ಅಯ್ಯೋ ದೇವರೇ.. ಡಿಕೆ ಶಿವಕುಮಾರ್ BJPಗೆ ಬಂದರೆ ನಾವ್ಯಾರು ಪಕ್ಷದಲ್ಲಿ ಇರೋಲ್ಲ: ಸಚಿವ ಈಶ್ವರಪ್ಪ

DK Shivakumar v/s KS Eshwarappa: ಪರಿಷತ್ ಚುನಾವಣೆಯಲ್ಲಿ ಬಿಜೆಪಿಯವರು ಹಣ ಸುರಿಸುತಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್ ನವರು ಏನು ಮಂಡಕ್ಕಿ ಸುರಿಸುತಿದ್ದಾರಾ..? ಬರಿ ಪುಗ್ಸಟ್ಟೆ ಓಡಾಡ್ತಾ ಇದ್ದಾರಾ... ಎಂದು ಪ್ರಶ್ನಿಸಿದರು.

ಡಿಕೆ ಶಿವಕುಮಾರ್​, ಈಶ್ವರಪ್ಪ

ಡಿಕೆ ಶಿವಕುಮಾರ್​, ಈಶ್ವರಪ್ಪ

  • Share this:
ದಾವಣಗೆರೆ: ಬಿಜೆಪಿ (BJP) ಪಕ್ಷಕ್ಕೆ ಹೋಗಲಿಲ್ಲ ಅಂತ ತನನ್ನು ಜೈಲಿಗೆ ಕಳಿಸಿದ್ರು ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ (KPCC President DK Shivakumar) ಹೇಳಿಕೆಗೆ ಸಚಿವ ಕೆ.ಎಸ್​.ಈಶ್ವರಪ್ಪ (Minister K. S. Eshwarappa) ತಿರುಗೇಟು ನೀಡಿದರು. ಡಿಕೆ ಶಿವಕುಮಾರ್ ಬಿಜೆಪಿಗೆ ಬಂದ್ರೆ ನಾವು ಯಾರು ಬಿಜೆಪಿಯಲ್ಲಿ ಇರಲ್ಲ, ನಮ್ಮ ಯಾವ ನಾಯಕರು ಒಪ್ಪಲ್ಲ. ಬಿಜೆಪಿ ಪಕ್ಷಕ್ಕೆ ನಾನು ಹೋಗಿಲ್ಲ ಅಂತ ಜೈಲಿಗೆ ಕಳುಹಿಸಿದ್ದಾರೆ ಎಂಬ ಡಿಕೆ ಹೇಳಿಕೆಗೆ ಈಶ್ವರಪ್ಪ ಕಿಡಿಕಾರಿದರು. ಡಿಕೆ ಶಿವಕುಮಾರ್​​​ರನ್ನ ಬಿಜೆಪಿ ಕರೆ ತರವಂತ ಪರಿಸ್ಥಿತಿ ದೇವರು ಯಾವತ್ತು ತರಬಾರದು. ಅಕಸ್ಮಾತ್ ಡಿಕೆ ಶಿವಕುಮಾರ್ ಬಿಜೆಪಿ ಗೆ ಬಂದ್ರೆ ಅವತ್ತು ದೇವರೆ ಇಲ್ಲ ಅನ್ಕೋತಿನಿ ಎಂದು ವ್ಯಂಗ್ಯವಾಡಿದರು.

ನಾವು ಯಾರು ಬಿಜೆಪಿಯಲ್ಲಿ ಇರಲ್ಲ

ಶಿವಕುಮಾರ್ ಮನೆ ಮೇಲೆ ಐಟಿ ರೇಡ್ ಆದಾಗ ಅಲ್ಲಿ ಕಂತೆ ಕಂತೆ ನೋಟು ಸಿಕ್ಕಿದೆ. ಬಾಕ್ಸ್ ಗಟ್ಟಲೆ ಸಿಕ್ಕಂತ ನೋಟುಗಳು ಮೂಲಕ ಗೊತ್ತಾಗುತ್ತೆ ಅವರು ಎಷ್ಟು ಅವ್ಯವ್ಯಹಾರ ಮಾಡಿದ್ದಾರೆ ಅನ್ನೋದು. ಭಗವಂತನಲ್ಲಿ ಪ್ರಾರ್ಥನೆ ಮಾಡ್ತೀನಿ ಅವರನ್ನ ಬಿಜೆಪಿಗೆ ತಗೋಳಲ್ಲ ನಾವು. ಒಂದು ವೇಳೆ ಅವರು ಬಿಜೆಪಿಗೆ ಬಂದ್ರೆ ನಾವು ಯಾರು ಇದನ್ನ ಒಪ್ಪಲ್ಲ, ನಾವು ಯಾರು ಬಿಜೆಪಿಯಲ್ಲಿ ಇರಲ್ಲ ಎಂದು ಸ್ಪಷ್ಟನೆ ನೀಡಿದರು.

ಅಧಿಕಾರದ ಆಸೆಗೆ ಕಾಂಗ್ರೆಸ್ ಗೆ ಬಂದಿದ್ದಾರೆ

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಟುವಾದ ಮಾತುಗಳಿಂದ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರಂತ ಮೋಸಗಾರ ಇಲ್ಲ, ಸಿದ್ದರಾಮಯ್ಯ ರಕ್ತದ ಕಣ ಕಣದಲ್ಲೂ ಮೋಸ ಇದೆ. ಹಿಂದೆ ದೇವೇಗೌಡರಿಗೆ ಮೋಸ ಮಾಡಿ, ಜೆಡಿಎಸ್​ ತೊರೆದು ಕಾಂಗ್ರೆಸ್ ಗೆ ಬಂದ್ರು. ಕಾಂಗ್ರೆಸ್ ನಲ್ಲಿ ವಿರೋಧ ಪಕ್ಷದ ಸ್ಥಾನ ಅಥವಾ ಸಿಎಂ ಸ್ಥಾನ ಇರದೆ ಇದ್ದರೆ ಅವತ್ತೆ ಕಾಂಗ್ರೆಸ್ ನಲ್ಲಿ  ಇರುತ್ತಿರಲಿಲ್ಲ. ಅವರು ಕಾಂಗ್ರೆಸ್ ಪಕ್ಷ ಕಟ್ಟಲು ಬಂದಿಲ್ಲ, ಅಧಿಕಾರದ ಆಸೆಗೆ ಕಾಂಗ್ರೆಸ್ ಗೆ ಬಂದಿದ್ದಾರೆ ಎಂದು ಆರೋಪಿಸಿದರು.

ಜಮೀರ್​ ಕಾಲಿಡಿದು ಸಿದ್ದರಾಮಯ್ಯ ಸ್ಪರ್ಧಿಸ್ತಾರೆ

ಹಿಂದುಳಿದವರು, ದಲಿತರ ಹೆಸರು ಬಳಸಿಕೊಳ್ಳೊದೇ ಅವರ ಅಧಿಕಾರ ಉಳಿಸಿಕೊಳ್ಳೊದಕ್ಕೆ. ಚಿಮ್ಮನಕಟ್ಟಿ ಅವರಿಗೆ ಮೋಸ ಮಾಡಿದಾಗ ಹಾಗೆ ಬಹಳ ಜನರಿಗೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ . ಈ ಕಡೆ ಸಿದ್ದರಾಮಯ್ಯ ಅವರಿಗೆ ಬದಾಮಿನು ಇಲ್ಲ, ಚಾಮುಂಡೇಶ್ವರಿ ಕ್ಷೇತ್ರನು ಇಲ್ಲ. ಮುಂದೆ ಜಮೀರ್​​​ ಅಹಮದ್ ಕಾಲು ಹಿಡಿಯೋದು ಮುಸ್ಲಿಮರ ಓಟ್ ತಗೊಂಡು ಚಾಮರಾಜನಗರದಲ್ಲಿ ಗೆಲ್ಲೋ ಪರಿಸ್ಥಿತಿ ಬಂದಿದೆ. ಈಡೀ ರಾಜ್ಯದಲ್ಲಿ ಸಿದ್ದರಾಮಯ್ಯರನ್ನು ಯಾರು ನಂಬೋದಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದರು.

ಕಾಂಗ್ರೆಸ್ ನವರು ಏನು ಮಂಡಕ್ಕಿ ಸುರಿಸುತಿದ್ದಾರಾ‌?

ಪರಿಷತ್ ಚುನಾವಣೆಯಲ್ಲಿ ಬಿಜೆಪಿಯವರು ಹಣ ಸುರಿಸುತಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್ ನವರು ಏನು ಮಂಡಕ್ಕಿ ಸುರಿಸುತಿದ್ದಾರಾ‌..? ಬರಿ ಪುಗ್ಸಟ್ಟೆ ಓಡಾಡ್ತಾ ಇದ್ದಾರಾ...? ಬಿಜೆಪಿ ಕಾರ್ಯಕರ್ತರು ನಿಷ್ಠಾವಂತ ಕಾರ್ಯಕರ್ತರು ಹುಲಿಗಳು ಇದ್ದ ಹಾಗೆ. ಇವರಿಗೆಲ್ಲಾ ದುಡ್ಡು ಕೊಟ್ಟಿದ್ದೀವಾ ಕೇಳಿ, ಅವರು ಬಿಜೆಪಿ ಪಕ್ಷದ ಸಿದ್ದಾಂತವನ್ನ ಒಪ್ಪಿ ಬಂದವರು. ಹಳ್ಳಿಗಳು ಅಭಿವೃದ್ಧಿ ಆಗಬೇಕು ಅಂತ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸುತ್ತಾ ಇದ್ದಾರೆ ಎಂದು ಕುಂದೂರಿನಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಈಗಲೂ ನನ್ನ ಗುರುಗಳೇ, ಡಿಕೆಶಿಗೆ ಎಷ್ಟೊಂದು ಗರ್ವ: ರಮೇಶ್ ಜಾರಕಿಹೊಳಿ ಮಾತಿನೇಟು

ಬಿಜೆಪಿಗೆ ಹೋಗ್ಲಿಲ್ಲ ಅಂತ ಜೈಲಿಗೆ ಕಳಿಸಿದ್ರು ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಸಚಿವ ಅಶ್ವಥ ನಾರಾಯಣ್ ಸಹ ತಿರುಗೇಟು ನೀಡಿದರು. ಡಿಕೆಶಿಯನ್ನು ನಮ್ಮ ಪಕ್ಷಕ್ಕೆ ಸ್ವಾಗತ ಮಾಡಿಲ್ಲ, ಡಿಕೆಶಿ ಅಗತ್ಯ ನಮ್ಮ ಪಕ್ಷಕ್ಕೆ ಇಲ್ಲ. ನಮ್ಮ ಪಕ್ಷದಲ್ಲೇ ಹಲವು ದೊಡ್ಡ ದೊಡ್ಡ ನಾಯಕರು ಇದ್ದಾರೆ. ಡಿಕೆಶಿ ಅವಶ್ಯಕತೆ ಬಿಜೆಪಿಗೆ ಇಲ್ಲ, ಡಿಕೆಶಿ ಬಿಜೆಪಿಗೆ ಸಲ್ಲುವವರೂ ಅಲ್ಲ. ಡಿಕೆಶಿ ಕಾಂಗ್ರೆಸ್ ಗೇ ಸಲ್ಲುವ ನಾಯಕ, ಅವರ ತತ್ವ, ಸಿದ್ಧಾಂತಗಳು ಅವರ ಪಕ್ಷಕ್ಕೆ ಸಲ್ಲುವಂಥದ್ದು. ಡಿಕೆಶಿ ಕಾಂಗ್ರೆಸ್ ನಲ್ಲೇ ಇರಲಿ, ಅವರು ಅಲ್ಲೇ ಇರಲಿ ಎಂದು ಶುಭ ಕೋರುತ್ತೇನೆ ಎಂದು ವ್ಯಂಗ್ಯವಾಗಿ ಹೇಳಿದರು.
Published by:Kavya V
First published: