡಿಎಸ್​​ ಕಾರ್ಯಕರ್ತರನ್ನು ಮುಟ್ಟೋಣ? ಮೊದಲು ಜೆಡಿಎಸ್​ ಕಾರ್ಯಕರ್ತರು ಎಲ್ಲಿದ್ದಾರೆ ಹುಡುಕಲಿ . ಆ ನಂತರ ಮುಟ್ಟೋದು, ಬಿಡೋದು. ನಾನೂ ಜೆಡಿಎಸ್​ ಕಾರ್ಯಕರ್ತರನ್ನು ಎಲ್ಲಿದ್ದಾರೆಂದು ಭೂತಗನ್ನಡಿ ಹಾಕಿ ಹುಡುಕುತ್ತಿದ್ದೇನೆ

Seema.R | news18-kannada
Updated:February 29, 2020, 6:12 PM IST
ಜೆಡಿಎಸ್​ ಕಾರ್ಯಕರ್ತರು ಎಲ್ಲಿದ್ದಾರೆಂದು ಮುಟ್ಟಬೇಕು?: ದೇವೇಗೌಡರಿಗೆ ಈಶ್ವರಪ್ಪ ವ್ಯಂಗ್ಯ
ಕೆಎಸ್ ಈಶ್ವರಪ್ಪ
  • Share this:
ಕೊಪ್ಪಳ(ಫೆ. 29): ಜೆಡಿಎಸ್​ ಕಾರ್ಯಕರ್ತರನ್ನು ಕೆಣಕಿದರೆ ಸುಮ್ಮನಿರಲ್ಲ ಎಂಬ ಮಾಜಿ ಪ್ರಧಾನಿ ದೇವೇಗೌಡ ಅವರ ಎಚ್ಚರಿಕೆಗೆ ವ್ಯಂಗ್ಯವಾಡಿರುವ ಸಚಿವ ಕೆಎಸ್​ ಈಶ್ವರಪ್ಪ, ಜೆಡಿಎಸ್​ ಕಾರ್ಯಕರ್ತರು ಎಲ್ಲಿದ್ದಾರೆಂದು ಮುಟ್ಟಬೇಕು ಎಂದು ಪ್ರಶ್ನಿಸಿದ್ದಾರೆ. 

ಮಂಡ್ಯದಲ್ಲಿ ಜೆಡಿಎಸ್​ ಮುಖಂಡನ ಕಲ್ಲು ಕ್ವಾರೆಗೆ ತಡೆ ನೀಡಿರುವ ಹಿನ್ನೆಲೆ ಅಧಿಕಾರಿ ವಿರುದ್ಧ ದೇವೇಗೌಡ ಅವರು ಗುಡುಗಿದರು. ಈ ವೇಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ದೇವೇಗೌಡರು, ಮೂರು ವರ್ಷ ಬಿಜೆಪಿ ಅಧಿಕಾರ ನಡೆಸಲು ನಾವು ಯಾವುದೇ ತೊಂದರೆ ನೀಡುವುದಿಲ್ಲ. ಆದರೆ, ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವರು, ನಾವ್ಯಾಕ್ರಿ ಜೆಡಿಎಸ್​​ ಕಾರ್ಯಕರ್ತರನ್ನು ಮುಟ್ಟೋಣ? ಮೊದಲು ಜೆಡಿಎಸ್​ ಕಾರ್ಯಕರ್ತರು ಎಲ್ಲಿದ್ದಾರೆ ಹುಡುಕಲಿ. ಆ ನಂತರ ಮುಟ್ಟೋದು, ಬಿಡೋದು. ನಾನೂ ಜೆಡಿಎಸ್​ ಕಾರ್ಯಕರ್ತರನ್ನು ಎಲ್ಲಿದ್ದಾರೆಂದು ಭೂತಗನ್ನಡಿ ಹಾಕಿ ಹುಡುಕುತ್ತಿದ್ದೇನೆ ಎಂದು ಲೇವಡಿ ಮಾಡಿದರು.

ದೇವೇಗೌಡ ಅವರು ತಾವೂ ಸೋತು, ಮೊಮ್ಮಗನನ್ನೂ ಸೋಲಿಸಿದರು. ರಾಜ್ಯದಲ್ಲಿ ಈಗ ಜೆಡಿಎಸ್​ ಪಕ್ಷ ಎಲ್ಲಿದೆ? ಅವರು ಎಲ್ಲದರೂ ಇದ್ದರೆ ತಾನೇ ಮುಟ್ಟೋದಕ್ಕೆ ಅವಕಾಶ ಎಂದರು.

ಜೆಡಿಎಸ್​ ನಾಯಕರು ಪ್ರಚಾರಕ್ಕಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಹೊಡೆಯುವ ಪಕ್ಷ ಅಲ್ಲ, ಅಪ್ಪಿಕೊಳ್ಳುವ ಪಕ್ಷ ಎಂಬುದು ನೆನಪಿರಲಿ ಎಂದರು.

ಇದನ್ನು ಓದಿ: ಮುಂದಿನ ಚುನಾವಣೆಯಲ್ಲಿ ಯಾರ ಹಂಗಿಲ್ಲದೆ ಸರ್ಕಾರ ರಚನೆ; ಎಚ್​ಡಿ ಕುಮಾರಸ್ವಾಮಿ ವಿಶ್ವಾಸ

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ‌ ಮಾಡುತ್ತದೆ ಎಂಬ ಎಚ್ ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಭ್ರಮೆ.  ದಿನಾಲೂ ಸರ್ಕಾರ ರಚಿಸಿದಂತೆ, ಸಿಎಂ ಆದಂತೆ ಕನಸು ಬೀಳುತ್ತದೆ. ಆದರೆ ಸಿಎಂ ಖುರ್ಚಿ ಅವರ ಭ್ರಮೆ. ಬೇರೆ ಕೆಲಸ ಇಲ್ಲ ಅದಕ್ಕಾಗಿ ಅವರು  ಬಾಯಿಗೆ ಬಂದಂತೆ ಮಾತಾಡುತ್ತಾರೆ ಎಂದೂ ಟೀಕೆ ಮಾಡಿದರು.(ವರದಿ: ಬಸವರಾಜ್​ ಕರುಗಲ್)
First published: February 29, 2020, 6:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading