ಸಿದ್ದರಾಮಯ್ಯ ಬರಲಿ, ಬಾರದಿರಲಿ ಎಸ್ಟಿ ಮೀಸಲಾತಿ ಹೋರಾಟ ಮುಂದುವರಿಯಲಿದೆ; ಸಚಿವ ಕೆ.ಎಸ್.ಈಶ್ವರಪ್ಪ

ಕುರುಬ ಸಮುದಾಯದ ಹೋರಾಟದ ಹಿಂದೆ ಆರ್ ಎಸ್ ಎಸ್ ಇದೆ ಎಂಬ‌ ಸಿದ್ದರಾಮಯ್ಯ ಅವರ ಹೇಳಿಕೆ,  ಹೋರಾಟದಲ್ಲಿ ಭಾಗಿಯಾದ ಎಲ್ಲರಿಗೂ ನೋವು ಉಂಟು ಮಾಡಿದೆ. ಅಷ್ಟಕ್ಕೂ ಈ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆಗಳು ನಮಗೆ ಅಗತ್ಯವಿಲ್ಲ ಎಂದು ಕಿಡಿಕಾರಿದರು.

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

  • Share this:
ಕೋಲಾರ(ಫೆ.15): ಕುರುಬ ಸಮುದಾಯದ ಎಸ್ಟಿ ಮೀಸಲಾತಿ ಹೋರಾಟದಿಂದ  ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ. ಕಾಗಿನೆಲೆ ಸ್ವಾಮೀಜಿಗಳ ನಿರ್ದೇಶನದಂತೆ ಮುಂದಿನ ಹೋರಾಟ ಇರುತ್ತದೆ ಎಂದು ಕೋಲಾರದಲ್ಲಿ ಸಚಿವ ಈಶ್ಚರಪ್ಪ ಹೇಳಿಕೆ ನೀಡಿದ್ದಾರೆ. ಕುಟುಂಬ ಸಮೇತ‌ ತಿರುಪತಿ ಪ್ರಯಾಣ ಹಿನ್ನೆಲೆ, ದಾರಿಮಧ್ಯೆ ಕೊಂಡರಾಜನಹಳ್ಳಿ ಗೇಟ್ ಬಳಿ,   ಕೋಲಾರದಲ್ಲಿನ ಸಮುದಾಯದ ಬೆಂಬಲಿಗರು ಈಶ್ವರಪ್ಪ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು.  ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಸಿದ್ದರಾಮಯ್ಯ ಅವರು  ಅಹಿಂದ ಹೋರಾಟ ಮಾಡಿಕೊಳ್ಳಲಿ , ಆದರೆ ಎಸ್ಟಿ ಮೀಸಲಾತಿ ಹೋರಾಟಕ್ಕೂ ಅವರನ್ನು ಆಹ್ವಾನಿಸಲಾಗಿತ್ತು, ಆದರೂ ಅವರು ಬಂದಿಲ್ಲ, ಅಹಿಂದ ಹೋರಾಟವನ್ನ ರಾಜಕಾರಣಕ್ಕೆ ಬಳಸಿಕೊಳ್ಳುವುದು ಮೊದಲಿನಿಂದಲೂ ಇದೆ. ಕುರುಬರ ಎಸ್ಟಿ ಹೋರಾಟ ಕಾಗಿನಲೆ ಶ್ರೀ ನೇತೃತ್ವದಲ್ಲಿ ನಡೆಯುತ್ತಿದೆ. " ಸಿದ್ದರಾಮಯ್ಯ ಅವರು ಬರಲಿ ಬಾರದೆ ಇರಲಿ " ಹೋರಾಟ ಮುಂದುವರೆಯಲಿದೆ ಎಂದರು.

ಇನ್ನು ಕುರುಬ ಸಮುದಾಯದ ಹೋರಾಟದ ಹಿಂದೆ ಆರ್ ಎಸ್ ಎಸ್ ಇದೆ ಎಂಬ‌ ಸಿದ್ದರಾಮಯ್ಯ ಅವರ ಹೇಳಿಕೆ,  ಹೋರಾಟದಲ್ಲಿ ಭಾಗಿಯಾದ ಎಲ್ಲರಿಗೂ ನೋವು ಉಂಟು ಮಾಡಿದೆ. ಅಷ್ಟಕ್ಕೂ ಈ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆಗಳು ನಮಗೆ ಅಗತ್ಯವಿಲ್ಲ ಎಂದು ಕಿಡಿಕಾರಿದರು.

ಬಾಯಿ ಹುಣ್ಣು ಹೋಗಲಾಡಿಸುವ ಅತ್ಯಂತ ಸರಳ ಮನೆಮದ್ದುಗಳಿವು

ಫೆಬ್ರವರಿ 14 ರಂದು  ಪುಲ್ವಾಮ ದಾಳಿ ನಡೆದ ದಿನ ಹಿನ್ನಲೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ  ಈಶ್ವರಪ್ಪ, ದಾಳಿಗೆ ಭಾರತ ದೇಶ ತಕ್ಕ ಉತ್ತರ ನೀಡಿದೆ. ಈ ಹಿಂದಿನ ಸರ್ಕಾರಗಳು ದಾಳಿ ನಡೆದಂತಹ ಸಂದರ್ಭದಲ್ಲಿ ಮೌನವಾಗಿದ್ದವು. ಇದರಿಂದ ಉಗ್ರಗಾಮಿಗಳ ಸೊಕ್ಕು ಹೆಚ್ಚಾಗಿತ್ತು. ಆದರೆ ಬಿಜೆಪಿ ಆ ಭ್ರಮೆಯನ್ನು ಕಳಚಿ ಉಗ್ರರಿಗೆ ತಕ್ಕ ಉತ್ತರ ನೀಡಿದೆ ಎಂದು ಪ್ರತಿಕ್ರಿಯೆ ನೀಡಿದರು. ಇನ್ನು ಪ್ರೇಮಿಗಳ ದಿನ ಆಚರಿಸುವ ಬಗ್ಗೆ ಮಾತನಾಡಿದ ಸಚಿವ ಈಶ್ವರಪ್ಪ, ಸ್ವಾತಂತ್ರ್ಯ ಸ್ವೇಚ್ಚಾಚಾರ ಅಗಬಾರದು, ಪ್ರೀತಿಸುವ ಜನರು ತಂದೆ ತಾಯಿಯನ್ನ ಪ್ರೀತಿಸುವವರು ಆಗಬೇಕು ಎಂದು ಪ್ರೇಮಿಗಳಿಗೆ ಕಿವಿಮಾತು ಹೇಳಿದರು.

ಕುರುಬ ಸಮುದಾಯದ ಎಸ್ಟಿ ಮೀಸಲಾತಿ ಹೋರಾಟದ ಬಗ್ಗೆ ನಿನ್ನೆ ಕೋಲಾರದಲ್ಲಿ ಮಾತನಾಡಿದ ಸಚಿವ ಭೈರತಿ ಬಸವರಾಜ್, ಸಿದ್ದರಾಮಯ್ಯ ಅವರು ಅಹಿಂದ ಹೋರಾಟ ಮಾಡಿದರೆ, ಅದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿಯು ಕೆಲ ಕಾರ್ಯಕ್ರಮ ಹಮ್ಮಿಕೊಂಡು, ಜನರ ವಿಶ್ವಾಸ ಗಳಿಸುವ ಮಾತನ್ನಾಡಿದ್ದರು, ಅಂತೆಯೇ  ಇದೀಗ ಈಶ್ವರಪ್ಪ ನವರು, ಸಿದ್ದರಾಮಯ್ಯ ಇದ್ದರು ಇಲ್ಲದಿದ್ದರೂ ಎಸ್ಟಿ ಮೀಸಲಾತಿ ಹೋರಾಟ ಮುಂದುವರೆಸುವುದಾಗಿ ಹೇಳಿಕೆ ನೀಡಿದ್ದಾರೆ‌.

ಕುರುಬ ಸಮುದಾಯ ಇತ್ತೀಚೆಗೆ ನಡೆಸಿದ್ದ ಹೋರಾಟದಲ್ಲಿ ಸಿದ್ದರಾಮಯ್ಯ ಅವರು, ಭಾಗಿಯಾಗದ ಕಾರಣ ಕೋಲಾರ ಜಿಲ್ಲೆಯಲ್ಲಿನ ಸಿದ್ದರಾಮಯ್ಯ ಅವರ ಬೆಂಬಲಿಗರು ಕಾರ್ಯಕ್ರಮದಲ್ಲಿ  ಭಾಗಿಯಗಿಲ್ಲ, ಆದರು ಜಿಲ್ಲೆಯಿಂದ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿಲ್ಲ ಎನ್ನುವುದು ಸಿದ್ದರಾಮಯ್ಯ ಅವರ ಬೆಂಬಲಿಗರ ಮಾತು. ಆದರೂ ಮೀಸಲಾತಿ ನೀಡುವ ಕುರಿತು ಅಧ್ಯಯನ ನಡೆಯುತ್ತಿದ್ದು, ಅಧ್ಯಯನ ವರದಿ ಬಂದ ನಂತರ ಸಿದ್ದರಾಮಯ್ಯ ನೇತೃತ್ವದಲ್ಲಿ ಎಸ್ಪಿ ಮೀಸಲಾತಿ ಹೋರಾಟ ನಡೆಸುವುದಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಅಂಜನಿ ಸೋಮಣ್ಣ ಮಾಹಿತಿ ನೀಡಿದ್ದಾರೆ.
Published by:Latha CG
First published: