ಗೋವುಗಳ ಶಾಪದಿಂದಲೇ ಕಾಂಗ್ರೆಸ್ ಸೋತಿದ್ದು; ಸಚಿವ ಕೆ.ಎಸ್​. ಈಶ್ವರಪ್ಪ ವಾಗ್ದಾಳಿ

ಸಿದ್ದರಾಮಯ್ಯನವರ ತಾಯಿಗೆ ವಯಸ್ಸಾಗಿದೆ ಅಂತ ಬಿಜೆಪಿ ಹಾಗೂ ಆರ್​ಎಸ್​ಎಸ್​ ನವರ ಮನೆ ಮುಂದೆ ಬಿಡಲಾಗುತ್ತದೆಯೇ? ನಾವು ಗೋವನ್ನು ತಾಯಿಯೆಂದು ಕರೆಯುತ್ತೇವೆ. ಸಿದ್ದರಾಮಯ್ಯ ಅವರ ತಾಯಿ‌ಯನ್ನು ಕೂಡ ನಾವು ತಾಯಿ ಎಂದು ಕರೆಯುತ್ತೇವೆ. ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

  • Share this:
ತುಮಕೂರು (ಡಿ.4): ಗೋವುಗಳ ಶಾಪದಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಇದೀಗ ಅಲ್ಲೊಂದು-ಇಲ್ಲೊಂದು ಸ್ಥಾನ ಉಳಿಸಿಕೊಂಡಿದೆ. ಸದ್ಯದಲ್ಲೇ ಕಾಂಗ್ರೆಸ್​ ಅದನ್ನೂ ಕಳೆದುಕೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ತಿಪಟೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಗೋ ಹತ್ಯೆ ನಿಷೇಧ ಬಗ್ಗೆ ಚರ್ಚೆಯಾಗಿದೆ.‌ ಆದಷ್ಟು ಬೇಗ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಬರಲಿದೆ ಎಂದರು.

ಸಿದ್ದರಾಮಯ್ಯನವರು ಯಾವ ಯಾವ ಸಂದರ್ಭದಲ್ಲಿ ಏನೇನು ಹೇಳಿಕೆ ಕೊಡುತ್ತಾರೆಂದು ಅವರಿಗೇ ಗೊತ್ತಿರುವುದಿಲ್ಲ. ನಾವು ಗೋವನ್ನು ತಾಯಿಯೆಂದು ಕರೆಯುತ್ತೇವೆ. ಸಿದ್ದರಾಮಯ್ಯ ಅವರ ತಾಯಿ‌ಯನ್ನು ಕೂಡ ನಾವು ತಾಯಿ ಎಂದು ಕರೆಯುತ್ತೇವೆ. ಸಿದ್ದರಾಮಯ್ಯನವರ ತಾಯಿಗೆ ವಯಸ್ಸಾಗಿದೆ ಅಂತ ಬಿಜೆಪಿ ಹಾಗೂ ಆರ್​ಎಸ್​ಎಸ್​ ನವರ ಮನೆ ಮುಂದೆ ಬಿಡಲಾಗುತ್ತದೆಯೇ? ಈ ರೀತಿ ಹೇಳಿಕೆ ನೀಡಿ ಸಿದ್ದರಾಮಯ್ಯ ನವರು ಮುಸಲ್ಮಾನರನ್ನು ಸಂತೃಪ್ತಿ ಪಡಿಸುತ್ತಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್; 4 ಪ್ರತ್ಯೇಕ ತನಿಖಾ ತಂಡ ರಚಿಸಿದ ಕೋಲಾರ ಎಸ್​ಪಿ ಕಾರ್ತಿಕ್

ಈಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ಗೋ ಹತ್ಯೆ ನಿಷೇಧ ಕಾನೂನು ರದ್ದು ಮಾಡುತ್ತೇವೆ. ಗೋವನ್ನು ಯಾರು ಬೇಕಾದರೂ ಕಡಿಯಲಿ ಅದಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿಕೊಂಡು ಪ್ರಚಾರ ಮಾಡಿ ವೋಟು ಪಡೆಯಲಿ ಎಂದು ಸಚಿವ ಈಶ್ವರಪ್ಪ ಸವಾಲು ಹಾಕಿದರು.

ಸಿ.ಪಿ ಯೋಗೇಶ್ವರ್ ಸಂಪುಟ ಸೇರ್ಪಡೆ ವಿಚಾರದಲ್ಲಿ ಯಾರು ಹೇಳಿಕೆ ಕೊಡದಂತೆ ನಡ್ಡಾ ಆದೇಶವಿದೆ. ನಾವು ಅವರ ಆದೇಶ ಪಾಲಿಸುತ್ತೇವೆ. ಈ ಬಗ್ಗೆ ನಾನು ಮಾತನಾಡಲು ತಯಾರಿಲ್ಲ. ಕೇಂದ್ರ ನಾಯಕರು, ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷ ಸೇರಿ ಚರ್ಚೆ ನಡೆಸುತ್ತಾರೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೋ ಅವರನ್ನು ಸೇರಿಸಿಕೊಳ್ಳುತ್ತಾರೆ.‌ ಬೆಳಗಾವಿಯಲ್ಲಿ ನಡೆಯುವ ಕಾರ್ಯಾಕಾರಿಣಿ ಸಭೆಯಲ್ಲಿ ಸಚಿವ ಸಂಪುಟದ ಬಗ್ಗೆ ಚರ್ಚೆಯಾಗಲ್ಲ. ಪಕ್ಷ ಸಂಘಟನೆ‌ ಹಾಗೂ ಸರ್ಕಾರದ ಬಗ್ಗೆ ಚರ್ಚೆಯಾಗಲಿದೆ ಎಂದು ಸಚಿವ ಕೆಎಸ್​ ಈಶ್ವರಪ್ಪ ತಿಳಿಸಿದರು.
Published by:Sushma Chakre
First published: