ಹಾಲು-ಸಕ್ಕರೆ ಸೇರಿದ್ರೆ ಬಿಜೆಪಿ; ಅನರ್ಹರ ಸಕ್ಕರೆಗೆ ಹೋಲಿಸಿ, ಬಿಜೆಪಿ ಹಾಲಿನಂತೆ ಎಂದ ಸಚಿವ ಈಶ್ವರಪ್ಪ

ಸಿದ್ದರಾಮಯ್ಯ ಸುಳ್ಳುರಾಮಯ್ಯ. ಕುಮಾರಸ್ವಾಮಿ ಅವರಪ್ಪರಾಣೆ ಸಿಎಂ ಆಗಲ್ಲ ಅಂದರು. ಆದರೆ ಕುಮಾರಸ್ವಾಮಿ ಸಿಎಂ ಆದರು.  ಯಡಿಯೂರಪ್ಪ ಸಿಎಂ ಆಗಲ್ಲ ಎಂದರು, ಯಡಿಯೂರಪ್ಪ ಈಗ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಏನೇ ಹೇಳಿದರೂ ಸುಳ್ಳಾಗುತ್ತೆ. 

Latha CG | news18-kannada
Updated:November 18, 2019, 4:33 PM IST
ಹಾಲು-ಸಕ್ಕರೆ ಸೇರಿದ್ರೆ ಬಿಜೆಪಿ; ಅನರ್ಹರ ಸಕ್ಕರೆಗೆ ಹೋಲಿಸಿ, ಬಿಜೆಪಿ ಹಾಲಿನಂತೆ ಎಂದ ಸಚಿವ ಈಶ್ವರಪ್ಪ
ಸಿದ್ದರಾಮಯ್ಯ ಸುಳ್ಳುರಾಮಯ್ಯ. ಕುಮಾರಸ್ವಾಮಿ ಅವರಪ್ಪರಾಣೆ ಸಿಎಂ ಆಗಲ್ಲ ಅಂದರು. ಆದರೆ ಕುಮಾರಸ್ವಾಮಿ ಸಿಎಂ ಆದರು.  ಯಡಿಯೂರಪ್ಪ ಸಿಎಂ ಆಗಲ್ಲ ಎಂದರು, ಯಡಿಯೂರಪ್ಪ ಈಗ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಏನೇ ಹೇಳಿದರೂ ಸುಳ್ಳಾಗುತ್ತೆ. 
  • Share this:
ವಿಜಯಪುರ(ನ.18): ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅಯೋಗ್ಯರು.  ಅವರಿಬ್ಬರು ಅಯೋಗ್ಯರು ಎಂದು ಅನರ್ಹರು ಆ ಪಕ್ಷಗಳಿಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದಾರೆ. ನಾವು ಮೋದಿ ಹಾಗೂ ಯಡಿಯೂರಪ್ಪ ಜೊತೆ ಇರುತ್ತೇವೆ ಎಂದು ಅನರ್ಹರು ಬಂದಿದ್ದಾರೆ ಎಂದು ಸಚಿವ ಕೆ.ಎಸ್​.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು, ಜೆಡಿಎಸ್​ ಮತ್ತು ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಬಿಜೆಪಿಯಲ್ಲಿ ಹಳೆ‌ ಮುಖ ಹೊಸ ಮುಖ ಇಲ್ಲ. ಬಿಜೆಪಿ ಅಂದರೆ ಹಾಲು ಇದ್ದಂತೆ. ಹೊರಗಿನಿಂದ ಬಂದು ಸೇರಿಕೊಳ್ಳುವವರು ಸಕ್ಕರೆ ಇದ್ದಂತೆ. ಹಾಲು-ಸಕ್ಕರೆ ಒಟ್ಟು ಸೇರಿದರೆ ಅದು ಭಾರತೀಯ ಜನತಾ ಪಾರ್ಟಿ," ಎಂದು  ಅನರ್ಹ ಶಾಸಕರನ್ನು ಈಶ್ವರಪ್ಪ ಸಕ್ಕರೆಗೆ ಹೋಲಿಸಿದರು.

ನಾನು ಸಿದ್ದರಾಮಯ್ಯನ ಸತ್ಯ ಬಿಚ್ಚಿಟ್ಟರೆ ಆತ ತಲೆಯೆತ್ತಿ ನಡೆಯೋಕಾಗಲ್ಲ; ರಮೇಶ್ ಜಾರಕಿಹೊಳಿ ಏಕವಚನದಲ್ಲೇ ವಾಗ್ದಾಳಿ

ಇನ್ನೊಮ್ಮೆ ಬಿಜೆಪಿ ಸುದ್ದಿಗೆ ಕಾಂಗ್ರೆಸ್​ನವರು ಬರಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಬಿಜೆಪಿ 15 ಕ್ಷೇತ್ರದಲ್ಲಿ ಗೆಲ್ಲಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಗೆ ಈಶ್ವರಪ್ಪ ತಿರುಗೇಟು ನೀಡಿದರು.  ಸಿದ್ದರಾಮಯ್ಯ ಹೇಳಿದ್ದು ಒಂದಾದರೂ ಸತ್ಯವಾಗಿದೆಯಾ? ಎಂದು ಪ್ರಶ್ನಿಸಿದರು.

"ಸಿದ್ದರಾಮಯ್ಯ ಸುಳ್ಳುರಾಮಯ್ಯ. ಕುಮಾರಸ್ವಾಮಿ ಅವರಪ್ಪರಾಣೆ ಸಿಎಂ ಆಗಲ್ಲ ಅಂದರು. ಆದರೆ ಕುಮಾರಸ್ವಾಮಿ ಸಿಎಂ ಆದರು.  ಯಡಿಯೂರಪ್ಪ ಸಿಎಂ ಆಗಲ್ಲ ಎಂದರು, ಯಡಿಯೂರಪ್ಪ ಈಗ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಏನೇ ಹೇಳಿದರೂ ಸುಳ್ಳಾಗುತ್ತೆ. ಈಗ ಬಿಜೆಪಿಗೆ 15 ಸೀಟು ಬರಲ್ಲ ಎಂದಿದ್ದಾರೆ. ಇದೂ ಕೂಡ ಸುಳ್ಳಾಗುತ್ತೆ. ನಮ್ಮ ಪಕ್ಷ 15 ಸೀಟ್ ನಲ್ಲಿ ಗೆಲ್ಲುತ್ತದೆ. ಕಾಂಗ್ರೆಸ್ ಒಂದು ಸೀಟು ಕೂಡ ಗೆಲ್ಲುವುದಿಲ್ಲ. ಅಥಣಿಯಲ್ಲಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಗೆಲ್ಲುತ್ತೇವೆ," ಎಂದರು.

First published: November 18, 2019, 4:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading