ಸಿದ್ಧರಾಮಯ್ಯ ಸಿಎಂ ಆಗಿದ್ದವರು - ಪ್ರಧಾನಿಯವರಿಗೆ ಯಾವ ರೀತಿ ಪದ ಬಳಸಬೇಕೆಂಬ ಸಾಮಾನ್ಯ ಜ್ಞಾನ ಇಲ್ಲ ; ಕೆ.ಎಸ್.ಈಶ್ವರಪ್ಪ

ನಾವು ಅವರ ಸರ್ಕಾರ ಇದ್ದ ಸಮಯದಲ್ಲಿ ಹಣ ಬಿಡುಗಡೆ ಒತ್ತಾಯ ಮಾಡಿದ್ವಿ, ಅದರೆ ಇವರಂತೆ ಭಾಷೆ ಬಳಕೆ ಮಾಡಿರಲಿಲ್ಲ. ಸಿದ್ದರಾಮಯ್ಯ ಅವರ ಭಾಷೆ, ಪದ ಬಳಕೆಯನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

news18-kannada
Updated:January 3, 2020, 2:23 PM IST
ಸಿದ್ಧರಾಮಯ್ಯ ಸಿಎಂ ಆಗಿದ್ದವರು - ಪ್ರಧಾನಿಯವರಿಗೆ ಯಾವ ರೀತಿ ಪದ ಬಳಸಬೇಕೆಂಬ ಸಾಮಾನ್ಯ ಜ್ಞಾನ ಇಲ್ಲ ; ಕೆ.ಎಸ್.ಈಶ್ವರಪ್ಪ
ಸಚಿವ ಈಶ್ವರಪ್ಪ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
  • Share this:
ಶಿವಮೊಗ್ಗ(ಜ.03): ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಪ್ರಧಾನಿಯವರಿಗೆ ಯಾವ ರೀತಿಯ ಪದಗಳನ್ನು ಬಳಸಬೇಕು ಎಂಬ ಜ್ಞಾನ ಇಲ್ಲದೇ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.

ಪ್ರಧಾನ ಮಂತ್ರಿಗೆ ಏನು ಕೇಳಬೇಕು ಕೇಳಲಿ, ಅದಕ್ಕೂ ಭಾಷೆ ಇದೆ. ಅದರೆ ಸಿದ್ದರಾಯಮಯ್ಯ ಬಳಸುವ ಭಾಷೆ ನೋಡಿ ಇಡೀ ರಾಜ್ಯ, ದೇಶದಲ್ಲಿ ಇಂತವರು ಮುಖ್ಯಮಂತ್ರಿ ಆಗಿದ್ರ ಎಂಬ ನೋವು ಜನರನ್ನು ಕಾಡುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇಡೀ ದೇಶದಲ್ಲಿ ಇವತ್ತು ಜಲ ಪ್ರಳಯ ಆಗಿದೆ. ಈಗಾಗಲೇ ಕೇಂದ್ರದಿಂದ ಸಾಕಷ್ಟು ಹಣ ಬಂದಿದೆ. ನಮ್ಮ ರಾಜ್ಯಕ್ಕೆ ಹಣ ಬಂದಿದೆ, ಬಂದಿಲ್ಲ ಅಂತೇನು ಇಲ್ಲ, ಇನ್ನು ಬರಬೇಕು ಎಂದು ಹೇಳಿದ್ದಾರೆ. ಹಣ ಬರಬೇಕು ಅನ್ನೋ ಕಾರಣಕ್ಕೆ ಪ್ರಧಾನ ಮಂತ್ರಿಯನ್ನು ಸಿಎಂ ಭೇಟಿ ಮಾಡಿದ್ದಾರೆ. ನಾವು ಸಹ ಇನ್ನು ಒತ್ತಾಯ ಮಾಡುತ್ತೇವೆ ಅದಷ್ಟು ಬೇಗ ಹಣ ಬಿಡುಗಡೆ ಮಾಡಿ ಎಂದು ತಿಳಿಸುತ್ತೇವೆ.

ಸಿದ್ದರಾಮಯ್ಯ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಬಳಸುತ್ತಿರುವ ಪದ ನೋಡಿದರೆ ನಿಜಕ್ಕೂ ಬೇಸರ ಆಗುತ್ತೆ. ನಾವು ಅವರ ಸರ್ಕಾರ ಇದ್ದ ಸಮಯದಲ್ಲಿ ಹಣ ಬಿಡುಗಡೆ ಒತ್ತಾಯ ಮಾಡಿದ್ವಿ, ಅದರೆ ಇವರಂತೆ ಭಾಷೆ ಬಳಕೆ ಮಾಡಿರಲಿಲ್ಲ. ಸಿದ್ದರಾಮಯ್ಯ ಅವರ ಭಾಷೆ, ಪದ ಬಳಕೆಯನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : ಅಂಗನವಾಡಿಗೆ ಅವಧಿ ಮೀರಿದ ಮಸಾಲೆ ಪೌಡರ್​ ವಿತರಣೆ; ಮಕ್ಕಳ ಜೀವದ ಬಗ್ಗೆ ಅಧಿಕಾರಿಗಳಿಗೆ ಇಲ್ವಾ ಕಾಳಜಿ..!

ವಿಭೂತಿ ರುದ್ರಾಕ್ಷಿ ಹಾಕಿಕೊಂಡಿದ್ದಕ್ಕೆ ಟೀಕೆ ಮಾಡಿದ್ದಾರೆ. ನಿಮಗೆ ದೇವರ ಬಗ್ಗೆ ಧರ್ಮದ ಬಗ್ಗೆ ನಂಬಿಕೆ ಇಲ್ಲಿ ಹೀಗಾಗಿ ಹಾಳಾಗಿ ಹೋಗಿದ್ರೀರಾ ಎಂದು ಟೀಕೆ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ. ನಮಗೆ ದೇವರು ಮತ್ತು ಧರ್ಮದ ಬಗ್ಗೆ ನಂಬಿಕೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
First published: January 3, 2020, 2:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading