• Home
  • »
  • News
  • »
  • state
  • »
  • ಪ್ರಧಾನಿ ಬಗ್ಗೆ ಏಕವಚನದಲ್ಲಿ ಸಿದ್ದರಾಮಯ್ಯ ಮಾತನಾಡುವಾಗ ನಾನೇಕೆ ಆತನ ಬಗ್ಗೆ ಮಾತನಾಡಬಾರದು; ಈಶ್ವರಪ್ಪ

ಪ್ರಧಾನಿ ಬಗ್ಗೆ ಏಕವಚನದಲ್ಲಿ ಸಿದ್ದರಾಮಯ್ಯ ಮಾತನಾಡುವಾಗ ನಾನೇಕೆ ಆತನ ಬಗ್ಗೆ ಮಾತನಾಡಬಾರದು; ಈಶ್ವರಪ್ಪ

ಕೆಎಸ್ ಈಶ್ವರಪ್ಪ.

ಕೆಎಸ್ ಈಶ್ವರಪ್ಪ.

ಕೂಲಿ ಮಾಡಿ 10 ರೂಪಾಯಿ ದೇಣಿಗೆ  ನೀಡಿದವರು ಲೆಕ್ಕ ಕೇಳಲಿ, ಅದನ್ನು ಬಿಟ್ಟು ದೇಣಿಗೆ ನೀಡುವುದಿಲ್ಲ ಎಂದ ಸಿದ್ದರಾಮಯ್ಯ ಲೆಕ್ಕ ಕೇಳಲು ಯಾರು ಎಂದು ಏಕವಚನದಲ್ಲಿ ಹರಿಹಾಯ್ದರು

  • Share this:

ರಾಯಚೂರು (ಫೆ.19):  ಈ ಹಿಂದೆ ರಾಜ್ಯದಲ್ಲಿ ಗೋ ಹತ್ಯೆ ಮಾಡಿದವರಿಗೆ ಶಿಕ್ಷೆ ಕೊಡಿ ಎಂದರೆ, ಅದನ್ನು ತಾತ್ಸಾರ ಮಾಡಿದಿರಿ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವಂತೆ ಆಯಿತು. ಅಲ್ಲದೇ ತಮ್ಮ ಕ್ಷೇತ್ರವಾದ ಚಾಮುಂಡಿಯಲ್ಲಿ ಸೋತಿರಿ.  ಈಗ ರಾಮನ ತಂಟೆಗೆ ಬಂದರೆ ನೆಲದೊಳಗೆ  ಹೋಗುತ್ತೀರಿ ಎಂದು ಸಚಿವ ಕೆ ಎಸ್ ಈಶ್ವರಪ್ಪ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು. ನಗರದಲ್ಲಿ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ಕಾರ್ಯದ ಬಳಿಕ ಮಾತನಾಡಿದ ಅವರು,  ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವ ಕುರಿತು ಮಾಜಿ ಮುಖ್ಯಮಂತ್ರಿ ಗಳಾದ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಹರಿಹಾಯ್ದರು.  ರಾಮಮಂದಿರ ವಿವಾದಿತ ಸ್ಥಳದಲ್ಲಿ ಇರುವುದರಿಂದ ನಾನು ದೇಣಿಗೆ ನೀಡುವುದಿಲ್ಲ ಎಂದಿದ್ದಾರೆ.  ಈ ವಿವಾದ ಬಗ್ಗೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಮಾನದ ನಂತರ ಈಗ ನಿರ್ಮಾಣವಾಗುತ್ತಿದೆ. ಈ ಹಿನ್ನಲೆ ಈ ಬಗ್ಗೆ ಅರಿತುಕೊಂಡು ಇಬ್ಬರು ಮಾತನಾಡಬೇಕು ಎಂದರು. 


ಕೂಲಿ ಮಾಡಿ 10 ರೂಪಾಯಿ ದೇಣಿಗೆ  ನೀಡಿದವರು ಲೆಕ್ಕ ಕೇಳಲಿ, ಅದನ್ನು ಬಿಟ್ಟು ದೇಣಿಗೆ ನೀಡುವುದಿಲ್ಲ ಎಂದ ಸಿದ್ದರಾಮಯ್ಯ ಲೆಕ್ಕ ಕೇಳಲು ಯಾರು ಎಂದು ಏಕವಚನದಲ್ಲಿ ಹರಿಹಾಯ್ದರು. ಸಿದ್ದರಾಮಯ್ಯ ಪ್ರಧಾನಿ ಬಗ್ಗೆಯೇ ಏಕವಚನದಲ್ಲಿ ಮಾತನಾಡುವಾಗ, ಆತನ ಬಗ್ಗೆ ನಾನೇಕೆ ಮಾತನಾಡಬಾರದು ಎಂದು ಪ್ರಶ್ನಿಸಿದರು.


ಜಾತಿಗಣತಿ ವರದಿಯನ್ನು ಸಿದ್ದರಾಮಯ್ಯ ಕಾಲದಲ್ಲಿ ನೀಡಲಾಗಿದೆ. ಆದರೆ ಅದು  ಅನುಷ್ಠಾನಗೊಂಡಿಲ್ಲ.  ನಿನ್ನೆ ಸಂಪುಟ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಗಳ ಅಧ್ಯಕ್ಷತೆಯಲ್ಲಿ ಈ ವರದಿ ನೀಡಲಾಗಿದೆ. ಈ ವರದಿಯ ನಂತರ ಮೀಸಲಾತಿ ನೀಡಲಾಗುವುದು ಎಂದರು.


ಬಿಹಾರ ಚುನಾವಣೆಯಲ್ಲಿ ಆರ್​ಜೆಡಿಗೆ ವಿಜಯೇಂದ್ರರಿಂದ ಹಣ ನೀಡಿದ್ದಾರೆ ಎಂಬ ಯತ್ನಾಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು,  ಹೇಳಿಕೆ ನೀಡಿರುವ ಯತ್ನಾಳ ಇಲ್ಲಿ ಇಲ್ಲ, ಆರೋಪ ಹೊತ್ತಿರುವ ವಿಜಯೇಂದ್ರರರು ಇಲ್ಲಿ ಇಲ್ಲ. ಎಲ್ಲಿಯೂ ಬಿಹಾರದಲ್ಲಿ ನಡೆದಿದೆ ಎನ್ನುವುದಕ್ಕೆ ನಾನೇನು ಪ್ರತಿಕ್ರಿಯಿಸಲಿ. ಯತ್ನಾಳರಿಗೆ ಬಿಜೆಪಿ ಕೇಂದ್ರ ಸಮಿತಿ ನೋಟಿಸ್ ನೀಡಿದೆ. ಈ ನೋಟಿಸ್ ಗೆ ಯತ್ನಾಳರು ಉತ್ತರ ನೀಡಿದ್ದಾರೆ.  ಈ ಬಗ್ಗೆ ಕೇಂದ್ರ ಸಮಿತಿ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.


ಇದನ್ನು ಓದಿ: COVID-19 ವೇಳೆ ಶಾಲೆಯಿಂದ ದೂರ ಉಳಿದ ಮಕ್ಕಳು: ಭಾರತದ ಮುಂದಿದೆ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಹಿಂಜರಿತದಿಂದ ಹೊರತರುವ ಸವಾಲು!


ಮುಂಬರುವ ಚುನಾವಣೆಯಲ್ಲಿ ತಾಲೂಕಾ ಪಂಚಾಯತಿ ರದ್ದಾಗುವುದಿಲ್ಲ. ಜಿಲ್ಲಾ ಪಂಚಾಯತಿಗಳೊಂದಿಗೆ ತಾಲೂಕು ಪಂಚಾಯತಿ ಚುನಾವಣೆಗಳು ಸಹ ನಡೆಯುತ್ತವೆ, ತಾಲೂಕು ಪಂಚಾಯತಿ ರದ್ದತಿಯ ಬಗ್ಗೆ ಚರ್ಚೆ ನಡೆದಿದೆ.  ಈ ಬಗ್ಗೆ ಪರಾಮರ್ಶಿಸಿ ಕೇಂದ್ರಕ್ಕೆ ವರದಿ ನೀಡಲಾಗುವುದು ಎಂದರು.


ಇದೇ ವೇಳೆ ರಾಯಚೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ  ಕುಡಿವ ನೀರು,  ರಸ್ತೆ, ಸ್ವಚ್ಛ ಭಾರತ ಯೋಜನೆ ಕುರಿತು ಪ್ರಗತಿ ಪರಿಶೀಲನೆ ಮಾಡಿದರು , ಮನೆ ಮನೆಗೆ ಗಂಗೆ ಹರಿಸುವ ಯೋಜನೆಯ ಕೇಂದ್ರ ಸರಕಾರ ಜಲಜೀವನ ಮಿಷನ್ ಬೇಸಿಗೆಯಲ್ಲಿ ಕುಡಿವ ನೀರು ಪೊರೈಕೆಯ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂಬ ಬಗ್ಗೆ ಮುಂದಿನ ಮಾರ್ಚ್​ ೨೬ ರಂದು ನಾನೇ ಬಂದು ಸಭೆ ನಡೆಸುತ್ತೇನೆ ಆಗ ಪ್ರಗತಿಯ ಬಗ್ಗೆ ವಿವರಿಸಬೇಕೆಂದರು.

Published by:Seema R
First published: