ಶೌಚಾಲಯ ಇದ್ದರೂ ಜನಕ್ಕೆ ಬಯಲಿಗೆ ಹೋಗೋದೇ ಆನಂದ.. ಏಕೆ ಅಂತ ಗೊತ್ತಿಲ್ಲ: ಸಚಿವ KS Eshwarappa ವ್ಯಂಗ್ಯ

ಮನೆಗಳಲ್ಲಿ ಬಹಳ ಜನ ಶೌಚಾಲಯ ಕಟ್ಟಿಸಿಕೊಂಡಿದ್ದಾರೆ. ಆದರೆ ತಂಬಿಗೆ ಹಿಡಿದುಕೊಂಡು ರಾತ್ರಿ ರಸ್ತೆ ಮೇಲೆ ಕೂತರೇನೇ ಅವರಿಗೆ ತೃಪ್ತಿ. ಮೈದಾನದಲ್ಲಿ ಹೋಗಿ ಕೂತುಕೊಂಡರೇನೇ ಅವರಿಗೆ ತೃಪ್ತಿ, ಯಾಕೆ ಅಂತಾ ಭಗವಂತನಿಗೇ ಗೊತ್ತು.

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

  • Share this:
ಬೆಂಗಳೂರು: ರಾಜ್ಯದಲ್ಲಿ ಮನೆ ಮನೆಗೆ ಗಂಗೆ ಯೋಜನೆಯನ್ನು (Ganga Yojana) ವೇಗವಾಗಿ ಜಾರಿಗೆ ತರುತ್ತಿದ್ದೇವೆ. ಪ್ರಧಾನಿ ಮೋದಿ (PM Modi) ಅವರ ಮಹಾತ್ವಾಕಾಂಕ್ಷಿ ಯೋಜನೆಯಿದು. ಯೋಜನೆ ಆರಂಭಕ್ಕೂ ಮೊದಲಯ ಶೇ. 25ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಇತ್ತು. ಈಗ ಶೇ. 46 ರಷ್ಟು ಮನೆಗಳಿಗೆ ನಲ್ಲಿ ನೀರು ವ್ಯವಸ್ಥೆ ಮಾಡಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ತಿಳಿಸಿದರು. ಮುಂದಿನ ಒಂದು ವರ್ಷದಲ್ಲಿ ಎಲ್ಲ ಮನೆಗಳಿಗೂ ಕೊಳವೆ ನೀರಿನ ಸಂಪರ್ಕ ಸಿಗಲಿದೆ. ಮನೆ ಮನೆಗೆ ಗಂಗೆ ಯೋಜನೆಯಲ್ಲಿ ಹಳೆಯ ನಲ್ಲಿ ಮತ್ತು ಪೈಪು ಬಳಕೆ ವಿಚಾರವಾಗಿ ಸ್ಪಷ್ಟನೆ ನೀಡಿದರು. ಹಳೆಯ ಪೈಪ್ ಮತ್ತು ನಲ್ಲಿ ಚೆನ್ನಾಗಿ ಇದ್ದರೆ ಬಳಸುತ್ತೇವೆ, ಇಲ್ಲದಿದ್ದರೆ ಹೊಸದು ಹಾಕುತ್ತೇವೆ ಎಂದರು.

ಇದನ್ನೂ ಓದಿ: T.S. Nagabharana: 'ಮಂಗಳೂರು ಮಾದರಿ' ಕನ್ನಡ ಕಲಿಕೆಗೆ ಕ್ರಮ ಎಂದ ನಾಗಾಭರಣ

ರಸ್ತೆ ಮೇಲೆ ಕೂತರೇನೇ ಅವರಿಗೆ ತೃಪ್ತಿ

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಮನೆಗಳಲ್ಲಿ ಬಹಳ ಜನ ಶೌಚಾಲಯ ಕಟ್ಟಿಸಿಕೊಂಡಿದ್ದಾರೆ. ಆದರೆ ತಂಬಿಗೆ ಹಿಡಿದುಕೊಂಡು ರಾತ್ರಿ ರಸ್ತೆ ಮೇಲೆ ಕೂತರೇನೇ ಅವರಿಗೆ ತೃಪ್ತಿ. ಮೈದಾನದಲ್ಲಿ ಹೋಗಿ ಕೂತುಕೊಂಡರೇನೇ ಅವರಿಗೆ ತೃಪ್ತಿ, ಯಾಕೆ ಅಂತಾ ಭಗವಂತನಿಗೇ ಗೊತ್ತು. ಜಾಗೃತಿ ಉಂಟು ಮಾಡುವ ದಿಕ್ಕಿನಲ್ಲಿ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ನೀವು ಮೈದಾನಕ್ಕೆ ಹೋಗಬೇಡಿ, ದಂಡ ಹಾಕುತ್ತೇವೆ ಅಂತಾ ಹೇಳಲು ಬರಲ್ಲ ಅದರಲ್ಲೇ ಅವರು ಆನಂದ ಕಂಡರೆ ನಾವೇನು ಮಾಡೋಣ ಎಂದರು.

ಯಾರ ಫೈಲ್ಯೂರ್ ಎನ್ನಬೇಕು?

ಮನೆ ಮನೆಗೆ ಶೌಚಾಲಯ ಯೋಜನೆ ವಿಫಲ ಆಗಿದ್ಯಾ ಎಂಬ ಪ್ರಶ್ನೆಗೆ, ಅಪ್ಪ-ಅಮ್ಮ ಸುಂದರವಾದ ಹುಡುಗಿ ತಂದು ಮದುವೆ ಮಾಡಿರುತ್ತಾರೆ. ಆದರೆ ಚೆನ್ನಾಗಿ ಬಳಸಿಕೊಳ್ಳಲಿಲ್ಲ ಅಂದರೆ ಯಾರ ಫೈಲ್ಯೂರ್ ಎನ್ನಬೇಕು? ಚೆಂಬು ಹಿಡಿದುಕೊಂಡು ಹೋಗುವವರು ಶೌಚಾಲಯದಲ್ಲಿ ನೀರು ಬಳಸುವುದಿಲ್ಲವೇನು? ಚೆಂಬುಗೂ ಬಕೆಟ್ ಗೂ ವ್ಯತ್ಯಾಸ ಇದೆ. ಶ್ರೀಮಂತರು ಅವರವರ ಮನೆಗಳಲ್ಲಿ ಹೇಗೆ ಹೇಗೆ ಸ್ನಾನ ಮಾಡ್ತಾರೆ ಅಂತಾ ಗೊತ್ತಿದೆ. ಮನಸ್ಥಿತಿ ಬದಲಾಗದಿದ್ದರೆ ವ್ಯವಸ್ಥೆ ಬದಲಾಗಲ್ಲ. ಬಯಲಿನಲ್ಲಿ ಒಟ್ಟೊಟ್ಟಿಗೆ ಕುಳಿತುಕೊಳ್ಳಬೇಕು,  ದೇಶದ ಪ್ರಪಂಚದ ಸಮಸ್ಯೆ,  ಪಕ್ಕದ ಮನೆ ಹೆಣ್ಣು ಮಕ್ಕಳ ಪರಿಸ್ಥಿತಿ ಚರ್ಚೆ ಮಾಡಬೇಕು, ಅದರಲ್ಲೇ ಆನಂದ ಅವರಿಗೆ ಎಂದು ಕುಹಕವಾಡಿದರು.

ಇದನ್ನೂ ಓದಿ: Nadini Milk : ನಂದಿನ ಹಾಲಿನ ಪ್ಯಾಕೇಟ್ ಮೇಲಿಂದ ಕನ್ನಡ ಮಾಯ..! ಏನಿದರ ಸತ್ಯಾಸತ್ಯತೆ?

ರಾಜ್ಯ 97 ಲಕ್ಷ ಮನೆಗಳಿಗೆ ನಳದ ನೀರು ದೊರೆಯಲಿದೆ. 50,000 ಹೆಚ್ಚಿನ ಗ್ರಾಮಗಳಲ್ಲಿ ಮನೆ ಮನೆಗೂ ಗಂಗೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಕೇಂದ್ರ ಸರ್ಕಾರ ಈಗಾಗಲೇ 3,325 ಕೋಟಿ ರೂ. ರಾಜ್ಯದ ಪಾಲು 2,323 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ನೀರು ಪರೀಕ್ಷೆಗಾಗಿ 31 ಜಿಲ್ಲೆಗಳ 46 ತಾಲ್ಲೂಕಿನಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ 18,600 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ ಎಂದರು.

ಮನ್ ರೇಗಾದಲ್ಲಿ ನಮ್ಮ ರಾಜ್ಯ ದಾಖಲೆ ಮಾಡಿದೆ. ೧೩ ಕೋಟಿ ಮಾನವ ದಿನಗಳನ್ನು ನಮಗೆ ಕೊಟ್ಟಿದ್ದರು. ಡಿಸೆಂಬರ್'ನಲ್ಲೇ ಈ ಗುರಿ ಮುಗಿಸಿದ್ದೇವೆ. ಮಾರ್ಚ್ ಅಂತ್ಯಕ್ಕೆ ೩.೧೭ ಕೋಟಿ ಮಾನವ ದಿನ ಪೂರೈಸಿದ್ದೇವೆ. ೮.೮ ಲಕ್ಷ ಎಸ್ಸಿ, ಎಸ್ಟಿ ಕುಟುಂಬಗಳಿಗೆ ಲಾಭವಾಗಿದೆ, ೬.೮೭ ಕೋಟಿ ಮಾನವ ದಿನ ಮಹಿಳೆಯರಿಗೆ ನೀಡಿದ್ದೇವೆ. ೨೨,೪೪೧ ವಿಕಲಚೇತನರೂ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಮನ್ ರೇಗಾದಡಿ ಕೆಲಸ ಪಡೆದುಕೊಂಡಿದ್ದಾರೆ. ೧೬ .೪೭ ಕೋಟಿ ಯಷ್ಟು ಕೇಂದ್ರದಿಂದ ಸಹಕಾರ ಸಿಕ್ಕಿದೆ. ಇಂದು ಪ್ರತಿದಿನಕ್ಕೆ ೩೧೯ ರೂ ಕೂಲಿ ಸಿಗಲಿದೆ. ಕೂಲಿ ಹಣವ ನೇರವಾಗಿ ಅಕೌಂಟ್ ಗೆ ತಲುಪಲಿದೆ ಎಂದು ತಿಳಿಸಿದರು.
Published by:Kavya V
First published: