ದೊರೆಸ್ವಾಮಿಯವರು ಪಕ್ಷಾತೀತರಾಗಿ ನಡೆದುಕೊಳ್ಳಬೇಕು; ಯತ್ನಾಳ್​ ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ

ದೊರೆಸ್ವಾಮಿಯವರು ಪಕ್ಷಾತೀತರಾಗಿರಬೇಕು. ಕಾಂಗ್ರೆಸ್ ಏನು ಹೇಳುತ್ತದೋ ಅದನ್ನೇ ಅವರು ಹೇಳುತ್ತಾರೆ. ಯಾವುದೋ ಒಂದು ಪಕ್ಷದ ಪರವಾಗಿರಬಾರದು. ಹೀಗಿದ್ದರೆ ಅವರ ಬಗ್ಗೆ ಹೇಗೆ ಗೌರವ ಬರುತ್ತದೆ?. ನಾನೂ ದೊರೆಸ್ವಾಮಿ ಹೇಳಿಕೆಗಳ ಖಂಡಿಸುತ್ತೇನೆ

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

  • Share this:
ಶಿವಮೊಗ್ಗ (ಫೆ.27): ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ತಮ್ಮ ಪಕ್ಷದ ನಾಯಕನ​​ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸಚಿವ ಈಶ್ವರಪ್ಪ, ಯತ್ನಾಳ್​ ಹೇಳಿಕೆ ಬಗ್ಗೆ ಯೋಚನೆ ಮಾಡಬೇಕು ಎಂದಿದ್ದಾರೆ. 

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ದೊರೆಸ್ವಾಮಿಯವರು ಪಕ್ಷಾತೀತರಾಗಿರಬೇಕು. ಕಾಂಗ್ರೆಸ್ ಏನು ಹೇಳುತ್ತದೋ ಅದನ್ನೇ ಅವರು ಹೇಳುತ್ತಾರೆ. ಯಾವುದೋ ಒಂದು ಪಕ್ಷದ ಪರವಾಗಿರಬಾರದು. ಹೀಗಿದ್ದರೆ ಅವರ ಬಗ್ಗೆ ಹೇಗೆ ಗೌರವ ಬರುತ್ತದೆ?. ನಾನೂ ದೊರೆಸ್ವಾಮಿ ಹೇಳಿಕೆಗಳ ಖಂಡಿಸುತ್ತೇನೆ ಎಂದರು.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಲೆಗಡುಕ ಎಂದು ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಟೀಕಿಸಿದ್ದರು. ಪ್ರಪಂಚ ಮೆಚ್ಚಿದ ಪ್ರಧಾನಿಯನ್ನು ಒಬ್ಬ ಸಿಎಂ  ಸಿದ್ಧರಾಮಯ್ಯ ಹೀಗಳೆದಿದ್ದರು. ಈ ರೀತಿ ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್​ ಪಕ್ಷ ಅವರನ್ನು ಪಕ್ಷದಿಂದಲೇ ಹೊರಹಾಕಬೇಕಿತ್ತು. ಆಗ ಅವರು ಸುಮ್ಮನಿದ್ದರು. ಈಗ ಯತ್ನಾಳ್​ ಹೇಳಿಕೆಗೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ಹರಿಹಾಯ್ದರು.

ದೊರೆಸ್ವಾಮಿಯವರ ಬಳಿ ಕ್ಷಮೆಯಾಚಿಸುವವರೆಗೂ ವಿಧಾನಸಭೆ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂಬ ಸಿದ್ದರಾಮಯ್ಯ ಎಚ್ಚರಿಕೆಗೆ ಸವಾಲ್​ ಹಾಕಿದ ಅವರು, ಅದು ಹೇಗೆ ಅವರು ಬಿಡುವುದಿಲ್ಲ. ನಾನು ನೋಡುತ್ತೇನೆ ಎಂದು ಪ್ರತಿ ಸವಾಲ್​ ಹಾಕಿದರು.

ಇದನ್ನು ಓದಿ: ಎಚ್​.ಎಸ್. ದೊರೆಸ್ವಾಮಿ ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆಂದು ಗೊತ್ತಿದೆ; ಫೇಸ್​ಬುಕ್​ನಲ್ಲಿ ಯತ್ನಾಳ್ ವಾಗ್ದಾಳಿ

ಇವರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿಧಾನಸೌಧ ಜಾಗವಲ್ಲ. ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯಗೆ ತಾನು ಏನು ಹೇಳಿಕೆ ನೀಡುತ್ತಿದ್ದೇನೆ ಎಂಬ ಕಲ್ಪನೆ ಕೂಡ ಇಲ್ಲ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವ ವ್ಯಕ್ತಿಗಳ ವಿರುದ್ಧ ಒಂದು ಖಂಡನಾ ಹೇಳಿಕೆ ನೀಡಿದ್ದು ಬಿಟ್ಟರೆ, ಸಿದ್ಧರಾಮಯ್ಯನವರು, ಒಂದು ಪ್ರತಿಭಟನೆ ನಡೆಸಿಲ್ಲ ಎಂದು ಅವರ ವಿರುದ್ಧ  ಹರಿಹಾಯ್ದರು.
First published: