ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡರ ವಿರುದ್ಧ ಕೃಷ್ಣ ಭೈರೇಗೌಡ

Lok Sabha Elections 2019 | ಕೃಷ್ಣ ಭೈರೇಗೌಡರು ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆಯೂ ಹೆಚ್ಚು ಎಂಬುದು ಕಾಂಗ್ರೆಸ್​ ನಾಯಕರ ವಿಶ್ವಾಸವಾಗಿದೆ. ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಪಕ್ಷ ಯಾರನ್ನು ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸಲಿದೆ ಎಂಬುದನ್ನು ಕಾದು ನೋಡಬೇಕು.

ಕೃಷ್ಣ ಭೈರೇಗೌಡ

ಕೃಷ್ಣ ಭೈರೇಗೌಡ

  • News18
  • Last Updated :
  • Share this:
    ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ನಂತರ ಇತ್ತೀಚೆಗಷ್ಟೇ ಎರಡೂ ಪಕ್ಷಗಳು ಲೋಕಸಭೆ ಸೀಟುಗಳನ್ನು ಹಂಚಿಕೆ ಮಾಡಿಕೊಂಡವು. ಕಾಂಗ್ರೆಸ್​ಗೆ 20 ಕ್ಷೇತ್ರ ಮತ್ತು ಜೆಡಿಎಸ್​ಗೆ 8 ಕ್ಷೇತ್ರಗಳು ಎಂದು ಎರಡೂ ಪಕ್ಷಗಳ ಮುಖಂಡರು ನಿರ್ಣಯಿಸಿದರು. ಆದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಯ ಕೊರತೆಯಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್​ಗೆ ಮತ್ತೊಂದು ಕ್ಷೇತ್ರವನ್ನು ಜೆಡಿಎಸ್​ ಬಿಟ್ಟುಕೊಡುವಂತಾಯ್ತು.

    ಒಂದು ಕ್ಷೇತ್ರ ಹೆಚ್ಚುವರಿಯಾಗಿ ಸಿಕ್ಕ ಬೆನ್ನಲ್ಲೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಂಗ್ರೆಸ್​ ಶಾಸಕರು ಸಭೆ ನಡೆಸಿದರು. ಸಿದ್ದರಾಮಯ್ಯ ಅವರ ನಿವಾಸದಲ್ಲಿ ಇವತ್ತು ನಡೆದ ಸಭೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಹೆಸರು ಅಂತಿಮವಾಗಿದೆ.  ಕಾಂಗ್ರೆಸ್​ನ ಎಲ್ಲಾ ಶಾಸಕರೂ ಕೃಷ್ಣ ಭೈರೇಗೌಡರ ಹೆಸರನ್ನೇ ಶಿಫಾರಸು ಮಾಡಿದ್ದು, ಚುನಾವಣೆಗೆ ನಿಲ್ಲುವಂತೆ ಮನವಿ ಮಾಡಿದರು. ಕೃಷ್ಣ ಭೈರೇಗೌಡರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯಿಲ್ಲ ಎಂದು ಹಿಂದೇಟು ಹಾಕಿದರೂ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಭೆಯಲ್ಲಿ ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಡಿಕೆ ಶಿವಕುಮಾರ್ ಮೊದಲಾದವರು ಭಾಗವಹಿಸಿದ್ದರು.

    ಕೃಷ್ಣ ಭೈರೇಗೌಡರು ಉತ್ತರದ ಅಭ್ಯರ್ಥಿಯಾಗುವುದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ನಾಳೆ ಭೈರೇಗೌಡರು ನಾಮಪತ್ರ ಸಲ್ಲಿಸಲಿದ್ದಾರೆ.

    ಇದನ್ನೂ ಓದಿ: "ದೇಶ ಮೊದಲು, ಪಕ್ಷ ನಂತರ": ಹೈಕಮಾಂಡ್​ ಏನೇ ನಿರ್ಧಾರ ಮಾಡಲಿ, ದೇಶಕ್ಕಾಗಿ ದುಡಿಯೋಣ- ತೇಜಸ್ವಿನಿ ಅನಂತ್​​ ಕುಮಾರ್​​

    ಉತ್ತರ ಕ್ಷೇತ್ರಕ್ಕೆ ಬಿ.ಎಲ್​. ಶಂಕರ್​ ಅವರ ಹೆಸರೂ ಕೇಳಿ ಬರುತ್ತಿತ್ತು. ಆದರೆ ಸೋಮವಾರ ಎಮ್​.ಆರ್​. ಸೀತಾರಾಮ್​ ಅವರ ಮಗ ರಕ್ಷಾ ರಾಮಯ್ಯ ಅವರೂ ಟಿಕೆಟ್​ಗಾಗಿ ಯತ್ನ ಆರಂಭಿಸಿದ್ದರು ಎಂಬ ಮಾತುಗಳು ಕೇಳಿ ಬಂದಿತ್ತು. ರಕ್ಷಾ ರಾಮಯ್ಯ ಅಖಿಲ ಭಾರತ ಕಾಂಗ್ರೆಸ್​ ಸಾಮಾಜಿಕ ಜಾಲತಾಣಗಳ ಇನ್​ಚಾರ್ಜ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಯೂತ್​ ಕಾಂಗ್ರೆಸ್​ನಲ್ಲಿ ಉತ್ತಮವಾದ ಹೆಸರು ಗಳಿಸಿದ್ದಾರೆ. ಇದನ್ನೇ ಮಾನದಂಡವಾಗಿಸಿಕೊಂಡು ರಕ್ಷಾ ರಾಮಯ್ಯ ಅವರನ್ನು ಚುನಾವಣೆ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಯುವ ಕಾಂಗ್ರೆಸ್​ ನಾಯಕರು ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು.



    ಇದನ್ನೂ ಓದಿ: ನಾನು ಡಿಕೆಶಿ ನಿಜವಾದ ಜೋಡೆತ್ತುಗಳು, ದರ್ಶನ್-ಯಶ್ ಅಲ್ಲ; ಹೆಚ್​.ಡಿ.ಕುಮಾರಸ್ವಾಮಿ

    ಆದರೆ ಉತ್ತರ ಕ್ಷೇತ್ರದಲ್ಲಿರುವ ಎಲ್ಲಾ ಕಾಂಗ್ರೆಸ್​ ಶಾಸಕರು ಕೃಷ್ಣ ಭೈರೇಗೌಡ ಅವರೇ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದ್ದರು.  ಕೃಷ್ಣ ಭೈರೇಗೌಡರು ಮತ್ತೆ ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆಯೂ ಹೆಚ್ಚು ಎಂಬುದು ಕಾಂಗ್ರೆಸ್​ ನಾಯಕರ ವಿಶ್ವಾಸವಾಗಿದೆ.

    First published: